ಇಷ್ಟವಿಲ್ಲದ ಮದುವೆ, ಗುಂಡಮ್ಮ ಬೇಜಾರಲ್ಲಿರ್ತಾಳೆ ಅಂದ್ರೆ ಫಸ್ಟ್ ನೈಟ್‌ನಲ್ಲಿ ಹೀಗಾ ಮಾಡೋದು?

By ಎಸ್ ಸುಮಂತ್

ರಶ್ಮಿಗೆ ತಿಂದ್ಕೊಂಡು, ಉಡ್ಕೊಂಡು ಆರಾಮಾವಾಗಿ ಇರ್ಬೇಕು ಅನ್ನೋದಷ್ಟೇ ಜೀವನದ ಗುರಿಯಾಗಿತ್ತು. ಅಣ್ಣಯ್ಯ ತಂದು ಹಾಕ್ತಾ ಇದ್ರೆ ನೆಮ್ಮದಿಯಾಗಿ ತಿಂದು, ಜಾಲಿಯಾಗಿ ಲೈಫ್ ಲೀಡ್ ಮಾಡ್ತಾ ಇದ್ಲು. ಯಾವಾಗ ಗುಂಡಮ್ಮನಿಗೆ ಕಂಕಣ‌ ಬಲ‌ ಕೂಡಿ ಬರುತ್ತೆ, ಈ ವರ್ಷವೇ ಮದುವೆಯಾಗುತ್ತೆ ಅಂತ ಜ್ಯೋತಿಷಿಗಳು ಹೇಳಿದ್ರೋ, ವೀರಭದ್ರನ ಕಡೆಯವರು ಎಂಟ್ರಿ ಕೊಟ್ರು. ಮದುವೆ ಮನೆವರೆಗೂ ಬಂದ ಸಂಬಂಧ ಮುರಿದು ಬಿತ್ತು. ಸೀನನೇ ಮೂರು ಗಂಟಾಕಬೇಕಾಯ್ತು.

ಮಾರಿಗುಡಿಯಲ್ಲಿ ಕಂಡ ಕಂಡಾಗ ಜಗಳ ಆಡೋದು ಅಂದ್ರೆ ಅದು ಈ ಸೀನ ಹಾಗೂ ರಶ್ಮಿಯೇ ಆಗಿದ್ರು. ರೋಡಲ್ಲಿ ಸಿಕ್ಕುದ್ರು ಇಬ್ಬರಲ್ಲಿ ಒಬ್ಬರು ಕಾಲು ಕೆರೆದುಕೊಂಡು ಜಗಳಕ್ಕೆ ನಿಂತು ಬಿಡ್ತಾ ಇದ್ರು. ಇಬ್ಬರಲ್ಲಿ ಯಾರೂ ಸೋಲುತ್ತಾ ಇರಲಿಲ್ಲ. ಅಷ್ಟು ಬಜಾರಿಗಳಾಗಿದ್ರು. ಈಗ ನೋಡಿದ್ರೆ ಗಂಡ ಹೆಂಡತಿ ಆಗವ್ರೆ. ಮುಂದೇಗೋ ಜೀವನ ಅಂದುಕೊಂಡ್ರೆ ಅದ್ಭುತವಾಗಿಯೇ ನಡೆಯುತ್ತಿದೆ. ಅದು ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಾ.

Zee kannada Annaiah serial Written Update on March 5th episode

ಸೀನನಿಗೆ ಹಾಲು ಕೊಟ್ಟ ಗುಂಡಮ್ಮ

ರಶ್ಮಿಗೆ ಮದುವೆಯಾಗಿದ್ದೀನಿ, ಇಲ್ಲಿ ಹೀಗೆ ಇರ್ಬೇಕು ಎಂಬೆಲ್ಲಾ ಬೌಂಡರಿ ಇಲ್ಲ, ಯೋಚನೆಯೂ ಇಲ್ಲ. ಬದಲಿಗೆ ಅಣ್ಣನ ಮನೆಯಲ್ಲಿದ್ದಂಗೆಯೇ ಫುಲ್ ಜಾಲಿ ಜಾಲಿಯಾಗಿದ್ದಾಳೆ. ಹಾಲನ್ನ ಸೀನನಿಗೆ ಕೊಡಬೇಕು ಅಷ್ಟೇ. ತಂದು ಹಾಲು ಕುಡಿತೀಯಾ ಅಂತ ಕೇಳಿದ್ದಾಳೆ. ಸೀನನ ಮುಖದಲ್ಲಿ ಕೋಪ ಇನ್ನು ಹಾಗೆ ಇದ್ದ ಕಾರಣ, ಬೇಕಾದಾಗ ಕುಡ್ಕೋ ಅಂತ ಟೇಬಲ್ ಮೇಲಿಟ್ಟು ಸುಮ್ಮನೆ ಕೂತಿದ್ದಾಳೆ.

