ಆಂಕರ್ ಅನುಶ್ರೀ ಲಗ್ನ ಪತ್ರಿಕೆಗೆ ಪೂಜೆಯೂ ಮುಗಿದೋಯ್ತು!
ಸದ್ಯ ರಾಜ್ಯದ ಬ್ರೇಕಿಂಗ್ ನ್ಯೂಸ್ ಅಂದ್ರೆ ಅದು ಅನುಶ್ರೀ ಮದುವೆ ವಿಚಾರ. ಸಾಕಷ್ಟು ಜನ ಈ ಪ್ರಶ್ನೆಯನ್ನ ಕೇಳುತ್ತಲೇ ಇದ್ದಾರೆ. ಯಾಕಂದ್ರೆ ಅನುಶ್ರೀ ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ. ಈಗ ಅವರ ಲೈಫ್‌ನಲ್ಲಿ ಮದುವೆ ಎಂಬ ಶುಭ ಸುದ್ದಿ ಯಾವಾಗ ಬರಲಿದೆ ಎಂದೇ ಜನ ಕಾಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ಮದುವೆ ಸುಮಾರು ಸಲ ಆಗಿ ಹೋಗಿದೆ. ಚಿಕ್ಕಣ್ಣ ಜೊತೆಗೂ ಮದುವೆ ನಡೆದಿದೆ ಎಂದು ಫೋಟೋ ಸಮೇತ ಎಡಿಟಿಂಗ್ ಮಾಡಿ ವೈರಲ್ ಮಾಡಿದ್ದರು. ಈ ಸೋಷಿಯಲ್ ಮೀಡಿಯಾದಲ್ಲಿ ನಡೆದ ಮದುವೆಯನ್ನ ಅನುಶ್ರೀ ತಮಾಷೆಯಾಗಿಯೇ ತೆಗೆದುಕೊಂಡಿದ್ದಾರೆ. ಆದರೆ ಈಗ ಡಿಕೆಡಿಯಲ್ಲೂ ಮದುವೆಯದ್ದೇ ಸದ್ದು ಸುದ್ದಿ.

ಅನುಶ್ರೀ ವೆಡ್ಡಿಂಗ್ ಕಾರ್ಡ್
ಗಿಲ್ಲಿ ನಟ ಡಿಕೆಡಿಯಲ್ಲಿ ತನ್ನದೇ ಆದ ಸ್ಟೈಲ್‌ನಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಪ್ರಾಪರ್ಟಿಗಳನ್ನ ಬಳಸಿಕೊಂಡೇ ಹಾಸ್ಯವನ್ನ ಕಟ್ಟಿ ಬಿಡುತ್ತಾರೆ. ಎಷ್ಟೇ ಒತ್ತಡವಿದ್ದರು, ಗಿಲ್ಲಿ ನಟನ ಒಂದು ಕಾಮಿಡಿ ಜೋಕ್ ಕೇಳಿದರೆ ಸಾಕು ಟೆನ್ಶನ್ ಎಲ್ಲಾ ಇಳಿದು ಹೋಗುತ್ತೆ. ಅಷ್ಟು ಕಾಮಿಡಿ ಮಾಡ್ತಾರೆ. ಇದೀಗ ಕರ್ನಾಟಕವೇ ಖುಷಿ ಪಡುವಂತ ಕೆಲಸ ಮಾಡಿದ್ದಾರೆ. ಅದುವೇ ಅನುಶ್ರೀ ಮದುವೆಗೆ ಸಂಬಂಧಿಸಿದ ವಿಚಾರ.
