»   » ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ 'ನಾಗಿಣಿ' ಧಾರಾವಾಹಿ

ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ 'ನಾಗಿಣಿ' ಧಾರಾವಾಹಿ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಾಗಿಣಿ' ಧಾರಾವಾಹಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದೆ. 'ನಾಗಿಣಿ' ಧಾರಾವಾಹಿ ಈಗ ಬರೋಬ್ಬರಿ 500 ಸಂಚಿಕೆ ಪೂರೈಸಿದೆ. ಒಂದು ಅದ್ದೂರಿ ಕಾರ್ಯಕ್ರಮದ ಮೂಲಕ ಈ ಸಂತೋಷವನ್ನು 'ನಾಗಿಣಿ' ತಂಡ ಹಂಚಿಕೊಂಡಿದೆ.

'ನಾಗಿಣಿ' ಧಾರಾವಾಹಿ 500 ಸಂಚಿಕೆಯ ವಿಶೇಷ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಮಾಡಲಾಗಿದೆ. ಈ ಕಾರ್ಯಕ್ರಮ ಇದೇ ಭಾನುವಾರ ಸಂಜೆ 4.30ಕ್ಕೆ ಪ್ರಸಾರ ಆಗಲಿದೆ. ಹುಬ್ಬಳ್ಳಿ ಜನರ ಮುಂದೆ ಅವರ ಪ್ರೀತಿಯ ನಾಯಕ ದೀಕ್ಷಿತ್ ಶೆಟ್ಟಿ ಮತ್ತು ನಾಯಕಿ ದೀಪಿಕಾ ದಾಸ್ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮನರಂಜನೆಯ ಇರುವ ನೃತ್ಯಗಳನ್ನು ಮಾಡಿದ್ದು, ಇಡೀ ಕಾರ್ಯಕ್ರಮ ಕಲರ್ ಫುಲ್ ಆಗಿದೆ.

Zee Kannada channel's Nagini serial completes 500 episodes

'ಜೀ ಕನ್ನಡ' ವಾಹಿನಿಯಲ್ಲಿ 'ನಾಗಿಣಿ' ವಿವಾಹ ಮಹೋತ್ಸವ

'ನಾಗಿಣಿ' ಜೀ ಕನ್ನಡ ಮಾತ್ರವಲ್ಲದೆ ಕನ್ನಡದಲ್ಲಿ ಸದ್ಯ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಪೈಕಿ ದೊಡ್ಡ ಜನಪ್ರಿಯತೆಯುಳ್ಳ ಧಾರಾವಾಹಿ ಆಗಿದೆ. ಸೀರಿಯಲ್ ನಲ್ಲಿ ಲೀಡ್ ರೋಲ್ ಮಾಡಿರುವ ದೀಕ್ಷಿತ್ ಶೆಟ್ಟಿ ಮತ್ತು ನಾಯಕಿ ದೀಪಿಕಾ ದಾಸ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅಂದಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರ ಆದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮವನ್ನು ಕೂಡ ಇದೇ ಜೋಡಿ ಗೆದ್ದಿತ್ತು.

English summary
Zee Kannada channel's Nagini serial completes 500 episodes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada