Annaiah: ವೀರಭದ್ರನಿಗೆ ಶಿವು ಮಾತ್ರವಲ್ಲ, ವೀಕ್ಷಕರಿಂದಲೂ ಕ್ಲಾಸ್; ಏನ್ ಗೊತ್ತಾ?
ವೀರಭದ್ರನ ಕುತಂತ್ರ, ಮೋಸ ಒಂದೇ ಒಂದು ಚೂರು ಕೂಡ ಶಿವುಗೆ ತಿಳಿಯುತ್ತಿಲ್ಲ. ಶಿವು ಮನಸ್ಸನ್ನ ಹೇಗೆಲ್ಲಾ ನೋಯಿಸಬಹುದು ಎಂಬುದು ವೀರಭದ್ರನಿಗೆ ಗೊತ್ತು.
ಯಾವಾಗಲೂ ಶಿವು ತಾಯಿ ಓಡಿ ಹೋದ್ರು ಅಂತ ಹೇಳಿ ಹೇಳಿ ಕುಗ್ಗಿಸುವ ಪ್ರಯತ್ನ ಮಾಡ್ತಾನೆ ವೀರಭದ್ರ. ಅಷ್ಟೇ ಅಲ್ಲ ನಾನು ನಿಮ್ಮ ಕುಟುಂಬಕ್ಕೆ ಏನು ಬೇಕಾದರೂ ಮಾಡ್ತೀನಿ ಅಂತ ಭಲೇ ನಂಬಿಸಿದ್ದಾನೆ. ಇದನ್ನ ಶಿವು ಹೌದಪ್ಪ ಎಂದು ಕಣ್ಣು ಮುಚ್ಚಿ ನಂಬಿದ್ದಾನೆ. ತಂದೆಯ ಕೆಟ್ಟತನ ಏನು ಎಂಬುದು ಪಾರುಗಷ್ಟೇ ಗೊತ್ತು.
ತನ್ನ ಸುದ್ದಿಗಾಗಲಿ, ಗಂಡನ ಸುದ್ದಿಗಾಗಲಿ, ಗಂಡನ ಮನೆಯ ಸುದ್ದಿಗಾಗಲಿ ಬರಬಾರದು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ಆದರೂ ವೀರಭದ್ರ ಮಾತ್ರ ತನ್ನ ಬುದ್ದಿಯನ್ನ ಬಿಡ್ತಾ ಇಲ್ಲ. ಯಾವುದಾದರೊಂದು ವಿಚಾರ ತೆಗೆದು ಶಿವು ಫ್ಯಾಮಿಲಿಯನ್ನ ಟಾರ್ಗೆಟ್ ಮಾಡ್ತಾನೆ ಇದಾನೆ. ಆದರೆ ಈಗ ಪಾರು ಮಾತಾಡ್ತಿಲ್ಲ, ಶಿವು ಗಾಬರಿ ಮಾಡಿದ್ದಾನೆ.

ಡಿವೋರ್ಸ್ ವಿಚಾರಕ್ಕೆ ಖುಷಿ
ವೀರಭದ್ರನಿಗೆ ಸತ್ಯ ತಿಳಿಯದೆ ಸಿಕ್ಕ ಯಾವುದೋ ಒಂದು ಕಾಗದಕ್ಕೆ ಖುಷಿ ಪಟ್ಟಿದ್ದಾನೆ. ಶಿವು ಹಾಗೂ ಪಾರ್ವತಿ ಡಿವೋರ್ಸ್ ವಿಚಾರ ತಿಳಿಯುತ್ತಿದ್ದಂತೆ ಖುಷಿಯಾಗಿದ್ದಾನೆ. ಅದೇ ಖುಷಿಯಲ್ಲಿ ಇಡೀ ಊರಿಗೆ ಡಂಗುರ ಸಾರಿದ್ದಾನೆ. ದೇವಸ್ಥಾನದಲ್ಲಿದ್ದ ಶಿವು - ಪಾರ್ವತಿಯ ಕಿವಿಗೂ ಈ ವಿಚಾರ ಬಿದ್ದಿದೆ. ಪ್ರೀತಿಯಿಂದ ಹೂ ಮುಡಿಸುತ್ತಿದ್ದ ಶಿವು ಕೈ ನಡುಗಿದೆ. ಪಂಚಾಯ್ತಿಗೆ ಬಂದ ಶಿವು ಹಾಗೂ ಪಾರುಗೆ ಊರಿನವರಿಂದ ಪ್ರಶ್ನೆಗಳ ಸುರಿಮಳೆಯೇ ಸುರಿದಿದೆ. ಒಬ್ಬೊಬ್ಬರದ್ದು ಒಂದೊಂದು ಪ್ರಶ್ನೆ ಎದುರಾಗಿದೆ.
