For Quick Alerts
  ALLOW NOTIFICATIONS  
  For Daily Alerts

  ಯುಗಾದಿ ಹಬ್ಬಕ್ಕೆ 'ಜೀ ಕುಟುಂಬ ಉತ್ಸವ' ಪ್ರಸಾರ: ಜೀ-ಶಕ್ತಿಯರಿಗೆ ಸನ್ಮಾನ

  |

  ಯುಗಾದಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ 'ಜೀ ಕುಟುಂಬ ಉತ್ಸವ'ವನ್ನು ಪ್ರಸಾರ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯ ಎಲ್ಲಾ ಧಾರಾವಾಹಿಗಳ ಕಲಾವಿದರು ತಮ್ಮ ಮಾತು, ಹಾಸ್ಯ, ನೃತ್ಯ, ಮತ್ತು ಆಟಗಳ ಮೂಲಕ ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿದ್ದಾರೆ.

  ವಿಭಿನ್ನ, ವಿನೂತನ, ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿ, ಈ ಜೀ ಕುಟುಂಬ ಉತ್ಸವದಲ್ಲೂ ಹಲವು ವಿಶೇಷತೆಗಳನ್ನ ಮೆರೆದಿದೆ.

  ಟಿವಿಯಲ್ಲಿ ಬರ್ತಿದೆ 'ಪೊಗರು': ಕೊನೆಗೂ ಬಹಿರಂಗವಾಯ್ತು ಪ್ರಸಾರದ ದಿನಾಂಕ ಮತ್ತು ಸಮಯಟಿವಿಯಲ್ಲಿ ಬರ್ತಿದೆ 'ಪೊಗರು': ಕೊನೆಗೂ ಬಹಿರಂಗವಾಯ್ತು ಪ್ರಸಾರದ ದಿನಾಂಕ ಮತ್ತು ಸಮಯ

  ಕನ್ನಡ ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಸಾಹಸಕ್ಕೆ ಕೈ ಹಾಕಿದೆ ಅದೇ ಮಹಾಪ್ರೋಮೋ ಪ್ರಸಾರ. ಸಾಮಾನ್ಯವಾಗಿ ಧಾರಾವಾಹಿಗಳ ಕತೆಯಲ್ಲಿ ನಾಳೆ ಏನಾಗಬಹುದು ಎಂದು, ಹಿಂದಿನ ದಿನದ ಪ್ರೋಮೋಗಳ ಮೂಲಕ ನೋಡತ್ತಿದ್ದ ವೀಕ್ಷಕರಿಗೆ, ಕತೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಮುಂದೆ, ಕತೆಯ ತಿರುವು ಯಾವ ದಿಕ್ಕಿಗೆ ಸಾಗುತ್ತದೆ ಎಂಬ ವೀಕ್ಷಕರ ಕೂತೂಹಲಕ್ಕೆ ಉತ್ತರ ನೀಡುವ ಪ್ರೋಮೋನೇ ಈ ಮಹಾ ಪ್ರೋಮೋ.

  ಈ ಧೈರ್ಯ, ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಮೊದಲು.

  ಇದರ ಜೊತೆಗೆ 35 ವರ್ಷಕ್ಕೂ ಹೆಚ್ಚು ಕಾಲ ಚಂದನವನದಲ್ಲಿ ಸೇವೆ ಸಲ್ಲಿಸಿ, ಹಲವು ನಟ ನಟಿಯರಿಗೆ ಸ್ಪೂರ್ತಿಯಾಗಿ, ಈಗ ಜೀ ಕನ್ನಡದ ಧಾರಾವಾಹಿಗಳಲ್ಲೂ ಮಿಂಚುತ್ತಿರುವ ಹಿರಿಯ ನಟಿಯರಾದ ಪದ್ಮಾ ವಾಸಂತಿ, ಸುಧಾರಾಣಿ, ವಿನಯಾ ಪ್ರಸಾದ್, ವಿಜಯಲಕ್ಷ್ಮೀ ಸಿಂಗ್ ಮತ್ತು ಈಗ ಹೊಸದಾಗಿ ಜೀ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರುವ ಉಮಾಶ್ರೀ ಅವರನ್ನ 'ಜೀ ಶಕ್ತಿ" ಎಂದು ಪರಿಗಣಿಸಿ ಗೌರವಿಸಲಾಗಿದೆ.

  ಅಷ್ಟೇ ಅಲ್ಲದೇ, ಜೀ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ʼಹಿಟ್ಲರ್ ಕಲ್ಯಾಣʼ ಹಾಗು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಧಾರಾವಾಹಿಯ ಮಾಹಿತಿಯನ್ನು ನೀಡುತ್ತಾರೆ.

  ಈ ಎಲ್ಲಾ ಭರಪೂರ ಮನರಂಜನೆ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.30 ರಿಂದ 10.30 ರ ವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

  English summary
  Zee Kannada Channel Telecasting 'Zee Kutumba Utasva' special programme on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X