DKD : ಹೆಣ್ಣು ಮಕ್ಕಳಿಗಲ್ಲ, ಗಂಡು ಮಕ್ಕಳಿಗೆ ಕಲಿಸಬೇಕು ಬುದ್ದಿ; ಮನಮುಟ್ಟುವ ಸಂದೇಶ ನೀಡಿದ ಜೀ..!
ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಅತ್ಯಾಚಾರಿಗಳ ಮೃಗೀಯ ವರ್ತನೆಗೆ ಎಲ್ಲರಿಂದಲೂ ಖಂಡನೆ ಇದ್ದೇ ಇದೆ. ಆದರೆ ಅತ್ಯಾಚಾರಿಗಳಿಗಂತು ಭಯವೂ ಇಲ್ಲ, ಮನುಷ್ಯತ್ವ ಇಲ್ಲ. ಕಠಿಣ ಕಾನೂನು ತಂದರೆ ಅತ್ಯಾಚಾರಿಗಳಿಗೆ ಭಯ ಬರಬಹುದು ಎಂದೇ ಎಲ್ಲರ ಅಭಿಪ್ರಾಯ. ಶಿಕ್ಷೆಗಾದರೂ ಭಯ ಪಡುತ್ತಾರೆ ಎಂಬುದು. ಹೀಗಾಗಿ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತಾರೆ.
ಜೀ ಕನ್ನಡದಲ್ಲಿ ಡಿಕೆಡಿ ಕಾರ್ಯಕ್ರಮ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿರುವವರನ್ನು ಡಿಕೆಡಿ ವೇದಿಕೆಗೆ ಕರೆತಂದಿದ್ದಾರೆ. ಅವರಿಂದಾನೇ ಡ್ಯಾನ್ಸ್ ಮಾಡಿಸುತ್ತಿದ್ದಾರೆ. ಇವರಿಂದಾನೂ ಡ್ಯಾನ್ಸ್ ಮಾಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಶಶಿ ಮಾಡುವ ಡ್ಯಾನ್ಸ್ ಎಲ್ಲರನ್ನು ಮನಮುಟ್ಟುವಂತೆ ಇರುತ್ತದೆ. ಈ ವಾರ ಅತ್ಯಾಚಾರಿಗಳ ಬಗ್ಗೆ ಡ್ಯಾನ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ನಟನೆ ಕಂಡು ಮನಸ್ಸಲ್ಲಿ ಆತಂಕ
ಪರ್ಫಾಮೆನ್ಸ್ ಶುರುವಾಗುವಾಗಲೇ ಕತ್ತಲೆಯಲ್ಲಿ ತಂದೆಯ ವೇಷದಲ್ಲಿ ನಿಂತ ಜೀವನ್, 'ನನ್ನ ಮಗಳು ಅತ್ಯಾಚಾರದ ನ್ಯೂಸ್ ಕಂಡರೆ ಅಪ್ಪ ಎಂದು ಬೆಚ್ಚಿ ಬೀಳುತ್ತಿದ್ದಳು. ಡಾಕ್ಟರ್ ಆಗಿ ಸಮಾಜ ಸೇವೆ ಮಾಡುತ್ತಿದ್ದಳು. ಆದರೆ ಈ ಕ್ರೂರ ಕಾಮುಕರಿಂದ ತನ್ನನ್ನು ಉಳಿಸಿಕೊಳ್ಳಲು ಆಗದೆ ಇಂದು ಈ ಬಟ್ಟೆಯೊಳಗಡೆ ಇರೋ ಅಸ್ತಿಯಾಗಿದ್ದಾಳೆ' ಎಂದು ಆ ಅಸ್ತಿಯ ಬಟ್ಟೆ ತೆಗೆದಿದ್ದಾರೆ ಜೀವ. ಆ ಆಸ್ತಿಯನ್ನು ನೆಲದ ಕೆಳಗಡೆ ಇಟ್ಟಿದ್ದಾನೆ. ಇದನ್ನು ನೋಡಿದವರ ಮನಸ್ಸು ಒಂದು ಕ್ಷಣ ಕೊಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರವನ್ನು ಕಣ್ಣ ಮುಂದೆ ತಂದು ಬಿಡುತ್ತದೆ.
