Annaiah: ಶಿವು ಪಾರು ಮೇಲೆ ವೀರಭದ್ರನ ಕಣ್ಣು ಬೀಳದಿರಲಿ; ಇದು ವೀಕ್ಷಕರ ಪರಿ ಪರಿ ಬೇಡಿಕೆ!
'ಅಣ್ಣಯ್ಯ' ಧಾರಾವಾಹಿಯಲ್ಲಿ ಎಲ್ಲರು ಬಯಸುತ್ತಿದ್ದ ದಿನ ಬಂದೇ ಬಿಟ್ಟಿದೆ. ಈ ಒಂದು ಎಪಿಸೋಡ್‌ಗಾಗಿ ಜನ ಕಾದಿದ್ದು ಕಡಿಮೆ ಏನು ಅಲ್ಲ ಬಿಡಿ. ಆ ಮುದ್ದಾದ ಜೋಡಿ ಬೇಗ ಒಂದಾಗಲಿ ಎಂದೇ ಕಾಯ್ತಾ ಇದ್ದರು. ಮೊದಲೇ ವೀರಭದ್ರ ಕುತಂತ್ರದ ಮೇಲೆ ಕುತಂತ್ರ ಮಾಡ್ತಾ ಇದ್ದ. ಹೀಗಿರುವಾಗ ಪಾರು - ಶಿವು ದೂರಾಗು ಬಿಟ್ಟರೆ ಎಂಬ ಭಯ ವೀಕ್ಷಕರದ್ದಾಗಿತ್ತು.
ಮೊದಲೇ ಈ ಶಿವು ಕರ್ಣನ ವಂಶದವನಂತೆ ಆಡ್ತಾನೆ. ಯಾರೂ ಏನೇ ಕೇಳಿದ್ರು ಸರಿ ತಕಳಿ ಅಂತಾನೆ. ಅದ್ಕೆ ಅಲ್ವೆ ಪಾರು ಡಿವೊರ್ಸ್ ಬೇಕು ಎಂದಾಕ್ಷಣಾ ಸರಿ ತಕ ಪಾರು ಅಂತ ಸಹಿ ಹಾಕಿದ್ದು. ಈಗ ಉಲ್ಟಾ ಪಾರುಗೆ ಲವ್ ಆಗಿದೆ. ಅದ್ಕೆ ಜೋಡಿ ಒಂದಾಗ್ತಾ ಇದೆ. ಈ ಗ್ಯಾಪ್ ನಲ್ಲಿ ವೀರಭದ್ರ ಎಂಟ್ರಿ ಆಗದೆ ಇದ್ದರೆ ಸಾಕು ಎನ್ನುತ್ತಿದ್ದಾರೆ ಶಿವು ಫ್ಯಾನ್ಸ್.

ಬೆಟ್ಟದ ಮೇಲೆ ತಯಾರಿ
ಪಾರುಗೆ ಶಿವು ಮೇಲೆ ಯಾವಾಗಲೋ ಪ್ರೀತಿ ಹುಟ್ಟಿದೆ. ಆದರೆ ಎಷ್ಟೇ ಇನ್ ಡೈರೆಕ್ಟ್ ಆಗಿ ಹೇಳಿದ್ರು ಶಿವುಗೆ ಅರ್ಥವೆ ಆಗ್ತಿಲ್ಲ. ಯಾಕಂದ್ರೆ ಶಿವು ಮನಸ್ಸಲ್ಲಿ ಬೇರೆಯದ್ದೇ ತೀರ್ಮಾನ ಆಗಿಬಿಟ್ಟಿದೆ. ಪಾರು ಯಾವತ್ತು ನನ್ನ ಪ್ರೀತಿ ಮಾಡಲ್ಲ, ಅವಳ ಸಲಿಗೆಯನ್ನ ನಾನು ತಪ್ಪಾಗಿ ತಿಳಿಯುವುದು ಬೇಡ ಎಂಬಂತ ತೀರ್ಮಾನ ಅವನದ್ದು. ಅದಕ್ಕೆ ಪಾರು ಏನೇ ಹೇಳಿದರು ಅವನಿಗೆ ಅರ್ಥವೇ ಆಗ್ತಿಲ್ಲ. ಈಗ ನೇರವಾಗಿಯೇ ಪ್ರಪೋಸ್ ಮಾಡುಲು ಬೆಟ್ಟದ ಮೇಲೆ ಕರೆದುಕೊಂಡು ಬಂದಿದ್ದಾಳೆ.
