Annayya: ವರದಕ್ಷಿಣೆ ವಿರುದ್ಧ ನಿಂತ ತಂಗಿಯಂದಿರು; ದಿಕ್ಕೆ ತೋಚದೆ ಕುಳಿತ ಅಣ್ಣಯ್ಯ!
ಅಣ್ಣಯ್ಯನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಕಡೆಗೂ ಶಿವುನ ಬಹಳ ವರ್ಷದ ಆಸೆ ಈಡೇರುವ ಸಮಯ ಬಂದಿತ್ತು. ಅಣ್ಣಯ್ಯನಿಗೆ ಮೈತುಂಬಾ ಸಾಲವಾಗಿದೆ. ಆದರೂ ಅವನಿಗೆ ಚಿಂತೆ ಇಲ್ಲ. ಸಮಾಧಾನವಿರೋದು ನನ್ನ ತಂಗಿ ಮದುವೆಯಾಗ್ತಾ ಇದ್ದಾಳೆ ಅಂತ. ಹಸೆ ಮಣೆಗೆ ಹೆಣ್ಣು ಕರೆದುಕೊಂಡು ಬಂದು ಕೂರಿಸಿದರೂ ವರದಕ್ಷಿಣೆ ವಿಚಾರವನ್ನ ಶಿವು ಬಾಯ್ಬಿಟ್ಟಿರಲಿಲ್ಲ. ಕಡೆ ಗಳಿಗೆಯಲ್ಲಿ ಗಂಡಿನ ಮನೆಯವರಿಂದಾನೇ ಈ ಸತ್ಯ ಗೊತ್ತಾಗಿದೆ.
ಶಿವು ತಾಯಿ ಶಾರದಾಗೆ ಎಲ್ಲಾ ಸತ್ಯ ಗೊತ್ತಿದ್ದೃ ಆ ವರದಕ್ಷಿಣೆ ಹಣವನ್ನ ಕದ್ದಿದ್ದಾಳೆ. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಬೇಕು ಎಂದು ಪಾರು ಅವ್ವಂದಿರು ಪ್ರಯತ್ನ ಪಟ್ಟರು. ಆದರೂ ಅದು ಸಾಧ್ಯವಾಗಲಿಲ್ಲ. ದೇವರೇ ಈಗ ಮದುವೆಯನ್ನ ನಿಲ್ಲಿಸುವ ಮಾರ್ಗ ನೀಡಿದ್ದಾನೆ.

ಒಂದಾದ ಶಿವು ತಂಗಿಯರು
ವರದಕ್ಷಿಣೆ ಕೊಡ್ತಾ ಇದ್ದಾನೆ ಅಣ್ಣಯ್ಯ ಅನ್ನೋದು ತಂಗಿಯರ ಗಮನಕ್ಕೂ ಬಂದಿರಲಿಲ್ಲ. ಈಗ ಗೊತ್ತಾದ ಮೇಲೆ ಎಲ್ಲರೂ ಪಾರು ಪರವಾಗಿಯೇ ನಿಂತಿದ್ದಾರೆ. ಈಗ ವರದಕ್ಷಿಣೆ ಕೊಟ್ಟು ಮದುವೆಯನ್ನೇನೋ ಮಾಡಬಹುದು. ಆದರೆ ಒಮ್ಮೆ ದುಡ್ಡಿನ ರುಚಿ ಕಂಡವರು ಮತ್ತೆ ಮತ್ತೆ ಕೇಳಲ್ಲ ಅನ್ನೋದಕ್ಕೆ ಏನಣ್ಣ ಸಾಕ್ಷಿ. ಈ ವಿಚಾರದಲ್ಲಿ ನಾವೆಲ್ಲಾ ಅತ್ತುಗೆ ಪರವೇ ನಿಲ್ಲುತ್ತೇವೆ. ವರದಕ್ಷಿಣೆ ಕೊಟ್ಟು ಮದುವೆ ಮಾಡೋದು ಬೇಡ ಎಂದಿದ್ದಾರೆ.
