Annayya: 'ಅಣ್ಣಯ್ಯ'ನ ಮನೆಗೆ ಬಂದಿದ್ದೆ ರಶ್ಮಿ ಊಟ ಮಾಡೋಕೆ; ದೃಶ್ಯ ನೋಡಿ ಪಾರು ಶಾಕ್!
ಸಂಬಂಧ, ಗೌರವ ಎನ್ನುವುದು ಎಂಥಹ ಕಷ್ಟವನ್ನು ಸಹಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ತಮ್ಮವರ ಖುಷಿಗಾಗಿ ಕಣ್ಣೀರನ್ನು ಮರೆಮಾಚಿಸುತ್ತದೆ, ಹಸಿವನ್ನು ಮುಚ್ಚಿ ಹಾಕುವಂತೆ ಮಾಡುತ್ತದೆ. ಅದಕ್ಕೆ ಸಾಕ್ಷಿ ಶಿವು ತಂಗಿ ರಶ್ಮಿ. ರಶ್ಮಿ ಹೇಳಿ ಕೇಳಿ ತಿಂಡಿ ಪೋತಿ. ಹಸಿವನ್ನು ತಡೆದುಕೊಂಡು ಬದುಕಿದ ದಿನಗಳೇ ಇಲ್ಲ. ಮನೆಯಲ್ಲೂ ಅಷ್ಟೇ ರಶ್ಮಿಯ ಹಸಿವನ್ನ ಎಲ್ಲರೂ ತಿಳಿದಿದ್ದರು. ಅದಕ್ಕೆ ತಮಗೆ ಕಷ್ಟವಾದರೂ ರಶ್ಮಿಗೆ ಊಟದಲ್ಲಿ ಕೊರತೆ ಮಾಡಿರಲಿಲ್ಲ.
ಅಣ್ಣಯ್ಯ ತನ್ನ ತಂಗಿಯಂದಿರನ್ನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾನೆ. ಹಾಗೇ ಒಳ್ಳೆ ಬುದ್ದಿಯನ್ನು ಕಲಿಸಿದ್ದಾನೆ. ಎಲ್ಲರಿಗೂ ಮರ್ಯಾದೆ ಕೊಟ್ಟು, ಗೌರವದಿಂದ ಬದುಕುತ್ತಿದ್ದಾರೆ. ಆದರೆ ಸ್ವಾಭಿಮಾನ ಮಾತ್ರ ಬಿಡೋದಿಲ್ಲ. ಮರ್ಯಾದೆ ವಿಚಾರಕ್ಕೆ ಬಂದ್ರೆ ತೆಗೆದು ಒಗೀತಾ ಇರೋದೆ. ಈಗ ರಶ್ಮಿ ಮಾಡ್ತಾ ಇದಾಳಲ್ಲ ಆ ರೀತಿ.

ಮನೆಗೆ ದೃಷ್ಟಿ ತೆಗೆದ ಶಿವು
ಫೈನಾನ್ಸ್ ಕೊಟ್ಟು ಮನೆಯನ್ನ ಹರಾಜಿಗಿಟ್ಟಿದ್ದವರಿಗೆ ಪಾರು ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಮನೆಯ ಡಾಕ್ಯುಮೆಂಟ್ ಕೊಟ್ಟು ಓಡಿ ಹೋದರು. ಈಗ ಮನೆ ಶಿವು ಕೈಸೇರಿದೆ. ಗಂಡಾಂತರ ಕಳೆದು ನೆಮ್ಮದಿಯಾಗಿರುವಾಗ, ಎಲ್ಲರೂ ಬಲಗಾಲಿಟ್ಟು ಒಳಗೆ ಹೋಗಿದ್ದಾರೆ. ಈಗ ಕುಂಬಳಕಾಯಿ ಒಡೆದು ದೃಷ್ಟಿಯನ್ನು ತೆಗೆದಿದ್ದಾರೆ. ಶಿವು ಹಾಗೂ ಪಾರು ಇಬ್ಬರು ಸೇರಿ ಮನೆಗೆ ದೃಷ್ಟಿ ತೆಗೆದಿದ್ದಾರೆ. ಇರೋದೊಂದು ಪುಟ್ಟ ಮನೆಯಾದರೂ ಆ ಮನೆಯಲ್ಲಿ ಸಾಕಷ್ಟು ನಂಟಿದೆ, ಭಾವನೆಗಳಿದಾವೆ, ಆ ಮನೆಯೇ ನಾಲ್ಕು ಹೆಣ್ಣು ಮಕ್ಕಳಿಗೆ ದೇವಾಲಯವಿದ್ದಂತೆ. ಹೀಗಾಗಿ ಯಾರ ಕಣ್ಣು ಬೀಳದಂತೆ ದೃಷ್ಟಿ ತೆಗೆದಿದ್ದಾರೆ.
ಸೀನ-ರಶ್ಮಿ ಎಂಟ್ರಿ
ಮಾದಪ್ಪಣ್ಣನ ಬಳಿ ಬುಲೆಟ್ ಇದ್ದರು ಸೀನ ಮುಟ್ಟುವುದಕ್ಕೂ ಬಿಟ್ಟಿರಲಿಲ್ಲ. ಈಗ ರಶ್ಮಿಯಿಂದಾಗಿ ಬುಲೆಟ್ ಮೇಲೆ ಓಡಾಡುವ ಯೋಗ ಕೂಡಿ ಬಂದಿದೆ. ರಶ್ಮಿ ಕಂಡರೆ ಕೋಪ ಇದ್ದರು ಶಿವಣ್ಣ ಎಂದರೆ ಸೀನನಿಗಾಗಲು, ಲೀಲಾಗಾಗಲಿ ಕೋಪವಿಲ್ಲ. ಹೀಗಾಗಿ ಅಣ್ಣನನ್ನು ನೋಡುವುದಕ್ಕೆ ರಶ್ಮಿ ಬುಲೆಟ್ ಏರಿ ಗಂಡನ ಜೊತೆಗೆ ಮನೆಗೆ ಬಂದಿದ್ದಾಳೆ. ಹೊಸ ಗಂಡು ಹೆಣ್ಣು ಒಟ್ಟಿಗೆ ಬಂದಿದ್ದನ್ನು ಕಂಡು ಪಾರು ಖುಷಿಯಾಗಿದ್ದಾಳೆ. ತುಂಬಾ ದಿನದ ಬಳಿಕ ಗುಂಡಮ್ಮನನ್ನು ಕಂಡು ಅಕ್ಕಂದಿರು ಖುಷಿಯಾಗಿದ್ದು, ಆರತಿ ಮಾಡಿ ಮನೆ ಒಳಗೆ ಕರೆದುಕೊಂಡಿದ್ದಾರೆ.
ಅಡುಗೆ ಮನೆಗೆ ಓಡಿದ ರಶ್ಮಿ
ಗುಂಡಮ್ಮ ಹಸಿವನ್ನು ಒಂದು ದಿನವೂ ತಡೆದುಕೊಂಡಿದ್ದೇ ಇಲ್ಲ. ಮದುವೆ ಸೆಟ್ ಆದಾಗಲೂ ಸಣ್ಣ ಆಗಬೇಕು ಅಂತ ಊಟ ಬಿಟ್ಟಿದ್ದಳು. ಆದರೆ ಆ ಸ್ಟ್ರಿಕ್ಟ್ ಡಯೆಟ್ ಅನ್ನ ರಶ್ಮಿಯಿಂದ ಫಾಲೋ ಮಾಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಈಗ ಸೀನನ ಮನೆಯಲ್ಲಿ ಒಂದೊತ್ತಿನ ಊಟವನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ. ಅದನ್ನ ಬಾಯ್ಬಿಟ್ಟು ಮನೆಯಲ್ಲಿಯೂ ಹೇಳಲಾಗುತ್ತಿಲ್ಲ. ಹೀಗಾಗಿ ಅಣ್ಣಯ್ಯನ ಮನೆಗೆ ಬಂದ ಕೂಡಲೇ ಅಡುಗೆ ಮನೆ ಹುಡುಕಿ ಓಡಿ ಹೋದಳು. ಮೊದಲು ತಟ್ಟೆ ತುಂಬಾ ಊಟ ಬಡಿಸಿಕೊಂಡು, ಹೊಟ್ಟೆ ತುಂಬ ತಿಂದಳು.
ಅತ್ತಿಗೆ ನಿಜ ಹೇಳ್ತಾಳಾ..?
ಪಾರುಗೆ ಅನುಮಾನ ಬಂತು. ಅನ್ನ ಕಂಡು ಎಷ್ಟೋ ದಿನಗಳಾಗಿದೆ, ಹೊಟ್ಟೆ ತುಂಬಾ ತಿಂದು ಬಿಡೋಣಾ ಎಂಬಂತೆ ರಶ್ಮಿ ತಿನ್ನುತ್ತಾ ಇದ್ದದ್ದನ್ನು ಕಂಡ ಪಾರು, ಅವಳಿಂದ ಸತ್ಯ ತಿಳಿಯುವ ಪ್ರಶ್ನೆ ಮಾಡಿದ್ದಾಳೆ. ಸತ್ಯವನ್ನ ನೀನು ಹೇಳಲೇಬೇಕು. ನಿನ್ನ ಗಂಡನ ಮನೆಯಲ್ಲಿ ಎಲ್ಲವೂ ಸರಿ ಇದ್ಯಾ ಎಂದೇ ಕೇಳಿದ್ದಾಳೆ. ಪಾರುಗೆ ಎಲ್ಲವನ್ನು ಸರಿ ಮಾಡುವ ಸಾಮರ್ಥ್ಯವಿದೆ ಎಂಬುದನ್ನು ರಶಚಮಿ ಅರಿತಿದ್ದಾಳೆ. ಪಾರು ಮುಂದೆ ಸತ್ಯ ಹೇಳ್ತಾಳ ಅಥವಾ ಗಂಡನ ಮನೆ ಮರ್ಯಾದೆ ಕಾಪಾಡಿಕೊಳ್ತಾಳಾ ಎಂಬ ಕುತೂಹಲವಿದೆ.


Click it and Unblock the Notifications











