DKD: ಆರ್ಯವರ್ಧನ್‌ಗೆ ರಾತ್ರಿ ಕಾದಿದೆ ಮಾರಿ ಹಬ್ಬ; ಶಿವಣ್ಣ ಹೀಗಂದಿದ್ಯಾಕೆ?

By ಎಸ್ ಸುಮಂತ್

ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮ ಈ ಬಾರಿಯ ಸೀಸನ್ ಮಸ್ತ್ ಮನರಂಜನೆ ಕೊಡುತ್ತಿದೆ. ಇವ್ರಿಂದಾನೂ ಡ್ಯಾನ್ಸ್ ಮಾಡಿಸುವುದಕ್ಕೆ ಸಾಧ್ಯನಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತ ಸೀಸನ್ ಇದಾಗಿದೆ. ಪ್ರಿಯಾ, ಗಗನಾ, ಆರ್ಯವರ್ಧನ್ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು. ನಾನು ಹೇಳ್ತೀನಿ ಅಂತ ಆಗುತ್ತೋ.. ಅದಾಗುತ್ತೆ ಅಂತೆ ನಾನು ಹೇಳ್ತೀನೋ.. ದೇವರಿಗೆ ಗೊತ್ತು ಎಂಬ ಡೈಲಾಗ್ ಮೂಲಕವೇ ಫೇಮಸ್ ಆಗಿದ್ದಾರೆ. ಸಂಖ್ಯಾಶಾಸ್ತ್ರದ ಮೂಲಕ ಆಗಾಗ ಭವಿಷ್ಯವನ್ನ ಹೇಳ್ತಾ ಇರ್ತಾರೆ. ಅದರಲ್ಲೂ ಕ್ರಿಕೆಟ್ ಭವಿಷ್ಯ ಹೇಳಿನೇ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಕಾಲಿಗೆ ಕೋಲು ಕಟ್ಟಿಕೊಂಡು ಹೆಜ್ಜೆ ಹಾಕಿದ್ದಾರೆ.

Zee kannada DKD Written Update on August 25th episode

ಆರ್ಯವರ್ಧನ್ ಮಸ್ತ್ ಡ್ಯಾನ್ಸ್

ಡಿಕೆಡಿ ಕಾರ್ಯಕ್ರಮಕ್ಕೆ ಆರಂಭದಲ್ಲಿ ಆರ್ಯವರ್ಧನ್ ಬಂದಾಗ ಇವರಿಂದ ಅದೇಗೆ ಡ್ಯಾನ್ಸ್ ಮಾಡಿಸ್ತಾರೆ ಅಂತಾನೇ ಅನುಮಾನ. ಆದರೆ ದಿನ ಕಳೆದಂತೆ ಆರ್ಯವರ್ಧನ್ ಡ್ಯಾನ್ಸ್‌ಗೆ ಮಹಿಳೆಯರೇ ನಾಚಿ ನೀರಾಗುವಂತೆ ಮಾಡಿದ್ದಾರೆ. ಡಿಕೆಡಿಯಲ್ಲಿ ಆರ್ಯವರ್ಧನ್ ಗೆ ಸುಚಿತ್ರಾ ಪಾಟ್ನರ್ ಆಗಿದ್ದಾರೆ. ಲೇ ಪಾಡಿ ಲೇ ಪಾಡಿ ಎಂಬ ಕಾಡಿನ ಜನರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದರ ಸ್ಟೆಪ್ಸ್ ಎಷ್ಟು ಕಷ್ಟ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಂತ ಕಷ್ಟಕರ ಸ್ಟೆಪ್ಸ್ ಅನ್ನೇ ಆರ್ಯವರ್ಧನ್ ಹಾಕಿದ್ದಾರೆ.

ಕಾಲಿಗೆ ಕೋಲು ಕಟ್ಟಿಕೊಂಡು ಡ್ಯಾನ್ಸ್

ಡ್ಯಾನ್ಸ್ ಮಾಡುವುದನ್ನು ಹೇಗೋ ಮಾಡಬಹುದು. ಆದರೆ ಕಾಲಿಗೆ ಸ್ಟಿಕ್ ಕಟ್ಟಿಕೊಂಡು ಮಾಡುವುದು ಅಷ್ಟು ಸುಲಭವಲ್ಲ. ಅದನ್ನ ಆರ್ಯವರ್ಧನ್ ಮಾಡಿದ್ದಾರೆ ಎಂದರೆ ಅದು ಗ್ರೇಟ್. ಎರಡು ಕಾಲುಗಳನ್ನು ಎರಡು ಕೋಲಿನ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ಡ್ಯಾನ್ಸ್ ಮಾಡಬೇಕೆಂದರೆ ಅದಕ್ಕೆ ಅಂತ ಹಲವು ವರ್ಷಗಳ ತಯಾರಿ ಬೇಕು. ಅದರಲ್ಲೂ ಆರ್ಯವರ್ಧನ್ ದೇಹ ಕೂಡ ತೂಕವಿದೆ. ಹೀಗಿದ್ದರು ಆರ್ಯವರ್ಧನ್ ಕೋಲಿನ ಮೇಲೆ ಸ್ಟೆಪ್ಸ್ ಹಾಕಿದ್ದು ತೀರ್ಪುಗಾರರಿಗೆ ಶಾಕ್ ಆಗಿದೆ. ಚಿನ್ನಿ‌ಪ್ರಕಾಶ್ ಹೊಗಳಿದ್ದಾರೆ.

Zee kannada DKD Written Update on August 25th episode

ಮನೆಗೋಗು ಇದೆ ಮಾರಿ ಹಬ್ಬ

ಆರ್ಯವರ್ಧನ್ ಅವರ ಡ್ಯಾನ್ಸ್ ನೋಡಿ ಅನುಶ್ರೀ ಅವರು ಹೇಗಿತ್ತು ಪರ್ಫಾಮೆನ್ಸ್ ಎಂದು ಕೇಳಿದಾಗ, ಡ್ಯಾನ್ಸ್ ನೋಡಿದ ಯುವತಿ ಸಕಲಕಲಾವಲ್ಲಭ ಎಂದು ಹೇಳಿದ್ದಾರೆ. ಅವರೊಟ್ಟಿಗೆ ಆರ್ಯವರ್ಧನ್ ಒಂದು ಸ್ಟೆಪ್ ಹಾಕಿದ್ದು, ಅವರನ್ನೇ ಎತ್ತಿಕೊಂಡು ತಿರುಗಿಸಿದ್ದಾರೆ. ಇದನ್ನು ನೋಡಿದ ಶಿವಣ್ಣ, ಆರ್ಯವರ್ಧನ್ ಅವರಿಗೆ ರಾತ್ರಿ ಮನೆಗೆ ಹೋದ ಮೇಲೆ ಇದೆ ಮಾರಿ ಹಬ್ಬ ಎಂದು ಹೆದರಿಸಿದ್ದಾರೆ.

ಕೊಡ್ರೋ ಕೊಡ್ರೋ ಲೈಕ್ ಕೊಡ್ರೋ

ಆರ್ಯವರ್ಧನ್ ಅವರಲ್ಲಿ ಸಾಕಷ್ಟು ಬದಲಾವಣೆ ಇದೆ. ಬಿಗ್ ಬಾಸ್‌ನಲ್ಲಿ ಏನೇನೋ ಮಾತನಾಡುತ್ತಿದ್ದರು. ಈಗ ಮೆಚ್ಯುರಿಟಿ ಮ್ಯಾನ್ ಆಗಿದ್ದಾರೆ. ಒಳ್ಳೆ ಮನರಂಜನೆಯನ್ನು ಕೊಡುತ್ತಾರೆ. ಅವರ ಸಂಖ್ಯಾಶಾಸ್ತ್ರ ಕೇಳಿದವರು ಆರ್ಯವರ್ಧನ್ ಬದಲಾವಣೆ ಕಂಡು ಶಾಕ್ ಆಗಿದ್ದಾರೆ. ಜಿಂಗಲಕಲಕಲಕ ಎಂಬ ಆರ್ಯವರ್ಧನ್ ಅವರದ್ದೇ ಡೈಲಾಗ್ ಅನ್ನು ಕಮೆಂಟ್ ಮೂಲಕ ಹಾಕಿ ಸಪೋರ್ಟ್ ಮಾಡುತ್ತಿದ್ದಾರೆ. ಆರ್ಯವರ್ಧನ್ ಡ್ಯಾನ್ಸ್ ಮಹಿಳಾ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾರ್ಟ್ ಸಿಂಬಲ್ ಕೂಡ ಹಾಕಿ ಜೈ ಅನ್ರೋ ಅಂತಿದ್ದಾರೆ.

More from Filmibeat

English summary
Zee kannada DKD Written Update on August 25th episode. Here is the details about ShivaRajkumar warns Aryavardhan;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X