'ಭರ್ಜರಿ ಬ್ಯಾಚುಲರ್ಸ್- 2' ಶುರು; ಈ ಜೋಡಿಗೆ ಜನರಿಂದ ಬೇಡಿಕೆ, ನಿಮಗೂ ಇಷ್ಟನಾ?
ಜೀ ಕನ್ನಡದಲ್ಲಿ ಈ ಹಿಂದೆ 'ಭರ್ಜರಿ ಬ್ಯಾಚುಲರ್ಸ್' ಶೋ ನಡೆಸಿದ್ದರು. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಇದೀಗ 2ನೇ ಸೀಸನ್ ಭರ್ಜರಿಯಾಗಿ ಮತ್ತೆ ಬಂದಿದೆ.
ಕಳೆದ ಶನಿವಾರ ಹಾಗೂ ಭಾನುವಾರದಿಂದಾನೇ ಪ್ರಸಾರವಾಗುತ್ತಿದೆ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡಿದೆ. ಮಸ್ತ್ ಕಾಮಿಡಿಯೊಂದಿಗೆ, ಬ್ಯಾಚುಲರ್ ಗಳಿಗೆ ಜೋಡಿ ಮಾಡಿದ್ದು, ಎಲ್ಲರ ವೇಷಭೀಷಣವೇ ಬದಲಾಗಿ ಹೋಗಿದೆ.

ಈ ಬಾರಿಯ ಶೋನಲ್ಲೂ ಕ್ರೇಜಿಸ್ಟಾರ್ ವಿ.ರವಿಚಂದ್ರನ್, ಡಿಂಪಲ್ ಕ್ವೀನ್ ರಚಿತಾ ರಾಮ್ ಜಡ್ಜ್ ಆಗಿದ್ದಾರೆ. ನಿರಂಜನ್ ದೇಶಪಾಂಡೆ ಜೀ ಕನ್ನಡಕ್ಕೆ ಆಂಕರ್ ಆಗಿ ಬಂದಿದ್ದಾರೆ. ಒಳ್ಳೆ ಮನರಂಜನೆ ನೀಡುತ್ತಿರುವ ಈ ಶೋನಲ್ಲಿ ಹಲವು ಜೋಡಿಗಳಿವೆ. ಆದರೆ ಜನರಿಂದ ಡಿಮ್ಯಾಂಡ್ ಇರುವ ಜೋಡಿ ಅದೊಂದೆ. ಯಾವ್ದು ಅಂತ ಹೇಳ್ತೀವಿ ಸ್ಟೋರಿ ಪೂರ್ತಿ ನೋಡಿ. ಮೇ ಬಿ ನಿಮ್ಮ ನೆಚ್ಚಿನ ಜೋಡಿಯೂ ಅದೇ ಆಗಿದ್ದರೂ ಆಗಿರಬಹುದು.
ಪ್ರತಾಪ್ ಜೊತೆಯಾದ ಗಗನಾ
'ಭರ್ಜರಿ ಬ್ಯಾಚುಲರ್ಸ್-2' ಶುರುವಾಗಿದ್ದು ಡ್ರೋನ್ ಪ್ರತಾಪ್ ಕೂಡ ಈ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿ ನ್ಯಾಚುರಲ್ ಆಗಿ ಗಮನ ಸೆಳೆದಿದ್ದ ಡ್ರೋನ್ ಪ್ರತಾಪ್ ಇಲ್ಲಿ ಮೇಕಪ್ ಎಲ್ಲಾ ಮಾಡಿಕೊಂಡು, ವಿಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರೋನ್ ಗೆ ಜೋಡಿಯಾಗಿ ಮಹಾನಟಿ ಖ್ಯಾತಿ ಗಗನಾ ಆಯ್ಕೆಯಾಗಿದ್ದಾರೆ. ಇಬ್ಬರು ವೇದಿಕೆ ಮೇಲೆ ಒಳ್ಳೆ ಮನರಂಜನೆ ನೀಡುತ್ತಿದ್ದಾರೆ.
ವೀಕ್ಷಕರ ನೆಚ್ಚಿನ ಜೋಡಿ
ಗಗನಾ ಬಬ್ಲಿ ಬಬ್ಲಿ ಕ್ಯಾರೆಕ್ಟರ್.. ತಮ್ಮ ಮಾತಿನ ಶೈಲಿಯಲ್ಲಿಯೇ ಎಲ್ಲರನ್ನು ನಕ್ಕು ನಲಿಸುತ್ತಾರೆ. ಆ ಮಾತಿನ ದಾಟಿಯಿಂದಾನೇ ಈಗ ಜೀ ಕನ್ನಡ ವಾಹಿನಿಯ ದತ್ತು ಪುತ್ರಿಯಾಗಿದ್ದಾರೆ. ಮಹಾನಟಿ ಬಳಿಕ ಕಾಮಿಡಿ ಕಿಲಾಡಿಯಲ್ಲೂ ಗಿಲ್ಲಿ ನಟನ ಜೋಡಿಯಾಗಿ ಗಮನ ಸೆಳೆದಿದ್ದರು. ಇದೀಗ ಡ್ರೋನ್ ಪ್ರತಾಪ್ ಜೋಡಿಯಾಗಿದ್ದಾರೆ. ಅದರಲ್ಲೂ ಟ್ರೋಲರ್ಸ್ ಈ ಜೋಡಿಗಳಲ್ಲಿ ಯಾರಿಷ್ಟ ಎಂದರೆ ಆಲ್ಮೋಸ್ಟ್ ಕಮೆಂಟ್ ಹಾಕಿರೋದು ನಮಗೆ ಡ್ರೋನ್ ಮತ್ತು ಗಗನಾ ಇಷ್ಟ ಎಂದು.

