»   » 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ 'ಯುಗಳಗೀತೆ'

'ಕಲರ್ಸ್ ಸೂಪರ್' ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ 'ಯುಗಳಗೀತೆ'

Posted By:
Subscribe to Filmibeat Kannada

ಕಲರ್ಸ್ ಸೂಪರ್ ವಾಹಿನಿಯಲ್ಲಿ ಸೆಪ್ಟೆಂಬರ್ 4 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ 'ಯುಗಳಗೀತೆ' ಎಂಬ ಹೊಚ್ಚ ಹೊಸ ಧಾರಾವಾಹಿ ಪ್ರಸಾರ ಆಗಲಿದೆ.

ನಾಯಕಿ ಪಂಚಮಿ (ಸಿರಿ ಪ್ರಹ್ಲಾದ) ಸುಂದರಿ, ಬುದ್ಧಿವಂತೆ. ಅವಳಿಗೆ ಕರ್ಣ ಅಂದ್ರೆ ಪ್ರಾಣ. ನಾಯಕ ಕರ್ಣ (ಪ್ರಣೀತ್.ಆರ್.ನಾಯಕ್) ಕಾಲೇಜಲ್ಲಿ ತುಂಬಾ ಫೇಮಸ್ಸು. ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಪಂಚಮಿ ಅಂದ್ರೆ ಅಷ್ಟಕಷ್ಟೆ. ಇವರಿಬ್ಬರ ಫ್ರೆಂಡ್ ಅರ್ಜುನ್ (ಮಧುಸೂದನ್). ಈ ಮೂವರು ಕಾಲೇಜು ವಿದ್ಯಾರ್ಥಿಗಳ ಸುತ್ತ ಹೆಣೆದಿರುವ ಕಥಾಹಂದರವೇ 'ಯುಗಳಗೀತೆ'.

Yugalageethe: New serial in Colors Super Channel

ಕಾಲೇಜಿನಲ್ಲಿ ಡ್ರಾಮಾ ಮಾಡಬೇಕೆಂದು ಅರ್ಜುನ್ ಕತೆಯೊಂದನ್ನು ಬರೆದಿರುತ್ತಾನೆ. ಅದರಲ್ಲಿ ಪಂಚಮಿ ನಾಯಕಿಯಾಗಬೇಕೆಂದು ಅವನು ಬಯಸುತ್ತಾನೆ. ಸ್ನೇಹಿತ ಕರ್ಣನ ಸಹಾಯದಿಂದ ಅವಳನ್ನು ಒಪ್ಪಿಸುತ್ತಾನೆ. ಕರ್ಣ ಮತ್ತು ಪಂಚಮಿ ನಾಟಕದ ನಾಯಕ-ನಾಯಕಿ ಆಗುತ್ತಾರೆ.

ವಿಧಿಯಾಟದ ನಿಯಮದಂತೆ ಕರ್ಣ ಮತ್ತು ಪಂಚಮಿಯರ ಬಾಂಧವ್ಯ ಮದುವೆಯ ನಂಟಿಗೆ ನಾಂದಿ ಹಾಡುತ್ತದೆ. ಆದರೆ ಕರ್ಣನ ಕುಟುಂಬಕ್ಕಿದೆ ಒಂದು ಜಾತಕ ದೋಷ. ಅವನನ್ನು ಕಾಯೋದು ಪತ್ನಿಯ ಮಾಂಗಲ್ಯ ಬಲ. ಪಂಚಮಿ ಈಗ ಕರ್ಣನ ಬದುಕಿನ ಶ್ರೀರಕ್ಷೆ ಆಗ್ತಾಳಾ? ಪಂಚಮಿ ಕಂಡರೆ ದೂರ ಸರಿಯುವ ಕರ್ಣ ಅವಳನ್ನು ಒಪ್ಪಿಕೊಳ್ಳುತ್ತಾನಾ? ಅರ್ಜುನ್ ಗೆ ಪಂಚಮಿಯ ಮೇಲೆ ಪ್ರೀತಿ ಬೆಳೆಯುತ್ತಾ? ಈ ಯುವ ಮನಸ್ಸುಗಳ ಕತೆಯಲ್ಲಿದೆ ಹಲವು ಕುತೂಹಲ.

ಹಲವು ಚಾನೆಲ್‍ಗಳಲ್ಲಿ ಕೆಲಸ ಮಾಡಿರುವ ಕಾರ್ತಿಕ್ ಪರಾಡ್ಕರ್ ಮತ್ತು ಕಲಾವಿದೆ ನಂದಿನಿ ಮೂರ್ತಿ ಜೈದುರ್ಗಾ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ನಿರ್ಮಿಸುತ್ತಿರುವ ಚೊಚ್ಚಲ ಧಾರಾವಾಹಿ ಇದು. ಕಾಲೇಜು ಲೈಫಿನ ಮ್ಯಾರೇಜ್ ಸ್ಟೋರಿ ನೋಡ್ಬೇಕು ಅಂದ್ರೆ ನಾಳೆಯಿಂದ ಸರಿಯಾಗಿ 7 ಗಂಟೆಗೆ ಕಲರ್ಸ್ ಸೂಪರ್ ವಾಹಿನಿ ಟ್ಯೂನ್ ಮಾಡಿ...

English summary
New serial in Colors Super Channel, 'Yugalageethe' to telecast from September 4th, Monday to Friday 7PM.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada