DKD: ಡಿಕೆಡಿಯಲ್ಲೂ ಜಗದೀಶ್ ಹವಾ.. ಲಾಯರ್ ಕುಣಿತಕ್ಕೆ ಟಿಆರ್‌ಪಿ ಪಟಾಕಿ!

By ಎಸ್ ಸುಮಂತ್

ಸೋಶಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ, ಪ್ರಭಾವಿಗಳ ವಿಚಾರದಲ್ಲಿ ಲಾಯರ್ ಜಗದೀಶ್ ಅಬ್ಬರ ಎಬ್ಬಿಸುತ್ತಾ ಇದ್ದರು. ಈ ಮೂಲಕವೇ ಖ್ಯಾತಿಯನ್ನು ಪಡೆದಿದ್ದರು. ಇದೇ ಖ್ಯಾತಿಯಿಂದಾನೇ ಲಾಯರ್ ಜಗದೀಶ್ ಬಿಗ್ ಬಾಸ್‌ ಶೋಗೂ ಹೋಗಿದ್ದರು.

ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನವೇ ದರ್ಶನ್ ವಿಚಾರದಲ್ಲಿ ಆಡಿದ್ದಂತ ಪಾಸಿಟಿವ್ ಮಾತುಗಳು, ಕೊಲೆ ಮಾಡಿದ್ದು ಇನ್ಯಾರೋ ಎಂದು ಹೇಳಿದ್ದ ಮಾತುಗಳಿಂದ ದರ್ಶನ್ ಅಭಿಮಾನಿಗಳೆಲ್ಲ ಜಗದೀಶ್ ಅವರಿಗೆ ಸಪೋರ್ಟ್ ಮಾಡುವುದಕ್ಕೆ ಶುರು ಮಾಡಿದ್ದರು.

Zee kannada DKD tops the trp chrat because of bigg boss fame lawyer Jagadish

ಅಣ್ಣ ನೀವಿಂಗೆ ಬಿಗ್ ಬಾಸ್ ಮನೆಯಲ್ಲಿ ಹೋಗಿ ಕೂತು ಬಿಟ್ರೆ ನಮ್ಮ ಬಾಸ್‌ನ ಬಿಡಿಸುವವರು ಯಾರು ಎಂಬಷ್ಟು ಆಳವಾಗಿ ಅಭಿಮಾನಿಗಳ ಅವರನ್ನು ನಂಬಿ ಬಿಟ್ಟಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಜಗದೀಶ್ ಅವರಿಗೂ ಹಾಗೂ ದರ್ಶನ್ ಅಭಿಮಾನಿಗಳಿಗೂ ಕೊಂಚ ಮನಸ್ತಾಪ ಉಂಟಾಗಿದೆ. ಅದನ್ನ ಸೈಡಿಗಿಡೋಣ. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೂ ಜಗದೀಶ್ ಹವಾ ಮಾತ್ರ ಕಡಿಮೆಯಾಗಿಲ್ಲ. ಅದಕ್ಕೆ ಈ ಟಿಆರ್‌ಪಿಯೇ ಉದಾಹರಣೆ.

ಡಿಕೆಡಿ ವೇದಿಕೆಗೆ ಜಗ್ಗು ಬಾಯ್

ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಲಾಯರ್ ಜಗದೀಶ್ ಡಿಕೆಡಿ ವೇದಿಕೆಗೆ ಬಂದಿದ್ದರು. ಮೊದಲೇ ಹಾಸ್ಯ ಪ್ರತಿಭೆಯನ್ನು ತಮ್ಮೊಳಗೆ ಇರಿಸಿಕೊಂಡಿರುವ ಜಗದೀಶ್, ಡಿಕೆಡಿ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹಾಕದೆ ಸುಮ್ಮನಿರುತ್ತಾರೆಯೇ. ಅಲ್ಲಿಯೂ ಎಲ್ಲರನ್ನು ನಕ್ಕು ನಲಿಸಿದ್ದರು.

