»   » 'ಮುಗುಳು ನಗೆ' ನಂತರ ಧಾರಾವಾಹಿಯಲ್ಲಿ ಮಿಂಚಿದ ನಿರ್ದೇಶಕ ಯೋಗರಾಜ್ ಭಟ್

'ಮುಗುಳು ನಗೆ' ನಂತರ ಧಾರಾವಾಹಿಯಲ್ಲಿ ಮಿಂಚಿದ ನಿರ್ದೇಶಕ ಯೋಗರಾಜ್ ಭಟ್

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ 'ಮುಗುಳುನಗೆ' ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಲವರು ಸಿನಿಮಾ ಸೂಪರ್ ಅಂದರೆ ಕೆಲವರು ಸಿನಿಮಾ ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತು ಅಂತ ಹೇಳುತ್ತಿದ್ದಾರೆ.

ಶೀರ್ಷಿಕೆ ಗೀತೆಗೆ ಇದೀಗ ಬಂತು 'ಮುಗುಳುನಗು'ವ ಯೋಗ.!

ಹೀಗಿರುವಾಗಲೇ, 'ಮುಗುಳುನಗೆ' ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಧಾರಾವಾಹಿ ಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಯೋಗರಾಜ್ ಭಟ್ ಈಗ ಯಾವುದೇ ಹೊಸ ಧಾರಾವಾಹಿಯ ನಿರ್ದೇಶನ ಅಥವಾ ನಟನೆ ಮಾಡುತ್ತಿಲ್ಲ. 'ಜೀ ಕನ್ನಡ' ವಾಹಿನಿಯ 'ಜೋಡಿ ಹಕ್ಕಿ' ಧಾರಾವಾಹಿಯಲ್ಲಿ ಭಟ್ಟರು ಅತಿಥಿ ಆಗಿದ್ದಾರೆ ಅಷ್ಟೇ.

ಸಂಭಾವನೆ ಕಿರಿಕ್: ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಯೋಗರಾಜ್ ಭಟ್

Yogaraj Bhat as a guest in 'Jodi Hakki' serial.

'ಮುಗುಳುನಗೆ' ಸಿನಿಮಾದ ನಟಿಯರೊಂದಿಗೆ ನಿರ್ದೇಶಕ ಯೋಗರಾಜ್ ಭಟ್ 'ಜೋಡಿ ಹಕ್ಕಿ' ಧಾರಾವಾಹಿಯಲ್ಲಿ ಭಾಗಿಯಾಗಿದ್ದರು. 'ಮುಗುಳುನಗೆ' ಚಿತ್ರತಂಡದ ಈ ವಿಶೇಷ ಸಂಚಿಕೆ 'ಜೀ ಕನ್ನಡ' ವಾಹಿನಿಯಲ್ಲಿ ನಿನ್ನೆ ಸಂಜೆ 6 ಗಂಟೆಗೆ ಪ್ರಸಾರವಾಗಿದೆ.

English summary
Director Yogaraj Bhat and Kannada Movie 'Mugulu Nage' Heroines as a guest in Zee Kannada channel's popular serial 'Jodi Hakki'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada