Amruthadhare: ಈ ದೃಶ್ಯಕ್ಕಾಗಿ ಕಾಯ್ತಿದ್ದಾರೆ 'ಅಮೃತಧಾರೆ' ಫ್ಯಾನ್ಸ್ : ಸಂಕಟದ ನಡುವೆ ಸಂತಸದ ಸೀನ್!

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಅಮೃತಧಾರೆ' ಧಾರಾವಾಹಿ ಭಾವನೆಗಳ ತೊಳಲಾಟಕ್ಕೆ ಸಾಕ್ಷಿಯಾಗಿದೆ. ಎಷ್ಟೋ ಘಟನೆಗಳು ಕಣ್ಣಮುಂದೆ ಇದ್ದರು ಬೇಕಾದವರಿಗೆ ಕಾಣಿಸುವುದೇ ಇಲ್ಲ. ರಪಕ್ ಅಂತ ಪಾಸ್ ಆಗಿ ಬಿಡುತ್ತವೆ. ಗೌತಮ್ ಜೀವನದಲ್ಲೂ ಅದೇ ಆಗ್ತಾ ಇದೆ. ಗೌತಮ್ ನೋಡುಗರಿಗೆ ಎರಡ್ಮೂರು ರೀತಿಯಲ್ಲಿ ಇಷ್ಟವಾಗುತ್ತಾರೆ. ಒಂದು ಭೂಮಿಕಾ ಹಾಗೂ ಗೌತಮ್ ಜೋಡಿ, ಎರಡನೆಯದು ಮಾನವೀಯತೆ ಗುಣ. ಮೂರನೇಯದು ಕುಟುಂಬಕ್ಕೆ ನೀಡುವ ಬೆಲೆ.

ಒಂದು ಗಾದೆ ಮಾತಿದೆ. ಕಣ್ಣು ಅರಿಯದೇ ಹೋದರೂ ಕರುಳು ಅರಿಯದೇ ಇರಲಾರದು ಅಂತ. ತಾಯಿಗಾಗಿ ಗೌತಮ್ ಮನಸ್ಸು ಹಂಬಲಿಸುತ್ತಿದೆ, ದುಃಖಿಸುತ್ತಿದೆ. ಅತ್ತ ಪ್ರಪಂಚದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರು ಗುಂಡು ಎಂಬ ಪದ ಮಾತ್ರ ಉಚ್ಛಾರಣೆ ಮಾಡುತ್ತಿದ್ದಾರೆ ಆ ತಾಯಿ. ಹೀಗಿರುವಾಗ ಅಷ್ಟು ಹತ್ತಿರದಲ್ಲಿಯೇ ಇದ್ದರು ಆ ಎರಡು ಮನಸ್ಸುಗಳಿಗೆ ಫೀಲ್ ಆಗದೆ ಇರುವಿದೇ ವೀಕ್ಷಕರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.

Zee kannada Amruthadhare serial Fans waiting for this one scene

ತಂಗಿಗೆ ಕಂಡ ನಿಜವಾದ ಅಣ್ಣ

ಹೊಸದೊಂದು ಪ್ರೋಮೋ ರಿಲೀಸ್ ಮಾಡಿದೆ ಜೀ ಕನ್ನಡ. ಅದರಲ್ಲಿ ಸುಧಾಗೆ ತನ್ನವರು ಇಲ್ಲೇ ಇದ್ದಾರೆ ಎಂಬ ಸತ್ಯ ಗೊತ್ತಾಗಿದೆ. ಅಮ್ಮನ ಫೋಟೋ ಗೋಡೆಗೆ ಹಾಕಲು ಕೊಟ್ಟಾಗಲೇ ಸುಧಾಗೆ ನಮ್ಮ ಅಮ್ಮನೆ ಗೌತಮ್ ಅಮ್ಮ ಎಂಬ ಸತ್ಯ ಗೊತ್ತಾಗಿದೆ. ಇವರೇ ನನ್ನ ಅಣ್ಣ ಎಂದು ಅಮ್ಮನಿಗೆ ಹೇಳಲು ಓಡಿ ಹೋಗಿದ್ದಾಳೆ.

ಶಕುಂತಲ ಕೈಗೆ ಗೌತಮ್ ತಾಯಿ?

