ನಾದಿನಿ ಬರ್ತ್ ಡೇ ಮಾಡಿದ ಖ್ಯಾತ ಯೂಟ್ಯೂಬರ್,ಅತ್ತಿಗೆ ಗಿಫ್ಟ್ ನೋಡಿ ಆನಂದ ಬಾಷ್ಪ ಸುರಿಸಿದ ನಿಶಾ!
ಮಧು ಗೌಡ ಅವರು ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇರುತ್ತಾರೆ . ಅತ್ತಿಗೆ ನಾದಿನಿ ಬಾಂಡಿಂಗ್ ಎಂದರೆ ನಿಶಾ ನಿಖಿಲ್ ಹಾಗೂ ಮಧು ಗೌಡ ರವರ ಹಾಗೆ ಇರಬೇಕು ಎಂದು ಎಲ್ಲರೂ ಆಶಿಸುತ್ತಾರೆ. ಮಧು ಗೌಡ ಹಾಗೂ ನಿಶಾ ಯಾರು ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರ ಮನಸ್ಸು ಕದ್ದ ನಟಿ ಮಣಿಯರು ಎಂದು ಹೇಳಿದರೆ ತಪ್ಪಾಗದು. ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರನ್ನೂ ಮನರಂಜಿಸುವ ಮಧು ಗೌಡ ಅವರು ಇದೀಗ ತನ್ನ ನಾದಿನಿಯ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.
ನಿಶಾ ಅವರನ್ನು ಮೊದಲಿಗೆ ಅವರ ಗೆಳತಿಯ ಮನೆಯಲ್ಲಿ ಬಿಟ್ಟು, ಹುಟ್ಟು ಹಬ್ಬ ಆಚರಣೆ ಮಾಡಲು ಇನ್ನೇನು ಕೆಲವು ಸಮಯ ಇದೆ ಎಂದಾಗ ನಿಷಾನನ್ನು ಕರೆದುಕೊಂಡು ಬರಲು ನಿಖಿಲ್ ಮಧು ಹೋಗುತ್ತಾರೆ. ಬರ್ತ್ ಡೇ ಗರ್ಲ್ ಅನ್ನು ನೋಡಿ ಅವರಿಬ್ಬರೂ ಖುಷಿ ಪಡುತ್ತಾರೆ ಹಾಗೆಯೇ ಮೊದಲಿಗೆ ಕಾರಿನ ಹಿಂಬಾಗದಲ್ಲಿ ನಿಶಾಗಾಗಿ ಅತ್ತಿಗೆ ಹಾಗೂ ಅಣ್ಣ ಸ್ಪೆಶಲ್ ಆರೆಂಜ್ ಮೆಂಟ್ ಮಾಡಿದ್ದರು. ಅದಾದ ಬಳಿಕ ನಿಶಾ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅದ್ದೂರಿಯಾಗಿ ವೆಲ್ ಕಂ ಮಾಡಿದ್ದಾರೆ.

ನಿಶಾ ಅವರು ಬಿಳಿ ಬಣ್ಣದ ಬಟ್ಟೆ ತೊಟ್ಟು ಬಹಳ ಸುಂದರವಾಗಿ ಕಾಣಿಸಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಮನೆಯನ್ನು ಬಹಳ ಅದ್ಭುತವಾಗಿ ಸಿಂಗರಿಸಲಾಗಿತ್ತು. ಹಾಗೆಯೇ ಬಲೂನ್ ನಲ್ಲಿಯೇ ಹಾರ್ಟ್ ರಚನೆ ಮಾಡಲಾಗಿತ್ತು . ಅದಾದ ಬಳಿಕ ಎಲ್ಲರ ಜೊತೆ ಖುಷಿಯಾಗಿ ಕಾಲ ಕಳೆದ ನಿಶಾ ಗೌಡ ಕೇಕ್ ಕತ್ತರಿಸಿ ತನ್ನ ಖುಷಿಯನ್ನು ಹಂಚಿಕೊಂಡರು. ತನ್ನ ಅತ್ತಿಗೆ ಹಾಗೂ ಅಣ್ಣ ಆರೆಂಜ್ ಮಾಡಿರುವ ಪಾರ್ಟಿಯನ್ನು ನೋಡಿ ನಿಶಾ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದ್ದು ಸಿಕ್ಕರೆ ಇಂತಹ ಅತ್ತಿಗೆ ಸಿಗಬೇಕು ಎಂದು ಮಧು ಗೌಡ ಅವರನ್ನು ಹೊಗಳಿದ್ದಾರೆ.
ಹುಟ್ಟುಹಬ್ಬದ ಖುಷಿಯಲ್ಲಿ ನಿಶಾ
ಇನ್ನೂ ನಿಖಿಲ್ ಮನೆಯಲ್ಲಿ ಎಲ್ಲ ಗೆಳೆಯರೂ ಸೇರಿ ನಿಶಾ ಜೊತೆ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ ಹಾಗೆಯೇ ಮಧು ಗೌಡ ಅವರು ಗಿಫ್ಟ್ ಅನ್ನು ನೀಡಿದ್ದಾರೆ. ಆ ಗಿಫ್ಟ್ ನೋಡಿ ನಿಶಾ ಕಣ್ಣಂಚಲಿ ನೀರು ಜಿನುಗಿತು. ಯೂಟ್ಯೂಬ್ ಸ್ಟಾರ್ ಮಧು ಗೌಡ ಹಾಗೂ ನಿಖಿಲ್ ಗೌಡ ಅವರ ಮದುವೆ ಇತ್ತೀಚಿಗೆ ನಡೆದಿದೆ. ಈ ಜೋಡಿ ಹನಿಮೂನ್ ಗೆ ತೆರಳಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಆಕ್ಟಿವ್ ಆಗಿರುವ ನಟಿ ಎಂದರೆ ಮಧು ಗೌಡ ಎಂದು ಹೇಳಿದರೆ ತಪ್ಪಾಗದು. ಜೀವನದ ಪ್ರತಿಯೊಂದು ಮೂಮೆಂಟ್ ಅನ್ನು ಮಧು ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಮಧು ಗೌಡ ಅವರು ನಿಶಾ ಬರ್ತ್ ಡೇ ಸೆಲೆಬ್ರೇಟ್ ಮಾಡಿರುವುದನ್ನು ನೋಡಿ ನೆಟ್ಟಿಗರೂ ಕಾಮೆಂಟ್ ಮಾಡುತ್ತಿದ್ದಾರೆ.
ಗಂಡನ ಮನೆಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿರುವ ಮಧು
ಸಿಕ್ಕರೆ ಮಧು ಗೌಡ ಹಾಗಿರುವ ಹುಡುಗಿ ಸಿಗಬೇಕು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನಾದಿನಿಯ ಬರ್ತ್ ಡೇ ಪಾರ್ಟಿಯನ್ನು ಮಧು ಗೌಡ ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ನಾದಿನಿ ಎಂದರೆ ಮಧು ಗೌಡರಿಗೆ ಬಹಳ ಆಗಾಧವಾದ ಪ್ರೀತಿ. ಮದುವೆ ಮುಂಚಿನಿಂದಲೂ ಮಧು ಗೌಡ ನಿಶಾ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು.


Click it and Unblock the Notifications











