ಧಾರಾವಾಹಿ ಪ್ರೇಮಿಗಳಿಗೆ ಖುಷಿ ಸುದ್ದಿ, ವಾರವಿಡೀ ಧಾರಾವಾಹಿಯ 'ಮಹಾಸಂಚಿಕೆಯ ಮೆರವಣಿಗೆ'!

By ಪೂರ್ವ

ಧಾರಾವಾಹಿ ಅಂದರೆ ಅನೇಕ ಮಂದಿಗೆ ಅಚ್ಚುಮೆಚ್ಚು. ಗೃಹಿಣಿಯರಿಗೆ ಸೀರಿಯಲ್ ಎಂದರೆ ಬಹಳ ಇಷ್ಟ ಆಗುತ್ತೆ. ಇದೀಗ ಧಾರಾವಾಹಿಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರುತ್ತದೆ.ಇದೀಗ ಧಾರವಾಹಿ ಪ್ರೇಮಿಗಳಿಗೆ ಮನರಂಜನೆ ನೀಡಲು ಜೀ ಕನ್ನಡ ಚಾನೆಲ್ ನವರು ಮುಂದಾಗಿದ್ದಾರೆ. ಮನರಂಜನೆ ನೀಡುವ ಚಾನೆಲ್ ಗಳಲ್ಲಿ ಜೀ ಕನ್ನಡ ಸದಾ ಮುಂದು. ಹೆಸರೇ ಹೇಳಿದ ಹಾಗೆ ಜೀ ಕನ್ನಡ ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ಮನೆ ಮಾತಾಗಿರುವ ಚಾನೆಲ್ ಎನ್ನುವುದು ಎಲ್ಲರಿಗೆ ಕೂಡ ತಿಳಿದಿರುವ ವಿಚಾರ.

ವಾರವಿಡೀ ವೀಕ್ಷಕರ ಮನಸ್ಸಿಗೆ ಮುದಾ ನೀಡುತ್ತಾ ಬಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ನೆಚ್ಚಿನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ. ಇದನ್ನು ಕೇಳಿಸಿಕೊಂಡ ವೀಕ್ಷಕರಿಗೆ ಮಾತ್ರ ಬಹಳಷ್ಟು ಖುಷಿ ಆಗಿರುವುದಂತೂ ಸತ್ಯ. ಈಗಾಗಲೇ ಜೀ ಕನ್ನಡ ಚಾನೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಕ್ಷಕರು ಬಹಳಷ್ಟು ಕಾತರದಿಂದ ಕಾಯುತ್ತಿದ್ದಾರೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳಬೇಕು ಎಂದು ಎನಿಸಿಕೊಂಡಿದ್ದಾರೆ.

zee kaannada chanel kannada serial poster viral

ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ, ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ, ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ, ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು. ಇವಿಷ್ಟು ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ವೀಕ್ಷಕರ ಮನಸನ್ನು ರಂಜಿಸಲಿದ್ದು ಒಂದು ಗಂಟೆಯ ಮಹಾ ಮನರಂಜನೆಯನ್ನು ಜನರಿಗೆ ನೀಡಲಿದೆ.

ಕಂಠಿ ವಿರುದ್ಧ ಸಿಡಿದ ಸ್ನೇಹಾ

ಪುಟ್ಟಕ್ಕನ ಮಕ್ಕಳು ಧಾರವಾಹಿ ಸ್ನೇಹಾ ಪಾತ್ರಧಾರಿ ಹೊರ ನಡೆದ ಕಾರಣ ಕೊಂಚ ಮಟ್ಟಿಗೆ ಜನರಿಗೆ ಬೇಸರ ಇತ್ತು. ಆದರೆ ಇದೀಗ ಹೊಸದಾಗಿ ಬಂದ ಸ್ನೇಹಾ ವರ್ತನೆ ಜನರಿಗೆ ಬಹಳಷ್ಟು ಖುಷಿಯನ್ನು ನೀಡಿದೆ. ಈಗೀಗ ಆಕೆಯ ಆಕ್ಟಿಂಗ್ ನೋಡಲು ಜನರಿಗೆ ಖುಷಿಯಾಗುತ್ತಿದೆ. ಕಂಠಿ ಗೆ ಸ್ನೇಹಾ ನ ಕಂಡರೆ ಅದ್ಯಾಕೋ ಬಹಳ ಕೋಪ , ಆದರೂ ಸ್ನೇಹಾ ಕಂಠಿಯನ್ನೂ ಆಗಾಗ ಎಚ್ಚಾರಗೊಳಿಸುತ್ತಾಳೆ. ಯಾವುದು ಸರಿ , ತಪ್ಪು ಎನ್ನುವುದನ್ನು ಹೇಳುತ್ತಾರೆ. ಆದರೆ ಸ್ನೇಹಾ ಮಾತನ್ನು ಕೇಳಲು ಕಂಠಿ ಸ್ವಲ್ಪವೂ ರೆಡಿ ಇಲ್ಲ. ಆತನಿಗೆ ಅದ್ಯಾಕೋ ಸ್ನೇಹಾನನ್ನು ನೋಡಿದರೆ ಬಹಳಷ್ಟು ಕೋಪ ಬರುತ್ತದೆ.

