Annayya: ಸೀನನ ಬದುಕಿನಲ್ಲಿ ಗುಂಡಮ್ಮನ ಎಂಟ್ರಿ; ಇನ್ಮುಂದೆ ಕೋಳಿ ಜಗಳ ಬಂದ್

By ಎಸ್ ಸುಮಂತ್

'ಅಣ್ಣಯ್ಯ' ಧಾರಾವಾಹಿಯಲ್ಲಿ ಮಹಾ ತಿರುವೊಂದು ಸಿಕ್ಕಿದೆ. ಅಣ್ಣಯ್ಯ ಕಂಡ ಕನಸಿಗೆ ಈಗ ಮತ್ತೆ ಜೀವ ಬಂದಿದೆ. ತಂಗಿಯ ಮದುವೆ ನಿಂತು ಹೋದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿತ್ತು. ಇನ್ನ್ಯಾರು ರಶ್ಮಿಯನ್ನ ಮದುವೆಯಾಗ್ತಾರೆ ಎಂಬ ನೋವು ಅವನನ್ನ ಕಾಡಿತ್ತು‌. ಪುರೋಹಿತರು ಅದನ್ನೇ ಹೇಳಿದ್ದರು. ಆದರೆ ಒಳ್ಳೆಯವರಿಗೆ ಒಳ್ಳೆಯದ್ದೇ ಆಗುತ್ತೆ ಅಂತಾರಲ್ಲ ಹಾಗಾಯ್ತು ಶಿವು ಬದುಕಲ್ಲಿ.

ಜಿಮ್ ಸೀನ ಒಂದು ಹುಡುಗಿಯನ್ನ ಲವ್ ಮಾಡ್ತಾ ಇದ್ದ. ಅದು ಅವರ ಮಮ್ಮಿಗೂ ಬಹಳ ಇಷ್ಟವಾಗಿತ್ತು. ಆದರೆ ಈಗ ಸೀನನ ಕನಸು ಮಂಟಪದಲ್ಲಿಯೇ ಕರಗಿ ಹೋಗಿದೆ. ಸೀನ ಈಗ ರಶ್ಮಿಯ ಗಂಡನಾಗಿದ್ದಾನೆ. ಮನೆಯವರೆಲ್ಲ ಕೇಳಿದಾಗ ರಶ್ಮಿ ಕೂಡ ಓಕೆ ಎಂದಿದ್ದಾಳೆ. ಎಲ್ಲರೂ ಹರಸಿ, ಹಾರೈಸಿದ್ದಾರೆ.

Zee kannada Annaiah serial Written Update on February 25th episode

ರಶ್ಮಿ ಈಗ ಮಾದಪ್ಪಣ್ಣನ ಸೊಸೆ

ಮದುವೆ ಛತ್ರದಲ್ಲಿ ಶಿವು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟ. ಯಾರೇ ಛತ್ರದಿಂದ ಹೊರಗೆ ಹೋದರು ತಿಳಿಯುತ್ತಿಲ್ಲ, ಯಾರಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಮೂಕ ವಿಸ್ಮಿತನಂತೆ ಕುಳಿತು ಬಿಟ್ಟಿದ್ದಾನೆ. ಆ ಸಮಯದಲ್ಲಿ ಬಂದವನೇ ಮಾದಪ್ಪ. ಈ ಮದುವೆಗೆ ಹತ್ತು ಲಕ್ಷ ವರದಕ್ಷಿಣೆ ಹಣ ಒದಗಿಸಲು ಮಾದಪ್ಪ ಸಹಾಯ ಮಾಡಿದ್ದ. ಈಗ ಆದ ಅವಾಂತರಕ್ಕೆ ತನ್ನ ಮನೆಗೇನೆ ರಶ್ಮಿಯನ್ನು ಸೊಸೆಯಾಗಿ ತಂದುಕೊಳ್ಳಲು ಅಣ್ಣಯ್ಯನ ಬಳಿ ಕೇಳಿದ್ದಾನೆ. ಇಂಥ ಸಮಯದಲ್ಲಿ ಮಾದಪ್ಪ ಬಂದಿದ್ದಕ್ಕೆ ಅಣ್ಣಯ್ಯನು ಖುಷಿಯಾಗಿದ್ದಾನೆ.

