'ಸೂಪರ್ ಟಾಕ್ ಟೈಂ' ನಲ್ಲಿ ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್
ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸೂಪರ್ ಟಾಕ್ ಟೈಂ'ಗೆ ಈ ವಾರ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಸ್ಯಾಂಡಲ್ ವುಡ್ ವಿಕಟ ಕವಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಸಂಚಿಕೆಯ ಪ್ರೋಮೋ ಕೂಡ ಈಗಾಗಲೇ ಹೊರಬಿದ್ದಿದೆ. ಸದ್ಯ 'ಮುಗುಳುನಗೆ' ಸಿನಿಮಾದ ಹಾಡುಗಳು ಗೆದ್ದಿರುವ ಖುಷಿಯಲ್ಲಿರುವ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ತಮ್ಮ ಸಂತೋಷವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

'ಸೂಪರ್ ಟಾಕ್ ಟೈಂ' ಒಂದು ಸಂಪೂರ್ಣ ಟಾಕ್ ಶೋ ಆಗಿದೆ. ಇನ್ನೂ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಅವರ ಮಾತುಗಳನ್ನು ಕೇಳುವುದೇ ಚಂದ. ಹೀಗಿರುವಾಗ ಈ ವಾರದ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಇಷ್ಟ ಆಗುವುದರಲ್ಲಿ ಡೌಟೆ ಇಲ್ಲ.
English summary
Director Yogaraj Bhat and Jayanth Kaikini in Colors Super Channel's popular show 'Super talk time'.


Click it and Unblock the Notifications