ಸಿಂಗಾರಮ್ಮನ ಮಗನನ್ನು ಹೊಡೆಯಲು ಹೋದ ಕಂಠಿ

ಸಿಂಗಾರಮ್ಮನ ಮಗ ಸ್ವಲ್ಪದರಲ್ಲೇ ಕಂಠಿ ಕೈ ಗೆ ಸಿಕ್ಕಿ ಹಾಕಲು ಆದರೆ ಅದನ್ನು ತಪ್ಪಿಸಿದವಳು ಸ್ನೇಹಾ, ಸ್ನೇಹಾಳನ್ನು ನೋಡಿ ಕೊಂಚ ಗಾಬರಿ ಪಡುತ್ತಾನೆ. ಆದರೆ ಕೊನೆಗೆ ಸ್ನೇಹಾ ಮುಖ ನೋಡಿ ಕಿಡಿ ಕಾರುತ್ತಾನೆ. ಆದರೆ ಅದೆಲ್ಲವನ್ನೂ ಕೇಳಿಕೊಂಡು ಸಹಿಸಿಕೊಳ್ಳುವಷ್ಟು ತಾಳ್ಮೆ ಸ್ನೇಹಾ ಗೆ ಇರುವುದಿಲ್ಲ. ಆಕೆ ಕಂಠಿ ವಿರುದ್ಧ ತಿರುಗಿ ಬೀಳುತ್ತಾಳೆ. ಸ್ನೇಹಾ ಧ್ವನಿ ಕೇಳಿ ಕಂಠಿ ನಡುಗುತ್ತಾನೆ. ಇತ್ತ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಾಯಿ ಬದುಕಿರುವ ಸತ್ಯ ಗೌತಮ್ ಗೆ ತಿಳಿಯುತ್ತಾ ಎನ್ನುವ ಕಾತರದಲ್ಲಿ ಜನ ಇದ್ದಾರೆ. ಎಲ್ಲಾ ಧಾರಾವಾಹಿಗಳು ಒಂದನ್ನೊಂದು ಮೀರಿಸುವ ಹಾಗೆ ಇದೆ.

ವೀಕ್ಷಕರಿಗೆ ಮನೋರಂಜನೆ ನೀಡುವ ಚಾನೆಲ್

ಧಾರಾವಾಹಿ ಎಂದರೆ ಸಾಕು ವೀಕ್ಷಕರಿಗೆ ಮನೋರಂಜನೆಯ ಮಹಾಪೂರವೇ ದೊರೆಯುತ್ತದೆ. ಇದರಿಂದ ಜನರಿಗೆ ಬಹಳಷ್ಟು ಖುಷಿ ಆಗುತ್ತದೆ. ಇತ್ತ ಲಕ್ಷ್ಮೀ ನಿವಾಸದಲ್ಲಿ ಕೂಡ ಜಾಹ್ನವಿ ಮನೆಗೆ ವೆಂಕಿ ಹಾಗೂ ಆತನ ಅಜ್ಜಿ, ವೆಂಕಿ ಹೆಂಡತಿ ಬರುತ್ತಾರೆ. ಜಾಹ್ನವಿ ಗೆ ಬಹಳಷ್ಟು ಖುಷಿ, ವೆಂಕಿ ಹಾಗೂ ಜಯಂತ್ ಬಾಲ್ಯದ ದಿನಗಳ ಬಗ್ಗೆ ಅವರಿಬ್ಬರಿಗೂ ಗೊತ್ತಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X