ಶಿವು ತಂಗಿಯರೆಂದರೆ ಗೌರವ

ಮಾದಪ್ಪನಿಗೆ ಶಿವು ಎಂದರೆ ಎಷ್ಟು ಗೌರವವಿದೆಗೋ ಅಷ್ಟೇ ಗೌರವ ಶಿವು ತಂಗಿಯರ ಮೇಲೂ ಇದೆ. ಶಿವು ತಂಗಿಯರು ಸಂಸ್ಕಾರವಂತರು ಎಂಬುದು‌. ಹೀಗಾಗಿಯೇ ತನ್ನ ಮಗನನ್ನ ತಾಯಿ ಅಂತು ತಿದ್ದೋಕೆ ಸಾಧ್ಯವಾಗ್ಲಿಲ್ಲ, ಶಿವು ತಂಗಿ ಖಂಡಿತ ತಿದ್ದುತ್ತಾಳೆ ಎಂಬ ನಂಬಿಕೆ ಅವನಿಗಿದೆ. ಹೀಗಾಗಿ ಹೆಂಡತಿ ಹೇಳಿದರೂ ಕೇಳದೆ, ಮಗ ಬೇಡಿಕೊಂಡರು ಕೇಳದೆ ಹಸೆ ಮಣೆ ಮೇಲೆ ಕೂರಿಸಿದ್ದಾನೆ. ತಾಳಿ ಕಟ್ಟುವುದಕ್ಕೆ ಹೇಳಿದ್ದಾನೆ. ಈ ವೇಳೆ ಮಗನನ್ನು ಒಂದು ಮಾತು ಕೇಳಿ ಎಂದರೂ ಕೇಳದೆ ತಾಳಿ ಕಟ್ಟಿಸಿದ್ದಾನೆ.

ಸೀನ ತಗಲಾಕಿಕೊಂಡಿದ್ದೇಗೆ?

ಈ ಮದುವೆಯಲ್ಲಿ ಜಿಮ್ ಸೀನ ತಗಲಾಕಿಕೊಂಡಿದ್ದೇ ಅವನದ್ದೇ ಅಪರಾಧದಿಂದ. ಅಂದ್ರೆ ಒಮ್ಮೆ ಕಳ್ಳತನ ಮಾಡಿಯಾದರೂ ಸರಿ ಜಿಮ್ ಮಾಡುತ್ತೇನೆ ಎಂದಿದ್ದ. ಈ ಮಾತನ್ನ ಮಾದಪ್ಪ ನೆನೆದು ಜಿಮ್ ಸೀನ ಕಳ್ಳತನ ಮಾಡಿದ್ದಾನೆ ಎಂದುಕೊಂಡು ಹಸೆ ಮಣೆ ಮೇಲೆ ಕೂರಿಸಿದ್ದಾನೆ. ಅವನೇ ಮಾಡಿದ ತಪ್ಪಿಗೆ ಅವನೇ ರಶ್ಮಿಯನ್ನ ಮದುವೆಯಾಗಬೇಕಿದೆ. ಇನ್ಮುಂದೆ ಕೋಳಿ ಜಗಳ ಬಂದ್ ಸಂಸಾರ ಶುರು.

ವೀರಭದ್ರನಿಗೆ ಶಾರದಾ ಸವಾಲು

ಇನ್ನು ಶಿವು ಸಂಸಾರ ಹಾಳು ಮಾಡುವುದಕ್ಕೆ, ನೆಮ್ಮದಿ ಹಾಳು ಮಾಡುವುದಕ್ಕೆ ವೀರಭದ್ರ ಮಾಡಿದ್ದ ಪ್ಲ್ಯಾನ್ ಹಾಳಾಗುವುದಕ್ಕೆ ಪಾರು ಮಾತ್ರ ಕಾರಣವಲ್ಲ ಶಾರದಾ ಕೂಡ ಕಾರಣಳೆ. ಈಗ ವೀರಭದ್ರನ ಎದುರು ಬಂದು ನಿಂತು, ಮತ್ತೆ ಸವಾಲು ಹಾಕಿದ್ದಾಳೆ. ತನ್ನ ಮಕ್ಕಳಿಗೆ ಏನು ಮಾಡಲು ಸಾಧ್ಯವಿಲ್ಲ. ನನ್ನ ಮಕ್ಕಳನ್ನ ನೋಡಿ ಖುಷಿ ಆಯ್ತು. ಆದ್ರೆ ಏನಾದ್ರೂ ಕಿತಾಪತಿ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾಳೆ‌. ಅಷ್ಟೇ ಅಲ್ಲ ವಿಷ ಹಾಕಿದ್ದಕ್ಕೆ ಸಾಕ್ಷಿಯೂ ಇದೆ ಅಂತ ಹೇಳಿ ಭಯ ಹುಟ್ಟಿಸಿದ್ದಾಳೆ. ವೀರಭದ್ರ ಗಪ್ ಚುಪ್ ಆಗಿದ್ದಾನೆ.

More from Filmibeat

Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X