Brahmagantu: ದೀಪಾ ಇಷ್ಟು ದಿನ ಸ್ನಾನ ಮಾಡ್ತಾ ಇರ್ಲಿಲ್ವಾ? ದಿಢೀರ್ ಬಣ್ಣ ಬದಲಾಗಿದ್ದೇಗೆ?

By ಎಸ್ ಸುಮಂತ್

'ಬ್ರಹ್ಮಗಂಟು' ಧಾರಾವಾಹಿ ಈಗ ಹೆಣ್ಣು ಮಕ್ಕಳ ನೆಚ್ಚಿನ ಧಾರಾವಾಹಿಯಾಗಿದೆ. ಯಾಕಂದ್ರೆ ಇಷ್ಟು ದಿನ ಎಷ್ಟೇ ಅವಮಾನವಾದರೂ, ನೋವಾದರೂ ಕೋಮಚವೂ ಬೇಸರ ಮಾಡಿಕೊಳ್ಳದೆ, ಗಂಡ ಆದವನು ನೀನು ಹೆಂಡತಿಯೇ ಅಲ್ಲ ಎಂದರೂ ಎಲ್ಲವನ್ನು ಸಹಿಸಿಕೊಂಡು ಬದುಕುತ್ತಿದ್ದಳು. ಸೊಸೆಯೆಂದು ಮೀಡಿಯಾ ಎದುರು ಮನೆ ತುಂಬಿಸಿಕೊಂಡ ಸೌಂದರ್ಯ, ಎಲ್ಲರೂ ಹೋದ ಮೇಲೆ ಕೆಲಸದವರ ಜೊತೆಗೆ ಸೇರಿಸಿದಳು.

ದೀಪಾ ಏನನ್ನೇ ಸಹಿಸಿಕೊಂಡರು ಅಪ್ಪ ಅಮ್ಮನಿಗೆ ಅವಮಾನವಾಗುವುದನ್ನು ಸಹಿಸುವುದಿಲ್ಲ.‌ಇಷ್ಡು ದಿನ ಕೆಲಸದವಳಾಗಿದ್ದರು ಮುಚ್ಚಿಟ್ಟು ರಾಣಿಯಂತೆ ಬದುಕುತ್ತಿದ್ದೀನಿ ಎಂದೇ ದೀಪಾ ನಾಟಕವಾಡಿದ್ದಳು. ಆದರೆ ಅಪ್ಪ ಅಮ್ಮನಿಗೆ ಅವಮಾನ ಮಾಡಿದರೆ ಬಿಡುತ್ತಾಳಾ..? ಮಗಳನ್ನಿಟ್ಟುಕೊಂಡು ವ್ಯವಹಾರ ಮಾಡಿ ಅಂದ್ರೆ ಸುಮ್ಮನೆ ಇರುತ್ತಾಳಾ..? ಅಲ್ಲಿಯೇ ತಿರುಗಿ ಬಿದ್ದ ದೀಪಾ ನಾನಾ..? ನೀನಾ ಎಂದು ನಿಂತಿದ್ದಾಳೆ.

Zee kannada Bhramagantu serial netizes comments on actress looks

ತನ್ನ ಹಕ್ಕು ಅನುಭವಿಸುತ್ತಿರುವ ದೀಪಾ

ಸೌಂದರ್ಯಗೆ ಸವಾಲು ಹಾಕಿ ಬಂದ ದೀಪಾ ಇಂದು ಮನೆಯಲ್ಲಿ ಸೊಸೆಯೆಂಬ ಹಕ್ಕನ್ನ ಚಲಾಯಿಸಿದ್ದಾಳೆ. ಚಿರು ರೂಮಿನಲ್ಲಿಯೇ ಉಳಿದುಕೊಂಡಿದ್ದಾಳೆ. ಇಂದಿನಿಂದ ಮನೆಯ ಕೆಲಸದವಳಾಗಿ ಇಲ್ಲ, ಬದಲಾಗಿ ಸೊಸೆಯಾಗಿ ಗತ್ತಿನಿಂದ ಓಡಾಡುತ್ತಿದ್ದಾಳೆ. ಸೊಸೆಯೆಂಬ ಗೌರವದಿಂದ ನಡೆದುಕೊಳ್ಳುತ್ತಿದ್ದಾಳೆ. ಇದು ಚಿರುಗೆ ಇಷ್ಟವಾಗದೆ ಇದ್ದರು ಏನು ಮಾತನಾಡಲು ಆಗದೆ ಸೈಲೆಂಟ್ ಆಗಿ ಬಿಟ್ಟಿದ್ದಾನೆ. ಆದರೆ ಅರ್ಚನಾಗೆ ಮಾತ್ರ ಇನ್ನಿಲ್ಲದ ಖುಷಿ ಸಿಕ್ಕಿದೆ.