ರೇಗಿಸಿದ್ದಕ್ಕೆ ಶುರುವಾಯ್ತು ವಾರ್

ರಶ್ಮಿಗೆ ಸದಾ ತಿನ್ನೋದಕ್ಕೆ ಏನಾದರೊಂದು ಇರಬೇಕು. ಹಸಿವಾಗ್ತಾ ಇದೆಯಲ್ಲ ಅಂತ ತಿರುಗಿ ನೋಡಿದ್ರೆ ಅಲ್ಲಿ ಚಕ್ಕುಲಿ, ನಿಪ್ಪಟ್ಟು ಇತ್ತು. ತಗೊಂಡು ಬಂದು ಸಿನ್ಸಿಯರ್ ಆಗಿ ತಿಂತಾ ಇದ್ದವಳನ್ನ ರೊಚ್ಚಿಗೇಳಿಸಿದ್ದು ಇದೇ ಸೀನ. ಏಯ್ ಹುಡುಗಿ ಇಷ್ಟೆಲ್ಲಾ ಆದ್ರೂ ಏನು ಆಗಿಲ್ಲ ಅನ್ನೋ ಥರ ಒಳ್ಳೆ ಧಾರವಾಡದ ಎಮ್ಮೆ ಬೂಸ ತಿಂದಂಗೆ ತಿಂತಾ ಇದ್ದಿಯೆಲ್ಲೇ ಅನ್ನೋದಾ. ಮುಗೀತು ಸೀನನ ಕಥೆ.

ಲೀಲಾಗೆ ಒಳಗೊಳಗೆ ಟೆನ್ಶನ್

ಸೀನ ಸುಮ್ಮನೆ ಇದ್ದಿದ್ದರೆ ತಾನೂ ಸುಮ್ಮನೆ ಇರ್ತಾ ಇದ್ಲು. ಯಾವಾವ ದಡುಗ್ಲಿ ಅಂದ್ನೋ ರಶ್ಮಿ ಕೋಪ ನೆತ್ತಿಗೇರಿತ್ತು. ನನ್ನೇ ದಡುಗ್ಲಿ ಅಂತೀಯಾ. ನಿಮ್ಮ ತಂದಾಕಿರೋ ರೇಷನ್ ತಿಂದು ನಾನೇ ದಪ್ಪ ಆಗಿದ್ದೀನಾ ಅಂತ ಕೈಯಲ್ಲಿದ್ದ ತಟ್ಟೆಯನ್ನೇ ಸೀನನ ಮೇಲೆ ಎಸೆದಳು. ಆ ಸೌಂಡ್ ಗೆ ಮನೆಯವರೆಲ್ಲ ನಾಚಿಕೆ ಪಟ್ಟುಕೊಳ್ಳುವಂತಾಯ್ತು. ಸೀನನ ಅಮ್ಮ ಲೀಲಾ, ಎದ್ದು ಏನೋ ಆಗ್ತಿದೆ ಅಂತ ಗಾಬರಿ ಆದ್ಲು. ಸೀನ ಏನಾರ ದುಡುಕಿ ತಪ್ಪು ಮಾಡಿ ಬಿಟ್ನಾ ಅಂತ ಭಯ ಪಟ್ಟುಕೊಂಡಳು.

ಗುಂಡಮ್ಮ - ಸೀನನ ಕಿತ್ತಾಟ

ನಮ್ಮ ಅತ್ತಿಗೆ ಇಲ್ಲೇ ಜೀವನ ಮಾಡು ಅಂದಿದ್ದಕ್ಕೆ ನಾನಾಗಿ ನಾನು ಬಂದು ನಿನ್ನನ್ನ ಮಗು ಥರ ಮಾತಾಡಿಸಿದ್ರೆ ಮುಖ ಆ ಕಡೆ ತಿರುಗಿಸಿಕೊಳ್ತೀಯಾ ಅಂತ ಲೋಟದಲ್ಲೊಮ್ಮೆ ಕೊಟ್ಲು ನೋಡಿ, ಸೀನ ಗಾಬರಿಯಲ್ಲಿ ಹಾಸಿಗೆ ಮೇಲೆ ಮುದುರಿಕೊಂಡು ಕೂತ. ರಶ್ಮಿಯ ಬೈಗುಳದ ಕೋಟಾ ಮುಗಿಯುತ್ತಿದ್ದಂತೆ ಸೀನ ಕೂಡ ಟಾಂಗ್ ಕೊಡೋದಕ್ಕೆ ಶುರು ಮಾಡಿದ. ಇಬ್ಬರ ಕೋಳಿ ಜಗಳವನ್ನಂತು ವೀಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ.

More from Filmibeat

English summary
Annaiah serial today episode. Here is the details about Rashmi and Seena first night;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X