Megha Shenoy: ಗೌತಮ್ ದಿವಾನ್ ತಂಗಿ ಸುಧಾ ಮೊದ್ಲು ಹೇಗಿದ್ರು ನೋಡಿ!

By ಎಸ್ ಸುಮಂತ್

ಗೌತಮ್ ದಿವಾನ್ ಮನೆಯಲ್ಲಿ ಈಗ ಸಂಭ್ರಮ ಸಡಗರ ಜೋರಾಗಿದೆ. ಗೌತಮ್ ಎಷ್ಟೇ ದೊಡ್ಡ ಬಿಸಿನೆಸ್ ಮ್ಯಾನ್ ಆಗಿದ್ರು ಕೂಡ ಅಮ್ಮನ ವಿಚಾರದಲ್ಲಿ ಪುಟ್ಟ ಮಗುವಿನಂತೆಯೇ ಸರಿ. ಚಿಕ್ಕಮ್ಮನ ಮೋಸ ಅರಿಯದೆ ಅಮ್ಮನನ್ನು ಕಳೆದುಕೊಂಡಿದ್ದ ಗೌತಮ್‌ಗೆ ಈಗ ದೇವರೇ ಅಮ್ಮನನ್ನು ಕೊಟ್ಟಿದ್ದಾನೆ. ಅಮ್ಮನ ಜೊತೆಗೆ ತನ್ನ ಪಾಪು ಅಂದ್ರೆ ತಂಗಿಯನ್ನು ಕೊಟ್ಟಿದ್ದಾನೆ. ಈಗ ಅಮ್ಮ ತಂಗಿ ಜೊತೆಗೆ ಗುಂಡು ಸರ್ ಫುಲ್ ಖುಷಿಯಾಗಿದ್ದಾರೆ.

ಶ್ರೀಮಂತರ ಮನೆಯ ಮಗಳಾದರೂ ಏನು ಇಲ್ಲದವಳಂತೆ, ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು ಸುಧಾ. ಸ್ವಂತ ಅಣ್ಣನ ಮನೆಯಲ್ಲೂ ಮನೆ ಕೆಲಸ ಮಾಡಿದ್ದಾಳೆ. ಆದರೆ ಈಗ ಸುಧಾ ದೊಡ್ಮನೆಯ ಮಗಳೆಂಬುದು ಗೊತ್ತಾಗಿದೆ. ಆದರೆ ಸುಧಾ ಧಾರಾವಾಹಿಗೂ ಬರುವುದಕ್ಕೂ ಮುನ್ನ ಹೇಗಿದ್ದರು ನೋಡಿ.

Zee Kannada Amruthadare serial Fame actress Megha shenoy s Old photos goes viral now

ಸುಧಾ ನಿಜವಾದ ಹೆಸರೇನು?

ಗೌತಮ್ ದಿವಾನ್ ತಂಗಿ ಪಾತ್ರಧಾರಿಯಾಗಿ ನಟಿಸಿರುವ ಸುಧಾ ನಿಜವಾದ ಹೆಸರು ಮೇಘಾ ಶೆಣೈ. ರಿಯಲ್ ಲೈಫ್‌ನಲ್ಲಿ ಯಾವಾಗಲೂ ಜಾಲಿ ಜಾಲಿಯಾಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಫುಲ್ ಆಕ್ಟೀವ್ ಆಗಿದ್ದಾರೆ. ಫಾಲೋವರ್ಸ್ ಈಗಷ್ಟೇ ಹೆಚ್ಚಾಗುತ್ತಿದ್ದಾರೆ. ಸದ್ಯಕ್ಕೆ 17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಪೋಸ್ಟ್‌ಗಳನ್ನು ಹಾಕುತ್ತಾ ಇರುತ್ತಾರೆ. ತೆರೆ ಮೇಲೆ ಎಷ್ಟು ಮುಗ್ಧತೆಯ ಸ್ವಭಾವದಲ್ಲಿ ಕಾಣಿಸಿಕೊಳ್ಳುತ್ತಾರೋ ಅದೇ ಮುಗ್ಧತೆ ಇದೆ.

