Annayya: ಪಾರು ಮೇಲೆ ಶಿವುಗಲ್ಲ 'ಅಣ್ಣಯ್ಯ' ಡೈರೆಕ್ಟರ್‌ಗೆ ಲವ್ ಆಗಿದ್ಯಂತೆ!

By ಎಸ್ ಸುಮಂತ್

'ಅಣ್ಣಯ್ಯ' ಧಾರಾವಾಹಿ ವೀಕ್ಷಕರಿಗೆ ಸಖತ್ ಮಜಾ ಕೊಡ್ತಾ ಇದೆ. ಕುಟುಂಬದ ಜವಾವ್ದಾರಿಯ ಕಥೆ ಕೂಡ ಇದೆ. ಅಣ್ಣ ತಂಗಿಯರ ಪ್ರೀತಿಯೂ ಇದೆ. ಇದರ ನಡುವೆ ಎರಡು ಜೋಡಿಯ ಕಾಮಿಡಿ ಮಜಭೂತವಾಗಿದೆ. ಪಾರುಗೆ ಶಿವು ಮೇಲೆ ಲವ್ವಾಗಿದೆ. ಆದರೆ ಅದನ್ನ ನೇರವಾಗಿ ಹೇಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಪರೋಕ್ಷವಾಗಿ ಹೇಳುವುದಕ್ಕೆ ಪ್ರಯತ್ನಪಟ್ಟರು ಶಿವು ಅರ್ಥ ಮಾಡಿಕೊಳ್ಳುತ್ತಿಲ್ಲ.

ಶಿವು ಹಾಗೂ ಪಾರು ಲವ್ ಸ್ಟೋರಿ ಒಂದು ಕಡೆಯಾದರೆ ಸೀನ ಹಾಗೂ ರಶ್ಮಿ ಸೀನು ಮತ್ತೊಂದು ಕಡೆ. ಹಸಿವನ್ನು ತಡೆದುಕೊಂಡರು ರಶ್ಮಿ, ಸೀನನನ್ನ ದ್ವೇಷ ಮಾಡ್ತಿಲ್ಲ. ಬದಲಿಗೆ ಕೋಳಿ ಜಗವನ್ನಂತು ಆಡ್ತಿದ್ದಾಳೆ. ಇದನ್ನ ವೀಕ್ಷಕರು ಕೂಡ ಎಂಜಾಯ್ ಮಾಡುತ್ತಿರುತ್ತಾರೆ. ಸದ್ಯ ವೀಕ್ಷಕರ ಪಾಲಿನ ಪ್ರಶ್ನೆ ಅಂದ್ರೆ ಅದು ಪಾರು ಮೇಲೆ ಲವ್ ಆಗಿರೋದು ಯಾರಿಗೆ ಅಂತ. ಆ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

Zee kannada Annaiah serial Written Update on March 20th episode

ರಶ್ಮಿ ಮೇಲೆ ದ್ವೇಷ

ಪಿಂಕಿ ಹಾಗೂ ಸೀನ ಒಬ್ಬರನ್ನೊಬ್ಬರು ಲವ್ ಮಾಡ್ತಾ ಇದ್ರು. ಪಿಂಕಿಯನ್ನ ಸೊಸೆ ಮಾಡಿಕೊಳ್ಳುವುದಕ್ಕೆ ಲೀಲಾ ಕಡೆಯಿಂದ ತುಂಬಾನೇ ಒಪ್ಪಿಗೆ ಇತ್ತು. ಆದರೆ ಅನಿವಾರ್ಯತೆಯ ಸಂದರ್ಭದಲ್ಲಿ ರಶ್ಮಿ ಹಾಗೂ ಸೀನನ ಮದುವೆಯಾಗಿದೆ. ಈ ಮದುವೆಯಿಂದಾಗಿ ರಶ್ಮಿ ಭದ್ರಕಾಳಿಯಾಗಿದ್ದಾಳೆ. ಸೀನ ಮನೆ ಮುಂದೆ ಬಂದು ರಶ್ಮಿಯನ್ನ ನೆಮ್ಮದಿಯಾಗಿ ಇರುವುದಕ್ಕೆ ಬಿಡಲ್ಲ ಎಂದು ಶಪಥ ಮಾಡಿದ್ದಾಳೆ‌. ಲೀಲಾ ಕೂಡ ಮತ್ತೆ ಮಾತನ್ನ ಕೊಟ್ಟಿದ್ದು, ನನ್ನ ಮಗ ನಿನಗೆ ಸೇರಿದವನು. ರಶ್ಮಿ ಜೊತೆಗೆ ಯಾವುದೇ ಕಾರಣಕ್ಕೂ ಸಂಸಾರ ಮಾಡಲ್ಲ ಎಂದಿದ್ದಾನೆ. ಆದರೆ ಅದೇ ಸಮಯಕ್ಕೆ ಹೆಂಡತಿ ಜೊತೆಗೆ ಬುಲೆಟ್ ನಲ್ಲಿ ಬಂದಿದ್ದಾನೆ ಸೀನ.

