ಜೀ ಕನ್ನಡದಲ್ಲಿ ಮತ್ತೆ ಎರಡು ಹೊಸ ಧಾರಾವಾಹಿಗಳು: ರಿಮೇಕ್ ಎನ್ನುತ್ತಿರುವ ವೀಕ್ಷಕರು
ಕನ್ನಡ ಕಿರುತೆರೆಯಲ್ಲಿ ಈಗ ಹೊಸ ಧಾರಾವಾಹಿಗಳು ಪರ್ವ ಆರಂಭವಾಗಿದೆ. ಕಳೆದ ವಾರವಷ್ಟೇ ಹೊಸ ಧಾರಾವಾಹಿ 'ಲಕ್ಷ್ಮೀ ನಿವಾಸ' ಶುರುವಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಇದೀಗ ಮತ್ತೆ ಎರಡು ಹೊಸ ಧಾರಾವಾಹಿಗಳು ಪ್ರಾರಂಭವಾಗಲು ಸಜ್ಜಾಗಿವೆ. ಇನ್ನು ವಾಹಿನಿಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ಕೂಡ ಮೂಡಿ ಬರುತ್ತಿವೆ. 'ತ್ರಿನಯನಿ', 'ಪುನರ್ ವಿವಾಹ', 'ಸಂಧ್ಯಾರಾಗ' ಸೇರಿದಂತೆ ಹಲವು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ.

ಜೀ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿರುತ್ತೆ. ಅದರಲ್ಲೂ ಇಡೀ ಕುಟುಂಬ ಕುಳಿತು ನೋಡುವಂತ, ಕೌಟುಂಬಿಕ ಕಥೆಗೆ ಹೆಚ್ಚು ಒತ್ತು ಕೊಡುತ್ತಾರೆ.
ರಿಮೇಕ್, ಡಬ್ಬಿಂಗ್ ಧಾರಾವಾಹಿಗಳ ಹಾವಳಿ
ಡಬ್ಬಿಂಗ್ ಅಷ್ಟೇ ಅಲ್ಲದೇ, ರಿಮೇಕ್ ಧಾರಾವಾಹಿಗಳು ಕೂಡ ಕನ್ನಡ ವಾಹಿನಿಗಳಲ್ಲಿ ಹೆಚ್ಚಾಗಿವೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಅಚ್ಚುಮೆಚ್ಚಿನ ಧಾರಾವಾಹಿಗಳನ್ನೆ ನೀಡುತ್ತಿದೆ. ಯಾವುದು ಕೂಡ ಟಿಆರ್ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಡಬ್ಬಿಂಗ್ ಧಾರಾವಾಹಿಗಳನ್ನು ಪ್ರೇಕ್ಷಕರು ಕೂಡ ಒಪ್ಪಿದ್ದಾರೆ. ಪರಭಾಷೆ ಅರ್ಥವಾಗದ ಕಾರಣಕ್ಕೆ ಒಳ್ಳೆಯ ಧಾರಾವಾಹಿಗಳನ್ನು ನೋಡಲಾಗುತ್ತಿರಲಿಲ್ಲ. ಜೀ ಕನ್ನಡ ವಾಹಿನಿವಾಹಿನಿಯಲ್ಲಿ ಈಗಾಗಲೇ ಎರಡು ಹೊಸ ಧಾರಾವಾಹಿಗಳು ಮೂಡಿ ಬರುತ್ತಿದೆ. ಇದರ ಬೆನ್ನಲ್ಲೇ ಮತ್ತೆರಡು ಧಾರಾವಾಹಿಗಳು ಕೂಡ ಪ್ರಸಾರ ಕಾಣಲು ಸಜ್ಜಾಗಿದೆ. ಅಷ್ಟೇ ಅಲ್ಲದೇ, ವೀಕೆಂಡ್‌ನಲ್ಲಿ ಬರುತ್ತಿರುವ ರಿಯಾಲಿಟಿ ಶೋಗಳು ಕೂಡ ವೀಕ್ಷಕರಿಗೆ ಹೆಚ್ಚು ಮನರಂಜನೆಯನ್ನು ನೀಡುತ್ತಿವೆ.