ಪಾರು ತಡೆದ ಶಿವು
ವೀರಭದ್ರನ ಮಾತಿನಲ್ಲಿಯೇ ನಾಟಕ ಎದ್ದು ಕಾಣಿಸ್ತಾ ಇತ್ತು. ಮನೆಯಲ್ಲಿ ಏನಾದ್ರೂ ವೀರಭದ್ರ ಇಷ್ಟು ನಾಟಕವಾಡಿದ್ದರೆ ಪಾರು ತಕ್ಕ ಪಾಠ ಕಲುಸ್ತಾ ಇದ್ದಳು. ಆದರೆ ಊರವರೆಲ್ಲ ಇದ್ದ ಕಾರಣದಿಂದ ಏನು ಮಾತನಾಡದೆ ಸುಮ್ಮನೆ ನಿಂತಳು. ಮಾವನ ಮರ್ಯಾದೆಯೂ ಮುಖ್ಯವಾಗಿತ್ತು. ಆದರೂ ತಂದೆಗೆ ವಿವರಣೆ ಕೊಡುವುದಕ್ಕೆಂದು ಹೋದಾಗ, ಶಿವುನೆ ಪಾರುನ ತಡೆದಿದ್ದಾನೆ. ವೀರಭದ್ರನಿಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದಾನೆ. ಶಿವು ನಮ್ಮನೆ ದೇವತೆ, ನಮ್ಮ ಮನೆ ಬಗ್ಗೆ ಆಗಲಿ, ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಆಗಲಿ ಯಾರೂ ಮಾತನಾಡುವ ಧೈರ್ಯ ಮಾಡಕೂಡದು ಎಂದು ಎಚ್ಚರಿಕೆ ನೀಡಿದ್ದಾನೆ.
ಶಿವು ಮಾತಿಗೆ ಗಢಗಢ
ವೀರಭದ್ರ ಅಂದುಕೊಂಡಿದ್ದೇ ಬೇರೆ. ಆದರೆ ಅಲ್ಲಿ ಆಗಿದ್ದೆ ಬೇರೆ. ಶಿವು ಹಾಗೂ ಪಾರುನಾ ದೂರ ಮಾಡಬಹುದು, ಆಮೇಲೆ ಪಾರು ಅನಾಥಳಾಗ್ತಾಳೆ, ಅದೇ ನೋವಲ್ಲಿರೊ ಶಿವು ಆಸ್ತಿಯನ್ನೆಲ್ಲ ಕಬಳಿಸಬಹುದು ಎಂಬೆಲ್ಲಾ ಯೋಜನೆಗಳನ್ನ ಹಾಕಿಕೊಂಡಿದ್ದ. ಆದರೆ ಡಿವೋರ್ಸ್ ಪೇಪರ್ ತೆಗೆದುಕೊಂಡು ಸುಟ್ಟು ಹಾಕಿದ ಶಿವು, ಇನ್ನೊಂದು ಸಲ ನಮ್ಮ ವಿಚಾರಕ್ಕೆ ಬಂದರೆ ಹಿಂಗೆ ಸುಟ್ಟು ಬಿಡ್ತೀನಿ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ.
ವೀಕ್ಷಕರಿಂದ ಕ್ಲಾಸ್
ವೀರಭದ್ರನಿಗೆ ನೀರಿಳಿಸಿದ್ದು ಕೇವಲ ಶಿವು ಮಾತ್ರವಲ್ಲ, ವೀಕ್ಷಕರು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಏನೋ ಶಿವು ಮೇಲೆ ಬಹಳ ಕಾಳಜಿ, ಪ್ರೀತಿ ಎಂಬಂತೆ ನಾಟಕ ಮಾಡಿ, ಶಿವುಗೆ ನನ್ನ ಮಗಳಿಂದ ಅನ್ಯಾಯವಾಗ್ತಾ ಇದೆ ಎಂದು ದುಃಖವಿದೆ ಎಂಬಂತೆ ನಾಟಕವಾಡಿದ್ದ. ಇದನ್ನು ಕಂಡ ವೀಕ್ಷಕರು ಇವ ಏನು ಶಿವುಗೆ ನ್ಯಾಯ ಕೊಡಿಸುತ್ತೀನಿ ಅಂತ ಪಂಚಾಯ್ತಿ ಮಾಡುವುದು. ಅವನೇ ಸರಿ ಇಲ್ಲ. ಅವನೇ ಇಬ್ಬರು ಹೆಂಡತಿಯರನ್ನ ಮದುವೆಯಾಗಿದ್ದಾನೆ. ಇವನಿದ್ದ ಶಿವುಗೆ ಯಾವ ಒಳ್ಳೆಯದು ಆಗಲ್ಲ ಎಂದೇ ಶಾಪ ಹಾಕಿದ್ದಾರೆ. ಪಾರು ಮತ್ತು ಶಿವು ವಿಚಾರಕ್ಕೆ ವೀರಭದ್ರ ಮಾಡುವ ಯಾವ ಕುತಂತ್ರವೂ ನಡೆಯುವುದಿಲ್ಲ. ಇತ್ತ ಊರಿಗೆಲ್ಲಾ ಗೊತ್ತಾದ ಡಿವೋರ್ಸ್ ವಿಚಾರ ತಂಗಿಯಂದಿರಿಗೂ ಗೊತ್ತಾಗಿ ಟೆನ್ಶನ್ ಆಗಿದ್ದಾರೆ.


Click it and Unblock the Notifications