ಪಾರುಗೆ ಕುತೂಹಲ

ಮನೆ ಉಳಿದ ಖುಷಿಯಲ್ಲಿ ಶಿವು ಎಕ್ಸೈಟ್ಮೆಂಟ್‌ನಲ್ಲಿ ತನ್ನ ತಂಗಿಯರನ್ನೆಲ್ಲ ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ . ಅದೇ ರೀತಿ ಪಾರುಳನ್ನು ತಬ್ಬಿಕೊಂಡ. ಈಗ ಆ ಅಪ್ಪುಗೆಯ ಬಗ್ಗೆ ಪಾರು ಪ್ರಶ್ನೆ ಮಾಡ್ತಾ ಇದಾಳೆ. ನಿಂಗೆ ಆ ಸಮಯದಲ್ಲಿ ಏನು ಅನ್ನಿಸ್ತು ಮಾವ ಅಂತ ಕೇಳಿದ್ರೆ ನಮ್ಮ ಶಿವು ಏನು ಹೇಳ್ತಾನೆ ಹೇಳಿ. ಪಾಪ ಸುಮ್ಮನೆ ನಾಚಿಕೆ ಮಾಡಿಕೊಂಡು ಸೈಲೆಂಟ್ ಆಗಿಬಿಟ್ಟ.

ವೀರಭದ್ರನಿಗೆ ತಿಳಿತು ಸತ್ಯ

ಅತ್ತ ತನ್ನ ಶಿವುಗಾಗಿ ಪಾರು ಮನಸ್ಸು ಮಿಡಿಯುತ್ತಿದೆ. ಪ್ರೀತಿ ವಿಚಾರ ಹೇಳಲು ಕಾಯ್ತಾ ಇದ್ರೆ ಈಗ ವೀರಭದ್ರನ ಮುಂದೆ ಹಳೆ ವಿಚಾರ ಬಯಲಾಗಿದೆ. ಸಿದ್ದಾರ್ಥ್‌ಗೋಸ್ಕರ ಶಿವುನಿಂದ ದೂರ ಆಗಲು ಡಿವೋರ್ಸ್‌ಗೆ ಅಪ್ಲೈ ಮಾಡಿದ್ದರು. ಆದರೆ ಪಾರುಗೆ ಸತ್ಯ ಗೊತ್ತಾದ ಮೇಲೆ ಡಿವೋರ್ಸ್ ವಿಚಾರವನ್ನೇ ಮರೆತು ಹೋಗಿದ್ದಾರೆ. ಈಗ ನೋಡಿದ್ರೆ ವೀರಭದ್ರ ಹಳೆ ವಿಚಾರಕ್ಕೆ ಖುಷಿಯಾಗಿದ್ದಾನೆ. ನಾನೇ ಪ್ರಯತ್ನ ಪಟ್ಟರು ಇಬ್ಬರನ್ನು ದೂರ ಮಾಡಲು ಆಗ್ತಿಲ್ಲ. ಈಗ ನೋಡಿದ್ರೆ ಅವರಿಬ್ಬರೇ ದೂರ ಆಗಲು ರೆಡಿಯಾಗಿದ್ದಾರೆ ಅಂತ ಖುಷಿ ಪಟ್ಟಿದ್ದಾನೆ.

ಪಾರು ಮೇಲೆ ಲವ್ ಆಯ್ತಾ..?

ಇವತ್ತಿನ ಎಪಿಸೋಡಿನ ವಿಡಿಯೋ ನೋಡಿದ ವೀಕ್ಷಕ ಪ್ರಭುಗಳ ತಲೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆ ಓಡಿದೆ. ಪಾರು ಮೇಲೆ ಧಾರಾವಾಹಿ ನಿರ್ದೇಶಕರಿಗೇನೆ ಲವ್ ಅಗಿರಬೇಕು. ಅದಕ್ಕೆ ಶಿವು ಜೊತೆಗೆ ಪಾರು ಒಂದಾಗುವಂತ ದೃಶ್ಯವನ್ನೆ ತೆಗೆಯುತ್ತಿಲ್ಲ. ಈಗ ವೀರಭದ್ರನಿಗೆ ಬೇರೆ ಸತ್ಯ ಗೊತ್ತಾಗಿದೆ ಎಂದು ಬೇಜಾರು ಮಾಡಿಕೊಂಡರೆ ಇನ್ನು ಹಲವರು ಇದೊಂದೆ ಧಾರಾವಾಹಿಯಲ್ಲಿ ಅನ್ಸುತ್ತೆ ವಿಲನ್ ಗೆ ಸೋಲಾಗುವುದು, ಹೀರೋ - ಹೀರೋಯಿನ್ ಗೆ ಒಳ್ಳೆಯದಾಗುವುದು. ವೀರಭದ್ರ ಪ್ರತಿಸಲ ಸೋಲುತ್ತಾನೆ. ಪಾರು ಹಾಗೂ ಶಿವು ಪ್ರತಿ ಸಲ ಗೆಲ್ಲುತ್ತಾರೆ ಎಂದು ಖುಷಿ ಪಟ್ಟಿದ್ದಾರೆ. 'ಅಣ್ಣಯ್ಯ' ಧಾರಾವಾಹಿಗೆ ವೀಕ್ಷಕರಂತು ಫುಲ್ ಖುಷಿಯಾಗಿದ್ದಾರೆ.

More from Filmibeat

English summary
Zee kannada Annaiah serial today episode. Here is the details about Is the serial director in love with Parvati?
Read more about: kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X