ಎರಡು ಹೊಸ ಧಾರಾವಾಹಿಗಳ ಪ್ರೊಮೋ
ಈಗ ಜೀ ಕನ್ನಡ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಪ್ರಸಾರ ಕಾಣಲು ಸಜ್ಜಾಗಿವೆ. 'ಬ್ರಹ್ಮಗಂಟು' ಮತ್ತು 'ಶ್ರಾವಣಿ ಸುಬ್ರಮಣ್ಯ'. ಧಾರಾವಾಹಿಗಳ ಪ್ರೊಮೋವನ್ನು ವಾಹಿನಿ ಒಟ್ಟಿಗೆ ರಿಲೀಸ್ ಮಾಡಿದೆ. 'ಬ್ರಹ್ಮಗಂಟು' ಎಂಬ ಹೊಸ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿದೆ. ಸದ್ಯ ಅದರ ಪ್ರೊಮೋ ರಿಲೀಸ್ ಆಗಿದ್ದು, ಕಥೆ ಅದ್ಭುತವಾಗಿದೆ ಎನ್ನಲಾಗಿದೆ. ಇದೊಂದು ಅಕ್ಕ-ತಂಗಿಯರ ಕಥೆಯಾಗಿದೆ. ಅಕ್ಕನ ಖುಷಿಗೋಸ್ಕರ ಬದುಕನ್ನೇ ಮುಡಿಪಾಗಿಟ್ಟ ದೀಪಾ ಕಥೆ ಎಂದು ಜೀ ಕನ್ನಡ ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ.

ತೆಲುಗು ಧಾರಾವಾಹಿಯ ರಿಮೇಕ್
ಪ್ರೋಮೋ ನೋಡಿದರೆ, ಅಕ್ಕ ತಂಗಿಯ ಈ ಕಥೆ ಹೇಗಿರಲಿದೆ ಎಂಬ ಕುತೂಹಲ ಹಲವರಿಗೆ ಮೂಡಿದ್ದು, ಕೆಲವರು ಇದು ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರ ರಿಮೇಕ್ ಎಂದಿದ್ದಾರೆ. 'ಪಡಮಟಿ ಸಂಧ್ಯಾರಾಗಂ' ಎಂದು ತೆಲುಗಿನಲ್ಲಿ ಪ್ರಸಾರಗೊಂಡಿದ್ದು, ಈಗ ಕನ್ನಡದಲ್ಲಿ ಮೂಡಿ ಬರಲಿದೆ. ಹಲವರು ಕನ್ನಡದಲ್ಲೂ ಈ ಧಾರಾವಾಹಿ ಬರುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಆದರೆ, ಈಗಾಗಲೇ ಈ ಧಾರಾವಾಹಿ 'ಸಂಧ್ಯಾರಾಗ' ಎಂದು ಡಬ್ ಆಗಿ ಮೂಡಿ ಬರುತ್ತಿದೆ. ಹೀಗಿರುವಾಗ 'ಬ್ರಹ್ಮಗಂಟು' ಧಾರಾವಾಹಿ ರೀಮೆಕ್ ಅಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಧಾರಾವಾಹಿಗಳು vs ಹಳೆಯ ಧಾರಾವಾಹಿಗಳು
ಇನ್ನು 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯು ಅಪ್ಪನ ಪ್ರೀತಿಗೆ ಹಂಬಲಿಸುವ ಹೆಣ್ಣು ಮಗಳ ಕಥೆಯಾಗಿದೆ. ಈ ಧಾರಾವಾಹಿಯನ್ನು ವೀಕ್ಷಕರು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮ್ಮಾಯಿಗಾರು' ರಿಮೇಕ್ ಎಂದಿದ್ದಾರೆ. ಆದರೆ, ರಿಮೇಕ್ ಹೌದಾ? ಇಲ್ಲವಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇನ್ನು ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಶ್ರೀರಸ್ತು ಶುಭಮಸ್ತು', 'ಸೀತಾ ರಾಮ' ಹಾಗೂ 'ಅಮೃತಧಾರೆ' ಧಾರಾವಾಹಿಗಳು ವೀಕ್ಷಕರ ಮನವನ್ನು ಗೆದ್ದಿದ್ದು, ಮುಂದೆ ಪ್ರಸಾರವಾಗುವ ಧಾರಾವಾಹಿಗಳ ಕತೆ ವೀಕ್ಷಕರ ಮನ ಮುಟ್ಟುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











