'ಅಣ್ಣಯ್ಯ'ನ ತಂಗಿ ರಾಧಾ ರಿಯಲ್ ಲೈಫ್‌ನಲ್ಲಿ ಎಷ್ಟು ಕ್ಯೂಟ್ ನೋಡಿ!
ಜೀ ಕನ್ನಡದಲ್ಲಿ 'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವಣ್ಣ ತನ್ನ ಮುದ್ದು ತಂಗಿಯರ ಜವಾಬ್ದಾರಿಯನ್ನು ಹೊತ್ತಿದ್ದಾನೆ. ನಾಲ್ಕು ತಂಗಿಯರನ್ನು ಓದಿಸಿ, ಒಳ್ಳೆ ಕಡೆ ಮದುವೆ ಮಾಡಿಕೊಡಬೇಕೆಂಬ ಆಸೆ ಅಣ್ಣಯ್ಯನದ್ದು. ಅಣ್ಣಯ್ಯನ ಕಷ್ಟಗಳನ್ನು ಅರ್ಥ ಮಾಡಿಕೊಂಡು, ತಕ್ಕ ತಂಗಿಯಂದಿರಾಗಿ ಬದುಕುತ್ತಿದ್ದಾರೆ ರಾಧ, ರಮ್ಯಾ, ರತ್ನ ಸೇರಿ ನಾಲ್ವರು ತಂಗಿಯರು.
ಪಾರ್ವತಿಯನ್ನು ಚಿಕ್ಕ ವಯಸ್ಸಿನಿಂದಾನು ನೋಡಿಕೊಂಡು ಬೆಳೆದವ ಶಿವಣ್ಣ. ಪಾರ್ವತಿಯ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದಾನೆ. ತಂಗಿಯಂದಿರಿಗೂ ಅಷ್ಟೇ ಪಾರ್ವತಿಯನ್ನೇ ಅತ್ತಿಗೆಯಾಗಿ ಮಾಡಿಕೊಳ್ಳಬೇಕೆಂಬ ಹಂಬಲ. ಆದರೆ ಪಾರ್ವತಿ ಇನ್ನೊಬ್ಬರ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಇದು ಶಿವಣ್ಣನಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ, ತಂಗಿಯಂದಿರಿಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಅಂತ ಪರಿಸ್ಥಿತಿಗೆ ಸಿಲುಕಿದ್ದಾನೆ ಶಿವಣ್ಣ. ಅಣ್ಣಯ್ಯನ ನಾಲ್ಕು ಜನ ತಂಗಿಯಂದಿರು ಒಬ್ಬೊಬ್ಬರು ಒಂದೊಂದು ಮುತ್ತುಗಳಿದ್ದಂತೆ. ಅದರಲ್ಲಿ ಒಂದು ಮುತ್ತು ರಾಧಾ ಬಗ್ಗೆ ಹೇಳ್ತೀವಿ ಕೇಳಿ.

ಎರಡನೇ ತಂಗಿಯಾಗಿ ರಾಧಾ
ಅಣ್ಣಯ್ಯನಿಗೆ ನಾಲ್ಕು ಜನ ತಂಗಿಯರು. ಅದರಲ್ಲಿ ರಾಧಾ ಎರಡನೇಯವಳು. ನಾಲ್ಕು ಜನ ತಂಗಿಯರಲ್ಲಿ ಇರುವ ಬಾಂಡಿಂಗ್ ನೋಡಿದರೆ ಎಂಥವರಿಗೆ ಆದರೂ ಖುಷಿ ಕೊಡುತ್ತೆ. ಅಕ್ಕತಂಗಿಯರು ಅಂದ್ರೆ ಹಿಂಗಿರಬೇಕು ಎನಿಸದೇ ಇರುವುದಿಲ್ಲ. ಅಷ್ಟೊಂದು ಅನ್ಯೋನ್ಯತೆ ಇದೆ ನಾಲ್ವರಲ್ಲಿ. ಅದಕ್ಕೆ ಕಾರಣ ಅವರು ಬೆಳೆಯುತ್ತಿರುವ ವಾತಾವರಣವೂ ಹೌದು.
ರಾಧಾ ರಿಯಲ್ ಆಗಿ ಹೇಗಿದ್ದಾರೆ..?
ಅಣ್ಣಯ್ಯನ ಮುದ್ದು ತಂಗಿ ರಾಧಾ ರಿಯಲ್ ಲೈಫ್‌ನಲ್ಲಿ ಸಖತ್ ಕ್ಯೂಟ್ ಆಗಿದ್ದಾರೆ. ಅವರ ನಿಜವಾದ ಹೆಸರು ರಾಘವಿ ಅರಳಗುಂಡಗಿ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೊಂಚ ಆಕ್ಟೀವ್ ಆಗಿದ್ದಾರೆ. ಹೀಗಾಗಿ ಫಾಲೋವರ್ಸ್ ಕೂಡ ಈಗ ಹೆಚ್ಚಾಗುತ್ತಿದ್ದಾರೆ. ಫೋಟೋ, ವಿಡಿಯೋಗಳನ್ನು ಹಾಕುತ್ತಾ ತಮ್ಮ ಅಭಿಮಾನಿಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿದ್ದಾರೆ. ಟ್ರೆಡಿಷನಲ್, ಮಾಡ್ರನ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಅವರ ಹೊಸ ಹೊಸ ಲುಕ್ಕಿಗೆ ಫಾಲೋವರ್ಸ್ ಕೂಡ ಫಿದಾ ಆಗಿದ್ದಾರೆ.