ದೇವರ ಪೂಜೆಗೆ ಕುಳಿತ ದೀಪಾ

ದೀಪಾ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ದೇವರ ಪೂಜೆಗೆ ಅಣಿಯಾಗಿದ್ದಾಳೆ. ದೇವರ ಕೋಣೆಯಲ್ಲಿ ಕೂತು ಪೂಜೆ ಶುರು ಮಾಡಿದ್ದಾಳೆ. ಮಂತ್ರದ ಜೊತೆಗೆ ಪೂಜೆ ಮಾಡುತ್ತಿರುವುದು ಮನೆಯಲ್ಲಿ ಹಲವರಿಗೆ ಖುಷಿ ಕೊಟ್ಟಿದೆ. ಅದರಲ್ಲೂ ಗಂಡಸರೆಲ್ಲ ದೀಪಾ ಧರ್ಮದ ಮಾರ್ಗದಲ್ಲಿಯೇ ಹೋಗುತ್ತಿದ್ದಾಳೆ ಒಳ್ಳೆಯದಾಗಲಿ ಎಂದಿದ್ದಾರೆ. ಆದರೆ ಸೌಂದರ್ಯಳಿಗೆ ಈ ಮಂತ್ರಘೋಷವನ್ನೆಲ್ಲಾ ಕೇಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಿವಿ ಮುಚ್ಚಿಕೊಂಡು, ದೀಪಾಳಿಗೆ ಒಂದು ಗತಿ ಕಾಣಿಸಿಬಿಡಬೇಕು ಎನ್ನುವಷ್ಟು ಕೋಪ ಮಾಡಿಕೊಂಡಿದ್ದಾಳೆ.

ದೀಪಾ ಬೆಳೆದಿರೋದೇ ಪೊಲೀಸಪ್ಪನ ಮನೆಯಲ್ಲಿ

ಮೊದಲೇ ಮಂತ್ರವನ್ನೆಲ್ಲ ಕೇಳಿ ಕೋಪಗೊಂಡಿದ್ದ ಸೌಂದರ್ಯಾಗೆ ಮನೆಯಲ್ಲಿರುವ ಇನ್ನೊಬ್ಬಳು ಸೊಸೆ ಬಂದು ಮತ್ತಷ್ಟು ಕಿವಿ ಚುಚ್ಚಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಸೌಂದರ್ಯ, ನೇರವಾಗಿ ದೀಪಾ ಮೇಲೆ ಅಟ್ಯಾಕ್ ಮಾಡಲು ಹೋಗಿದ್ದಾಳೆ. ಕೈಯಲ್ಲಿ ಗನ್ ಹಿಡಿದು ಮನೆಯವರಿಗೆಲ್ಲ ಹೆದರಿಸಿದ್ದಾಳೆ. ಮನೆಯವರು ಹೆದರಿದಂತೆ ದೀಪಾ ಹೆದರುತ್ತಾಳೆಂದು ಭಾವಿಸಿದ ಸೌಂದರ್ಯ, ಗಿಡದ ಪಾಟ್ ಮೇಲೆ ಗುಂಡು ಹಾರಿಸಿದ್ದಾಳೆ. ಹುಟ್ಟಿದಾಗಿನಿಂದ ಪೊಲೀಸಪ್ಪನ ಜೊತೆಗೆ ಬೆಳೆದ ದೀಪಾ ರಿವಾಲ್ವರ್‌ಗೆಲ್ಲ ಹೆದರುವುದುಂಟೆ. ಅದೇ ಸೌಂದರ್ಯಾಳನ್ನೇ ಹೆದರಿಸಿದ್ದಾಳೆ. ದೀಪಾಳ ತಿರುಗೇಟಿಗೆ ಸೌಂದರ್ಯಾ ಮಾತ್ರವಲ್ಲ ಮನೆಯವರು ಗಪ್ ಚುಪ್ ಆಗಿದ್ದಾರೆ.

ದೀಪಾಳ ಬಣ್ಣ ಬದಲಾಗಿದ್ದೇಗೆ?

ದೀಪಾ ಪಾತ್ರಧಾರಿ ರಿಯಲ್ ಲೈಫ್‌ನಲ್ಲಿ ಗ್ಲಾಮರ್ ಆಗಿನೇ ಇದ್ದಾರೆ. ಹಾಲ್ಗೆನ್ನೆಯ ಚೆಲುವೆ ಕೂಡ. ಆದರೆ ಈ ಸೀರಿಯಲ್‌ನಲ್ಲಿ ಮಾತ್ರ ಕಪ್ಪು ಸುಂದರಿ, ಹಲ್ಲಿಗೆ ಸದಾ ಕ್ಲಿಪ್ ಹಾಕಿಕೊಂಡು, ದೊಡ್ಡ ಕನ್ನಡಕ ಧರಿಸುತ್ತಾಳೆ. ಆದರೆ ಇಂದಿನ ಪ್ರೋಮೋದಲ್ಲಿ ದೀಪಾ ಬಣ್ಣ ಬದಲಾಗಿದೆ. ಕಪ್ಪಾಗಿ ಕಾಣಿಸುತ್ತಿದ್ದ ದೀಪಾ, ಈಗ ಬೆಳ್ಳಗೆ ಕಾಣಿಸುತ್ತಿದ್ದಾಳೆ. ಸ್ನಾನ ಮಾಡಿ ಪೂಜೆ ಮಾಡಲು ಬಂದಿದ್ದು, ನೋಡುಗರು ಫನ್ನಿಯಾಗಿ‌ ಕಮೆಂಟ್ ಹಾಕುತ್ತಿದ್ದಾರೆ. ಯಾಕೆ ಇಷ್ಟು ದಿನ ದೀಪಾ ಸ್ನಾನ ಮಾಡ್ತಾ ಇರಲಿಲ್ವಾ? ಈಗ ಇಷ್ಟೊಂದು ಅಂದ ಹೆಚ್ಚಾಗಿದೆ, ಬಣ್ಣ ಬದಲಾಗಿದೆ ಅಂತೆಲ್ಲ ಕಮೆಂಟ್ ಹಾಕುತ್ತಿದ್ದಾರೆ.

More from Filmibeat

English summary
Bhramagantu Serial; Here is the details about Funny comment on Deepa's fair looks;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X