ಬಾಯಲ್ಲಿ ನೀರೂರಿಸುವ ವೀಡಿಯೋ ಹಂಚಿಕೊಂಡ 'ಅಣ್ಣಯ್ಯ' ಟೀಂ ಸುಂದರಿಯರು
ಯುಗಾದಿ ಹಬ್ಬದ ಸಂಭ್ರಮ. ಹೊಸ ಚಿಗುರು ಕಣ್ಣುಗಳಿಗೆ ಹಿತ ಕೊಡುತ್ತದೆ, ಎಳೆ ಹಸಿರಿನಿಂದ ಕಾಣುವ ಪ್ರಕೃತಿಯೂ ಅಂದವನ್ನ ಹೆಚ್ಚಿಸಿಕೊಂಡಿರುತ್ತದೆ. ಯುಗಾದಿ ಎಂದರೆ ಮಾವು, ಬೇವು ಬರಪೂರವಾಗಿ ಸಿಗಲಿದೆ. ಈ ಯುಗಾದಿಗೆ ಮಾವಿನ ತೋರಣ ಕಟ್ಟಿ, ಬೇವಿನ ಎಲೆಯನ್ನು ಬೆಲ್ಲದೊಂದಿಗೆ ಬೆರೆಸಿ, ಸದಾ ಒಳ್ಳೆಯದೇ ಆಗಲಿ ಎಂದು ಹರಸಿ ಹಂಚುತ್ತಾರೆ.
ಈ ಸಮಯದಲ್ಲಿ ಮಾವಿನ ಕಾಯಿ ಸಿಗುವ ಕಾಲ. ಆದರೆ ಯುಗಾದಿಗೆ ಮುನ್ನ ಒಂದು ಮಳೆಯಾಗುವ ಮುಂಚೆ ಯಾರೂ ಮಾವಿನ ಕಾಯಿ ತಿನ್ನುವುದಿಲ್ಲ. ವಾಡಿಕೆಯಂತೆ ಪ್ರಕೃತಿ ಅದಾಗಲೇ ಮಳೆಯನ್ನು ಸುರಿಸಿದೆ. ಹೀಗಾಗಿ ಎಲ್ಲರೂ ಮಾವಿನಕಾಯಿಗೆ ಉಪ್ಪು ಖಾರ ಬೆರೆಸಿ ತಿನ್ನುವುದಕ್ಕೆ ಶುರು ಮಾಡಿದ್ದಾರೆ. ಆ ವಿಡಿಯೋಗಳನ್ನ ನೋಡ್ತಾ ಇದ್ರೆ ನೋಡುಗರ ಬಾಯಲ್ಲೂ ನೀರು ಬಾರದೆ ಇರುವುದಿಲ್ಲ. ಹೀಗ್ಯಾಕೆ ಮಾವಿನಕಾಯಿ ವಿಚಾರ ಅಂತೀರಾ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಪ್ರೀತಿಯ ನಾದಿನಿಯರು
ನಾದಿನಿಯರೆಂದರೆ ಹೀಗಿರಬೇಕು ಎಂಬ ಆಸೆ ಅದೆಷ್ಟೋ ಜನರಿಗೆ ಬಂದಿದೆ. ಅಣ್ಣಯ್ಯ ತನ್ನ ತಂಗಿಯಂದಿರನ್ನು ಬೆಳೆಸಿದ ರೀತಿಗೆ ಇದೊಂದು ಉದಾಹರಣೆ. ಅತ್ತಿಗೆಯನ್ನ ಮನಸ್ಸಾರೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಗೌರವ ಕೊಡ್ತಾರೆ. ಅತ್ತಿಗೆಗೆ ಸಪೋರ್ಟ್ ಮಾಡ್ತಾರೆ. ಅಣ್ಣ ಅತ್ತಿಗೆ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಏನೆಲ್ಲಾ ಐಡಿಯಾ ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದ್ದಾರೆ. ಅತ್ತಿಗೆ ನಾದಿನಿಯರು ಇದ್ದರೆ ಮನರಂಜನೆಯೇ ಜಾಸ್ತಿ. ಇದೆಲ್ಲವನ್ನು ನೋಡಿದ ವೀಕ್ಷಕರು ನಮಗೂ ಇಂಥ ಅತ್ತಿಗೆ ಸಿಗಬೇಕು ಅಂದುಕೊಳ್ತಾರೆ. ಇದೇ ರೀತಿಯ ನಾದಿನಿಯರು ನಮಗು ಸಿಗಬೇಕು ಎಂದೇ ಬಯಸಿರೋದುಂಟು.
