DKD: ವೇದಿಕೆಯಲ್ಲಿ ದರ್ಶನ್ ಅಂಡ್ ರಕ್ಷಿತಾ: ಮೈಚಳಿ ಬಿಟ್ಟು ಕುಣಿದ ಶ್ರೀವಲ್ಲಿ!
ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಮತ್ತು ರಕ್ಷಿತಾ ಜೋಡಿಯನ್ನು ಇಷ್ಟಪಟ್ಟ ಮನಸ್ಸುಗಳು ಲಕ್ಷಗಟ್ಟಲೆಯೇ ಸರಿ. ಫ್ಯಾನ್ಸ್ ಇಬ್ಬರನ್ನು ಅಣ್ಣ, ಅತ್ತಿಗೆ ಅಂತಾನೇ ಹೇಳುತ್ತಿದ್ದರು. ಆ ಜೋಡಿಯ ಸಿನಿಮಾ ಬರುತ್ತೆ ಅಂದ್ರೆ ಅದು ಸೂಪರ್ ಡೂಪರ್ ಹಿಟ್ ಆಗ್ತಾ ಇತ್ತು.
ದರ್ಶನ್- ರಕ್ಷಿತಾ ಡ್ಯಾನ್ಸ್‌ಗೆ ಫಿದಾ ಆಗದವರಿಲ್ಲ. ಕ'ಲಾಸಿಪಾಳ್ಯ'ದ ಸುಂಟರಗಾಳಿ ಹಾಡು, ಅಯ್ಯ ಸಿನಿಮಾದ 'ತಬಲಾ ತಬಲಾ' ಹಾಡಿಗೆ ರಕ್ಷಿತಾ ಹಾಗೂ ದರ್ಶನ್ ಕುಣಿದಿರುವುದನ್ನು ನೋಡುವುದಕ್ಕೆ ಚೆಂದ.

'ಸುಂಟರಗಾಳಿ'ಯಲ್ಲಿ ಎನರ್ಜಿಯನ್ನೆಲ್ಲಾ ಹಾಕಿ ಕುಣಿದಂತಿದ್ದರೆ ಅ'ಯ್ಯ' ಸಿನಿಮಾದ 'ತಬಲಾ ತಬಲಾ' ಹಾಡು ರೊಮ್ಯಾಂಟಿಕ್ ಆಗಿದೆ. ನೋಡುಗರ ಮನ ಸೆಳೆಯುತ್ತದೆ. ಇದೀಗ ಡಿಕೆಡಿನಲ್ಲೂ ಈ ಸಾಂಗ್ ರೀ ಕ್ರಿಯೇಟ್ ಆಗಿದೆ.
ಡಿಕೆಡಿಯಲ್ಲಿ ಸಾಂಗ್ಸ್ ರೀ-ಕ್ರಿಯೇಟ್
ಜೀ ಕನ್ನಡದ ಡಿಕೆಡಿಯಲ್ಲಿ ಸಾಕಷ್ಟು ವಿಶೇಷತೆಗಳಿರುತ್ತದೆ. ಅದರಲ್ಲೂ ಜನರ ಮನಸ್ಸಲ್ಲಿ ಸದಾ ಕುಣಿಯುವ ಡ್ಯಾನ್ಸ್‌ಗಳನ್ನು ರೀ-ಕ್ರಿಯೇಟ್ ಮಾಡುತ್ತಾರೆ. ಈ ವಾರದ ಎಪಿಸೋಡ್‌ನಲ್ಲಿ ಅದೇ ಹೈಲೇಟ್. ಹಳೆಯ ಹಾಡುಗಳು ಅದರಲ್ಲೂ ಶಿವಣ್ಣ ಹಾಗೂ ರಕ್ಷಿತಾ ಅವರ ಹಾಡುಗಳನ್ನ ವೇದಿಕೆ ಮೇಲೆ ರೀ-ಕ್ರಿಯೇಟ್ ಮಾಡಿದ್ದಾರೆ. ಇದನ್ನು ನೋಡಿ, ಶಿವಣ್ಣ ಹಾಗೂ ರಕ್ಷಿತಾ ಹಳೆಯ ದಿನಗಳಿಗೆ ಹೊರಳಿದ್ದಾರೆ. ಎಲ್ಲರೂ ಈ ಹಾಡನ್ನು ನೋಡಿ ಎಂಜಾಯ್ ಮಾಡಿದ್ದಾರೆ.
