Annaiah: ಮಾರಿಗುಡಿ ಡಾನ್ ಆದ್ಲು ಪಾರು..ಕ್ಯೂಟ್ ಎಂದ ಫ್ಯಾನ್ಸ್; ರಶ್ಮಿ-ಸೀನಂದು ಇನ್ನೊಂದು ಕಥೆ!
'ಅಣ್ಣಯ್ಯ' ಧಾರಾವಾಹಿ ನೋಡಿ ವೀಕ್ಷಕರು ಒಂದು ಕಡೆ ಬಿದ್ದು ಬಿದ್ದು ನಗ್ತಾರೆ, ಮತ್ತೊಂದು ಕಡೆ ನಾಚಿಕೆಯ ನಗು ಮೂಡುತ್ತೆ. ಇಂಥಹ ಸನ್ನಿವೇಶ ಎಲ್ಲಿ ಸಿಗುತ್ತೆ ಹೇಳಿ. ಮನಸ್ಸಾರೆ ಖುಷಿ ಪಡಿಸುವಂತ ಧಾರಾವಾಹಿ ಇದು ಎಂದರೆ ತಪ್ಪಾಗುವುದಿಲ್ಲ. ಶಿವುಗೆ ದೊಡ್ಡ ಜವಾಬ್ದಾರಿ, ದೊಡ್ಡ ಕನಸು ಎಂದರೆ ತನ್ನ ತಂಗಿಯಂದಿರ ಮದುವೆ ಆಗೋದು. ಅದರಲ್ಲಿ ಒಬ್ಬಳ ಮದುವೆ ಅಂತು ಆಗಿದೆ. ರಶ್ಮಿ ಗಂಡನ ಮನೆಯಲ್ಲಿ ಇರೋ ರೀತಿಗೆ ವೀಕ್ಷಕರ ಮನಸ್ಸು ಕೂಲ್ ಆಗಿದೆ.
ಒಂದು ಗಾದೆ ಮಾತಿದೆ. ಆಗೋದೆಲ್ಲ ಒಳ್ಳೆಯದ್ದಕ್ಕೆ ಎಂದು. ಅದು ಪಾರು ವಿಚಾರದಲ್ಲಿ ಸಕ್ಸಸ್ ಆಗಿದೆ. ತನ್ನ ಪ್ರೀತಿಯನ್ನು ಹೇಳುವುದಕ್ಕೆ ಆಗದೆ, ಡಿವೋರ್ಸ್ ವಿಚಾರವನ್ನ ಮುಚ್ಚಿ ಹಾಕಬೇಕು ಎಂದು ಕಾಯುತ್ತಿದ್ದ ಪಾರುಗೆ ವೀರಭದ್ರನೇ ದಾರಿ ಮಾಡಿಕೊಟ್ಟಿದ್ದಾನೆ. ಏನೋ ಮಾಡಲು ಹೋಗಿ ಏನು ಮಾಡಿದೆ ವೀರಭದ್ರ ಎಂಬ ಪ್ರಶ್ನೆಯನ್ನ ಮನಸ್ಸೊಳಗೆ ಕೇಳಿಕೊಂಡು ಸುಮ್ಮನೆ ಕುಳಿತಿದ್ದಾನೆ. ಅಲ್ಲಿ ಪ್ರೇಮ ಪಕ್ಷಿಗಳು ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರಯತ್ನದಲ್ಲಿವೆ.

