Annayya: ತಪ್ಪೇ ಮಾಡದೇ ಜೈಲು ಸೇರಿದ್ದ ಶಾರದ ಮಕ್ಕಳಿಗಾಗಿ ಕೊಲೆಯನ್ನೇ ಮಾಡಿದ್ಲು!
ಅಣ್ಣಯ್ಯನ ಕನಸು ನನಸಾಗುತ್ತಿದೆ. ಕೋಟ್ಯಾಧೀಶ್ವರ ಆದ್ರೆ ವೀರಭದ್ರನ ಕುತಂತ್ರದಿಂದ ಖಾಲಿ ಕೈ ಕೂಲಿಕಾರ. ನಾಲ್ಕು ಜನ ತಂಗಿಯಂದಿರನ್ನ ಓದಿಸಿ, ಬೆಳೆಸಿ, ಅದ್ದೂರಿಯಾಗಿ ಮದುವೆ ಮಾಡಿಕೊಡಬೇಕು ಎಂಬುದೇ ಶಿವುನ ದೊಡ್ಡ ಕನಸು. ಆ ಕನಸು ಈಗ ಗುಂಡಮ್ಮನಿಂದ ಈಡೇರುತ್ತಿದೆ. ಆದರೆ ವೀರಭದ್ರನ ಕುತಂತ್ರದಿಂದ ಮದುವೆ ಮನೆಯಲ್ಲಿ ಅದೇನೇನ್ ಆಗುತ್ತೋ ಏನೋ.
ಎಲ್ಲರಿಗೂ ಮೋಸ ಮಾಡುತ್ತಾ, ಹೆಂಡತಿಯಂದಿರನ್ನ ಗಪ್ ಚಿಪ್ ಮಾಡಿಕೊಂಡು ಇಟ್ಟಿರುವ ವೀರಭದ್ರನ ಹುಟ್ಟಡಗಿಸಲು ಮಗಳು ಪಾರ್ವತಿಯೇ ಸರಿ. ಮೊದಲಿನಿಂದಾನೂ ಅಪ್ಪ ಎಂದರೆ ಅಷ್ಟಕ್ಕೆ ಅಷ್ಟೇ. ಆದರೆ ಯಾವಾಗ ಶಿವು ತಾಳಿ ಕಟ್ಟಿ ಕರೆದುಕೊಂಡು ಹೊರಗೆ ಬಂದನೋ, ತಾನು ಪ್ರೀತಿಸಿದ ಹುಡುಗನಿಗೆ ಹಣದ ಆಸೆ ತೋರಿಸಿ ಬಿಟ್ಟೋಗುವಂತೆ ಮಾಡಿದ ಸತ್ಯ ಗೊತ್ತಾಯ್ತೋ, ತನ್ನ ಗಂಡ ಆಸ್ತಿಯನ್ನೆಲ್ಲ ತಿಂದ ಸತ್ಯ ಗೊತ್ತಾಯ್ತೋ ಅಂದಿನಿಂದ ಪಾರು ರೆಬೆಲ್ ಆದ್ಲೂ. ವೀರಭದ್ರನ ಹುಟ್ಟಡಗಿಸೋಕೆ ರೆಡಿಯಾದ್ಲು.

ವಿಷ ಹಾಕಲು ಪ್ರಯತ್ನ
ಇಷ್ಟು ದಿನ ಶಿವುಗೆ ಕಷ್ಟ ಕೊಟ್ಟು, ಮಜಾ ತೆಗೆದುಕೊಳ್ಳುತ್ತಿದ್ದ ವೀರಭದ್ರ ಹಾಗೇ ಅವನ ಮಗ. ಅದಕ್ಕೆಂದೆ ತಾವೇ ಸೃಷ್ಟಿ ಮಾಡಿದ ಗುಂಡಮ್ಮನನ್ನ ಮದ್ವೆ ಆಗ್ತಿರೋ ಗಂಡು ಲಕ್ಷ ಲಕ್ಷ ವರದಕ್ಷಿಣೆ ಕೇಳ್ತಾವ್ನೆ. ಆದರೂ ಎಲ್ಲಿಯೂ ಸೋಲದ ಶಿವುನನ್ನ ಕಂಡು ದೊಡ್ಡ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ. ಶಿವುನನ್ನು ಕೊಂದೇ ಬಿಡುವ ಪ್ಲ್ಯಾನ್ ಮಾಡಿದ್ದಾನೆ. ಶಿವು ಅನ್ನಕ್ಕೆ ವಿಷ ಹಾಕಲು ಹೆಂಗಸನ್ನು ನೇಮಕ ಮಾಡಿ ಬಂದವನೆ.