ರಕ್ಷಕ್ ಜೋಡಿಗೂ ಬಹುಪರಾಕ್
ಇದೇ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್ ಕೂಡ ಸ್ಪರ್ಧಿಯಾಗಿದ್ದಾರೆ. ಇವರಿಗೆ ರಮೋಲಾ ಜೋಡಿಯಾಗಿದ್ದಾರೆ. ಸಿಕ್ಕಾಪಟ್ಟೆ ಮೇಕಪ್ ಮಾಡಿಸಿ, ರಾ ಲುಕ್ ನಿಂದ ಸೂಪರ್ ಲುಕ್ ಗೆ ಕರೆತಂದಿದ್ದಾರೆ. ಕಮೆಂಟ್ ಸೆಕ್ಷನ್‌ನಲ್ಲಿ ರಮೋಲಾ ಹಾಗೂ ರಕ್ಷಕ್ ಜೋಡಿಗೂ ವೀಕ್ಷಕರು ಉಘೇ ಉಘೇ ಎಂದಿದ್ದಾರೆ. ಆ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ ಸಪೋರ್ಟ್ ಮಾಡಿದ್ದಾರೆ.
ಡಿಂಪಲ್ ಕ್ವೀನ್ ಹೊಗಳಿಕೆ
ಡ್ರೋನ್ ಪ್ರತಾಪ್ ಅವರಿಗೆ ರಚಿತಾ ರಾಮ್ ಆತ್ಮವಿಶ್ವಾಸ ತುಂಬಿದ್ದಾರೆ. ಅವರೇನಂತಾರೆ, ಇವರೇನು ಅಂದುಕೊಳ್ಳುತ್ತಾರೆ ಎಂಬುದೆಲ್ಲಾ ಬಿಟ್ಟು ಹೀಗೆ ಖುಷಿ ಖುಷಿಯಾಗಿರಿ ಎಂದಿದ್ದಾರೆ. ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಡ್ರೋನ್ ಪ್ರತಾಪ್ ನ ಕಾಲೆಳೆದಿದ್ದು, ಒಟ್ನಲ್ಲಿ ಪ್ರತಾಪ ನಿಂಗೆ ಒಂದೇ ಜಡ್ಜ್ ಕಾಣಿಸಿರೋದು ಅಂತ ಗೊತ್ತಾಗೋಯ್ತು. ನಿಂಗೆ ನಾನೇಳೋದು ಕಿವಿಗೂ ಹೋಗಿಲ್ಲ, ಮನಸ್ಸಿಗೂ ಹೋಗಿಲ್ಲ. ರಚ್ಚು ಮೇಲೆ ಬಿದ್ದಿದೆ ನಿನ್ನ ಕಣ್ಣು. ನಾನು ಏನಕ್ಕೆ ಕೂತಿದ್ದೀನಿ ಇಲ್ಲಿ. ನೀನು ಕುಣಿದದ್ದು, ಹಾಡಿದ್ದು ಎಲ್ಲ ಅವಳ ಒಬ್ಬಳಿಗೇನೆ ಎಂದು ಕಾಲೆಳೆದಿದ್ದಾರೆ.


Click it and Unblock the Notifications











