»   » ಕೊಟ್ಟ ಮಾತು ಉಳಿಸಿಕೊಳ್ಳದೇ ಅಮ್ಮನಿಂದ ಕಪಾಳಕ್ಕೆ ಏಟುತಿಂದಿದ್ರು ಯೋಗಿ! ಏಕೆ?

ಕೊಟ್ಟ ಮಾತು ಉಳಿಸಿಕೊಳ್ಳದೇ ಅಮ್ಮನಿಂದ ಕಪಾಳಕ್ಕೆ ಏಟುತಿಂದಿದ್ರು ಯೋಗಿ! ಏಕೆ?

Posted By:
Subscribe to Filmibeat Kannada

ಮಾತಲ್ಲೆ ಮನೆ ಕಟ್ಟುವ ಅಕುಲ್ ಬಾಲಾಜಿ ಈಗ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಮನರಂಜನೆ ನೀಡುತ್ತಿದ್ದಾರೆ. ಚಂದನವನದ ಅಂದದ ತಾರೆಯರಿಗೆ ಅವರ ವೈಯಕ್ತಿಕ ಜೀವನದ ತರಲೆ-ತಮಾಷೆಗಳ ಬಗ್ಗೆ ಪ್ರಶ್ನೆ ಹಾಕುತ್ತ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದ್ದಾರೆ. ಅಂದಹಾಗೆ ಇದೇ ಕಾರ್ಯಕ್ರಮದಲ್ಲೀಗ ಲೂಸ್ ಮಾದ ಯೋಗಿ ರವರ ಒಂದು ಇಂಟ್ರೆಸ್ಟಿಂಗ್ ಕಥೆ ರಿವೀಲ್ ಆಗಿದೆ.

ಲೂಸ್ ಮಾದ ಯೋಗಿ ರವರು ಒಮ್ಮೆ ತಮ್ಮ ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳದೇ ಕಪಾಳಕ್ಕೆ ಏಟು ತಿಂದಿದ್ದರಂತೆ. ಇದು ಅಮ್ಮ-ಮಕ್ಕಳ ನಡುವಿನ ಸಾಮಾನ್ಯ ಕಥೆಯಾದರೂ ಯೋಗಿ ಮಾತಿಗೆ ತಪ್ಪಿದ್ದು ಯಾವ ಕಾರಣಕ್ಕಾಗಿ ಎಂಬುದು ಮಾತ್ರ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಮುಂದೆ ಓದಿರಿ..

ಕೊಟ್ಟ ಮಾತಿಗೆ ತಪ್ಪಿದ ಯೋಗಿ

ಲೂಸ್ ಮಾದ ಯೋಗಿ ತಮ್ಮ ಅಮ್ಮನಿಗೆ ನಾನು ಬೈಕ್ ತೆಗೆದುಕೊಂಡ ನಂತರ ಫಸ್ಟ್ ಕೂರಿಸಿಕೊಂಡು ಹೋಗುವುದು ನಿನ್ನನ್ನೇ ಎಂದು ಮಾತುಕೊಟ್ಟಿದ್ದರಂತೆ. ಆದರೆ ಮಾತಿಗೆ ತಪ್ಪಿದ ಯೋಗಿ ಅಮ್ಮನ ಬದಲು ಮೊದಲು ಕೂರಿಸಿಕೊಂಡು ಹೋಗಿದ್ದು ಸ್ಯಾಂಡಲ್ ವುಡ್ ನ ಖ್ಯಾತ ನಟಿಯೊಬ್ಬರನ್ನು. ಈ ಕಾರಣಕ್ಕೆ ಯೋಗಿಗೆ ಅವರ ಅಮ್ಮ ಪಟಾರ್ ಅಂತ ಕೆನ್ನೆಗೆ ಬಾರಿಸಿದ್ದರಂತೆ. ನನ್ನ ಕರೆದುಕೊಂಡು ಹೋಗ್ತೀತಿ ಅಂದು ಅವಳನ್ನ ಕೂರಿಸಿಕೊಂಡು ಹೋಗಿದಿಯಾ ಅಂತ ಕೋಪ ಮಾಡಿಕೊಂಡಿದ್ದರಂತೆ ಅವರ ಅಮ್ಮ. ಆದ್ರೆ ಬೈಕ್ ಮೇಲೆ ಕೂತ ಆ ಖ್ಯಾತ ನಟಿ ಯಾರು ಗೊತ್ತಾ...

