ಮೈಕ್ರೋ ಫೈನಾನ್ಸ್ ವಿರುದ್ಧ ನಿಂತ ಪಾರು; ಬಡ್ಡಿಕೋರರ ವಿರುದ್ಧ ನೀವೂ ಹಿಂಗೆ ನಿಲ್ಲಿ ಹೆಣ್ಮಕ್ಳೆ!
'ಅಣ್ಣಯ್ಯ' ಚಿಕ್ಕಂದಿನಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಾರಿಗೂ ಯಾವುದೇ ರೀತಿಯ ಕೆಟ್ಟದ್ದನ್ನು ಬಯಸಿದವನಲ್ಲ. ಸಾಧ್ಯವಾದರೆ ಒಳ್ಳೆಯದ್ದನ್ನೇ ಮಾಡುತ್ತಾ ಬರ್ತಿರುವ ಶಿವುಗೆ ಈಗ ಸಂಕಷ್ಟದ ಸರಮಾಲೆಯೇ ಕೊರಳಿಗೆ ಬಿದ್ದಿತ್ತು. ಅಪ್ಪಯ್ಯ ಕುಡುಕನಾದ, ಅವ್ವ ಬಿಟ್ಟು ಹೋದಳು. ಮೂವರು ತಂಗಿಯಂದಿರು, ಇನ್ನೊಬ್ಬಳು ಇನ್ನೆಲ್ಲೋ ಸಿಕ್ಕ ತಂಗಿ. ಎಲ್ಲರನ್ನು ಸಾಕಿ ಸಲಹಬೇಕಲ್ಲವಾ. ಹೀಗಾಗಿ ತನ್ನೆಲ್ಲಾ ಆಸೆಗಳನ್ನು ಪಕ್ಕಕ್ಕೆ ಇಟ್ಟು ಜವಾಬ್ದಾರಿ ನಿಭಾಯಿಸಿದ.
ಶಿವು ಅವನೇ ತಿಳಿದುಕೊಂಡಿರುವಂತೆ ಬಡವ ಅಲ್ಲ. ದೊಡ್ಡ ಶ್ರೀಮಂತ. ವೀರಭದ್ರನಿಗಿಂತ ಶ್ರೀಮಂತ. ಆದರೆ ಅದು ಶಿವುಗೆ ಗೊತ್ತಾಗದಂತೆ ಕಾಪಾಡಿಕೊಂಡು ಬಂದಿರೋದು ವೀರಭದ್ರ. ಮೋದಸ ಬಲೆಯಲ್ಲಿ ಶಿವು ತಂದೆಯಿಂದ ಆಸ್ತಿಗೆಲ್ಲ ಸಹಿ ಹಾಕಿಸಿಕೊಂಡು ತನ್ನಂತೆ ಮಾಡಿಕೊಂಡಿದ್ದಾನೆ. ಪಾರುಗೆ ಗೊತ್ತಿರೋ ಸ್ವಲ್ಪೇ ಸ್ವಲ್ಲ ಸತ್ಯ. ಪಾರು ಕಾದು ಬಿಸಿಮುಟ್ಟಿಸುವ ಹುಡುಗಿ. ತಂದೆಯ ಕೆಟ್ಟತನವನ್ನ ಅದೇಗೆ ಮಟ್ಟ ಹಾಕ್ತಾಳೆ ಎಂಬುದನ್ನ ನೋಡಬೇಕಿದೆ.

ಮೈಕ್ರೋ ಫೈನಾನ್ಸ್ ವಿರುದ್ಧ ಪಾರು
ಇತ್ತೀಚೆಗಂತೂ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿತ್ತು. ಇನ್ನು ಅದೆಷ್ಟೋ ಕುಟುಂಬಗಳು ಪ್ರಾಣ ಕಳೆದುಕೊಂಡವು. ಈಗ ಅದೇ ವಿಚಾರವನ್ನು ಅಣ್ಣಯ್ಯ ಧಾರಾವಾಹಿಯಲ್ಲಿ ತರಲಾಗಿದೆ. ಬಡ್ಡುಗೆ ಹಣ ಕೊಟ್ಟವರು ಮನೆ ಹರಾಜಿಗೆ ಬಂದಿದ್ದರು. ಆದರೆ ಪಾರು ಬಿಡ್ತಾಳಾ..? ಅದಕ್ಕಿರುವ ಕಾಯ್ದೆಯ ಬಗ್ಗೆ ಎಲ್ಲಾ ಪಾಯಿಂಟ್ ಗಳನ್ನ ಹಾಕುತ್ತಿದ್ದಂತೆ ಲಾಯರ್ ಓಡಿ ಹೋದ್ರು, ಫೈನಾನ್ಸ್ ಕೊಟ್ಟವ ಹಣ ತೆಗೆದುಕೊಂಡು ಸುಮ್ಮನೆ ಓಡಿದ.
ಶಿವುಗೆ ಸಿಕ್ತು ನೆಮ್ಮದಿ
ಲಾಯರ್ ಓಡುವುದಕ್ಕೂ ಮುನ್ನ ಮನೆಯ ಡಾಕ್ಯುಮೆಂಟ್ ಪಾರ್ವತಿ ಕೈಲಿಟ್ಟ. ಕಡೆಗೂ ಮಬೆ ಉಳಿಯಿತು. ಈ ಮನೆಯ ಮೇಲೆ ಶಿವು ಸೇರಿದಂತೆ ಹೆಣ್ಣು ಮಕ್ಕಳು ಕೂಡ ಭಾವನಾತ್ಮಕ ಸಂಬಂಧವನ್ನ ಬೆಳೆಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಮನೆ ಹರಾಜಿಗೆ ಬಂದ ಕೂಡಲೇ ಜೀವವೇ ಕೈಗೆ ಬಂದವರಂರೆ ಆಡಿದರು. ಶಿವು ಅಂತು ಕುಸಿದೇ ಹೋಗಿದ್ದ. ಕಡೆಗೂ ಶಿವು ಮನೆಯನ್ನ ಪಾರ್ವತಿ ಉಳಿಸಿಬಿಟ್ಟಿದ್ದಾಳೆ.
