For Quick Alerts
  ALLOW NOTIFICATIONS  
  For Daily Alerts

  ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ 'ದೇವಿ' ಪ್ರತ್ಯಕ್ಷ!

  |

  ನವಶಕ್ತಿ ದೇವಾಲಯಗಳ ದರ್ಶನ ಹಾಗೂ ನವಶಕ್ತಿ ವರಗಳ ಶಂಖದ ಕತೆಯ ಜೀ ಕನ್ನಡ ಧಾರಾವಾಹಿ 'ದೇವಿ' ಈಗ ಪ್ರಮುಖ ಘಟ್ಟ ತಲುಪಿದೆ. ಧಾರಾವಾಹಿಯ ಎಲ್ಲ ಪಾತ್ರಗಳೂ ದೈವಿಕ ಹುಡುಗಿ ದೇವಿಯ ಜತೆ ಕೊಲ್ಲೂರು ಕ್ಷೇತ್ರದ ಕಡೆಗೆ ಹೊರಟಿವೆ. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನಡೆಯುವ ವಿಸ್ಮಯಗಳ ಸರಮಾಲೆಯಲ್ಲಿ, ದೇವಿಯ ಅಮ್ಮ ಪಾರ್ವತಿಯ 'ನಾಲ್ಕನೇ ಕ್ಷೇತ್ರ ದರ್ಶನ'ದ ಹರಕೆ ಪೂರ್ತಿಯಾಗಲಿದೆ.

  ಈ ಧಾರಾವಾಹಿಯಲ್ಲಿ ಇತ್ತೀಚೆಗೆ ಬಹು ಜನಪ್ರಿಯನಾಗಿರುವ ಮಯ್ಯಾಡಿ ಜನ್ನ, ದೇವಿಯ ಮಹಾಶಂಖ ಊದಿ ವಿಶೇಷ ವರ ಪಡೆದು ಅಸಾಮಾನ್ಯನಾಗಿದ್ದಾನೆ. ಸ್ತ್ರೀ ನಿಂದನೆ-ಅನ್ನ ನಿಂದನೆ-ದೈವ ನಿಂದನೆ ಹೀಗೆ ಮೂರು ಮಹಾ ಅಪರಾಧಗಳನ್ನು ಮಾಡಿದಾಗ ಮಯ್ಯಾಡಿ ಜನ್ನನನಿಗೆ ತಕ್ಕ ಶಿಕ್ಷೆಯೆಂದು ಮೂಕಾಂಬಿಕೆಯ ಇಚ್ಛೆ. ಆತನ ಕೈಯಲ್ಲಿರುವ ನವಶಕ್ತಿ ವರಗಳ ಮಹಾಶಂಖ ಮತ್ತೆ ಹುಡುಗಿ ದೇವಿಗೆ ಸಿಗುತ್ತಾ ಅಥವಾ ಖಳನಾಯಕ ಕೇಶವನಾಥನ ಕೈಸೇರುತ್ತಾ?

  ದೇವಿ ಅಣ್ಣ ಸದಾನಂದ ಹಾಗೂ ಧಾನ್ಯಗಿರಿ ಹುಡುಗಿ ಅಕ್ಷತಾ ಮದುವೆ ನಡೆಯತ್ತಾ? ಜನ್ನನಿಂದಾಗಿ ಗಂಡನಿದ್ದೂ ಕುಂಕುಮಸೌಭಾಗ್ಯ ಕಳೆದುಕೊಂಡಿರುವ ದೇವಿ ಅಮ್ಮ ಪಾರ್ವತಿಗೆ ಅಮ್ನೋರು ಹೇಗೆ ಸೌಭಾಗ್ಯ ಕರುಣಿಸುತ್ತಾರೆ? ಇವು ಧಾರಾವಾಹಿಯ ಸದ್ಯದ ಪ್ರಶ್ನೆಗಳು.

  'ಕೊಲ್ಲೂರಿನ ಪ್ರಕೃತಿ ಸೌಂದರ್ಯದ ಮಡಿಲಲ್ಲೇ ಈ ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಟಿವಿ ಧಾರಾವಾಹಿಯ ಇತಿಮಿತಿಗಳನ್ನು ಮೀರಿ ಸಿನಿಮಾ ಮಾದರಿಯಲ್ಲಿ ಈ ಸಂಚಿಕೆಗಳನ್ನು ರೂಪಿಸಲು ಶ್ರಮಪಟ್ಟಿದ್ದೇವೆ' ಅಂತಾರೆ ಧಾರಾವಾಹಿ ನಿರ್ದೇಶಕ ರಮೇಶ್ ಇಂದಿರಾ. ರಮೇಶ್ಇಂದಿರಾ ಇಲ್ಲಿ ಮುಖ್ಯ ಖಳನಾಯಕ ಕೇಶವನಾಥನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.

  'ದೇವಿ' ಕನ್ನಡದಲ್ಲಿ ಒಂದು ವಿಭಿನ್ನ ಧಾರಾವಾಹಿ. ಅದು ಜೀ ತಮಿಳು, ಜೀ ತೆಲುಗು ವಾಹಿನಿಗಳಲ್ಲೂ ಡಬ್ ಆಗಿ ಪ್ರಸಾರವಾಗುತ್ತಿರುವುದು ನಮಗೆ ಹೆಮ್ಮೆ- ಅಂತಾರೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ಗೌತಮ್ ಮಾಚಯ್ಯ. ಕಲಾವಿದೆ ವಿನಯಾ ಪ್ರಸಾದ್ ಮಗಳು ಪ್ರಥಮಾ ಇಲ್ಲಿ ಮೂಕಾಂಬಿಕೆಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಾಗೇಂದ್ರ ಶಾ, ಧರ್ಮೇಂದ್ರ ಕುಮಾರ್ ಅರಸ್, ಅರುಣಾ ಬಾಲರಾಜ್, ಭವಾನಿ ಪ್ರಕಾಶ್, ವೈಷ್ಣವಿ, ವಿಠಲ ಕಾಮತ್ ಹೀಗೆ ನುರಿತ ಪ್ರಸಿದ್ಧ ನಟನಟಿಯರು ಈ ಧಾರಾವಾಹಿಯಲ್ಲಿದ್ದಾರೆ.

  ಶ್ರುತಿ ನಾಯ್ಡು ತೆಂಕತಿಟ್ಟು ಯಕ್ಷಗಾನದ ಹತ್ತು ಕೈ ಹೊಂದಿರುವ ದೇವಿಯ ಅವತಾರದ ವಿಶಿಷ್ಟ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ನಟನಾ ವೃತ್ತಿಯಲ್ಲೇ ಅಪರೂಪದ ಪಾತ್ರ. ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ದೇವಿ' ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತಿವೆ.

  English summary
  Ramesh Indira Direction Serial Devi telecasts on Monday to Friday at 9-30 PM in Zee Kannada Channel. Actress Shruti Naidu performed in a special role in this Serial Devi. Read for the more... 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X