For Quick Alerts
  ALLOW NOTIFICATIONS  
  For Daily Alerts

  ಅಕ್ಕ ತಂಗಿ ಬಾಂಧವ್ಯದ ಹೊಸ ಕಥನ 'ಮೇಘ ಮಯೂರಿ'

  By Rajendra
  |

  ಗೋಕರ್ಣದ ಸಿಂಪಲ್ ಹುಡುಗಿ ಮೇಘಾ ಮತ್ತು ಬೆಂಗಳೂರಿನ ಡಿಂಪಲ್ ಹುಡುಗಿ ಮಯೂರಿ, ಈ ಮೂಲಕ ಕನ್ನಡಿಗರ ಮನೆಯೊಳಗೆ ಹೆಜ್ಜೆಯಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಕೆಲವು ಪಾತ್ರಗಳಲ್ಲಿ ಕ್ಯಾಮರಾ ಎದುರಿಸಿರುವ ಅಮೃತಾ ರಾಮಮೂರ್ತಿ ಮಯೂರಿಯಾಗಿ, ಹರ್ಷಿತಾ ಮೇಘಾಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  'ರಾಮಾಚಾರಿ', 'ಯುಗಪುರುಷ' ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಜ್ಯೋತಿ, ಮೇಘಾಳ ಅಮ್ಮ ಸುಮತಿಯಾಗಿ ಪ್ರಮುಖ ಪಾತ್ರದಲ್ಲಿದ್ದಾರೆ. 'ಗುಪ್ತಗಾಮಿನಿ' ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಮಲ್ಲಿಕಾ ಪ್ರಸಾದ್, ಮಯೂರಿಯ ಅಮ್ಮ ಸ್ವಾತಿಯಾಗಿ ಬರುತ್ತಿರುವುದು ಇನ್ನೊಂದು ವಿಶೇಷ.

  ಜತೆಗೆ ರಮೇಶ್ ಪಂಡಿತ್, ನಾಗೇಶ್ ಯಾದವ್, ಸುಷ್ಮಾ ನಾಣಯ್ಯ, ಅಶೋಕ್, ಕುಸುಮಾ, ಚಿನ್ಮಯ್, ಅನಿಲ್ ತಿಪಟೂರು, ರಾಧಾ ರಾಮಚಂದ್ರ ಹೀಗೆ ನುರಿತ ಕಲಾವಿದರ ದಂಡು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದೆ. 'ಜೀ ಕನ್ನಡ'ದ 'ರಾಧಾ ಕಲ್ಯಾಣ', 'ಸಂಗೀತಾ' ಧಾರಾವಾಹಿಗಳ ಹಲವು ಸಂಚಿಕೆಗಳನ್ನು ನಿರ್ದೇಶಿಸಿದ ತ್ರಿಶೂಲ್, 'ಮೇಘ ಮಯೂರಿ'ಯ ನಿರ್ದೇಶಕರು.

  'ಕೂರ್ಗ್ ಕ್ರಿಯೇಷನ್ಸ್' ಮಾಲೀಕ ಗಣೇಶ್, ಈ ಧಾರಾವಾಹಿ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನ ಎರಡು ಕಾಲೇಜುಗಳ ಹುಡುಗಿಯರ ಗುಂಪು, ಮೇಘ ಮತ್ತು ಮಯೂರಿಯ ತಂಡವಾಗಿ ನಡೆಸುವ ಸಂವಾದದ ಮೂಲಕ, ಈ ಧಾರಾವಾಹಿ ಉದ್ಘಾಟನೆಗೊಳ್ಳುತ್ತಿದೆ.

  'ಯುವ ಸಮೂಹಕ್ಕೆ ಸಂಬಂಧಿಸಿದ ಒಳಿತು ಕೆಡುಕುಗಳ ಮೇಲೆ ಈ ಧಾರಾವಾಹಿ ಬೆಳಕು ಚೆಲ್ಲಲಿದೆ. ಜತೆಗೆ ಸ್ವಾತಿಯ ಪಾತ್ರದ ಮೂಲಕ ಕ್ಯಾನ್ಸರ್ ಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ' ಎನ್ನುತ್ತಾರೆ ಜೀ ಟಿವಿ ಸಮೂಹದ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ.ಎಂ.ಗೌತಮ್ ಮಾಚಯ್ಯ.

