ಡಿಕೆಡಿಯಲ್ಲಿ ಸಂಬಂಧಗಳ ಹೆಜ್ಜೆ.. ಕಾಮಿಡಿ ಕಿಲಾಡಿಗಳ ನಗುವಿನ ಗೆಜ್ಜೆ; ನಾಡ ಹಬ್ಬಕ್ಕೆ ಮಸ್ತ್ ಮನರಂಜನೆ
ನಾಡ ಹಬ್ಬ ದಸರಾ ಅದ್ದೂರಿಯಾಗಿ ನಡೆಯುತ್ತಿದ್ದು ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಈಗಾಗಲೇ ಅನೇಕ ವಾಹಿನಿಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಉತ್ತಮವಾದ ಎಪಿಸೋಡ್‌ಗಳು ಪ್ರಸಾರ ಆಗುತ್ತಿವೆ. ಇದರಿಂದ ವೀಕ್ಷಕರಿಗೆ ಹಬ್ಬದೂಟ ಉಣಬಡಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈಗಾಗಲೇ ದಸರಾ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಈ ವೀಕೆಂಡ್‌ನಲ್ಲಿ ದಸರಾ ಹಬ್ಬದ ವೈಭವ ಇನ್ನಷ್ಟು ಮೆರುಗು ನೀಡುತ್ತಿದೆ.
ವೀಕೆಂಡ್‌ನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಸಂಬಂಧಗಳು ಹೆಜ್ಜೆ ಇಡುತ್ತಿವೆ. ಅಂದರೆ ಜೀ ಕನ್ನಡದ ಡಿಕೆಡಿ ವೇದಿಕೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ಇದೆ. ಸ್ಪರ್ಧಿಗಳ ಮನೆಯವರು ಕೂಡ ಈ ವಾರ ಡಿಕೆಡಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಫ್ಯಾಮಿಲಿ ರೌಂಡ್ ಎಂದಾಗಲೇ ಎಲ್ಲರಿಗೆ ಕೂಡ ಬಹಳ ಖುಷಿ ಆಗುತ್ತದೆ.

ಈ ವೀಕೆಂಡ್‌ನಲ್ಲಿ ದಸರಾ ವಿಶೇಷದ ಪ್ರಯುಕ್ತ ವಾರಾಂತ್ಯದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ರೌಂಡ್ ಅನ್ನು ಪ್ರಸಾರ ಮಾಡುತ್ತಿದೆ. ಈ ಶನಿವಾರ ಹಾಗೂ ಭಾನುವಾರ 7.30 ಕ್ಕೆ ಡಿಕೆಡಿ ವಿಶೇಷ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಹಾಗೆಯೇ ಕಾಮಿಡಿ ಪ್ರಿಮಿಯರ್ ಲೀಗ್ 'ದಸರಾ ಸಂಭ್ರಮ' ವೀಕೆಂಡ್‌ನಲ್ಲಿ 9 ಗಂಟೆಗೆ ಪ್ರಸಾರ ಆಗುತ್ತದೆ.
ಈ ಬಾರಿ ಈ ಎರಡು ಸಂಚಿಕೆಗಳು ಕಲರ್ ಫುಲ್ ಆಗಲಿದೆ. ಈ ಎರಡು ರಿಯಾಲಿಟಿ ಶೋವನ್ನು ನೋಡಲು ಜನರು ಕಾತರರಾಗಿದ್ದಾರೆ. ಈಗಾಗಲೇ ಈ ಎರಡು ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ನವರಾತ್ರಿಯ ಹಬ್ಬದ ರಂಗನ್ನು ಇನ್ನಷ್ಟು ಹೆಚ್ಚಿಸಲು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇನ್ನು ಡಿಕೆಡಿ ಕಾರ್ಯಕ್ರಮ ಶುರು ಆಗುವ ಮೊದಲು ಚಾಮುಂಡೇಶ್ವರಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ಹಾಗೆಯೇ ಅದಾದ ಬಳಿಕ ಕಾರ್ಯಕ್ರಮವನ್ನು ಶುರುವಾಗುತ್ತೆ. ಇದೇ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿನ ಝಲಕ್ ಕೂಡ ನೋಡಬಹುದು.

ಫ್ಯಾಮಿಲಿ ರೌಂಡ್‌ನಲ್ಲಿ ಮಿಂಚಿದ ಡ್ಯಾನ್ಸರ್ಸ್
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡುತ್ತಿದ್ದರೆ, ಈ ವಿಶೇಷ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ನಟಿ ರಕ್ಷಿತಾ ಪ್ರೇಮ್, ನಟ ವಿಜಯ ರಾಘವೇಂದ್ರ ಜಡ್ಜ್‌ಗಳಾಗಿ ಭಾಗವಹಿಸಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ ವೇದಿಕೆ ಮೇಲೆ ಸ್ಪರ್ಧಿಗಳ ಉತ್ಸಾಹ ನೋಡಿ ತೀರ್ಪುಗಾರರೇ ಥ್ರಿಲ್ ಆಗಿರುವ ಪ್ರೋಮೊವನ್ನು ರಿಲೀಸ್ ಮಾಡಲಾಗಿದೆ.
ವೀಕ್ಷರನ್ನು ರಂಜಿಸಲು ತಯಾರಾದ ಸ್ಪರ್ಧಿಗಳು
ಇನ್ನು ಜೀ ವಾಹಿನಿಯಲ್ಲಿ ಫ್ಯಾಮಿಲಿ ರೌಂಡ್ ಈ ವೀಕೆಂಡ್‌ನಲ್ಲಿ ಇದೆ. ವೀಕ್ಷಕರ ಮನರಂಜಿಸಲು ಮತ್ತಷ್ಟು ಈ ವೇದಿಕೆ ಸಜ್ಜಾಗಿದೆ. 9 ಗಂಟೆಗೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ನಗುವಿನ ಹಬ್ಬದ ಹೂರಾಣವೆ ಇರಲಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ವೀಕ್ಷಕರಿಗೆ ಕಾಮಿಡಿ ಟಾನಿಕ್ ನೀಡಲು ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.
ವೈರಲ್ ಸ್ಟಾರ್ ಎಂಟ್ರಿ
ಸೋಷಿಯಲ್ ಮೀಡಿಯಾದ ವೈರಲ್ ಸ್ಟಾರ್ಸ್, ಹಾಗೆಯೇ ಮುಖ್ಯಮಂತ್ರಿ ಚಂದ್ರು ಜೊತೆಗೆ ಗುರುಕಿರಣ್ ಅವರು ಕೂಡ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ದಸರಾ ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚು ಮಾಡಲು ಇವರ ಆಗಮನ ಮತ್ತಷ್ಟು ಹುರುಪು ನೀಡುತ್ತದೆ. ಹಾಗೆಯೇ ಎಲ್ಲರನ್ನೂ ಹೊಟ್ಟೆ ಹುನ್ನಾಗಿಸುವ ಹಾಗೆ ನಗಿಸಲು ಸಜ್ಜಾಗಿದ್ದಾರೆ.


Click it and Unblock the Notifications











