twitter
    For Quick Alerts
    ALLOW NOTIFICATIONS  
    For Daily Alerts

    'ಜಿ.ಆರ್.ಪಿ'ಯಲ್ಲಿ ಜೀ ಕನ್ನಡ ಏಕ್ದಂ ಜಿಗಿತ: ಎಲ್ಲಾ 'ಕಾಮಿಡಿ ಕಿಲಾಡಿಗಳ' ಕರಾಮತ್ತು.!

    By Harshitha
    |

    ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಕಿರುತೆರೆ ಲೋಕದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದೆ. ವೀಕ್ಷಕರಿಗೆ ಮನರಂಜನೆ ನೀಡಲು ಜಿ.ಇ.ಸಿ ವಾಹಿನಿಗಳು ಬಗೆಬಗೆಯ ಕಾರ್ಯಕ್ರಮಗಳನ್ನು ಹೊತ್ತು ತರುತ್ತಿವೆ.

    ಕನ್ನಡ ಕಿರುತೆರೆಯಲ್ಲಂತೂ ಅದ್ಧೂರಿ ಸೀರಿಯಲ್ ಗಳು, ವಿಭಿನ್ನ ರಿಯಾಲಿಟಿ ಶೋಗಳು ಮೂಡಿಬರುತ್ತಿವೆ. ಸ್ಟಾರ್ ಸುವರ್ಣ ವಾಹಿನಿ, ಕಲರ್ಸ್ ಕನ್ನಡ ವಾಹಿನಿ, ಜೀ ಕನ್ನಡ ವಾಹಿನಿ, ಉದಯ ಟಿವಿಯಲ್ಲಿ ಒಂದಕ್ಕಿಂತ ಒಂದು ಕಾರ್ಯಕ್ರಮಗಳು ವೀಕ್ಷಕರನ್ನು ಟಿವಿ ಮುಂದೆ ಕಟ್ಟಿ ಹಾಕಿ ಕೂರಿಸುತ್ತಿವೆ.

    ಟಿ.ಆರ್.ಪಿ ಯುದ್ಧದಲ್ಲಿ ಪ್ರತಿ ವಾರ ಯಾರಾದರೂ ಒಬ್ಬರು ಗೆಲ್ಲಬೇಕು, ಮಿಕ್ಕವರು ಸೋಲಲೇಬೇಕು. ಸದ್ಯಕ್ಕೆ ಜಿ.ಆರ್.ಪಿ ಎಂಬ ಸಮರದಲ್ಲಿ ಗೆದ್ದು ಗೆಲುವಿನ ನಗೆ ಬೀರಿರುವುದು ಜೀ ಕನ್ನಡ ವಾಹಿನಿ ಮಾತ್ರ.! ಮುಂದೆ ಓದಿರಿ...

    ಜೀ ಕನ್ನಡ ವಾಹಿನಿ ಇದೀಗ ನಂಬರ್ 1.!

    ಜೀ ಕನ್ನಡ ವಾಹಿನಿ ಇದೀಗ ನಂಬರ್ 1.!

    ಜೀ ಕನ್ನಡ ವಾಹಿನಿ ಏಕ್ದಂ ನಂಬರ್ 1 ಪಟ್ಟಕ್ಕೇರಿದೆ. ಜಿ.ಆರ್.ಪಿ (ಗ್ರಾಸ್ ರೇಟಿಂಗ್ ಪಾಯಿಂಟ್) ಲೆಕ್ಕಾಚಾರದಲ್ಲಿ ಜೀ ಕನ್ನಡ ವಾಹಿನಿ 'ಕಿಂಗ್' ಆಗಿದೆ.

    ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!

    ಜೀ ಕನ್ನಡ ವಾಹಿನಿಗೆ ಸಿಕ್ಕಿರುವ ಜಿ.ಆರ್.ಪಿ ಎಷ್ಟು.?