ಕ್ಲೋಸ್ ಆಗಿರೋ ನಟಿಯರು
ಸೀರಿಯಲ್ ನಲ್ಲಿ ಸಂಬಂಧ ಹೇಗೆ ಇದ್ದರು ಸೀರಿಯಲ್ ಸೆಟ್‌ನಲ್ಲಿ ಸಾಮಾನ್ಯವಾಗಿ ಎಲ್ಲರು ಒಂದು ಬಾಂಧವ್ಯವನ್ನು ಹೊಂದಿರುತ್ತಾರೆ. ಧಾರಾವಾಹಿಗಳು ವರ್ಷಾನುಗಟ್ಟಲೆ ಪ್ರಸಾರವಾಗುತ್ತವೆ. ಹೆಚ್ಚು ಸಮಯ ಧಾರಾವಾಹಿಯ ಪಾತ್ರಗಳ ಜೊತೆಗೆ ಸಮಯ ಕಳೆಯುತ್ತಾರೆ. ಹೀಗಾಗಿಯೇ ಧಾರಾವಾಹಿಯ ತಂಡದವರೊಂದಿಗೆ ಆತ್ಮೀಯತೆಯನ್ನು ಹೊಂದಿರುತ್ತಾರೆ ಅದರಲ್ಲೂ ಅಣ್ಣಯ್ಯ ಧಾರಾವಾಹಿಯ ಎಲ್ಲಾ ಕಲಾವಿದರು ಹೊರಗಡೆಯೂ ಕ್ಲೋಸ್ ಆಗಿದ್ದಾರೆ. ಅದರಲ್ಲೂ ಶಿವು ಮತ್ತು ಪಾರು ಐಸ್ ಕ್ರೀಂ ತಿನ್ನುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಶಿವು ಅವರ ಸಿನಿಮಾ ರಿಲೀಸ್ ಆದಾಗಲೂ ಎಲ್ಲರೂ ಒಟ್ಟಾಗಿ ಹೋಗಿ ಸಪೋರ್ಟ್ ಮಾಡಿದ್ದರು.
ಮಾವಿನ ಕಾಯಿ ಹಬ್ಬ
ಈಗಂತೂ ಮಾವಿನಕಾಯಿ ಕಣ್ಣಾಯಿಸಿದ ಕಡೆಯಲ್ಲೆಲ್ಲಾ ಕಾಣಿಸುತ್ತದೆ. ಶೂಟಿಂಗ್ ಸೆಟ್‌ನಲ್ಲೂ ಶಿವು ತಂಗಿಯಂದಿರು ಮಾವಿನಕಾಯಿ ತಂದಿದ್ದಾರೆ. ಜಜ್ಜಿ ಅದಕ್ಕೆ ಉಪ್ಪು ಖಾರ ಹಾಕಿ, ಎಲ್ಲರೂ ಎಂಜಾಯ್ ಮಾಡಿಕೊಂಡು ತಿಂದಿದ್ದಾರೆ. ಸೆಟ್ ನಲ್ಲಿ ಎಲ್ಲರೂ ಖುಷಿ ಖುಷಿಯಾಗಿರುವುದನ್ನು ಕಂಡ ವೀಕ್ಷಕರಿಗೂ ಫುಲ್ ಖುಷಿಯಾಗಿದೆ. ಸೀರಿಯಲ್‌ನಲ್ಲಿ ಮಾತ್ರ ಆತ್ಮೀಯತೆಯಿಂದ ಇರೋದಲ್ಲ, ಸೀರಿಯಲ್ ಗ್ಯಾಪ್ ಸಿಕ್ಕಾಗಲೂ ಅಷ್ಟೇ ಆತ್ಮೀಯತೆ ಇವರಲ್ಲಿ ಕಂಡಿದೆ. ಹೀಗೆ ಇರಿ ಎಂದು ಎಲ್ಲರೂ ಹಾರೈಸಿದ್ದಾರೆ.
ಬಾಯಲ್ಲಿ ನೀರು
ಸಾಮಾನ್ಯವಾಗಿ ಮಾವಿನ ಕಾಯಿ ನೋಡಿದರೆ ಎಂಥವರಿಗೂ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಮಾವಿನ ಕಾಯಿ ಜಜ್ಜಿ, ಅದಕ್ಕೆ ಉಪ್ಪು ಖಾರ ಹಾಕಿದರಂತೂ ತಿನ್ನಲೇಬೇಕು ಎನಿಸುವಷ್ಟು ಕ್ರೇವಿಂಗ್ ಶುರುವಾಗುತ್ತದೆ. ಈಗ ಶಿವು ತಂಗಿಯರೆಲ್ಲ ಮಾವಿನ ಕಾಯಿಗೆ ಉಪ್ಪು ಖಾರ ಎದ್ದಿಕೊಂಡು ತಿನ್ನುವುದನ್ನು ನೋಡ್ತಾ ಇದ್ದರೆ ನೋಡುಗರಂತು, ಸೀದಾ ಎದ್ದು ಮಾರ್ಕೆಟ್ ಗೆ ಹೋಗೋದು. ಯಾಕಂದ್ರೆ ಅವರಿಗೂ ಮಾವಿನಕಾಯಿಯನ್ನ ತಿನ್ನಬೇಕು ಎನಿಸುತ್ತದೆ. ಅಂಥ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದಾರೆ.


Click it and Unblock the Notifications