ಅತ್ಯಾಚಾರಿಗಳ ವಿರುದ್ಧ ಆಕ್ರೋಶ
ಸಂಜನಾ ಮತ್ತು ಜೀವ ಈ ಪರ್ಫಾಮೆನ್ಸ್ ಮಾಡಿದ್ದಾರೆ. ಅಸ್ತಿಯನ್ನು ತೆರೆದ ಕೂಡಲೆ ಆತ್ಮ ಕಾಣಿಸಿಕೊಳ್ಳುತ್ತದೆ. ಇಬ್ಬರು 'ಕರುಮದ ಕಲ್ಲನು' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನ ಸಾರ, ಹಾಕಿದ ಹೆಜ್ಜೆಗಳು ಅತ್ಯಾಚಾರಿಗಳ ಕ್ರೂರತೆಯನ್ನು ತೋರಿಸಿದೆ. ಸಂಜನಾ ಪರ್ಫಾಮೆನ್ಸ್ ನಡುವೆ, ಯಾರು ಹೇಳುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಬದುಕುವುದು ಸುಲಭ ಅಂತ. ನನ್ನಂತೆ ಅನ್ಯಾಯಕ್ಕೊಳಗಾದ ಎಷ್ಟೋ ಹೆಣ್ಣು ಮಕ್ಕಳಿಗೆ ನ್ಯಾಯವೇ ಸಿಗದೆ, ಹೀಗೆ ಬೂದಿಯಾಗಿ ಹೋಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಜೀವ-ಸಂಜನಾ ಪರ್ಫಾಮೆನ್ಸ್ ಗೆ ಮೆಚ್ಚುಗೆ
ಇಬ್ಬರ ಪರ್ಫಾಮೆನ್ಸ್ ಕಂಡು ತೀರ್ಪುಗಾರರು ಮೌನಕ್ಕೆ ಜಾರುವಂತಾಯಿತು. ಸ್ಟ್ರಾಂಗ್ ಆದ ಕಾನ್ಸೆಪ್ಟ್ ತೆಗೆದುಕೊಂಡಾಗಲೇ ಗೆದ್ದು ಬಿಟ್ರು. ಇದು ತುಂಬಾ ಹೊಸದು ನನಗೆ ಎಂದು ರಕ್ಷಿತಾ ಅವರು ಹೇಳಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲೂ ಈ ಪರ್ಫಾಮೆನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಣ್ಣಿಗಲ್ಲ.. ಗಂಡು ಮಕ್ಕಳಿಗೆ ಹೇಳಬೇಕು ಬುದ್ದಿ
ಪರ್ಫಾಮೆನ್ಸ್ ಕೊನೆಯಲ್ಲಿ ಜೀವನ್, ಸಾಕಾಯ್ತು ಮಗಳನ್ನು ಓದಿಸಿ,ಮಗಳನ್ನು ಉಳಿಸಿ ಎಂಬ ಕೂಗು. ಈಗ ಮಗನಿಗೆ ಕಲಿಸಿ, ಮಗನಿಗೆ ತಿಳಿಸಿ ಎಂಬ ಕೂಗು ಶುರುವಾಗಲಿ' ಎಂಬ ಸಂದೇಶ ಸಾರಿದ್ದಾರೆ. ಇದಕ್ಕೆ ವಿಜಯ್ ರಾಘವೇಂದ್ರ ಅವರು ಮಾತನಾಡಿ, ಬಹಳ ಒಳ್ಳೆಯ ಕಾನ್ಸೆಪ್ಟ್. ಈ ವಿಚಾರ ನಮ್ಮ ಪ್ರೇಕ್ಷಕರ ಮನಸ್ಸುಗಳಿಗೆ ತಟ್ಟಬೇಕು ಅಂತ ನಾನು ಹೇಳ್ತೀನಿ. ಹೆಣ್ಣುಮಕ್ಕಳನ್ನ ಆ ಥರ ಇರಿ ಈ ಥರ ಇರಿ ಎಂದು ಹೇಳುವುದಕ್ಕಿಂತ ಗಂಡು ಮಕ್ಕಳಿಗೆ ಬುದ್ದಿ ಹೇಳಬೇಕು. ನಾರ್ತ್ ಇಂಡಿಯಾದಲ್ಲಿ ಈ ಥರ ಆಯ್ತು.. ಕರ್ನಾಟಕದಲ್ಲಿ ಈ ಥರ ಆಯ್ತು ಅಂತ ಕೇಳುವುದಕ್ಕೇನೆ ಅಸಹ್ಯ ಎಂದಿದ್ದಾರೆ.


Click it and Unblock the Notifications