    ಜೀ ಕನ್ನಡ ವಾಹಿನಿಗೆ ಸಿಕ್ಕಿರುವ ಜಿ.ಆರ್.ಪಿ ಎಷ್ಟು.?

    ಕನ್ನಡ ಕಿರುತೆರೆಯಲ್ಲಿ 29ನೇ ವಾರ (ಜುಲೈ 14 ರಿಂದ ಜುಲೈ 20 ರವರೆಗೆ) ಜೀ ಕನ್ನಡ ವಾಹಿನಿಗೆ 617 ಜಿ.ಆರ್.ಪಿ ಲಭಿಸಿದೆ. 'ಜಿ.ಆರ್.ಪಿ'ನಲ್ಲಿ ಮಿಕ್ಕೆಲ್ಲಾ ವಾಹಿನಿಗಳನ್ನು ಕೆಳಕ್ಕೆ ತಳ್ಳಿ ಜೀ ಕನ್ನಡ ವಾಹಿನಿ ಗೆಲುವು ಸಾಧಿಸಿದೆ.

    ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ 'ಪುಟ್ಟಗೌರಿ ಮದುವೆ' ಅಲ್ಲ.! ಮತ್ತಿನ್ಯಾವುದು.? ಕನ್ನಡ ಕಿರುತೆರೆಯ ನಂ.1 ಕಾರ್ಯಕ್ರಮ 'ಪುಟ್ಟಗೌರಿ ಮದುವೆ' ಅಲ್ಲ.! ಮತ್ತಿನ್ಯಾವುದು.?

    ಎರಡನೇ ಸ್ಥಾನದಲ್ಲಿ ಕಲರ್ಸ್ ಕನ್ನಡ

    ಎರಡನೇ ಸ್ಥಾನದಲ್ಲಿ ಕಲರ್ಸ್ ಕನ್ನಡ

    ಅರ್ಬನ್ ಮಾರ್ಕೆಟ್ ನಲ್ಲಿ 29ನೇ ವಾರ 569 ಜಿ.ಆರ್.ಪಿ ಗಳಿಸಿ ಕಲರ್ಸ್ ಕನ್ನಡ ವಾಹಿನಿ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ (353) ಉದಯ ಟಿವಿ ಇದೆ. ಇನ್ನೂ ನಾಲ್ಕನೇ ಸ್ಥಾನಕ್ಕೆ (225) ಸ್ಟಾರ್ ಸುವರ್ಣ ವಾಹಿನಿ ತೃಪ್ತಿ ಪಟ್ಟುಕೊಂಡಿದೆ.

    ಎಲ್ಲಾ 'ಕಾಮಿಡಿ ಕಿಲಾಡಿಗಳ' ಕಮಾಲ್.!

    ಎಲ್ಲಾ 'ಕಾಮಿಡಿ ಕಿಲಾಡಿಗಳ' ಕಮಾಲ್.!

    ಬಾರ್ಕ್ ರೇಟಿಂಗ್ ಪ್ರಕಾರ, 29ನೇ ವಾರ ಕನ್ನಡ ಕಿರುತೆರೆಯ ಟಾಪ್ 5 ಕಾರ್ಯಕ್ರಮಗಳಲ್ಲಿ ನಂ.1 ಸ್ಥಾನ ಪಡೆದಿರುವುದು 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್'. ಕಾಮಿಡಿ ಕಿಲಾಡಿಗಳು ಮಾಡಿರುವ ಕಮಾಲ್ ಗೆ ಜೀ ಕನ್ನಡ ವಾಹಿನಿಯ ಜಿ.ಆರ್.ಪಿ ಕೂಡ ಹೆಚ್ಚಾಗಿದೆ. ಹೀಗಾಗಿ, ಏಕ್ದಂ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ ಜೀ ಕನ್ನಡ ಚಾನೆಲ್.

    English summary
    Zee Kannada Channel becomes a new leader in Urban Market. Zee Kannada tops in Week 29 GRP.
    Friday, July 27, 2018, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X