For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡ ಹದಿನೈದನೇ ವರ್ಷದ ಮಹೋತ್ಸವ: ಭರ್ಜರಿ ಕಾರ್ಯಕ್ರಮ

  |

  ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡಕ್ಕೆ ಹದಿನೈದು ವರ್ಷ ತುಂಬಿದ ಸಂಭ್ರಮದ ಸಲುವಾಗಿ, ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡಲು ವಿಶೇಷ ಕಾರ್ಯಕ್ರಮ 'ಜೀ ಕನ್ನಡ 15ನೇ ವರ್ಷದ ಮಹೋತ್ಸವ' ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡಲು ಸಜ್ಜಾಗಿದೆ.

  ಇದೇ ಸಂದರ್ಭದಲ್ಲಿ ವಾಹಿನಿಯ ಎಲ್ಲಾ ಧಾರಾವಾಹಿಗಳನ್ನ ಸಂಭ್ರಮಿಸುವುದರ ಜೊತೆಗೆ ತೆರೆಯ ಹಿಂದೆ ದುಡಿಯೋ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಇಂಗಿತ ವಾಹಿನಿಯದ್ದು. ಇದರ ಜೊತೆಗೆ ವಾಹಿನಿಯಲ್ಲಿ ಮೂಡಿಬಂದ ಹಲವು ರಿಯಾಲಿಟಿ ಶೋ ಗಳ ಕಲಾವಿದರು ಕೂಡ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

  ವಿದೇಶಿ ರಿಯಾಲಿಟಿ ಶೋನಲ್ಲಿ 1.86 ಕೋಟಿ ಗೆದ್ದ ಭಾರತೀಯವಿದೇಶಿ ರಿಯಾಲಿಟಿ ಶೋನಲ್ಲಿ 1.86 ಕೋಟಿ ಗೆದ್ದ ಭಾರತೀಯ

  ಹಾಗೇ ಚಿತ್ರರಂಗದಲ್ಲಿ ಅಪಾರ ಅನುಭವ ಇರುವ ಸಾಧಕರನ್ನು ಕೂಡ ಇಲ್ಲಿ ಗೌರವಿಸಲಾಗುವುದು. ಜೀ ಕನ್ನಡದ ವೇದಿಕೆಯಲ್ಲಿ ಗುರುತಿಸಿಕೊಂಡ ಗಾಯಕರು, ಬಾಲ ನಟರು, ನಾಯಕ ನಟ - ನಟಿಯರು, ಹಿರಿಯ ಕಲಾವಿದರು, ನಿರ್ದೇಶಕರು, ನೃತ್ಯ ನಿರ್ದೇಶಕರು ಇಂದು ಹಲವಾರು ಸಿನಿಮಾಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿದ್ದಾರೆ. ಅವರೆಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಸಮಾಜ ಸೇವೆಗಳನ್ನ ತಮ್ಮದೇ ಆದ ರೀತಿಯಲ್ಲಿ ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿರುವವರನ್ನೂ ಕೂಡ ಸಾಧಕರೆಂದು ಪರಿಗಣಿಸಿ ಗೌರವಿಸಲಾಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾದಂತಹ ಧಾರಾವಾಹಿಗಳ ಕಲಾವಿದರು ಕೂಡ ತಮ್ಮ ಹಳೆಯ ನೆನಪುಗಳನ್ನು ಇಲ್ಲಿ ಹಂಚಿಕೊಳ್ತಾರೆ. ಈ ಮೊದಲು ಪ್ರಸಾರ ವಾದ ರಿಯಾಲಿಟಿ ಶೋಗಳ ನಿರೂಪಕರು ಕೂಡ ಈ ಸಂಭ್ರಮದಲ್ಲಿ ಪಾಲ್ಗೋಳ್ಳುತ್ತಾರೆ.

  Zee Kannada channel completes 15 years in industry

  ಇದರ ಜೊತೆ ವಿಶೇಷವಾಗಿ ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನ ಕಂಡ ಧಾರಾವಾಹಿ ತಂಡವನ್ನು ಗೌರವಿಸಲಾಗುವುದು, ಮತ್ತು ವಾಹಿನಿಯ ಹೊಸ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ಮನರಂಜನೆಗೆ ಮತ್ತಷ್ಟು ಮೆರಗು ನೀಡಲು ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರು ಪಾಲ್ಗೊಳ್ಳುತ್ತಾರೆ ಎಂದು ಜೀ ಕನ್ನಡದ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

  ರಾಮನಗರಕ್ಕೆ ಬಂದು ಕನ್ನಡದಲ್ಲಿ ಡೈಲಾಗ್ ಹೇಳಿದ ವಿಜಯ್ ಸೇತುಪತಿರಾಮನಗರಕ್ಕೆ ಬಂದು ಕನ್ನಡದಲ್ಲಿ ಡೈಲಾಗ್ ಹೇಳಿದ ವಿಜಯ್ ಸೇತುಪತಿ

  ಜೀ ಕನ್ನಡದ ಹದಿನೈದು ವರ್ಷದ ಸಂಭ್ರಮದ ಆಚರಣೆಯಾದ 'ಜೀ ಕನ್ನಡ 15ನೇ ಮಹೋತ್ಸವ' ಸತತ ಐದು ವಾರಗಳು ಇದೇ ಶನಿವಾರ ಮತ್ತು ಭಾನುವಾರದಿಂದ ರಾತ್ರಿ 9 ರಿಂದ ಪ್ರಸಾರವಾಗಲಿದೆ.

  English summary
  Popular Entertainment Zee Kannada channel completes 15 years in industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X