Radha- Raanav: ಕೊಲ್ಲೋಕೆ ಹೋದವ ಇವನೇನಾ? ಜೈದೇವ್ ಜೊತೆ ಮಲ್ಲಿ ರಾಕ್, ನೋಡಿದವರು ಶಾಕ್..!

By ಎಸ್ ಸುಮಂತ್

ಜೀ ಕನ್ನಡದ 'ಅಮೃತಾಧಾರೆ' ಧಾರಾವಾಹಿಯಲ್ಲಿ ಒಂದಷ್ಟು ಪಾಸಿಟಿವ್ ಮೆಸೇಜ್ ನೀಡಲಾಗುತ್ತಿದೆ. ತಡವಾಗಿ ಮದುವೆಯಾದರೂ ಉತ್ತಮ ಪಾಟ್ನರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿ ಹೇಳಿದ್ದಾರೆ. ಪರಿಸ್ಥಿತಿಗೆ ಕಟ್ಟು ಬಿದ್ದು ಮದುವೆಯಾದರೂ ಇಬ್ಬರ ಸಂಬಂಧದಲ್ಲಿ ಒಂದೊಳ್ಳೆ ಬಾಂಧವ್ಯವಿದೆ. ಇಬ್ಬರಲ್ಲೂ ಹೊಂದಾಣಿಕೆಯಿದೆ. ಸೊಸೆಯಾಗಿ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಇದೇ ಧಾರಾವಾಹಿಯಲ್ಲಿಯೇ ಮಲ್ಲಿ ಎಂಬ ಪಾತ್ರವಿದೆ. ಮನೆ ಕೆಲಸ‌ ಮಾಡಿಕೊಂಡಿದ್ದಂತ ಹುಡುಗಿ. ಪಕ್ಕ ಹಳ್ಳಿ ಭಾಷೆಯನ್ನು ಮಾತನಾಡುವ ಮಲ್ಲಿ, ಸದಾ ಸೀರೆಯುಟ್ಟು ಪಕ್ಕಾ ಹಳ್ಳಿ ಹುಡುಗಿಯಂತೆ ಇದ್ದಾಳೆ. ಶ್ರೀಮಂತರ ಮನೆ ಸೊಸೆಯಾದರೂ ಕೊಂಚವೂ ತನ್ನ ಜೀವನ ಶೈಲಿಯಲ್ಲಿ ಬದಲಾವಣೆಯಾಗಿಲ್ಲ. ಆದರೆ ಮಲ್ಲಿ ಅಲಿಯಾಸ್ ರಾಧ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತಾ..?

Zee kannada amruthadhare serial fame Radha and Raanav Reels goes viral

ಗ್ಲಾಮರ್ ಗೊಂಬೆ ರಾಧಾ

ಕಲಾವಿದರೆ ಹಾಗೇ ತಮ್ಮ ರಿಯಲ್ ಲೈಫ್‌ನಲ್ಲಿ ತಮ್ಮದಲ್ಲದ ಜೀವನವನ್ನು ತೆರೆಮೇಲೆ ಜೀವಿಸುತ್ತಾರೆ. ವಯಸ್ಸಿಗೆ ಮೀರಿದ ಪಾತ್ರ, ಗೊತ್ತೆ ಇಲ್ಲದ ಭಾಷೆ, ಡಿ ಗ್ಲಾಮರ್ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ರಾಧಾ ಕೂಡ ಹಾಗೇ ರಿಯಲ್ ಲೈಫ್‌ನಲ್ಲಿ ಸಖತ್ ಗ್ಲಾಮರ್ ಆಗಿದ್ದಾರೆ. ಆದರೆ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿಯ ಹುಡುಗಿ.