ರಾಘವಿ ನಟಿಸಿರುವ ಧಾರಾವಾಹಿಗಳು
ಈಗಾಗಲೇ ಹಲವು ರಾಘವಿ ಧಾರಾವಾಹಿಗಳಲ್ಲಿ ನಟಿಸಿ, ಅನುಭವ ಪಡೆದುಕೊಂಡಿದ್ದಾರೆ. 'ಜೇನುಗೂಡು' ಧಾರಾವಾಹಿ ಎಲ್ಲರಿಗೂ ನೆನಪಿರಬಹುದು. ಅದರಲ್ಲಿ ನಯನಾ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದರು ರಾಘವಿ. 'ಮಂಗಳಗೌರಿ ಮದುವೆ', 'ಅಂತರಪಟ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಯಾಕೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ. ಇವರ ಕೆಲವೊಂದು ರೀಲ್ಸ್ ಮಿಲಿಯನ್ ಗಟ್ಟಲೇ ಓಡಿದೆ. ಫ್ಯಾನ್ಸ್ ಕಮೆಂಟ್ಸ್ ಸೂಪರ್ ಆಗಿನೇ ಬರುತ್ತಿದ್ದು, ರಾಧಾ ಮೇಡಂಗೆ ಸಪೋರ್ಟಿವ್ ಆಗಿದ್ದಾರೆ.
ರಾಘವಿ ಗ್ಲಾಮರ್ ಗೊಂಬೆ..!
ಇನ್ನು ರಾಘವಿ ಅವರು ಪಕ್ಕಾ ಉತ್ತರ ಕರ್ನಾಟಕದ ಹುಡುಗಿ. ಕಲಬುರಗಿಯಿಂದ ನಟನೆಗಾಗಿ ಬೆಂಗಳೂರಿಗೆ ಬಂದವರು. ಅದರಲ್ಲೂ ಜೇನುಗೂಡು ಎಂಬ ಧಾರಾವಾಹಿ ಅಪ್ಪಟ ಉತ್ತರ ಕರ್ನಾಟಕ ಭಾಷೆಯದ್ದೇ ಆಗಿದ್ದ ಕಾರಣ, ಅದರಲ್ಲಿದ್ದ ಆಲ್ಮೋಸ್ಟ್ ಕಲಾವಿದರು ಉತ್ತರ ಕರ್ನಾಟಕದವರೇ ಆಗಿದ್ದರು. ಹೀಗಾಗಿ ಆ ಧಾರಾವಾಹಿಯ ನಟನೆಯನ್ನು ಖುಷಿ ಖುಷಿಯಲ್ಲಿ ಮಾಡಿದ್ದರು. ಈಗ ಅಣ್ಣಯ್ಯ ಧಾರಾವಾಹಿಯಲ್ಲು ಅಷ್ಟೇ ಚೆಂದವಾದ ರಾಧಾ ಕಾಣಿಸುತ್ತಾರೆ. ರಿಯಲ್ ಲೈಫ್ ನಲ್ಲಿ ರಾಘವಿ ಸಖತ್ ಕ್ಯೂಟ್ ಆಗಿದ್ದಾರೆ ಅನ್ನೋದಕ್ಕೆ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ನೋಡಿದರೇನೆ ಗೊತ್ತಾಗುತ್ತದೆ.


Click it and Unblock the Notifications