Amruthdhaare: ದಿಯಾ ಜೈಲುಪಾಲು; ಶ್ರಾವಣಿ ಆರೋಪಗಳೆಲ್ಲವೂ ಸತ್ಯವೇ?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ದೇವಸ್ಥಾನದಿಂದ ಮನೆಗೆ ಒಬ್ಬಳೇ ಬಂದಿದ್ದಕ್ಕೆ ಗೌತಮ್ ಬಳಿ ಬೈಯಿಸಿಕೊಳ್ಳುತ್ತಾಳೆ. ಮೊದಲೇ ಮನೆಯಲ್ಲಿ ಸಮಸ್ಯೆ ಇದೆ.
ನೀವು ಒಬ್ಬೊಬ್ಬರೆ ಓಡಾಡುವುದು ತಪ್ಪು ಎಂದು ಭೂಮಿಕಾಗೆ ಗೌತಮ್ ಬುದ್ಧಿ ಹೇಳುತ್ತಾನೆ. ಅಲ್ಲದೇ, ನಿಮ್ಮ ಹೊಟ್ಟೆಯಲ್ಲಿ ಮಗು ಇದೆ ಎಂದಾಗ ಭೂಮಿಕಾ ನನಗಿಂತಲೂ ನಿಮಗೆ ಮಗು ಮೇಲೆ ಪ್ರೀತಿ ಎಂದು ರೇಗಿಸುತ್ತಾಳೆ.

ಇತ್ತ ಸದಾಶಿವ ರಾಜೇಂದ್ರ ಭೂಪತಿಗೆ ಕ್ಲಾಸ್ ತೆಗೆದುಕೊಂಡಿದ್ದಕ್ಕೆ, ಜೀವನ್ ಹೆಚ್ಚು ಹೆಚ್ಚು ಹಠ ಮಾಡುತ್ತಿದ್ದಾನೆ. ರಾಜೇಂದ್ರನ ಮಾತುಗಳಿಗೆ ಮರುಳಾಗಿದ್ದು, ಮನೆಯವರನ್ನು ದೂಷಿಸಲು ಮುಂದಾಗಿದ್ದಾನೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್
ಇದೆಲ್ಲದರ ನಡುವೆ ಮಲ್ಲಿ, ಭೂಮಿಕಾಳನ್ನು ಮನೆಗೆ ಕಳುಹಿಸಿ, ಈಗ ಜೈದೇವ್ ಮತ್ತು ದಿಯಾ ಮದುವೆಯನ್ನು ತಡೆಯುವುದು ಹೇಗೆ ಎಂದು ಚಿಂತಿಸಿದ್ದಾಳೆ. ಶ್ರಾವಣಿಗೆ ಫೋನ್ ಮಾಡಿ ಸಹಾಯ ಕೇಳಿದ್ದಾಳೆ. ಕೆಲ ಪೊಲೀಸರ ಜೊತೆಗೆ ಬಂದ ಶ್ರಾವಣಿ ಮಲ್ಲಿಯ ಸಹಾಯಕ್ಕೆ ನಿಂತಿದ್ದಾಳೆ. ಇನ್ನೇನು ಜೈದೇವ್ ದಿಯಾ ಕೊರಳಿ ತಾಳಿ ಕಟ್ಟಬೇಕಿತ್ತು. ಅಷ್ಟರಲ್ಲಿ ಶ್ರಾವಣಿ ಬಂದು ಮದುವೆಯನ್ನು ತಡೆದಿದ್ದಾಳೆ. ದಿಯಾ ಮೋಸಗಾತಿ, ಗೋಲ್ಡ್ ಸ್ಮಗ್ಲಿಂಗ್ ಮಾಡಿದ್ದಾಳೆ. ಕೆಜಿಗಟ್ಟಲೇ ಚಿನ್ನವನ್ನು ಸ್ಮಗಲ್ ಮಾಡಿದ್ದಾಳೆ ಎಂದು ಅವಳನ್ನು ಅರೆಸ್ಟ್ ಮಾಡಲು ಪೊಲೀಸರಿಗೆ ಶ್ರಾವಣಿ ಹೇಳುತ್ತಾಳೆ. ಶ್ರಾವಣಿಯ ಮಾತುಗಳನ್ನು ಕೇಳಿದ ದಿಯಾ ಮತ್ತು ಜೈದೇವ್ ಇಬ್ಬರಿಗೂ ಶಾಕ್ ಆಗುತ್ತದೆ. ದಿಯಾ ತಾನು ಗೋಲ್ಡ್ ಸ್ಮಗ್ಲಿಂಗ್ ಮಾಡಿಲ್ಲ ಎಂದು ಎಷ್ಟು ಹೇಳಿದರೂ ಪೊಲೀಸರು ಕೇಳುವುದಿಲ್ಲ.