ರಶ್ಮಿ - ಸೀನ ಫೋಟೋಶೂಟ್
ಮಾದಪ್ಪಣ್ಣ ಮನೆಯೊಳಗಿದ್ದರೆ ರಶ್ಮಿ ನೆಮ್ಮದಿಯಾಗಿರ್ತಾಳೆ. ಅದೇ ಮಾದಪ್ಪಣ್ಣ ಮನೆಯಲ್ಲಿ ಇಲ್ಲ ಎಂದರೆ ಲೀಲಾ ಅತ್ತೆ ವರಸೆಯನ್ನ ತೋರಿಸ್ತಾಳೆ, ಸೀನ ಕೋಪ ಮಾಡಿಕೊಳ್ಳುತ್ತಾನೆ. ಈಗ ಮದುವೆಯಾದ ಗಂಡು ಹೆಣ್ಣಿಗೆ ಫೋಟೋಶೂಟ್ ಮಾಡಿಸುತ್ತಿದ್ದಾನೆ ಮಾದಪ್ಪಣ್ಣ. ಆದರೆ ರಶ್ಮಿ ನೋಡಿದ್ರೆ ದಪ್ಪ, ಸೀನ ನೋಡಿದ್ರೆ ಒಣಕಲು. ಫೋಟೋಶೂಟ್‌ಗೆ ಪೋಸ್ ಕೊಡೋದಕ್ಕೇನೆ ಕಷ್ಟಪಡ್ತಾ ಇದಾರೆ. ಅದರಲ್ಲೂ ರಶ್ಮಿಯನ್ನ ಎತ್ತಲೇಬೇಕೆಂದು ಮಾದಪ್ಪಣ್ಣನೇ ಸಿಕ್ಕಾಪಟ್ಟೆ ಒತ್ತಡ ಹಾಕುತ್ತಿದ್ದಾನೆ.
ಪಿಂಕಿಗೆ ಕೋಪ
ಸೀನ ಊರಲ್ಲೆಲ್ಲಾ ತನ್ನದು ಜಿಮ್ ಬಾಡಿ ಜಿಮ್ ಬಾಡಿ ಅಂತ ಹೇಳಿಕೊಂಡು ಓಡಾಡ್ತಾ ಇರ್ತಾನೆ. ಈಗ ನೋಡಿದ್ರೆ ರಶ್ಮಿಯನ್ನ ಎತ್ತೋದಕ್ಕೆ ಹೋದಾಗ ಎದೆ ಹಿಡಿದುಕೊಂಡು ಕೆಳಗೆ ಕುಂತವ್ನೆ. ಮೊದಲೇ ಪಿಂಕಿ ಬೇಕಂತಲೇ ಮನೆ ಸೇರಿಕೊಂಡವಳೆ. ಸೀನನ ಮುಂದೆ ನಿಂತು ಇನ್ನಷ್ಟು ಕ್ರಿಟಿಕಲ್ ಕಂಡೀಷನ್ ಸೃಷ್ಟಿ ಮಾಡ್ತಾ ಇದಾಳೆ. ಅತ್ತ ಮಾದಪ್ಪಣ್ಣನಿಗೆ ಹೆದರಿದ ಸೀನ ರಶ್ಮಿಯನ್ನ ಎತ್ತಲು ಹೋಗಿದ್ದಾನೆ. ಆಗದೆ ಇದ್ದಾಗ ರಶ್ಮಿನೆ ಮತ್ತೊಂದು ಐಡಿಯಾ ಮಾಡಿದ್ದಾಳೆ. ತಾನೇ ಸೀನನ್ನ ಎತ್ತಿಕೊಂಡು ಪೋಸ್ ನೀಡಿದ್ದಾನೆ.ಇದು ಮಾವನಿಗೆ ಖುಷಿ ಕೊಟ್ಟರು ಪಿಂಕಿಗೆ ಕೋಪ ಹೆಚ್ಚಿಸಿದೆ. ವೀಕ್ಷಕರಂತೂ ಸೀನನ ಜಿಮ್ ಬಾಡಿ ಬಗ್ಗೆ ನಕ್ಕು ಸುಮ್ಮನಾಗಿದ್ದಾರೆ.

ಪಾರು ಕೊಟ್ಲು ಡೋಸ್
ಇಲ್ಲಿ ಇನ್ನೊಂದು ಲವ್ ಸ್ಟೋರಿ ನಡೀತಾ ಇದೆ. ಅದು ಮಾರಿಗುಡಿ ಶಿವು ಹಾಗೂ ಅವನ ಧರ್ಮಪತ್ನಿ ಪಾರ್ವತಿ ಅವರದ್ದು. ಮೊದಲೇ ಡಿವೋರ್ಸ್ ಬೇಕು ಅಂತ ಕೇಳಿದ್ದು, ಪಾರ್ವತಿ. ತಾನಿಷ್ಟ ಪಡುತ್ತಿದ್ದ ಪಾರು ಖುಷಿಯಾಗಿರಲೆಂದು ಶಿವು ಅದಕ್ಕೆ ಸಹಿ ಹಾಕಿದ್ದ. ಈಗ ನೋಡಿದ್ರೆ ಡಿವೋರ್ಸ್ ವಿಚಾರ ತೆಗೆದರೆ ಸಾಕು, ಪಾರು ಕಚ್ಚಿ ಬಿಡುವಷ್ಟು ಕೋಪ ಮಾಡಿಕೊಳ್ಳುತ್ತಾಳೆ. ಶಿವುಗೆ ಪಾಠ ಮಾಡ್ತಾ ಇದಾಳೆ. ಪ್ರೀತಿಯ ಪಾಠದ ಬಗ್ಗೆಯೇ ಅಷ್ಟೆಲ್ಲಾ ಹೇಳಿದ್ರು ಶಿವು ತಲೆಗೆ ಮಾತ್ರ ಹೋಗ್ತಿಲ್ಲ.
ಶಿವು- ಪಾರು ಕ್ಯೂಟ್
ಇವತ್ತಿನ ಎಪಿಸೋಡ್ ವಿಡಿಯೋಗಳನ್ನ ನೋಡಿ ವೀಕ್ಷಕರ ಮನಸ್ಸು ಉಲ್ಲಾಸದಲ್ಲಿ ತೇಲುತ್ತಾ ಇದೆ. ಇಬ್ಬರ ಜೋಡಿ ಮಾತ್ರ How Cute ಎನಿಸಿದೆ. ಪಾರು ಶಿವುಗೆ ಬೆದರಿಕೆ ಹಾಕಿದ್ದಾಳೆ. ಮಾರಿಗುಡಿ ಡಾನ್ ನಾನು. ಇನ್ನೊಂದು ಸಲ ಡಿವೋರ್ಸ್ ಅಂದ್ಯೋ ಅಷ್ಟೇ ಆಮೇಲೆ ಎಂದಾಗ ಶಿವು ಓಕೆ ಮ್ಯಾಮ್ ಅಂತ ಕ್ಯೂಟ್ ಆಗಿ ಹೇಳಿದ್ದಾನೆ. ಇದನ್ನ ನೋಡಿದವರು ಅವರವರ ಪ್ರೇಮಲೋಕಕ್ಕೆ ಒಮ್ಮೆ ಜಾರಿದ್ದಾರೆ.


Click it and Unblock the Notifications











