DKD: ಅಪ್ಪನಿಲ್ಲದ ದುಃಖ.. ಅಮ್ಮನ ಕಷ್ಟ ನೋಡಲು ಭಯ; 2 ವರ್ಷದ ಬಳಿಕ ಊರಿಗೆ ಹೊಂಟ ಶಶಾಂಕ್!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಡಿಕೆಡಿ ಡ್ಯಾನ್ಸ್ ಸ್ಪರ್ಧೆ ಈ ಬಾರಿ ವಿಭಿನ್ನವಾಗಿ ಮೂಡಿ ಬರುತ್ತಿದೆ. ಈ ಬಾರಿ ಡ್ಯಾನ್ಸ್ ಗೊತ್ತಿಲ್ಲದವರನ್ನೇ ವೇದಿಕೆಗೆ ಕರೆಸಿ ಹೊಸ ಎಕ್ಸಿಪಿರಿಮೆಂಟ್ ಮಾಡುತ್ತಿದೆ. ಹಾಗಂತ ಬರೀ ಡ್ಯಾನ್ಸ್ ಬರದವರೇ ಇಲ್ಲ. ಅದರಲ್ಲಿ ಡ್ಯಾನ್ಸ್ ಗೊತ್ತಿರುವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಜೋಡಿಯಾಗಿಯೇ ಡ್ಯಾನ್ಸ್ ಮಾಡುತ್ತಿದ್ದಾರೆ. ಅದರಲ್ಲಿ ಶಶಾಂಕ್ ಹಾಗೂ ಕಾವ್ಯ ಜೋಡಿಯಾಗಿದ್ದಾರೆ.

ಶಶಾಂಕ್ ಅಪ್ಪಟ ಗ್ರಾಮೀಣ ಪ್ರತಿಭೆ. ಶಿಡ್ಲಘಟ್ಟದ ಯುವಕ. ಕಾವ್ಯಾ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕೆಂಡಸಂಪಿಗೆಯ ಸುಮನಾ ಆಗಿ ಎಲ್ಲರ ಮನ ಗೆದ್ದಿದ್ದಾರೆ. ಈ ಬಾರಿಯ ಡಿಕೆಡಿಯಲ್ಲಿ ಈ ಇಬ್ಬರು ಜೋಡಿಯಾಗಿ, ಹೆಜ್ಜೆ ಹಾಕುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಆದರೆ ಶಶಾಂಕ್ ಜೀವನ ಚರಿತ್ರೆ ಮನಸ್ಸಿಗೆ ಭಾರ ಎನಿಸಿದೆ.

Zee Kannada DKD Kavya special surprise to her dance partner Shashank

ಕಾವ್ಯಾ-ಶಶಾಂಕ್ ಡ್ಯಾನ್ಸ್ ಸೂಪರ್

ಕಾವ್ಯಾ ಹಾಗೂ ಶಶಾಂಕ್ ಜೋಡಿಯಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ. 'ನಿನ್ನೆ ತನಕ' ಎಂಬ ಹಾಡಿಗೆ ಕುಣಿದಿದ್ದಾರೆ. ಅದರಲ್ಲೂ ಫ್ಲೋರ್ ಮೇಲೆ ನಿಂತು ರಿಸ್ಕಿ ಸ್ಟೆಪ್ ಹಾಕಿದ್ದಾರೆ. ನೋಡುಗರ ಎದೆ ಝಲ್ ಎನ್ನಿಸಬೇಕು ಆ ರೀತಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಡ್ಯಾನ್ಸ್‌ಗೆ ರಕ್ಷಿತಾ, ಶಿವಣ್ಣ, ಚಿನ್ನಿ ಮಾಸ್ಟರ್ ಹೊಗಳಿದ್ದಾರೆ. ಡಿಕೆಡಿಯಲ್ಲಿ ಏನೋ ಸಾಧಿಸುವ ಲಕ್ಷಣ ಕಾಣಿಸುತ್ತಿದೆ ಎಂದೇ ಹಾರೈಸಿದ್ದಾರೆ.