ಪಾರು ಕೆಲಸಕ್ಕೆ ಅಪ್ಪುಗೆ
ಮನೆ ಉಳಿದ ಖುಷಿಯಲ್ಲಿ ಶುವು ಮೊದಲಿಗೆ ತನ್ನ ತಂಗಿಯರಿಗೆಲ್ಲ ಸಮಾಧಾನ ಮಾಡಿದ, ಅಪ್ಪಿಕೊಂಡು ಅಂತಸ ವ್ಯಕ್ತಪಡಿಸಿದ. ಪಾರು ನೋಡಿದಾಕ್ಷಣ ಖುಷಿ ಇನ್ನು ಜಾಸ್ತಿಯಾಗಿತ್ತು. ತಕ್ಷಣ ಓಡಿ ಹೋಗಿ ಪಾರ್ವತಿಯನ್ನ ತಬ್ಬಿಕಿಂಡು, ಮನಸ್ಸಲ್ಲಿದ್ದ ನೋವನ್ನೆಲ್ಲ ಪಟಪಟ ಅಂತ ಹೇಳಿದ. ತಕ್ಷಣ ಫ್ಲ್ಯಾಶ್ ಆಗಿದ್ದು, ಅಪ್ಪುಗೆ ಸಡಿಲಿಸಿ, ಸಾರಿ ಪಾರು ಅಂತ ಕ್ಷಮೆಯನ್ನು ಕೇಳಿದ. ಅಷ್ಟರಲ್ಲಿ ಮನೆಯ ಗರ್ಲ್ಸ್ ಎಲ್ಲಾ ಶಿವುನ ರೇಗಿಸಿದರು.
ಖುಷಿಗೆ ರಶ್ಮಿ ಮಾಡಿದ್ದೇನು..?
ರಶ್ಮಿಯನ್ನು ಲೀಲಾ ಹಾಗೂ ಸೀನ ಗೋಳಾಡಿಸಯವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಆದರೆ ಶಿವು ವಿಚಾರಕ್ಕೆ ಲೀಲಾ ಕೂಡ ಬೇಸರ ಮಾಡಿಕೊಂಡಿದ್ದಾಳೆ. ಆದರೆ ಮನೆ ಉಳಿದ ವಿಚಾರ ಸೀನನಿಗೂ ಖುಷಿಕೊಟ್ಟಿದೆ. ಮನೆಗೆ ಓಡಿ ಬಂದು ಅವ್ವನ ಬಳಿ ಹೇಳಿದ್ದಾನೆ. ರಶ್ಮಿಗೂ ಹೇಳಿ, ಸಮಾಧಾನವಾಗಿರು ಎಂದಿದ್ದಾನೆ. ಸೀನ ಸೈಕಲ್ ಮೇಲೆ ಹೊರಟಾಗ, ನಾನು ಬರ್ತೀನಿ ಅಂತ ತುಂಬಾ ಮುಗ್ಧತೆಯಿಂದ ಕೇಳಿದ್ದಾಳೆ. ಆರಂಭದಲ್ಲಿ ಆಗಲ್ಲ ಎಂದ ಸೀನ, ಆಮೇಲೆ ಸರಿ ಬಾ ಎಂದ. ಆದರೆ ಸೈಕಲ್ ಮೇಲೆ ಅಲ್ಲ ಬುಲೆಟ್ ಮೇಲೆ. ಹೌದು ಬುಲೆಟ್ ಕೀ ಈಗ ರಶ್ಮಿ ಕೈನಲ್ಲಿದ್ದು, ಸೀನ ಧಾಮ್ ಧೂಮ್ ಅಂತ ಬುಲೆಟ್ ಮೇಲೆ ರಶ್ಮಿಯನ್ನ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ. ರಶ್ಮಿ ಅಂತು ಅಣ್ಣನನ್ನು ನೋಡುವ ಸಂಭ್ರಮದಲ್ಲಿ ಹೋಗಿದ್ದಾಳೆ. ಸೀನ ಎಷ್ಟು ಸೋಮಾರಿ ಅನ್ನೋದು ಮಾದಪ್ಪಣ್ಣನಿಗೆ ಗೊತ್ತಿತ್ತು. ಆ ಕಾರಣಕ್ಕಾಗಿಯೇ ಬೈಕ್ ಇದ್ದರು ಕೊಟ್ಟಿರಲಿಲ್ಲ. ಸೈಕಲ್‌ನಲ್ಲಿಯೇ ಓಡಾಡ್ತಾ ಇದ್ದ. ಇದೀಗ ರಶ್ಮಿಯ ದಯೆಯಿಂದ ಸೈಕಲ್ ಹೋಗಿ ಬೈಕ್ ಕೀ ಸಿಕ್ಕಿದೆ. ಬೈಕ್ ಸಿಕ್ಕ ಖುಷಿಯಲ್ಲಿ ರಶ್ಮಿಯನ್ನು ಕೂರಿಸಿಕೊಂಡು ಹೋಗಿದ್ದಾನೆ.


Click it and Unblock the Notifications