ಮಕ್ಕಳನ್ನು ಕಾಪಾಡಿದ ಶಾರದಾ
ತಪ್ಪನ್ನೇ ಮಾಡದೆ ವೀರಭದ್ರನ ಕುತಂತ್ರದಿಂದ ತನ್ನ ಪುಟ್ಟ ಮಕ್ಕಳನ್ನ ಬಿಟ್ಟು ಶಾರದಾ ಜೈಲು ಸೇರಿದಳು. ಈಗಲು ಅಮ್ಮ ಎಂದರೆ ದ್ವೇಷ ಮಾಡುತ್ತಾನೆ ಶಿವು. ಆದರೆ ಜೈಲಿನಿಂದಾನೇ ಒಳ್ಳೆಯವಳು ಎನಿಸಿಕೊಂಡು ಬಂದ ಶಾರದಾ ಮಕ್ಕಳಿಗೆ ಮುಖ ತೋರಿಸಲು ಆಗದೆ ಮದುವೆ ಮನೆಯಲ್ಲಿ ಕಾಣದೆಯೇ ಮಗಳಿಗೆ ಬಳೆ ತೊಡಿಸಿದ್ದಾಳೆ. ಈಗ ಮಗನನ್ನು ಕೊಲ್ಲು ಎಂಬ ವಿಚಾರ ಕೇಳಿ ಸುಮ್ಮನೆ ಹೋದಾಳೆ. ಮಕ್ಕಳ ಕಾವಲಿಗೆ ನಿಂತಿದ್ದಾಳೆ. ಕೊಲ್ತೇನೆ ಎಂದು ಬಂದವಳನ್ನೆ ಕೊಂದು ವಿಷ ಕೊಡು ಎಂದವನಿಗೆ ವಿಷ ಹಾಕಲು ದುರ್ಗಿಯಂತೆ ನಿಂತಿದ್ದಾಳೆ.
ಅಪ್ಪನ ಅಹಂಕಾರಕ್ಕೆ ಪೆಟ್ಟು
ಅತ್ತ ಮದುವೆ ಸೆಟ್ ಆದಾಗಿನಿಂದಲೂ ವೀರಭದ್ರ ತನ್ನ ಹೆಂಡತಿಯರನ್ನ ದೂರವೇ ಇಟ್ಟಿದ್ದಾನೆ. ಶಿವು ಮನೆಗೆ ಬರದಂತೆ ತಾತನಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಅನುಮಾನಗೊಂಡ ಪಾರು ಇಂದಿ ನೇರವಾಗಿ ಮನೆಗೆ ಬಂದಿದ್ದಾಳೆ. ಬೀಗ ಹಾಕಿ ಅಡ್ಡ ನಿಂತ ವೀರಭದ್ರನಿಗೆ ಮಾತಿನಲ್ಲಿಯೇ ಬೆವರಿಳಿಸಿದ್ದಾಳೆ.
ಅಮ್ಮಂದಿರನ್ನ ಕಾಪಾಡಿದ ಪಾರು
ಪಾರುಗೆ ಅನುಮಾನ ದಟ್ಟವಾಗಿತ್ತು. ಬೀಗ ಕೊಡದೆ ಸತಾಯಿಸಿದ ವೀರಭದ್ರನಿಗೆ ಕಲ್ಲು ತಂದು ಬೀಗ ಹೊಡೆದು ಎದೆಯನ್ನೇ ನಡುಗಿಸಿದಳು. ಮದುವೆಗೆ ತಯಾರಾಗಿ ನಿಂತಿದ್ದ ಅಮ್ಮಂದಿರನ್ನ ವೀರಭದ್ರ ಕೂಡಿ ಹಾಕಿದ್ದು ಪಾರು ಕಣ್ಣಿಗೆ ಬಿತ್ತು. ಇನ್ನೆಲ್ಲಿ ನಡೆಯುತ್ತೆ ವೀರಭದ್ರನ ಆಟ. ಗಂಡಿನ ಕುತಮನತ್ರ, ಮಾವ ಮಾಡಿರೋ ಲಕ್ಷಾಂತರ ರೂಪಾಯಿ ಸಾಲಕ್ಕೆ ಈಗ ಒಂದು ಅಂತ್ಯವಾಡಲೇಬೇಕಲ್ವಾ. ಪಾರು ತನ್ನ ಗಂಡನ ಮನೆಯನ್ನ ಕಾಯುತ್ತೇನೆ ಎಂದು ನಿಂತಿದ್ದಾಳೆ. ಬಿಡುತ್ತಾಳಾ, ವೀರಭದ್ರನನ್ನ ಮಟ್ಟ ಹಾಕಿ ಶಿವುನನ್ನ ಕಾಪಾಡಿಕೊಳ್ಳುತ್ತಾಳೆ. ಈಗ ಪಾರು ಜೊತೆಗೆ ಶಾರದಮ್ಮನ ಕೈ ಕೂಡ ಜೊತೆಯಾಗಿದೆ.


Click it and Unblock the Notifications











