ನಾನೇನಾದರೂ ಆ ಮನೆಗೆ ಹೋದರೆ ಕಪಾಳಕ್ಕೆ ಹೊಡೆದೇ ಬಿಡ್ತೀನಿ, ಬಿಗ್ ಬಾಸ್ ಬಗ್ಗೆ ನಟಿಯ ಶಾಕಿಂಗ್ ಹೇಳಿಕೆ
ಇನ್ನೇನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ. ಎಲ್ಲಾ ಭಾಷೆಯಲ್ಲಿ ಹಲವರ ನೆಚ್ಚಿನ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡದಲ್ಲಿ ಸುದೀಪ್.. ಹಿಂದಿಯಲ್ಲಿ ಸಲ್ಮಾನ್ ಖಾನ್.. ತೆಲುಗಿನಲ್ಲಿ ನಾಗಾರ್ಜುನ ಮತ್ತು ಮಲಯಾಳಂನಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ಮೂಡಿ ಬರುವ ಈ ಶೋದ ಸುತ್ತಮುತ್ತ ಹಲವು ಸುದ್ದಿಗಳು ಈಗಾಗಲೇ ಗಿರಕಿ ಹೊಡೆಯಲು ಶುರುವಾಗಿವೆ.
ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಒಂದು ವರ್ಗದ ಪ್ರೇಕ್ಷಕರನ್ನು ಕಾಡಲು ಶುರುವಾಗಿದೆ. ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈಗಾಗಲೇ ಹಲವರ ಹೆಸರುಗಳು ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಕಾಣಿಸುತ್ತಿವೆ.

ಹೀಗೆ ಕಾಣಿಸಿಕೊಂಡಿರುವ.. ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರು ನಿಜಕ್ಕೂ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಅಧಿಕೃತವಾಗಿ ಸಿಗಲಿದೆಯಾದರೂ ಸದ್ಯ ತಮ್ಮ ಬಗ್ಗೆ ಹಬ್ಬಿರುವ ಸುದ್ದಿಗಳ ಕುರಿತು ಕೆಲವರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಬಿಗ್ ಬಾಸ್‌ದಿಂದ ಆಫರ್ ಬಂದಿದೆಯಾ ? ಬಂದಿದ್ದರೆ ಹೋಗ್ತಿದ್ದಾರಾ ? ಇಲ್ಲವಾ ? ಎನ್ನುವುದನ್ನು ಕೂಡ ಹೇಳುತ್ತಿದ್ದಾರೆ. ಉದಾಹರಣೆಗೆ ಜರೀನ್ ಖಾನ್.
ಹೌದು.. ಜರೀನ್ ಖಾನ್.. ಒಂದ್ಕಾಲದಲ್ಲಿ ಕತ್ರಿನಾ ಕೈಫ್ ಅವರ ತದ್ರೂಪಿಯೆಂದೇ ಹೆಸರಾದ ಚೆಲುವೆ. ಇಷ್ಟೇ ಅಲ್ಲ ಕತ್ರಿನಾ ಅವರಂತೆಯೇ ಸಲ್ಮಾನ್ ಖಾನ್ ಅವರ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡ ಬೆಡಗಿ ಕೂಡ ಹೌದು ಜರೀನ್ ಖಾನ್. ಆದರೆ.. ಕತ್ರಿನಾ ಕೈಫ್‌ಗೆ ಸಿಕ್ಕ ಯಶಸ್ಸು.. ಅವಕಾಶ.. ಜರೀನ್ ಖಾನ್‌ಗೆ ಸಿಗಲಿಲ್ಲ. ವೃತ್ತಿ ಬದುಕು ಮೇಲಕ್ಕೇರಲಿಲ್ಲ.
ಇಂಥಾ ಜರೀನ್ ಖಾನ್ ಸದ್ಯ ಬಿಗ್ ಬಾಸ್ ಕುರಿತು ಮಾತನಾಡಿದ್ದಾರೆ. ನಾನು ಬಿಗ್ ಬಾಸ್‌ಗೆ ಹೋದರೆ ಯಾರದ್ದಾದರೂ ಕಪಾಳಕ್ಕೆ ಹೊಡೆದೇ ಬಿಡುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ''ಹಿಂದಿ ರಶ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜರೀನ್ ಖಾನ್ ಈ ಬಾರಿ ನನಗೆ ಬಿಗ್ ಬಾಸ್‌ದಿಂದ ಆಫರ್ ಬಂದಿದ್ದು ನಿಜಾ ಎಂದು ಹೇಳಿದ್ಧಾರೆ. ಆದರೆ ನನಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಯಮವಾಗಲಿ ಸಮಯವಾಗಲಿ ಎರಡು ಇಲ್ಲ ಹೀಗಾಗಿ ನಾನು ಮರು ಆಲೋಚನೆಯನ್ನು ಮಾಡದೇ ಆಫರ್‌ನ ರಿಜೆಕ್ಟ್ ಮಾಡಿದೆ ಎಂದು ಕೂಡ ಜರೀನ್ ಹೇಳಿದ್ದಾರೆ.

