Annayya: ಅತ್ತೆ ಹೇಳಿದ ಸತ್ಯ ಹುಂಡಿಗೋಯ್ತು; ಯಾಕ್ ಡೈರೆಕ್ಟ್ರೇ 'ಅಣ್ಣಯ್ಯ'ನ ಫ್ಯಾನ್ಸ್‌ಗೆ ಬೇಜಾರ್ ಮಾಡಿದ್ದು?

By ಎಸ್ ಸುಮಂತ್

'ಅಣ್ಣಯ್ಯ' ಧಾರಾವಾಹಿ ಸದ್ಯ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದೆ. ಪಾರುಗೆ ಈಗೀಗ ಶಿವು ಮೇಲೆ ಲವ್ವಾಗುತ್ತಿದೆ. ಆದರೆ ಶಿವುಗೆ ಆ ಪ್ರೀತಿ ಅರ್ಥವಾಗುತ್ತಿಲ್ಲ. ಇದನ್ನ ಪಾರುಗೆ ಸಹಿಸಲಾಗುತ್ತಿಲ್ಲ. ಪಾರು ಒಮ್ಮೆ ಪ್ರೀತಿಯಲ್ಲಿ ಮೋಸ ಹೋಗಿದ್ದಾಳೆ, ಕಾಪಾಡ್ತೀನಿ ಅಂತ ಕರೆದುಕೊಂಡು ಬಂದು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಎಂಬುದು ಶಿವು ಆಶಯ. ಆದರೆ ಪಾರುಗೆ ಹೇಳುವ ಧೈರ್ಯವಿಲ್ಲ. ಆಗಾಗ ಲವ್ ಆಗಿದೆ ಎಂಬುದನ್ನ ಕ್ಲೂ ಕೊಡ್ತಾ ಇದ್ದರೂ ಶಿವುಗೆ ಅದು ಅರ್ಥವೇ ಆಗ್ತಿಲ್ಲ.

ತಂಗಿಯರೇ ತುಂಬಿದ ಕೂಡು ಕುಟುಂಬವದು. ಅತ್ತಿಗೆಯೂ ಮನೆಗೆ ಬಂದು ಎಲ್ಲರಿಗೂ ತಾಯಿ ಆಗಿದ್ದಾಳೆ. ನಾದಿನಿಯರ ಬಾಳಿಗೆ ಬೆಳಕಾಗಿದ್ದಾಳೆ. ಈ ಕುಟುಂಬದ ಖುಷಿ, ಶಿವು - ಪಾರು ಲವ್ ಸ್ಟೋರಿ, ಕಿತ್ತಾಟ, ಆತಂಕದ ನಡುವೆಯೂ ಕಣ್ಣು ಕಣ್ಣು ಕಲೆತಾಗ ಎಂಬ ದೃಶ್ಯಗಳು ಸದ್ಯ ಸೀರಿಯಲ್ ಪ್ರಿಯರ ಮನಸ್ಸಲ್ಲಿ ಸಂತಸ ಮೂಡಿಸಿದೆ.

Zee kannada Annayya serial Written Update on February 7th episode

ಸಾಲದ ಸುಳಿಯಲ್ಲಿ ಅಣ್ಣಯ್ಯ

ಅಣ್ಣಯ್ಯನಿಗೆ ದೊಡ್ಡ ಆಸೆ ಇರುವುದೇ ತನ್ನ ನಾಲ್ಕು ತಂಗಿಯರಿಗೂ ಮದುವೆ ಮಾಡಬೇಕು ಎಂಬುದು. ಜೊತೆಗೆ ಒಳ್ಳೆಯ ಮನೆತನಕ್ಕೆ ಕೊಡಬೇಕು ಎಂಬುದು. ಎರಡನೇ ತಂಗಿ ರಶ್ಮಿಗೆ ಈಗ ಮದುವೆ ಸಂಬಂಧ ಒದಗಿ ಬಂದಿದೆ. ಇದನ್ನೇ ನಂಬಿದ ಶಿವು, ಅವರು ಕೇಳಿದ್ದೆಲ್ಲವನ್ನು ನೀಡುತ್ತಿದ್ದಾನೆ. ಐದಾರು ಲಕ್ಷ ಹೊಂಚುವಷ್ಟರಲ್ಲಿಯೇ ಶಿವು ಸುಸ್ತಾಗಿ ಹೋಗಿದ್ದಾನೆ.