ಧಾರಾವಾಹಿಯಲ್ಲಿ ಟ್ರೆಡಿಷನಲ್ ಗರ್ಲ್

'ಅಮೃತಧಾರೆ' ಧಾರಾವಾಹಿಯಲ್ಲಿ ಸುಧಾ ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸುತ್ತಾರೆ. ಆದರೆ ರಿಯಲ್ ಲೈಫ್‌ನಲ್ಲಿ ಆ ರೀತಿ ಇಲ್ಲ. ಪಾತ್ರಗಳು ಸಿಗುವುದು ಕೂಡ ಹಾಗೇ ತಮ್ಮದಲ್ಲದ ಕ್ಯಾರೆಕ್ಟರ್, ತಮ್ಮದಲ್ಲದ ವಯಸ್ಸಿನ ಪಾತ್ರಗಳೇ ಸಿಗುತ್ತವೆ. ಕಲಾವಿದರೇ ಹಾಗೇ ಅಲ್ವಾ. ಸುಧಾ ಅಲಿಯಾಸ್ ಮೇಘಾ ಶೆಣೈ ಕೂಡ ವಿಭಿನ್ನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ರಿಯಲ್ ಲೈಫ್‌ನಲ್ಲಿ ಮಾಡ್ರನ್ ಕೂಡ ‌ಅವರ ಸೋಷಿಯಲ್ ಮೀಡಿಯಾದಲ್ಲಿ ನೋಡೊದರೇನೆ ಅರ್ಥವಾಗುತ್ತದೆ.

ರಕ್ಷಾ ಬಂಧನದಲ್ಲೂ ಮಿಂಚಿಂಗ್

ಮೇಘಾ 'ಅಮೃತಧಾರೆ'ಗೂ ಮೊದಲು ಕೂಡ ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಕಲರ್ಸ್ ಕನ್ನಡದ 'ರಕ್ಷಾ ಬಂಧನ', ಸ್ಟಾರ್ ಸುವರ್ಣದಲ್ಲಿ 'ಆರತಿಗೊಬ್ಬ ಕೀರ್ತಿಗೊಬ್ಬಳು' ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಕುಟುಂಬಸ್ಥರ ಜೊತೆಗೆ ಮಿಂಚಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಎರಡು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದವರು. ಆದರೆ ಅಮೃತಧಾರೆ ಧಾರಾವಾಹಿಯಲ್ಲಿ ಬೇರೆಯದ್ದೇ ರೀತಿಯ ಪಾತ್ರವನ್ನು ಮಾಡಿದ್ದಾರೆ. ಒಬ್ಬ ನಟಿಗೆ ಚಾಲೆಂಜಸ್ ಎನಿಸುವಂತ ಪಾತ್ರ ಇದಾಗಿದೆ. ತೆರೆ ಮೇಲೆ ಅಮ್ಮನನ್ನು ಹೇಗೆ ಕಾಳಜಿ ಮಾಡ್ತಾರೋ, ಶೂಟಿಂಗ್ ಗ್ಯಾಪ್ ನಲ್ಲೂ ಚಿತ್ಕಲಾ ಜೊತೆಗೆ ಅಷ್ಟೇ ಬಾಂಡಿಂಗ್ ಇದೆ.

ಮೇಘಾ ಫೋಟೋಗಳನ್ನ ನೋಡಿ

ಮೇಘಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಒಳ್ಳೊಳ್ಳೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಧಾರಾವಾಹಿ ಪಾತ್ರಧಾರಿಗಳ ಜೊತೆಗೇನಾದರೂ ಸುಧಾ ಫೋಟೋ ಹಾಕಿದರೇ ಅಭಿಮಾನಿಗಳಿಂದ ಮೆಚ್ಚುಗೆಯ ಕಮೆಂಟ್ಸ್ ಬರುತ್ತಿವೆ. ಅತ್ತಿಗೆ ನಾದಿನಿ ಜೋಡಿಗೂ ಜೈಕಾರ ಸಿಕ್ಕಿದೆ. ಹಳೇ ಫೋಟೋಗಳ ಜೊತೆಗೆ ಹೊಸ ಫೋಟೋಶೂಟ್ ಕೂಡ ಮಾಡಿಸುತ್ತಾ ಇರುತ್ತಾರೆ ಮೇಘಾ ಶೆಣೈ. ಮಾಡ್ರನ್ ಡ್ರೆಸ್‌ನಲ್ಲಿ ಫೋಟೋ ಹಾಕಿರುವುದಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ನೀವೇನಾ ಗೌತಮ್ ತಂಗಿ ಸುಧಾ ಎಂದು ಕೇಳಿದ್ದಾರೆ.

More from Filmibeat

English summary
Megha Shenoy, known for her role in the Zee Kannada serial Amruthadare, has captured fans' attention as her old photos resurface online
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X