ಮುಂದುವರೆದು ವ್ಯೆಯಕ್ತಿಕವಾಗಿ ನನಗೆ ಆ ಕಾರ್ಯಕ್ರಮ ತುಂಬಾ ಇಷ್ಟ. ಇಲ್ಲಿಯವರೆಗೆ ಒಂದೆರಡು ಮೂರು ಸೀಸನ್ ಹೊರತು ಪಡಿಸಿದರೆ ನಾನು ಎಲ್ಲ ಸೀಸನ್‌ನ ಕೂಡ ನೋಡಿದ್ದೇನೆ ಎಂದು ಹೇಳಿರುವ ಜರೀನ್ ನನಗೆ ನನ್ನದೇ ಆದ ಜವಾಬ್ಧಾರಿಗಳು ತುಂಬಾ ಇವೆ, ನನ್ನದೇ ಆದ ಸಮಸ್ಯೆಗಳಿವೆ, ಮೂರು ತಿಂಗಳು ನಾನು ಮನೆಯಿಂದ ದೂರ ಇರಲಾರೆ ಅದು ಅಸಾಧ್ಯ ಎಂದು ಹೇಳಿದ್ದಾರೆ.
ನಾನು ಒಂದು ದಿನ ಮನೆಯಾಚೆ ಎಲ್ಲಾದರು ಹೋದರು ಕೂಡ ನಾಲ್ಕೈದು ಬಾರಿ ಕರೆ ಮಾಡಿ ನನ್ನ ತಾಯಿಯ ಆರೋಗ್ಯ ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳಿರುವ ಜರೀನ್ ನನ್ನ ಮನೆ ನಾನು ಇಲ್ಲದೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಹಾಗೇ ನೋಡಿದರೆ ನಾನು ತುಂಬಾನೇ ಫ್ರೆಂಡ್ಲಿ ಆದರೂ ಕೂಡ ಅಷ್ಟು ಜನರ ಜೊತೆ ಒಂದೇ ಮನೆಯಲ್ಲಿ ಬೆರೆಯಲು ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿರುವ ಜರೀನ್ ನನಗೆ ಯಾರಾದರೂ ತಿರುಗಿಸಿ ಮಾತನಾಡಿದರೆ ಕೋಪ ಬರುತ್ತೆ, ಇಷ್ಟೇ ಅಲ್ಲ ಕೋಪ ಬಂದರೆ ಹಿಂದೆ ಮುಂದೆ ಯೋಚನೆ ಮಾಡದೇ ನಾನು ಹೊಡೆದೇ ಬಿಡ್ತೀನಿ ಎಂದು ಹೇಳಿದ್ದಾರೆ. ಹಾಗೇನಾದರೂ ಆದರೆ ಅವರೇ ನನ್ನ ಮನೆಯಿಂದ ಹೊರ ಕಳುಹಿಸುತ್ತಾರೆ ಅದರ ಬದಲು ಆ ಮನೆಗೆ ಹೋಗದೇ ಇರುವುದೇ ವಾಸಿ ಎಂದು ನಕ್ಕಿದ್ದಾರೆ ಜರೀನ್ ಖಾನ್.


Click it and Unblock the Notifications