ಯೋಗಿ ಬೈಕ್ ಮೇಲೆ ಮೊದಲು ಕೂತಿದ್ದು ಮೋಹಕ ತಾರೆ

ಲೂಸ್ ಮಾದ ಯೋಗಿ ತಮ್ಮ ನೆಚ್ಚಿನ ಬೈಕ್ 'Hayabusa' ತೆಗೆದುಕೊಂಡಾಗ ಮೊದಲು ಕೂರಿಸಿಕೊಂಡು ರೈಡ್ ಮಾಡಿದ್ದು ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಅವರನ್ನು. ಹೀಗೆಂದು ಸ್ವತಃ ಯೋಗಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ರಮ್ಯಾ ಪರಿಚಯ ಹೇಗೆ?

ಯೋಗಿ ರವರಿಗೆ ನಟಿ ರಮ್ಯಾ ಪರಿಚಯ ಆಗುವುದಕ್ಕೂ ಮೊದಲೇ 'ದುನಿಯಾ' ಮೂವಿ ತೆರೆಕಂಡಿತ್ತಂತೆ. ನಂತರದಲ್ಲಿ ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಅವರ ಪರಿಚಯ ಆಗಿ, ನಾನು ನನ್ನಿಷ್ಟದ ಬೈಕ್ ತೆಗೆದುಕೊಳ್ಳುತ್ತಿದ್ದೇನೆ. ಅದರಲ್ಲಿ ಮೊದಲ ರೈಡಿಂಗ್‌ ಗೆ ನೀವೇ ಬರಬೇಕು ಎಂದು ಒಬ್ಬ ಅಭಿಮಾನಿಯಾಗಿ ಯೋಗಿ ಕೇಳಿಕೊಂಡಿದ್ದರಂತೆ.

16ನೇ ವಯಸ್ಸಿಗೆ ಬೈಕ್ ಕೇಳಿದ್ದ ಯೋಗಿ

ಯೋಗಿ ತಾವು 16 ವರ್ಷದವರಾಗಿದ್ದಾಗಲೇ ಮನೆಯಲ್ಲಿ ತಮ್ಮ ಇಷ್ಟದ Hayabusa ಬೈಕ್ ಕೊಡಿಸಿ ಎಂದು ಹಠಹಿಡಿದಿದ್ದರಂತೆ. ಆ ಸಮಯದಲ್ಲಿ ಆ ಬೈಕ್ ಬೆಲೆ 20 ಲಕ್ಷ ಇತ್ತಂತೆ. ಬೈಕ್ ಕೊಡಿಸದ ಕಾರಣ ನಾಲ್ಕು ದಿನ ಮನೆಯಲ್ಲಿ ಊಟಬಿಟ್ಟಿದಕ್ಕೆ ಅಮ್ಮನಿಂದ ಒದೆತಿಂದಿದ್ದರಂತೆ ಯೋಗಿ. ಆದರೂ ಕೊನೆಗೂ ತಾವೇ Hayabusa ಖರೀದಿಸಿದರಂತೆ. ತಮ್ಮ ಜೀವನದ ಈ ತರಲೆ-ತಮಾಷೆ ವಿಚಾರಗಳನ್ನು 'ಸೂಪರ್ ಟಾಕ್ ಟೈಮ್' ನಲ್ಲಿ ಯೋಗಿ ಹಂಚಿಕೊಂಡಿದ್ದಾರೆ.

English summary
Loose Mada Yogesh revealed interesting story behind his favaurite Bike 'Hayabusa' in 'Super talk time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada