DKD: ಗ್ಯಾರೇಜ್ ಹುಡುಗಿ ಈಗ ಡಿಕೆಡಿ ಸ್ಪರ್ಧಿ; ಇದು ಡ್ಯಾನ್ಸರ್ ಜೀವನದ ನೋವಿನ ಕಥೆ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಡಿಕೆಡಿ ಕಾರ್ಯಕ್ರಮ ಶುರುವಾಗಿದೆ. ಡ್ಯಾನ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಡ್ಯಾನ್ಸ್ ಬಾರದೆ ಇರುವವರು ಕೂಡ ಡ್ಯಾನ್ಸ್ ಅಂದ್ರೆ ಎದ್ದು ಕುಣಿಯುತ್ತಾರೆ. ಡ್ಯಾನ್ಸ್ ಅನ್ನೋದು ಅಷ್ಟು ಮೈಂಡ್ ರಿಲ್ಯಾಕ್ಸ್ ಮಾಡಿ ಬಿಡುತ್ತದೆ. ಈಗ ಜೀ ಕನ್ನಡ ಶನಿವಾರ ಮತ್ತು ಭಾನುವಾರ ಡಿಕೆಡಿ ಕಾರ್ಯಕ್ರಮವನ್ನು ಶುರು ಮಾಡಿದೆ.

ಈ ಬಾರಿ ಹೊಸತನ್ನೇನೋ ಮಾಡುವುದಕ್ಕೆ ಹೊರಟಿದೆ. ಡ್ಯಾನ್ಸ್ ನಲ್ಲೇ ವಿಭಿನ್ನತೆ ತೋರುವ ಪ್ರಯತ್ನ. ಡ್ಯಾನ್ಸ್ ಬಾರದೆ ಇರುವವರನ್ನು ಡ್ಯಾನ್ಸ್ ವೇದಿಕೆಗೆ ಕರೆತರುವ ಪ್ರಯತ್ನ. ಜೀ ಕನ್ನಡದ ಕಲಾವಿದರನ್ನೇ ವೇದಿಕೆಗೆ ಕರೆತಂದಿತ್ತು. ಪ್ರೋಮೋದಲ್ಲಿ ನೀಡಿದ ಸುಳಿವು ಕಂಡು ಡಿಕೆಡಿಯಲ್ಲಿ ಇವ್ರು ಮಾತ್ರ ಡ್ಯಾನ್ಸ್ ಮಾಡ್ತಾರಾ ಎಂಬ ಪ್ರಶ್ನೆ ಮೂಡಿಸಿತ್ತು. ಇದೀಗ ಎರಡನೇ ವಾರದಿಂದ ಇಂಟ್ರೆಸ್ಟಿಂಗ್ ಸ್ಪರ್ಧಿಗಳು ಬಂದಿದ್ದಾರೆ.

Zee kannada DKD Jeevan pair Sanjana Shares her Emotional Story in stage

ಜೀವ ಜೊತೆಗೆ ಸಂಜು ಡ್ಯಾನ್ಸ್

ಡಿಕೆಡಿಯಲ್ಲಿ ಅಮೃತಧಾರೆ ಜೀವ ಕೂಡ ಸ್ಪರ್ಧಿಯಾಗಿದ್ದಾರೆ. ಅವರ ಜೊತೆಗೆ ಇಂದು ಹೊಸ ಎಂಟ್ರಿ ಸಂಜು. ಇವರು ಉತ್ತರ ಕರ್ನಾಟಕದವರು. ವೇದಿಕೆ ಮೇಲೆ ಡ್ಯಾನ್ಸ್ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡಿದ್ದು ಉತ್ತರ ಕರ್ನಾಟಕದ ಹಾಡನ್ನೇ 'ರಗಡ ರಗಡ ರಗಡ ದುನಿಯಾ' ಎಂಬ ಹಾಡಿಗೆ ಜೀವ ಜೊತೆಗೆ ಸಖತ್ ಸ್ಟೆಪ್ ಹಾಕಿದ್ದಾರೆ.

ಗ್ಯಾರೇಜ್ ಹುಡುಗಿಗೆ ಡಿಕೆಡಿಗೆ ಬರುವಾಸೆ

ಡ್ಯಾನ್ಸ್ ಮುಗಿದ ಮೇಲೆ ಅನುಶ್ರೀ ಕೇಳಿದ ಪ್ರಶ್ನೆಯಿಂದ ತಿಳೀತು ಸಂಜು ಅದೆಷ್ಟು ಕಷ್ಟಪಟ್ಟು ಮೇಲೆ ಬಂದಿದ್ದಾರೆಂದು. ಈ ಮೊದಲು ಸಂಜನಾ ಗ್ಯಾರೇಜ್ ನಲ್ಲಿ ಕೆಲಸ‌ ಮಾಡುತ್ತಿದ್ದರಂತೆ. ಗಂಡು ಮಕ್ಕಳು ದುಡಿದಂತೆ ದುಡಿದಿದ್ದಾರೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡಿ, ಮದುವೆ ಮನೆಗಳಲ್ಲಿ ಕೆಲಸ ಮಾಡಿ ತಮ್ಮ ಸಂಸಾರ ಸಾಕುತ್ತಿದ್ದಾರೆ. ಕಳೆದ ಬಾರಿಯೂ ಡಿಕೆಡಿಗೆ ಬಂದಿದ್ದ ಸಂಜನಾ ಸೆಲೆಕ್ಟ್ ಆಗಿರಲಿಲ್ಲ. ಆದರೆ ಅದೃಷ್ಟ ಈ ಬಾರಿ ಸೆಲೆಕ್ಟ್ ಆಗಿದ್ದಾರೆ.

