ಶಿವಣ್ಣನ ಜೊತೆ ಹೆಜ್ಜೆ ಹಾಕಿದ ಜೂಲಿ ಲಕ್ಷ್ಮೀ!

By ಪೂರ್ವ

ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಮಹಾಸಂಗಮ ಬಹಳ ಚೆನ್ನಾಗಿ ಮೂಡಿ ಬಂದಿದೆ. ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರನ್ನು ಒಂದೇ ವೇದಿಕೆಯಲ್ಲಿ ನೋಡಿ ಬಹಳ ಖುಷಿಪಟ್ಟಿದ್ದಾರೆ ಅಭಿಮಾನಿಗಳು. ಶಿವಣ್ಣ ಸಹ ಈ ಕಾರ್ಯಕ್ರಮವನ್ನು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.

''ಶಿವರಾಜ್ ಕುಮಾರ್ ನಡೆ ನುಡಿ ಬಹಳ ಸರಳ, ಡಾ. ರಾಜ್ ಕುಮಾರ್‌ರವರು ಹೇಗೆ ಅವರ ಮಗನಾಗಿ ಶಿವಣ್ಣ ಹೇಗೆ ಇರಬಹುದಿತ್ತು, ಆದರೆ ಅದ್ಯಾವುದರ ಪರಿವೇ ಇಲ್ಲದೇ, ಸರಳವಾಗಿ ಎಲ್ಲರಂತೆ, ಎಲ್ಲರ ಜೊತೆಗೆ ಬೆರೆಯುತ್ತಾರೆ, ಇದಕ್ಕಿಂತ ಖುಷಿಯ ವಿಚಾರ ಇನ್ನೇನಿದೆ. ಇದುವೇ ನಮ್ಮ ನಿಮ್ಮೆಲ್ಲರ ಭಾಗ್ಯ'' ಎಂದು ರವಿಚಂದ್ರನ್ ಅವರು ಶಿವಣ್ಣ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಇನ್ನೂ ವೇದಿಕೆಯಲ್ಲಿ ಡ್ಯಾನ್ಸ್ ಮೂಲಕ ಲಕ್ಷ್ಮೀ ಅಮ್ಮನವರ ಸಿನಿ ಜೀವನ ಚರಿತ್ರೆಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ತೋರಿಸಿದರು ಮಕ್ಕಳು. ಇದನ್ನು ಕಂಡ ಲಕ್ಷ್ಮೀ ಅವರು ನಾನು ಈ ರೀತಿಯೆಲ್ಲ ಇದ್ದೇನಾ ಎಂದು ತನ್ನನ್ನ ತಾನೆ ಪ್ರಶ್ನಿಸಿಕೊಂಡರು. ಲಕ್ಷ್ಮೀ ಬದುಕಿನ ಪುಟ ತೆರೆದ ಸಾಕ್ಷ ಹಾಗೂ ಸಹನ ಅವರ ಡಾನ್ಸ್ ಕಾರ್ಯಕ್ರಮವನ್ನು ನೋಡಿದ ಲಕ್ಷ್ಮೀ ಖುಷಿಯಲ್ಲಿ ಇಬ್ಬರಿಗೂ ಬಳೆ ತೊಡಿಸಿದರು.

Zee Kannada Drama Juniors Reality Show June 05 Episode Written Update

ನಗು ಎಲ್ಲಿದೆ ಎಂಬ ಹಾಡಿಗೆ ಶಿವಣ್ಣ-ಲಕ್ಷ್ಮಿ ಇಬ್ಬರು ಡಾನ್ಸ್ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು. ಇನ್ನೂ ರವಿಚಂದ್ರನ್‌ರವರು ಲಕ್ಷ್ಮೀ ಮೇಡಮ್ ಅವರು ಎಲ್ಲರಿಗೂ ಮಾದರಿ ಎಂದು ಹೊಗಳಿದರು. ಜೂಲಿ ಲಕ್ಷ್ಮೀ ಅವರು ಪಂಚ ಭಾಷೆಗಳಲ್ಲಿ ಮಿಂಚಿದ್ದಾರೆ. ಇವರ ಅಭಿನಯಕ್ಕೆ ಯಾರು ಸರಿಸಾಟಿ ಇಲ್ಲ. ಇನ್ನೂ ಭಾರತೀಯ ಚಿತ್ರರಂಗಕ್ಕೆ ಲಕ್ಷ್ಮೀ ಅವರ ಕೊಡುಗೆ ಬಹಳ ಅಪಾರವಾದುದು. ಇವರು ಡಾ. ರಾಜ್ ಕುಮಾರ್‌ರವರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಅಪಾರ ಅಭಿಮಾನಿಗಳು ಮಾರು ಹೋಗಿದ್ದು ಇದೀಗ ಕನ್ನಡ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ನೋಡುತ್ತಿರುವುದೇ ಅಭಿಮಾನಿಗಳಿಗೆ ಸಿಕ್ಕ ಉಡುಗೊರೆ ಎಂದರೆ ತಪ್ಪಾಗದು ಜೂಲಿ ಲಕ್ಷ್ಮೀ ಅವರು ಮುಂಚೆ ಚಿತ್ರರಂಗದಲ್ಲಿ ಬಹಳ ಸೌಂದರ್ಯವಾಗಿದ್ದರೋ ಆ ಸೌಂದರ್ಯ ಇಂದಿಗೂ ಕೂಡ ಸ್ವಲ್ಪವೂ ಮಾಸಿಲ್ಲ ಎಂದು ಹೊಗಳಿದರು.

More from Filmibeat

English summary
Zee Kannada Drama Juniors Reality Show June 05 Episode Written Update. Senior actress Lakshmi danced with Shiva Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X