Annayya ; ದ್ವಿಶತಕ ಬಾರಿಸಿದ ಅಣ್ಣಯ್ಯ, ಪರಶು ಹೆಸರು ಕೇಳುತ್ತಿದ್ದಂತೆಯೇ ಕಣ್ಣು ಬಿಟ್ಟ ಗೋಡಂಬಿ..!
ಅಣ್ಣಯ್ಯ ಧಾರಾವಾಹಿಯಲ್ಲಿ ಮೆಡಿಕಲ್ ಲೈಸೆನ್ಸ್ ಸಿಗದ ಹಿನ್ನೆಲೆ ಶಿವು ನಿರಾಶಗೊಂಡು ಮನೆಗೆ ಬರುತ್ತಾನೆ. ಮತ್ತೊಂದು ಕಡೆ ಪಾರ್ವತಿ ತರಕಾರಿ ಕತ್ತರಿಸುತ್ತಾ ಶಿವು ಮೈಮೇಲೆ ದೇವಿ ಬಂದು ಹೇಳಿದ್ದ ಮಾತುಗಳನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದಾಳೆ. ರಶ್ಮಿ ಮದುವೆಗೆ ಅತ್ತೆ ಬಂದಿದ್ದು ನಿಜಾನಾ ? ಬಂದಿದ್ದೇ ಆದರೆ ಮಕ್ಕಳ ಕಣ್ಣಿಗೆ ಯಾಕೆ ಕಾಣಿಸಿಕೊಂಡಿಲ್ಲ ? ಆ ದೇವಿ ಹೇಳಿದ ರಹಸ್ಯವಾದರೂ ಏನು ? ಎಂದು ಯೋಚನೆ ಮಾಡುತ್ತಾ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದಾಳೆ.
ಈ ಸಮಯದಲ್ಲಿ ಬರುವ ರಾಣಿ ಬೆರಳು ಕತ್ತರಿಸಿಕೊಂಡೀರಾ ಜೋಕೆ ಎನ್ನುತ್ತಾಳೆ. ರಾಣಿ ಬಂದ ಕಾರಣಕ್ಕೆ ಬೆಚ್ಚಿ ಬಿದ್ದ ಪಾರು ಎನೋ ಯೋಚನೆ ಮಾಡುತ್ತಿದ್ದೆ ನೀನು ಬಂದಿದ್ದೇ ಗೊತ್ತಾಗಲಿಲ್ಲ ಎನ್ನುತ್ತಾಳೆ. ಆಗ ರಾಣಿ ಅಂತಹದ್ದೇನು ಯೋಚನೆ ಮಾಡುತ್ತಿದ್ರೀ ಎಂದು ಕೇಳುತ್ತಾಳೆ. ಇದಕ್ಕೆ ಪಾರು ನಿನಗೆ ನಿನ್ನ ಅಮ್ಮ ನೆನಪಿದ್ದಾರಾ ಎಂದು ಕೇಳುತ್ತಾಳೆ. ಆಗ ಚಿಕ್ಕ ವಯಸ್ಸಿನಲ್ಲಿ ನೋಡಿದ ನೆನಪು ಅಷ್ಟೊಂದು ನೆನಪಿಲ್ಲ ಅತ್ತಿಗೆ ಎಂದು ರಾಣಿ ಹೇಳುತ್ತಾಳೆ.

ಗೋಡಂಬಿ ಬಳಿ ಘಟನೆ ವಿವರಿಸಿದ ರತ್ನಾ
ಗೋಡಂಬಿ ಬಳಿ ರತ್ನ ತನ್ನ ಮನದ ಮಾತು ಹಂಚಿಕೊಳ್ಳುತ್ತಿದ್ದಾಳೆ. ನಂಬುವುದಾ ಬಿಡುವುದಾ ಗೊತ್ತಿಲ್ಲ, ನಮಗೆಲ್ಲ ತೊಂದರೆಯನ್ನು ನೀಡಿ ಈಗ ಪ್ರಾಯಶ್ಚಿತ ಮಾಡಿಕೊಳ್ಳಲು ಹೊರಟಿದ್ದಾನೆ, ಅವನಂತಹ ಕೆಟ್ಟ ಹುಳ ನಾನು ನೋಡಿಲ್ಲ ಈಗ ಒಳ್ಳೆಯವನಾಗುತ್ತೇನೆ ಎಂದು ಹೇಳುತ್ತಿದ್ದಾನೆ, ನನಗಂತೂ ಒಂದು ಅರ್ಥವಾಗುತ್ತಿಲ್ಲ ಎಂದು ಪರಶು ಹೆಸರನ್ನು ಹೇಳುತ್ತಾಳೆ. ಪರಶು ಹೆಸರು ಕೇಳುತ್ತಿದ್ದಂತೆಯೇ ಗೋಡಂಬಿ ಕಣ್ಣು ತೆರೆಯುತ್ತಾನೆ. ಪ್ರತಿಕ್ರಿಯೆ ನೀಡುತ್ತಾನೆ. ರತ್ನ ಪಾರುವನ್ನು ಕರೆಯುತ್ತಾಳೆ.