ದಿಯಾಗಾಗಿ ಮಲ್ಲಿಯನ್ನು ಕೊಲ್ಲುವ ಪ್ಲ್ಯಾನ್

ಈ ಧಾರಾವಾಹಿಯಲ್ಲಿ ಜೈದೇವ್ ಮೋಸಕ್ಕೆ ಸಿಲುಕಿ ಮಲ್ಲಿ ಗರ್ಭಿಣಿಯಾಗಿರುತ್ತಾಳೆ. ಆದರೆ ಭೂಮಿಕಾ ಹಾಗೂ ಗೌತಮ್ ಅವಳಿಗೆ ನ್ಯಾಯ ಕೊಡಿಸುತ್ತಾರೆ. ಈಗ ದಿಯಾಳ ಹಿಂದೆ ಬಿದ್ದಿರುವ ಜೈದೇವ್, ತುಂಬು ಗರ್ಭಿಣಿ ಮಲ್ಲಿಯನ್ನು ಕೊಲ್ಲುವ ಪ್ಲ್ಯಾನ್ ಮಾಡಿದ್ದಾನೆ. ಮಲ್ಲಿ ಮುಗ್ಧತೆಯ ಪ್ರತೀಕ. ಗಂಡನ ಮಾತಿಗೆ ಮರುಳಾಗಿ, ಭೂಮಿಕಾ ಮಾತನ್ನು ನಂಬದಷ್ಟು ದಡ್ಡಿ ದಡ್ಡಿಯಾಗಿದ್ದಾಳೆ. ಮಲ್ಲಿಯ ಪಾತ್ರ ಎಲ್ಲರಿಗೂ ತುಂಬಾನೇ ಇಷ್ಟವಾಗಿದೆ.


ರಾಧಾ- ರಾಣವ್ ಸಖತ್ ಡ್ಯಾನ್ಸ್

ಮೊದಲೇ ಹೇಳಿದ ಹಾಗೇ ರಾಧಾ ತನ್ನ ರಿಯಲ್ ಲೈಫ್ನಲ್ಲಿ ಇರುವುದೇ ಬೇರೆ. ಒಳ್ಳೆ ಡ್ಯಾನ್ಸರ್ ಕೂಡ. ಟ್ರೆಡಿಷನಲ್ ಹಾಗೂ ಮಾಡ್ರನ್ ಎರಡು ಡ್ರೆಸ್‌ಗಳಲ್ಲೂ ಫೋಟೋ ಶೂಟ್ ಮಾಡಿಸುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. 68 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಈಗ ಜೈದೇವ್ ಅಲಿಯಾಸ್ ರಾಣವ್ ಜೊತೆಗೆ ರಾಧಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೊಂದಾಸ್‌ ಮ್ಯೂಸಿಕ್‌ಗೆ ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ. ಧಾರಾವಾಹಿಯಲ್ಲಿ ನೋಡಿದ್ರೆ ಕೊಂದು ಬಿಡುತ್ತೀನಿ ಎನ್ನುವ ಜೈದೇವ್, ಶೂಟಿಂಗ್ ಗ್ಯಾಪ್‌ನಲ್ಲಿ ಮಲ್ಲಿ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ.

ರಾಧಾ ರಾಕ್... ಫ್ಯಾನ್ಸ್ ಶಾಕ್

ಧಾರಾವಾಹಿಯಲ್ಲಿರುವ ಮಲ್ಲಿ ಇವರೇನಾ ಎನ್ನುವಷ್ಟು ಬದಲಾವಣೆ ಕಾಣಿಸುತ್ತಿದೆ. ನಾಚಿ ನೀರಾಗುವ, ಮುಗ್ಧ ಮಾತುಗಳನ್ನಾಡುವ ಮಲ್ಲಿ ಎಲ್ಲಿ, ಫುಲ್ ಜೋಶ್ ಆಗಿ ಪ್ಯಾಂಟ್ ಟೀ ಶರ್ಟ್‌ನಲ್ಲಿ ಕುಣಿಯುವ ರಾಧಾ ಎಲ್ಲಿ. ಇಬ್ಬರ ಡ್ಯಾನ್ಸ್ ನೋಡಿದವರಂತು "ಜೈದೇವ್ ಜೊತೆಗೆ ರಾಧಾ ಅಕ್ಕ ರಾಕ್ ನೋಡಿದವರು ಶಾಕ್" ಅಂತ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಮಲ್ಲಿ ಅಕ್ಕ ಜೈದೇವ್‌ಗೋಸ್ಕರ ಇಷ್ಟೊಂದೆಲ್ಲ ಬದಲಾಗಿಬಿಟ್ರಾ? ದಿಯಾ ಹಿಂದೆ ಹೋಗಬಾರದು ಅಂತ ಇಷ್ಟೆಲ್ಲಾ ಪ್ಲ್ಯಾನ್ ಹ ಅಂತಿದ್ದಾರೆ. ಇನ್ನೊಬ್ಬರು ಸಲಹೆ ನೀಡಿದ್ದು, "ಮಲ್ಲಿ ಹೀಗೆ ಇದ್ರೆ ಜೈದೇವ್ ಇನ್ನೊಂದು ಹುಡುಗಿ ಹಿಂದೆ ಹೋಗಲ್ಲ" ಎಂದಿದ್ದಾರೆ.

More from Filmibeat

English summary
Zee kannada amruthadhare serial actors nalli and jaidev real life story. Here is the details about Radha and Raanav dance.. Malli rack fans shock.
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X