  ಮೇಘ ಮಯೂರಿಯ ಕಥೆ: ಪರಸ್ಪರ ತುಂಬಾ ಪ್ರೀತಿಸುವ ಸ್ವಾತಿ (40) ಮತ್ತು ಸುಮತಿ (45) ಎಂಬ ಇಬ್ಬರು ಅಕ್ಕ ತಂಗಿಯರ ಮಕ್ಕಳು ಮೇಘ ಮತ್ತು ಮಯೂರಿ. ಬೆಂಗಳೂರಿನ ಜಯನಗರದ ಫೋರ್ತ್ ಬ್ಲಾಕ್ ನ ಹುಡುಗಿ ಮಯೂರಿ (19) ಶ್ರೀಮಂತಿಕೆಯಲ್ಲಿ ಸ್ವತಂತ್ರವಾಗಿ ಬೆಳೆದವಳು. ಅವಳ ಅಪ್ಪ ಅವಿನಾಶ್ (43) ದುಬೈಯಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ತನ್ನ ಜತೆಗಿರುವ ಅಮ್ಮ ಸ್ವಾತಿ ಎಂದರೆ ಮಯೂರಿಗೆ ಎಲ್ಲಿಲ್ಲದ ಪ್ರೀತಿ.

  ಮಯೂರಿಯ ದೊಡ್ಡಮ್ಮ ಅಂದರೆ ಸ್ವಾತಿಯ ಅಕ್ಕ ಸುಮತಿ. ಇವರು ಗೋಕರ್ಣದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಶಿಸ್ತಿನ ಸಿಪಾಯಿ ವಿಶ್ವನಾಥ(50)ರನ್ನು ಮದುವೆಯಾಗಿದ್ದಾರೆ. ಈ ಅಪ್ಪಟ ಮಧ್ಯಮವರ್ಗದ, ಸಾಂಪ್ರದಾಯಿಕ ಮನೆಯ ಮಗಳೇ ಮೇಘ. ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.

  ಬೆಂಗಳೂರಿನಲ್ಲಿರುವ ಸ್ವಾತಿ ತನ್ನೊಳಗೆ ಗುಟ್ಟೊಂದನ್ನು ಅಡಗಿಸಿಕೊಂಡಿದ್ದಾಳೆ. ಅದರ ಕಾರಣ ಗಂಡ ಅವಿನಾಶ್ ಗೆ ತಿಳಿದಿದ್ದರೂ ಎಲ್ಲ ಕೈಮೀರಿ ಹೋಗಿದೆ. ದುಬೈಯಿಂದ ಬೆಂಗಳೂರು ಮನೆಗೆ ಬಂದಿದ್ದಾನೆ. ಆದರೆ ಅಪ್ಪ-ಅಮ್ಮ ಇಬ್ಬರೂ ಈ ವಿಷಯವನ್ನು ಮಗಳು ಮಯೂರಿಯಿಂದ ಮುಚ್ಚಿಟ್ಟಿದ್ದಾರೆ.

  ಗೋಕರ್ಣದಿಂದ ಅಕ್ಕ ಸುಮತಿಯನ್ನು ಕರೆಸಿಕೊಂಡ ಸ್ವಾತಿ, ತನ್ನ ಸಾವಿನ ಗುಟ್ಟು ಹೇಳಿ, ತನ್ನ ಜೀವಕ್ಕೇನಾದರೂ ಅಪಾಯವಾದರೆ, ಮಗಳು ಮಯೂರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಅಕ್ಕನಿಂದ ಮಾತು ತೆಗೆದುಕೊಂಡಿದ್ದಾಳೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸ್ವಾತಿ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ.

  ರೋಗ ಉಲ್ಬಣಿಸಿದೆ. ಅವಳು ಬದುಕುಳಿಯುತ್ತಾಳಾ? ಒಂದು ವೇಳೆ ಆಯುಷ್ಯ ಮುಗಿದುಹೋದರೆ ಮಗಳು ಮಯೂರಿ, ಅಪ್ಪನ ಜತೆ ದುಬೈಗೆ ಹಾರ್ತಾಳಾ ಅಥವಾ ಚಿಕ್ಕಮ್ಮನ ಜತೆ ಗೋಕರ್ಣಕ್ಕೆ ಹೋಗ್ತಾಳಾ? ಅಲ್ಲಿ ಮೇಘಾಳ ಅವಿಭಕ್ತ ಕುಟುಂಬದಲ್ಲಿ ಮಯೂರಿಯ ಬದುಕು ಹೇಗೆ ಸಾಗೀತು?

  ಈ ಪ್ರಶ್ನೆಗಳೊಂದಿಗೆ, ಇದು ಹದಿಹರೆಯದ ಮೇಘ ಮಯೂರಿಯರ ಹುಡುಗಾಟದ ಹೊಂಗನಸಿನ ಅಮರ ಚಿತ್ರಕತೆ. ಜನವರಿ 13ರಿಂದ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ 'ಜೀ ಕನ್ನಡ'ದಲ್ಲಿ. (ಒನ್ಇಂಡಿಯಾ ಕನ್ನಡ)

  English summary
  New daily soap 'Megha Mayuri' being aired on Zee Kannada from 13th January, 2013. The serial starts at 7.30 pm from Monday to Friday. A sweet, simple story about the hopes and dreams of two teens..Don't miss only on Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X