ಪಾರುಳನ್ನು ಕರೆದ ರತ್ನಾ
ರತ್ನಾ ಕರೆದ ತಕ್ಷಣ ಪಾರು ಓಡೋಡಿ ಬರುತ್ತಾಳೆ. ಆಗ ನಾನು ಮಾತನಾಡುತ್ತಿದ್ದೇ ಆಗ ಗೋಡಂಬಿಗೆ ಎಚ್ಚರವಾಯ್ತು ಎಂದು ರತ್ನಾ ಹೇಳುತ್ತಾಳೆ. ಎಷ್ಟು ದಿನದಿಂದ ಹೀಗೆ ಪ್ರತಿಕ್ರಿಯೆ ನೀಡುತ್ತಿದ್ದಾನೆ, ಅವನ ಜೊತೆ ಯಾವ ವಿಷಯ ಮಾತನಾಡಿದೆ ಎಂದು ಪಾರು ಕೇಳಿದಾಗ ರತ್ನ ವಿಷಯವನ್ನು ಮುಚ್ಚಿಡುತ್ತಾಳೆ. ಶಾಲೆಯಲ್ಲಿ ಒಬ್ಬ ಹುಡುಗ ಜೋಕ್ ಹೇಳಿದ್ದ ಅದನ್ನೇ ನಾನು ಹೇಳುತ್ತಿದ್ದೆ ಎನ್ನುತ್ತಾಳೆ. ಆಗ ಗೋಡಂಬಿ ಅಣ್ಣನ ಮುಂದೆ ನಾವೆಲ್ಲ ನಗು ನಗುತ್ತಾ ಖುಷಿಯಾಗಿದ್ದರೆ ಅವನು ಬೇಗ ಗುಣಮುಖನಾಗುತ್ತಾನೆ ಎಂದು ಹೇಳಿ ಪಾರು ಊಟ ತರಲು ಹೋಗುತ್ತಾಳೆ
ಛತ್ರಿ ಬಳಿ ಶಾಖ ಕೊಡಿಸಿಕೊಂಡ ಪರಶು
ಮತ್ತೊಂದೆಡೆ ಚಾವಟಿ ಏಟಿನಿಂದ ಆದ ಗಾಯಕ್ಕೆ ಛತ್ರಿ ಬಳಿ ಪರಶು ಶಾಖ ಕೊಡಿಸಿಕೊಳ್ಳುತ್ತಾನೆ. ರತ್ನಾ ಮನಸಿನಲ್ಲಿ ಇಷ್ಟು ದಿನ ನಾನು ಇರಲಿಲ್ಲ ಆದರೆ ಈಗ ಆಕೆಯ ಮನಸು ಹೊಕ್ಕಿದ್ದೇನೆ, ಇನ್ಮೇಲೆ ಎಲ್ಲವೂ ನಾನು ಅಂದುಕೊಂಡಂತೆ ನಡೆಯುತ್ತೆ ಎಂದು ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ಸುಶೀಲಾ ಬರುವುದನ್ನು ಗಮನಿಸಿ ಇಷ್ಟು ದಿನ ಎಲ್ಲರಿಗೂ ನಾನು ತೊಂದರೆ ಕೊಡುತ್ತಾ ಬದುಕುತ್ತಿದ್ದೇ ಆದರೆ ಈಗ ನಾನು ಬದಲಾಗಬೇಕು ಈ ವಿಚಾರ ಯಾರಿಗೂ ಗೊತ್ತಾಗುವುದು ಬೇಡ, ಗೊತ್ತಾದರೂ ಕೂಡ ಯಾರು ನಂಬುವುದಿಲ್ಲ ಎಂದು ನಾಟಕ ಮಾಡುತ್ತಾನೆ. ನನ್ನ ತಪ್ಪಿಗೆ ನಾನು ಪ್ರಾಯಶ್ಚಿತ ಮಾಡಿಕೊಳ್ಳಬೇಕಿದೆ ಎಂದು ಹೇಳುತ್ತಾನೆ.
ಹೀಗೆ ಅಣ್ಣಯ್ಯ ಧಾರಾವಾಹಿಯ 200ನೇ ಎಪಿಸೋಡ್ ಮುಕ್ತಾಯಗೊಂಡಿದ್ದು ಮುಂಬರುವ ದಿನಗಳಲ್ಲಿ ರತ್ನಾ ಮತ್ತು ಪರಶು ಕಥೆ ಏನಾಗುತ್ತೆ ? ಅತ್ತೆ ವಿಚಾರವನ್ನು ಪಾರ್ವತಿ ಯಾರ ಬಳಿ ಕೇಳಿ ತಿಳಿದುಕೊಳ್ಳುತ್ತಾಳೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