ಶ್ರೀವಲ್ಲಿ- ನಿತಿನ್ ಮಸ್ತ್ ಡ್ಯಾನ್ಸ್
'ಅಯ್ಯ' ಚಿತ್ರ ಈಗ ನೋಡಿದರೂ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿ ದರ್ಶನ್‌ಗೆ ಜೋಡಿಯಾಗಿ ರಕ್ಷಿತಾ ಅವರು ಕಾಣಿಸಿಕೊಂಡಿದ್ದರು. ರಕ್ಷಿತಾ ಹಾಗೂ ದರ್ಶನ್ ಜೋಡಿ ಅಂದ್ರೆ ಕೇಳಬೇಕಾ. ಅಲ್ಲೊಂದು ಮರೆಯಾಗದಂತ ಪರ್ಫಾಮೆನ್ಸ್ ಇರಲೇಬೇಕು. ಈ ಸಿನಿಮಾದಲ್ಲೂ ಅಂಥದ್ದೊಂದು ಪರ್ಫಾಮೆನ್ಸ್ ಇತ್ತು. 'ತಬಲಾ ತಬಲಾ ತಬಲಾ ತಬ್ಬುಕೋ ಬಾರೇ ತಬಲ' ಹಾಡು ಎವರ್ ಗ್ರೀನ್. ಆದರೆ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್‌ಗೆ ಕರೆದೊಯ್ಯುವ ಹಾಡಿದು. ಈಗ ಡಿಕೆಡಿ ವೇದಿಕೆಯಲ್ಲಿ ಅಂದಿನ ದರ್ಶನ್ ಹಾಗೂ ರಕ್ಷಿತಾ ಅವರನ್ನೇ ನೆನಪಿಸಿದ್ದಾರೆ.
ಮೈ ಚಳಿ ಬಿಟ್ಟು ಕುಣಿದ ಶ್ರೀವಲ್ಲಿ
'ಅಯ್ಯ' ಸಿನಿಮಾದಲ್ಲಿ ರಿಯಲ್ ಹಾಡು ರೊಮ್ಯಾಂಟಿಕ್ ಆಗಿಯೇ ಇದೆ. ಈಗ ವೇದಿಕೆ ಮೇಲೆ ಶ್ರೀವಲ್ಲಿ ಕೂಡ ನೋಡಿದವರು ನಾಚುವಂತೆ ಕುಣಿದಿದ್ದಾರೆ. ರಕ್ಷಿತಾಗೆ ಆ ಡ್ಯಾನ್ಸ್ ಶಾಕ್ ನೀಡಿದೆ. ಪರ್ಫಾಮೆನ್ಸ್ ಮುಗಿದ ಮೇಲೆ ಶ್ರೀವಲ್ಲಿಯನ್ನು ಹಾಡಿ ಹೊಗಳಿದ್ದಾರೆ. ಮೈಚಳಿ ಬಿಟ್ಟು ಕುಣಿದಿದ್ದೀಯಾ. ನಿಜಕ್ಕೂ ಖುಷಿಯಾಯ್ತು ಎಂದಿದ್ದಾರೆ. ಆದರೆ ಪರ್ಫಾಮೆನ್ಸ್ ನೋಡುವಾಗ ರಕ್ಷಿತಾ ಮಾತ್ರ ನಾಚಿ ನೀರಾಗಿದ್ದಾರೆ. ಅಂದು 'ಅಯ್ಯ' ಸಿನಿಮಾದಲ್ಲಿ ರಕ್ಷಿತಾ ಅವರು ಕೊಟ್ಟಂತೆಯೇ ಎಕ್ಸ್‌ಪ್ರೆಷನ್ಸ್ ಕೂಡ ಶ್ರೀವಲ್ಲಿ ಕೊಟ್ಟಿದ್ದಾರೆ.
ನಾಚಿ ನೀರಾದ ರಕ್ಷಿತಾ
ಯಾವಾಗ ಸ್ಟೇಜ್ ಮೇಲೆ 'ತಬಲಾ ತಬಲಾ' ಹಾಡು ಬಂತೋ ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಫುಲ್ ರೇಗಿಸಿದ್ದಾರೆ. ಓ ಎಂದು ಚೀರಿದ್ದಾರೆ. ಪರ್ಫಾಮೆನ್ಸ್ ಮುಗಿದ ಮೇಲೆ ಶ್ರೀವಲ್ಲಿ ಲಿಪ್ ಲಾಕ್ ಮಾಡಿಕೊಂಡಿದ್ದನ್ನು ನೋಡಿ 'ಓ ಮೈ ಗಾಡ್ ಓ ಮೈ ಗಾಡ್' ಎಂದೇ ರಕ್ಷಿತಾ ಶಾಕ್ ಆಗಿದ್ದಾರೆ. ಬಳಿಕ ವೇದಿಕೆ ಮುಂಭಾಗಕ್ಕೆ ಹೋಗಿ ಶ್ರೀವಲ್ಲಿಯನ್ನು ತಬ್ಬಿ, ತನಗಾದ ಖುಷಿಯನ್ನು ತೋರಿಸಿದ್ದಾರೆ.


Click it and Unblock the Notifications