ಗಂಡಿನವರಿಗೆ ಹೆದರಿಸಿದ ಪಾರು
ಹೆಣ್ಣು ಮಕ್ಕಳೆಲ್ಲ ಗರಂ ಆಗಿದ್ದನ್ನು ಕಂಡ ಗಂಡಿನ ಕಡೆಯವರು ತಕ್ಷಣ ಸರಿ ಶಿವು ನಿನ್ನ ಮೇಲೆ ನಂಬಿಕೆ ಇದೆ. ಮೊದಲು ಮದುವೆ ಮಾಡಿ ಬಿಡೋಣಾ ಎಂದಿದ್ದಾರೆ. ಆದರೆ ಪಾರು ಹಾಕಿದ ಪಾಯಿಂಟ್‌ಗೆ ಗಢಗಢ ಅಂತ ನಡುಗಿದ್ದಾರೆ. ಈಗ ಇಲ್ಲಿಂದ ಹೋಗದೆ ಇದ್ದರೆ ಪೊಲೀಸರನ್ನ ಕರೆಸಬೇಕಾಗುತ್ತದೆ ಎಂದಿದ್ದಾಳೆ. ಪಾರು ಮಾತಿಗೆ ಭಯ ಪಟ್ಟು ಗಂಡಿನ ಕಡೆಯವರು ಜಾಗ ಖಾಲಿ ಮಾಡಿದ್ದಾರೆ. ಹಸೆ ಮಣೆ ಮೇಲೆ ಕೂತಿದ್ದ ಗಂಡು ಪೇಟ, ಹಾರ ತೆಗೆದು ಹೊರಟಿದ್ದಾನೆ.
ಕಂಗಾಲಾದ ಶಿವಣ್ಣ
ಇದೆಲ್ಲ ಶಿವಣ್ಣನ ಪಾಲಿಗೆ ಕಗ್ಗತ್ತಲಿನಂತೆ ಭಾಸವಾಗಿದೆ. ದೊಡ್ಡ ಕನಸೊಂದು ಕಮರಿದ ಭಾಸ. ಅಣ್ಣಯ್ಯನಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಹಿಂದೆ ರಶ್ಮಿ ಮಧುಮಗಳಾಗಿ ಹಸೆ ಮಣೆಯಲ್ಲಿಯೇ ಕುಳಿತಿದ್ದರೆ ಶಿವಣ್ಣ ಮಂಡಿಯೂರಿ, ಆಕಾಶವೇ ತಲೆಮೇಲೆ ಬಿದ್ದಂತೆ ಕೂತಿದ್ದಾನೆ. ಆದರೆ ಅಣ್ಣಯ್ಯನ ಒಳ್ಳೆಯತನಕ್ಕೆ ಒಳ್ಳೆಯದ್ದೇ ಆಗುತ್ತದೆ. ಮುಂದೆ ಆಗುವ ಅನಾಹುತವೊಂದು ಈಗ ತಪ್ಪಿದೆ. ವೀರಭದ್ರನ ಕುತಂತ್ರಕ್ಕೆ ಶಾರದಾ ತಣ್ಣೀರು ಎರಚಿದ್ದಾಳೆ. ಈ ಕ್ಷಣದಲ್ಲಿ ಶಿವಣ್ಣನಿಗೆ ನೋವಾಗಿರಬಹುದು ಆದರೆ ಮನೆಯ ಹೆಣ್ಣು ಮಕ್ಕಳು ವರದಕ್ಷಿಣೆ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ.
ವೀಕ್ಷಕರಿಗೆ ಫುಲ್ ಖುಷ್
ಇನ್ನು ರಶ್ಮಿ ಮತ್ತು ಸೀನನ ನಡುವೆ ನಡೆಯುತ್ತಿದ್ದ ಕೋಳಿ ಜಗಳ ನೋಡುತ್ತಿದ್ದ ವೀಕ್ಷಕರಿಗೆ ಅಂದೇ ಅರ್ಥವಾಗಿತ್ತು. ಇಬ್ಬರ ನಡುವೆ ಏನೋ ಒಂದು ಆಗುತ್ತೆ, ಇಬ್ಬರ ಮದುವೆಯೂ ಆಗುತ್ತೆ ಎಂದು. ಆದರೆ ಇಬ್ಬರ ಮದುವೆಗೆ ಈ ರೀತಿಯ ಟ್ವಿಸ್ಟ್ ಸಿಗುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಫೈನಲೀ ಸೀನನೇ ರಶ್ಮಿಯನ್ನ ಮದುವೆಯಾಗಿದ್ದು ವೀಕ್ಷಕರಿಗಂತು ಖುಷಿ ಇದೆ. ಅವರಿಬ್ಬರ ಮದುವೆಯ ಎಪಿಸೋಡ್‌ಗೆ ವೀಕ್ಷಕರು ಕಾಯುತ್ತಾ ಇದ್ದಾರೆ. ಈ ವಾರ ಆ ಥ್ರಿಲ್ಲಿಂಗ್ ಎಪಿಸೋಡ್ ಬರಲಿದೆ.


Click it and Unblock the Notifications