ಶಶಾಂಕ್‌ನ ಊರಿಗೆ ಕರೆದೊಯ್ದ ಕಾವ್ಯಾ

ಡ್ಯಾನ್ಸರ್ ಶಶಾಂಕ್‌ಗೆ ಡ್ಯಾನ್ಸ್ ಎಂದರೆ ಪ್ರೀತಿ. ಗ್ರಾಮೀಣ ಪ್ರದೇಶದ ಈ ಹುಡುಗ ಹೇಗೋ ಡ್ಯಾನ್ಸ್ ಕಲಿತು, ಅದೃಷ್ಟ ಡಿಕೆಡಿಗೆ ಆಯ್ಕೆಯಾಗಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಊರಿಗೆ ಹೋಗಿಲ್ಲ. ಅಮ್ಮ ಒಬ್ಬರೇ ಇರುವುದು. ಅಮ್ಮನ ಮೇಲೆ ಇನ್ನಿಲ್ಲದ ಪ್ರೀತಿ. ಆದರೆ ಊರಿಗೆ ಹೋಗಿ ಅಮ್ಮನನ್ನು ನೋಡುವ ಧೈರ್ಯ ಇರಲಿಲ್ಲ. ಕಾವ್ಯಾ, ಶಶಾಂಕ್‌ನನ್ನು ಊರಿಗೆ ಕರೆದುಕೊಂಡು ಹೊರಟಿದ್ದಾರೆ. ಊರಿಗೆ ಯಾಕೆ ಹೋಗಿಲ್ಲ ಎಂದು ಕೇಳಿದಾಗ ಅಪ್ಪ ತೀರಿಕೊಂಡ ಮೇಲೆ ಅಮ್ಮ ಒಬ್ಬರೇ. ಅವರ ಕಷ್ಟ ನೋಡುವುದಕ್ಕೆ ಭಯ ಎಂದಿದ್ದಾರೆ.‌

Zee Kannada DKD Kavya special surprise to her dance partner Shashank

ತಾಯಿ ಕೆಲಸ ನೋಡಿ ಕಷ್ಟ ತಿಳಿದ ಶಶಾಂಕ್

ಊರಿಗೆ ಹೋಗ್ತಾ ಇದ್ದೀವಿ ಎಂದು ಕಾವ್ಯಾ ಹೇಳಿದಾಗಲೂ ಶಶಾಂಕ್ ನಂಬಿರಲಿಲ್ಲ. ಹೇಯ್ ಸುಮ್ನೆ ಇರಿ ಕಾಮಿಡಿ ಮಾಡಬೇಡಿ ಎಂದೇ ಹೇಳಿದ್ದಾರೆ. ಆದರೆ ಊರು ತಲುಪುತ್ತಿದ್ದಂತೆ ಶಶಾಂಕ್‌ಗೆ ತೋರಿಸಿಕೊಳ್ಳಲಾಗದಷ್ಟು ಸಂತಸವಾಗಿದೆ. ತಾಯಿ ಕೆಲಸ‌ ಮಾಡುತ್ತಿದ್ದ ತೋಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಗ ಹಿಂದೆ ಬಂದು ನಿಂತಿದ್ದನ್ನು ಕಂಡ ತಾಯಿಗೆ ಇನ್ನಿಲ್ಲದ ಖುಷಿ. ನೋಡಿದ ಕೂಡಲೇ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಸನ್ನಿವೇಶ ಕಂಡು ಎಲ್ಲರಿಗೂ ಸಂತಸ ಉಕ್ಕಿ ಬಂದಿದೆ.

ಪಾರ್ಟ್ನರ್‌ಗೆ ಕಾವ್ಯಾ ಸಹಾಯ

ಶಶಾಂಕ್ ತಾಯಿ ಕೆಲಸ ಮಾಡುತ್ತಿದ್ದ ಜಾಗ, ಅವರ ಮನೆ ಎಲ್ಲವನ್ನು ಕಾವ್ಯಾ ನೋಡಿದ್ದಾರೆ. ಪುಟ್ಟ ಮನೆಯಲ್ಲಿ ಎಲ್ಲರೂ ವಾಸ ಮಾಡುತ್ತಾರೆ. ಮಕ್ಕಳಿಗಾಗಿ ತಾಯಿ ಅಷ್ಟು ಕಷ್ಟ ಪಡುತ್ತಿರುವುದು. ಮಕ್ಕಳನ್ನು ಬಿಟ್ಟು ಇರುವುದು ಆ ತಾಯಿಗೂ ಕೂಡ ತುಂಬಾನೇ ಕಷ್ಟ. ಹೀಗಾಗಿ ಕಾವ್ಯಾ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಶಶಾಂಕ್ ತಾಯಿಗೆ ಮೊಬೈಲ್ ಕೊಡಿಸಿ, ಪ್ರತಿದಿನ ವಿಡಿಯೋ ಕಾಲ್ ಮಾಡುವಂತೆ ಸೂಚಿಸಿದ್ದಾರೆ. ಕಾವ್ಯಾ ಗಿಫ್ಟ್‌ಗೆ ಅಮ್ಮ ಮಗ ಖುಷಿಯಾಗಿದ್ದಾರೆ.

More from Filmibeat

English summary
Zee kannada DKD Written Update on August 3rd episode. Here is the details about Kavya gave a gift to her dance partner shashank mom;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X