ತಂಗಿಯಂದಿರ ಸಪೋರ್ಟ್
ತಂಗಿಯಂದಿರೆಲ್ಲಾ ಅತ್ತಿಗೆ ಕಡೆಗೆ ಸಪೋರ್ಟ್. ರಾಣಿಗೆ ಮೊದಲಿಂದಾನೂ ವಿಚಾರ ಗೊತ್ತಿತ್ತು. ಪಾರುಗೆ ಶಿವು ಮೇಲೆ ಲವ್ವಾಗಿದೆ ಅಂತ. ಊರವರ ಮುಂದೆ ಡಿವೋರ್ಸ್ ವಿಚಾರ ಬಂದ ಮೇಲಂತು ತಂಗಿಯರು ಗಾಬರಿಯಾಗಿದ್ದರು ಎಂದೇ ಪಾರು ಹಾಗೂ ಶಿವು ಭಾವಿಸಿದ್ದರು. ಆದರೆ ಆ ರೀತಿ ಏನು ಆಗಿರಲಿಲ್ಲ. ತಂಗಿಯಂದಿರಿಗೆಲ್ಲಾ ಅರ್ಥವಾಗಿತ್ತು. ಈಗ ಅಣ್ಣನಿಗೆ ಹೇಗೆಲ್ಲಾ ಪ್ರಪೋಸ್ ಮಾಡಬೇಕು ಎಂಬ ವಿಚಾರವನ್ನು ಅತ್ತಿಗೆಗೆ ಗರ್ಲ್ಸ್ ಹೇಳಿ ಕೊಡ್ತಾ ಇದ್ದರು. ತನ್ನ ಗರ್ಲ್ಸ್ ಮಾತಿನಂತೆ ಶಿವುಗೆ ಪಾರು ಪ್ರಪೋಸ್ ಮಾಡಲು ಹೊರಟಿದ್ದಾಳೆ.
ಸಾಯಲು ಹೋದ ಪಾರು
ಬೆಟ್ಟದ ಮೇಲೆ ಹೂಗಳಿಂದ ಅಲಂಕಾರಗೊಂಡ ಮಂಟಪ, ನಡುವೆ ಒಂದು ಕನ್ನಡಿ, ಪ್ರೀತಿಯನ್ನ ಹೇಳಿಕೊಳ್ಳುವುದಕ್ಕೆ ಬ್ಯೂಟಿಫುಲ್ ಆಗಿ ಸಿದ್ದಗೊಂಡಿತ್ತು ಆ ಸ್ಥಳ. ನಾನು ಪ್ರೀತಿಸ್ತಾ ಇರೋದು ನಿನ್ನನ್ನೇ ಅಂತ ಪಾರು, ಕನ್ನಡಿ ಮೂಲಕ ತೋರಿಸಿದಳು. ಆದರೂ ಶಿವುಗೆ ನಂಬಲು ಸಾಧ್ಯವೇ ಆಗಲಿಲ್ಲ. ಇದೇನಿದು ಪಾರು ಅದು ನಾನಾ ಅಂತ ಅನುಮಾನದಲ್ಲಿಯೇ ಕೇಳಿದ ಶಿವುಗೆ, ತನ್ನ ಪ್ರೀತಿ ಪರೀಕ್ಷೆ ನಡೆದೆ ಬಿಡಲಿ ಎಂದು ಅಲ್ಲಿಯೇ ಇದ್ದ ಕಲ್ಯಾಣಿಗೂ ಹಾರಿ ಬಿಟ್ಟಳು. ಶಿವು ಕೂಡ ತನ್ನವಳನ್ನ ಬದುಕಿಸಿಕೊಂಡ.
ವೀರಭದ್ರ ಮತ್ತೆ ಕುತಂತ್ರ
ಶಿವುಗೆ ತನ್ನ ಮನಸ್ಸಲ್ಲಿದ್ದ ಪ್ರೀತಿಯನ್ನ ಹೇಳುವಂತೆ ವೀರಭದ್ರನೇ ದಾರಿ ಮಾಡಿಕೊಟ್ಟ. ಈಗ ಇಬ್ಬರು ಪ್ರೇಮಪಕ್ಷಿಗಳಂತೆ ಹಾರಾಡೋದು ಸತ್ಯ. ಇದನ್ನೆಲ್ಲ ನೋಡಿಕೊಂಡು ವೀರಭದ್ರನ ಹೊಟ್ಟೆ ತಣ್ಣಗೆ ಇರುವುದಕ್ಕೆ ಸಾಧ್ಯವಾ..? ಉರಿದು ಉರಿದು ಇನ್ನರ್ಧ ಹಾಳಾಗ್ತಾನೆ ಅನ್ನೋದು ವೀಕ್ಷಕರ ಟೆನ್ಶನ್. ವೀರಭದ್ರನ ಆರೋಗ್ಯ ಕೆಟ್ಟರು ಚಿಂತೆಯಿಲ್ಲ ಶಿವು ಹಾಗೂ ಪಾರು ನೆಮ್ಮದಿ ಕೆಡಿಸಬಾರದು ಅಂತಾನೇ ವೀಕ್ಷಕರು ನಿರ್ದೇಶಕರಿಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಆದರೆ ಅಲ್ಲಿ ವೀರಭದ್ರ ಅದಾಗಲೇ ಮತ್ತೊಂದು ಪ್ಲ್ಯಾನ್ ಮಾಡ್ತಾ ಇದಾನೆ. ಒಮ್ಮೆ ಪೆಟ್ಟು ತಿಂದ ಹಾವು ಸುಮ್ಮನೆ ಮಲಗಿರೋದು ಉಂಟಾ ಎಂದು ಬುಸುಗುಡುವುದಕ್ಕೆ ಶುರು ಮಾಡಿದ್ದಾನೆ.


Click it and Unblock the Notifications