ಮಲ್ಲಿ ಸಹಾಯಕ್ಕೆ ನಿಂತ ಶ್ರಾವಣಿ
ಜೈದೇವ್‌ಗೆ ಶ್ರಾವಣಿ ಬುದ್ಧಿ ಹೇಳುತ್ತಾಳೆ. ದಿಯಾ ಮೇಲೆ ದೊಡ್ಡ ಆರೋಪವನ್ನು ಹೊರಿಸಿದ್ದಾಳೆ. ಶ್ರೀಮಂತ ಮನೆ ಹುಡುಗರನ್ನು ಪಟಾಯಿಸುವುದು. ಮದುವೆಯಾಗುವ ನಾಟಕ ಮಾಡಿ ಮೊದಲ ರಾತ್ರಿಯಲ್ಲಿ ಹಣ, ಒಡವೆ ಕದ್ದು ಪರಾರಿಯಾಗುವುದೇ ಈಕೆಯ ಕೆಲಸ ಎಂದು ಶ್ರಾವಣಿ ಹೇಳುತ್ತಾಳೆ. ಇದೇ ರೀತಿ ಬಹಳಷ್ಟು ಜನರಿಗೆ ಮೋಸ ಮಾಡಿದ್ದಾಳೆ ಎಂದು ಜೈದೇವ್‌ಗೆ ಶ್ರಾವಣಿ ಹೇಳುತ್ತಾಳೆ. ದಿಯಾ ಮತ್ತು ಜೈದೇವ್ ಎಷ್ಟು ಹೇಳಿದರೂ ಕೇಳದೇ ದಿಯಾಳನ್ನು ಅರೆಸ್ಟ್ ಮಾಡಲಾಗುತ್ತದೆ. ಬಳಿಕ ಶ್ರಾವಣಿ ಮಲ್ಲಿ ಜೊತೆಗೆ ಮಾತನಾಡುತ್ತಾಳೆ.
ಪೊಲೀಸ್ ಅವತಾರದಲ್ಲಿ ನಾಟಕ?
ಇದೆಲ್ಲವನ್ನೂ ನೋಡಿದರೆ ಶ್ರಾವಣಿ, ಮಲ್ಲಿ ಬದುಕನ್ನು ಸರಿ ಮಾಡುವ ಸಲುವಾಗಿ ಈ ನಾಟಕ ಮಾಡಿದ್ದಾಳೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದಿಯಾಳನ್ನು ಯಾವುದೋ ಪಾಳು ಬಿದ್ದ ಬಂಗಲೆಯಲ್ಲಿ ಕಟ್ಟಿ ಹಾಕಿ ಕಣ್ಣು ಮುಚ್ಚಿ, ಸುಮ್ಮನೆ ಹಿಂಸೆ ಕೊಡಲಾಗುತ್ತಿದೆ. ಎಷ್ಟು ಚಿನ್ನ ಸ್ಮಗಲ್ ಮಾಡಿದ್ದೀಯಾ. ಎಷ್ಟು ಜನರಿಗೆ ನಂಬಿಸಿ ಮೋಸ ಮಾಡಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಇದನ್ನೆಲ್ಲಾ ಗಮನಿಸಿದರೆ, ಮಲ್ಲಿಗೋಸ್ಕರ ಶ್ರಾವಣಿ ಈ ನಾಟಕ ಮಾಡುತ್ತಿದ್ದಾಳೆ ಎಂಬುದು ಗೊತ್ತಾಗುತ್ತಿದೆ.
ಮುಂದೆ ಜೈದೇವ್ ಕಥೆಯೇನು?
ದಿಯಾ.. ದಿಯಾ ಎಂದು ಸದಾ ಮಲ್ಲಿಯನ್ನು ನಿರ್ಲಕ್ಷಿಸುತ್ತಿದ್ದ ಜೈದೇವ್‌ಗೆ ಮುಂದೆ ಯಾರು ಗತಿ ಎಂಬ ಪ್ರಶ್ನೆ ಎದ್ದಿದೆ. ರಾಜೇಂದ್ರ ಭೂಪತಿಯ ಸಹಾಯ ಕೇಳಿರುವ ಜೈದೇವ್‌ಗೆ ಆತಂಕ ಹೆಚ್ಚಾಗಿದೆ. ಇದ್ಯಾಕೆ ದಿಯಾಳನ್ನು ಹೀಗೆ ಕರೆದುಕೊಂಡು ಹೋದರು ಎಂಬುದೇ ಜೈದೇವ್ ಗೆ ಗೊತ್ತಾಗುತ್ತಿಲ್ಲ. ದುಃಖದಲ್ಲಿರುವ ಜೈದೇವ್‌ಗೆ ಹೆಂಡತಿ ಮಲ್ಲಿ ಹೆಗಲು ಕೊಡುತ್ತಾಳಾ? ಇಲ್ಲವೇ ಗಂಡನಿಗೆ ತಕ್ಕ ಪಾಠವನ್ನು ಕಲಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