ಸುಧಾಳನ್ನ ಹೊರಗೆ ಕಳುಹಿಸಲು ಈಗಾಗಲೇ ಜೈದೇವ್ ಬಳಿ ಪ್ಲ್ಯಾನ್ ರೆಡಿಯಾಗಿದೆ. ಗೌತಮ್ ದುಷ್ಮನ್ ಬಳಿ ಸುಧಾ ಹಣ ತೆಗೆದುಕೊಳ್ಳುತ್ತಿರುವುದನ್ನ ಸಾಕ್ಷಿ ಸಮೇತ ಮನೆಗೆ ತಲುಪಿಸಿದ್ದಾನೆ. ಈಗ ಗೌತಮ್ ಕ್ಷಮಿಸೋದಕ್ಕೆ ಸಾಧ್ಯವೇ ಇಲ್ಲ. ಗೌತಮ್ ತಂಗಿ ಮತ್ತು ತಾಯಿ ಇಲ್ಲಿಯೇ ಇದ್ದಾರೆ ಎಂದು ಗೊತ್ತಾದಾಗಲೇ ಶಕುಂತಲಾ ಅವರನ್ನು ಹೊರಗೆ ಕಳುಹಿಸಿ ಕೊಲ್ಲಲು ಪ್ಲ್ಯಾನ್ ಮಾಡಿದ್ದಳು. ಈಗ ದೊಡ್ಡ ಅಸ್ತ್ರವೇ ಸಿಕ್ಕಿದೆ. ಇನ್ನೂ ಬಿಡುವುದಕ್ಕೆ ಸಾಧ್ಯವಾ..?

ತಂಗಿಯನ್ನು ಗುರುತಿಸಿದ ಗೌತಮ್

ಸೋಷಿಯಲ್ ಮೀಡಿಯಾದಲ್ಲಿ ಸೀರಿಯಲ್ ಪ್ರಿಯರ ಪೇಜ್‌ನಲ್ಲಿ ಒಂದು ಬ್ಯೂಟಿಫುಲ್ ವಿಡಿಯೋ ಅಪ್ಲೋಡ್ ಆಗಿದೆ. ಈ ವಿಡಿಯೋಗಾಗಿಯೇ 'ಅಮೃತಧಾರೆ' ವೀಕ್ಷಕರು ಕಾಯ್ತಾ ಇರೋದು. ಸಂಕಟದ ನಡುವೆ ಸಂತಸದ ದೃಶ್ಯವನ್ನು ಡೈರೆಕ್ಟರ್ ಈಗಾಗಲೇ ಶೂಟ್ ಮಾಡಿದ್ದಾರೆ ಎಂಬುದು ಈ ವಿಡಿಯೋದಿಂದ ಅರ್ಥವಾಗುತ್ತಿದೆ. ಗೌತಮ್ ಮುಂದೆ ತನ್ನ ತಾಯಿ ಇದ್ದಾರೆ. ತಂಗಿ ಸುಧಾಳನ್ನ ಬಾಚಿ ತಬ್ಬಿಕೊಂಡಿದ್ದಾನೆ. ಆ ದೃಶ್ಯ ನೋಡುಗರ ಮನಸ್ಸನ್ನು ಕರಗಿಸುವಂತಿದೆ.

ಯಾವಾಗ ಈ ದೃಶ್ಯ..?

ಈ ಒಂದು ಸನ್ನಿವೇಶ ಅಷ್ಟು ಸುಲಭದಲ್ಲಿ ಬರುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಇನ್ಮೇಲೆ ಶಕುಂತಲ ಹಾಗೂ ಜೈದೇವ್‌ನ ಕೆಟ್ಟ ಆಟ ಶುರುವಾಗಲಿದೆ. ಇದರ ನಡುವೆ ಮನೆ,ಮಠವಿಲ್ಲದ ಸುಧಾ ತನ್ನ ತಾಯಿಯನ್ನು ಕರೆದುಕೊಂಡು ಎಲ್ಲಿಗೆ ಹೋಗ್ತಾಳೆ..? ಆಶ್ರಯ ಯಾರು ಕೊಡ್ತಾರೆ..? ಅದರಲ್ಲೂ ಈ ಖಳನಾಯಕರಿಂದ ತಪ್ಪಿಸಿಕೊಳ್ಳುವುದು ಹೇಗೆ ಈ ಎಲ್ಲಾ ವಿಚಾರಗಳನ್ನು ತೋರೊಸುವಷ್ಟರಲ್ಲಿ ಬಹಳ ಸಮಯ ಹಿಡಿಯಬಹುದು. ಆದರೂ ಯಾರೋ ಹಾಕಿರುವ ಈ ವಿಡಿಯೋದಿಂದ ಖುಷಿಯಂತು ಆಗಿದೆ. ಅಣ್ಣ - ತಂಗಿ - ಅಮ್ಮ ಒಂದಾಗಲಿದ್ದಾರೆ ಎಂಬ ಸಮಾಧಾನವಂತು ಆಗಿದೆ.

More from Filmibeat

English summary
Amruthadhare serial today episode; Here is the details about Gautham is happy to have his mother and sister back.
Read more about: filmbeat original sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X