ನಂಬಿದ ಮಾವನಿಂದ ಮೋಸ

ಶಿವು ತನ್ನ ಮಾವನೇ ಸರ್ವಸ್ವ ಎಂದುಕೊಂಡಿದ್ದಾನೆ. ಆದರೆ ಮಾವನಿಗೆ ಶಿವು ಮನೆಯ ನೆಮ್ಮದಿಯನ್ನು ಹಾಳು ಮಾಡಬೇಕೆಂಬುದು ಉದ್ದೇಶ. ಅದು ಶಿವುಗೆ ತಿಳಿಯುತ್ತಿಲ್ಲ. ಈಗ ಮಾವ ಎಳೆದ ಮದುವೆಯ ಸಂಚಿನ ಕೂಪದಲ್ಲಿ ಅರಿವಿಲ್ಲದೆ ಬಿದ್ದಿದ್ದಾನೆ. ಗಂಡಿನ ಕಡೆಯವರಿಂದ ಅದು ಬೇಕು ಇದು ಬೇಕು ಅಂತ ಡಿಮ್ಯಾಂಡ್ ಇಡುತ್ತಲೇ ಇದ್ದಾನೆ. ಈಗ ಪಾರು ಬೇರೆ ಅಣ್ಣಯ್ಯನನ್ನ ಮದುವೆಯಾಗಿರುವುದಕ್ಕೆ ಮಾವನ ಕೋಪ ಇನ್ನು ಜಾಸ್ತಿಯಾಗಿದೆ.

ನೋಟಲ್ಲಿ ಮಾಹಿತಿ ಕೊಟ್ಟ ಅತ್ತೆ

ಗಂಡಿನ ಕಡೆಯವರು ಸರಿ ಇಲ್ಲ ಎಂಬುದನ್ನ ಪಾರು ತಾಯಿ ಹೇಳುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಅದನ್ನ ನೇರವಾಗಿ ಹೇಳುವ ಧೈರ್ಯ ಇಲ್ಲ. ಅದಕ್ಕೆ ಗಂಡ ಬಿಡುವುದಿಲ್ಲ. ಅದಕ್ಕೆಂದೆ ನೋಟಿನ ಮೇಲೆ ಬರೆದು, ಇದನ್ನ ಕಣ್ಣಿಗೆ ಒತ್ತಿಕೊಂಡು ದೇವರಿಗೆ ಹಾಕು ಎಂದಿದ್ದಳು. ಆಗ ಬರೆದಿರುವ ವಿಚಾರ ಕಣ್ಣಿಗೆ ಬೀಳುತ್ತೆ ಎಂಬ ಕಾರಣಕ್ಕೆ. ಆದರೆ ಅದನ್ನು ಶಿವು ಓದಲೇ ಇಲ್ಲ. ಪಾರು ಕಣ್ಣಿಗೆ ಕಾಣುವಷ್ಟರಲ್ಲಿ ಹುಂಡಿಯ ಒಳಗೆ ಹೋಗಿಯೇ ಬಿಡ್ತು ನೋಟು.

ಅಪ್ಪನ ಕಿತಾಪತಿ ಪಾರುಗೆ ಗೊತ್ತಾದ್ರೆ?

ಅಣ್ಣಯ್ಯ ಅಲಿಯಾಸ್ ಶಿವುಗೆ ಈಗಂತು ಅಭಿಮಾನಿಗಳು ಜಾಸ್ತಿಯಾಗಿದ್ದಾರೆ. ಅಣ್ಣಯ್ಯನಂಥ ಅಣ್ಣ ಇರಬಾರದ ಅಂತ ಎಷ್ಟೊಇ ತಂಗಿಯರು ಅಂದುಕೊಂಡರೆ ಶಿವು ಅಂತ ಹುಡುಗ ನಮಗೂ ಸಿಗಬಾರದಾ ಅಂತ ಅದೆಷ್ಟೋ ಪಾರ್ವತಿಯರು ಬೇಡಿಕೊಳ್ಳುತ್ತಾರೆ. ಈಗ ಒಂದರ ಮೇಲೆ ಒಂದು ಕಷ್ಟ ಕೊಡ್ತಾ ಇದ್ರೆ ಸಹಿಸ್ಕೊಳ್ತಾರಾ ಹೆಣ್ ಹೈಕ್ಳು. ಅದಕ್ಕೆ ಡೈರೆಕ್ಟರ್ ಗೆ ಪ್ರಶ್ನೆ ಮಾಡ್ತಾವ್ರೆ. ಇನ್ನು ಒಂದಷ್ಟು ಫ್ಯಾನ್ಸ್ ಸಮಾಧಾನ ಮಾಡಿಕೊಳ್ತಾ ಇದಾರೆ. ಮಿತಿ ಮೀರಿದರೂ ಚಿಂತೆ ಇಲ್ಲ. ಕಡೆ ಗಳಿಗೆಯಲ್ಲಿ ನಮ್ಮ ಪಾರು ನಮ್ಮ ಶಿವು ಕೈ ಬಿಡಲ್ಲ. ಚಿಂತೆ ಮಾಡ್ಬೇಡಿ ಫ್ರೆಂಡ್ಸ್ ಅಂತಿದ್ದಾರೆ.

More from Filmibeat

English summary
Annayya kannada serial today episode. Here is the details about fans upset with serial director;
Read more about: tv serial sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X