ದಾಸನಂತೆ ಬಂದಿದ್ದ ಜಗ್ಗು

ಜಗದೀಶ್ ತಮ್ಮ ಲಾಯರ್ ಕೋಟ್ ಬಿಟ್ಟು, ದಾಸನಂತೆ ಡ್ರೆಸ್ ಹಾಕಿಕೊಂಡು ಬಂದಿದ್ದರು. ದರ್ಶನ್ ತಮ್ಮ ಸಿನಿಮಾದಲ್ಲಿ ರೆಡ್ ಕಲರ್ ಆಫ್ ಸ್ಲೀವ್ ಶರ್ಟ್ ಹಾಕಿಕೊಂಡು, ರೌಡಿ ಬಿಲ್ಡಪ್ ಕೊಟ್ಟ ರೀತಿಯೇ ಜಗದೀಶ್ ಅಂದು ಡಿಕೆಡಿ ವೇದಿಕೆಯಲ್ಲಿ ಬಿಲ್ಡಪ್ ಕೊಟ್ಟರು. ದಾಸನ ಅವತಾರದಲ್ಲಿ ಸಖತ್ತಾಗಿ ಹೆಜ್ಜೆ ಹಾಕಿದ್ದರು.

ಕಡಿಮೆಯಾಗಿಲ್ಲ ಕ್ರೇಜ್

ಲಾಯರ್ ಜಗದೀಶ್ ಅವರಿಗೆ ಬಿಗ್ ಬಾಸ್ ಹೋಗುವುದಕ್ಕೂ ಮುನ್ನ ಒಂದಷ್ಟು ಫ್ಯಾನ್ ಫಾಲೋವರ್ಸ್ ಹೊಂದಿದ್ದರು. ಆದರೆ ಬಿಗ್ ಬಾಸ್ ಮನೆಗೆ ಹೋದ ಮೇಲೆ, ಮನೆಯಲ್ಲಿ ಅವರು ಇರುತ್ತಿದ್ದ ರೀತಿಗೆ ಕರ್ನಾಟಕವೇ ಫಿದಾ ಆಗಿತ್ತು. ಗಲಾಟೆ ಮಾಡಿಕೊಂಡು ಹೊರಗೆ ಬಂದ ಮೇಲೆ ಜಗದೀಶ್ ಅವರಿಲ್ಲದ ಬಿಗ್ ಬಾಸ್ ನೋಡಲ್ಲ ಎಂದೇ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಾದ ಮಾಡೋಕೆ ಶುರು ಮಾಡಿದರು. ಅವರಿಲ್ಲದೆ ಬಿಗ್ ಬಾಸ್ ಬಿಕೋ ಎನ್ನುತ್ತಿದೆ ಎಂದರು. ಹೊರಗೆ ಬಂದ ಮೇಲಂತು ಲಾಯರ್ ಜಗದೀಶ್ ಕ್ರೇಜ್ ಮತ್ತಷ್ಟು ಜಾಸ್ತಿಯಾಗಿತ್ತು.

ಜಗ್ಗು ಬಂದಿದ್ದಾಗ TRP ಸೂಪರ್

ಜಗದೀಶ್ ಭಾಗವಹಿಸಿದ್ದ ಡಿಕೆಡಿ ಶೋನ TRP ಬಂದಿದೆ. ಇದರಲ್ಲಿ ಹೈಯೆಸ್ಟ್ TRP ಬಂದಿದ್ದು, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ. ಟ್ರೋಲರ್ಸ್‌ಗೂ ಇದು ಹಬ್ಬವಾಗಿದೆ. ಒಳ್ಳೊಳ್ಳೆ ಹಾಡು ಹಾಕಿ, ಟಿಆರ್ಪಿ ರೇಟಿಂಗ್ ಶೇರ್ ಮಾಡಿಕೊಂಡಿದ್ದಾರೆ. ಟ್ರೋಲರ್ಸ್ ಪೇಜ್‌ನಲ್ಲಿ ಹಾಕಿರುವ ಫೋಟೋಗೆ ಸಾಕಷ್ಟು ಕಮೆಂಟ್ ಬಂದಿವೆ. ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದರೆ ಇನ್ನು ಚೆಂದ ಎನ್ನುತ್ತಿದ್ದಾರೆ.

More from Filmibeat

English summary
Zee kannada DKD Written Update on lawyer Jagadish special. Here is the details about Lawyer Jagdish became TRP king;
Read more about: tv serial filmbeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X