ವೆಡ್ಡಿಂಗ್ ಕಾರ್ಡ್ ನೋಡಿ ಅನುಶ್ರೀ ಶಾಕ್
ಆಂಕರ್ ಅನುಶ್ರೀ ಎಲ್ಲಾ ಸ್ಪರ್ಧಿಗಳನ್ನು ವೇದಿಕೆ ಕಿಚಾಯಿಸುತ್ತಾರೆ. ಅವರ ಕಾಮಿಡಿಗಳಿಗೆ ಸಾಥ್ ನೀಡುತ್ತಾರೆ. ಹೀಗಾಗಿಯೇ ಅನುಶ್ರೀ ಎಂದರೆ ಸ್ಪರ್ಧಿಗಳಿಗೆ ಅಷ್ಟು ಇಷ್ಟ. ಈಗ ದೇವಸ್ಥಾನಕ್ಕೆ ಹೋಗಿ, ಟ್ರೆಡಿಷನಲ್ ಲುಕ್‌ನಲ್ಲಿ ಬಂದಂತ ಗಿಲ್ಲಿ ನಟನನ್ನ ಅನುಶ್ರೀ ರೇಗಿಸಿದ್ದಾರೆ. 'ನನ್ನನ್ನು ನಿಮ್ಮ ಅಕ್ಕ ಅಂತಿಯೆಲ್ಲೋ, ಈ ಅಕ್ಕನಿಗೆ ಏನು ಪೂಜೆ ಮಾಡಿಸಿಕೊಂಡು ಬಂದಿಲ್ವಾ?' ಎಂದು ಕೇಳಿದ್ದಾರೆ. ಆಗ ಗಿಲ್ಲಿ, ಇರಿ ಅಕ್ಕ, ಯಾರಲ್ಲಿ ತನ್ನಿ ಪ್ರಾಪರ್ಟಿನಾ ಅಂತ ಫುಲ್ ಗ್ರ್ಯಾಂಡ್ ಆಗಿ ವೆಡ್ಡಿಂಗ್ ಕಾರ್ಡ್ ತರಿಸಿದ್ದಾನೆ. ಆ ರೇಂಜಿಗೆ ತಂದ ಕಾರ್ಡ್ ಕಂಡು ಅನುಶ್ರೀಯೇ ಗಾಬರಿಯಾಗಿದ್ದಾರೆ.
ಖಾಲಿ ಕಾರ್ಡ್‌ಗೆ ಮೊದಲೇ ಪೂಜೆ
ವೇದಿಕೆಗೆ ತಂದ ವೆಡ್ಡಿಂಗ್ ಕಾರ್ಡ್ ಅನ್ನು ಎಲ್ಲರಿಗೂ ತೋರಿಸಿದ ಗಿಲ್ಲಿ, ಅಕ್ಕ ಇದು ಸ್ಪೆಷಲ್ ವೆಡ್ಡಿಂಗ್ ಕಾರ್ಡ್ ಎಂದಿದ್ದಾರೆ. ಆ ಕಾರ್ಡ್ ಮೇಲೆ ನೋಡಿದರೆ ಏನು ಪ್ರಿಂಟ್ ಆಗಿಲ್ಲ. ಒಳಗೂ ತೆಗೆದು ನೋಡಿದಾಗ ಅಲ್ಲಿಯೂ ಖಾಲಿ ಇದೆ. ಅದನ್ನ ನೋಡಿದ ಅನುಶ್ರೀ, ಏನೋ ಇದು ಒಳಗು, ಹೊರಗು ಖಾಲಿ ಇದೆ ಅಂದ್ರೆ, ಅದ್ಕೆ ನಿಮ್ಮ ಕೈಗೆ ಕೊಟ್ಟಿರೋದು ಬೇಗ ಪ್ರಿಂಟ್ ಹಾಕಿಸಿ, ಮದುವೆ ಕಾರ್ಡ್ ಹಂಚಿ ಎಂದಿದ್ದಾರೆ. ಖಾಲಿ ಕಾರ್ಡ್‌ಗೆ ಪೂಜೆ ಮಾಡಿಸಿಕೊಂಡು ಬಂದ ಭೂಪತಿ ಇವರೇ ನೋಡಿ.
ಅಪ್ಪು ಬರ್ತ್ ಡೇ ದಿನ ಅನೌನ್ಸ್ ಮೆಂಟ್
ಇನ್ನು ಅನುಶ್ರೀ ಕೂಡ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದಾರೆ. ಸಿಕ್ಕವರು, ಕಂಡವರು ಬರೀ ಇದೇ ಮಾತನ್ನೇ ಕೇಳುತ್ತಿದ್ದಾರೆ. ಹೀಗಾಗಿ ನಾನು ಕೂಡ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದೇನೆ ಎಂದು ಅನುಶ್ರೀ ಅವರೇ ಅನೌನ್ಸ್ ಮಾಡಿ, ಬಹಳ ದಿನವಾಗಿದೆ. ಆದರೆ ಹುಡುಗ ಯಾರು, ಮದುವೆ ಯಾವಾಗ ಎಂಬುದನ್ನು ಅಪ್ಪು ಬರ್ತ್ ಡೇ ಅಂದ್ರೆ ಮಾರ್ಚ್ 17ರಂದು ಅನೌನ್ಸ್ ಮಾಡಲಿದ್ದಾರೆ.


Click it and Unblock the Notifications