Zee kannada DKD Jeevan pair Sanjana Shares her Emotional Story in stage

ಅಕ್ಕನಿಗಾಗಿ ಶಾಲೆ ಬಿಟ್ಟ ತಂಗಿ

ಸಂಜನಾ ಎಸ್ಎಸ್ಎಲ್ಸಿವರೆಗೆ ಮಾತ್ರ ಓದಿದ್ದಾರೆ. ಅದಾದ ಮೇಲೆ ಓದುವುದಕ್ಕೆ ಮನೆಯಲ್ಲಿ ಬಡತನ. ಮನೆಯನ್ನು ನಿಭಾಯಿಸುತ್ತಿದ್ದ ಅಪ್ಪ ಹೋದ ಮೇಲೆ ಕಷ್ಟಗಳು ಜಾಸ್ತಿ ಆದವೂ. ಪ್ರೀತಿಯ ಅಪ್ಪನನ್ನು ಕಳೆದುಕೊಂಡ ನೋವು, ಅಮ್ಮನಿಗೆ ಹೆಗಲಾಗಿ ಸಂಜನಾ ನಿಂತರು. ಸಂಜನಾ ಚಿಕ್ಕ ಮಗಳು. ದುಡಿದು ಅಕ್ಕನನ್ನೇ ಓದಿಸುತ್ತಿದ್ದಾಳೆ. ಅಕ್ಕನಿಗೆ ಓದುವ ಆಸಕ್ತಿ ಜಾಸ್ತಿ. ಹೀಗಾಗಿ ತಾನೂ ಓದಿದರೆ ದುಡಿಯುವುದು ಯಾರು ಎಂದುಕೊಂಡ ಸಂಜನಾ ಚೆನ್ನಾಗಿ ಓದುವ ಅಕ್ಕನೇ ಓದಲಿ ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಂಜು ನೋವಿನ ಕಥೆ

ಸಂಜನಾ ಕಥೆ ಕೇಳಿದಾಗ ಹೆಣ್ಣು ಮಕ್ಕಳಿಗೆ ಒಂದಷ್ಟು ಧೈರ್ಯವೂ ಬರುತ್ತದೆ. ಆದರೂ ಇಷ್ಟೆಲ್ಲ ಕಷ್ಟಗಳಿದ್ದರು ದುಡಿಯುವ ಛಲ, ಬದುಕುವ ಹಠ ಇದೆಯೆಲ್ಲ ಎಂಬ ಖುಷಿ. ಸಂಜನಾ ತನ್ನ ತಂದೆಯನ್ನು ನೆನೆದು ವೇದಿಕೆ ಮೇಲೆ ಕಣ್ಣೀರಾಕಿದರು. ತಂಗಿ ಓದಿಸುತ್ತಿದ್ದಾಳೆಂದು ಅಕ್ಕನಿಗೆ ಹೆಮ್ಮೆ. ಸಂಜನಾ ಅಕ್ಕ ಕೂಡ, ತಂದೆ ಹೋದ ಮೇಲೆ ನಮ್ಮನ್ನು ಸಂಬಂಧಿಕರು ಹೇಗೆಲ್ಲಾ ನೋಡಿದರು ಎಂಬುದನ್ನು ನೆನೆದು ಕಣ್ಣೀರು ಹಾಕಿದರು‌. ಅವರಿಬ್ಬರು ಅದೆಷ್ಟು ಕಷ್ಟದಿಂದ ಬೆಳೆದಿದ್ದಾರೆ ಎಂಬುದು ಅರ್ಥವಾಗಿದ್ದು ವೇದಿಕೆ ಮೇಲೆ ನಿರ್ಮಾಣವಾದ ಸನ್ನಿವೇಶ.

ಅದೊಂದು ಅಪ್ಪುಗೆ

ಅಕ್ಕನಿಂದಲೂ ಮಾತನಾಡುವುದಕ್ಕೆ ಆಗಲಿಲ್ಲ. ತಂಗಿಯಿಂದಾನು ಮಾತನಾಡದೇ ಓಡಿ ಹೋಗಿ ತಬ್ಬಿಕೊಂಡರು. ಕಣ್ಣೀರು ಹಾಕಿ ಮನಸ್ಸಿನ ಭಾರವನ್ನ ಹೊರಗೆ ಹಾಕಿದರು. ಅವರ ಮನಸ್ಸಿನ ನೋವು ಎಷ್ಟಿತ್ತು ಅಂತ ಅರ್ಥ ಮಾಡಿಕೊಳ್ಳಲು ಅದೊಂದು ಅಪ್ಪುಗೆ ಸಾಕ್ಷಿ.

More from Filmibeat

English summary
Zee kannada DKD latest episode. Here is the details about Tearful story of DKD contestant Sanjana;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X