Drama Juniors 4: ಡ್ರಾಮಾ ಜ್ಯೂನಿಯರ್ ಸೀಸನ್ 4ನಲ್ಲಿ ಚಿಣ್ಣರ ಆರ್ಭಟ ಆರಂಭ
ಅದೆಷ್ಟೋ ಪ್ರತಿಭೆಗಳು ಬೆಳೆಯುತ್ತಿರುವಾಗಲೆ ಕಮರಿ ಹೋಗುತ್ತವೆ. ಡ್ರಾಮಾ ಜ್ಯೂನಿಯರ್‌ನಂತಹ ಅದ್ಭುತ ವೇದಿಕೆ ಇಂತಹ ಪ್ರತಿಭಾನ್ವಿತ ಮಕ್ಕಳಿಗೆ ಕಲ್ಪಿಸಿಕೊಟ್ಟಾಗ ಆ ಮಕ್ಕಳಲ್ಲಿ ಧನ್ಯತಾ ಭಾವ ಮೂಡುವುದಂತು ಅಕ್ಷರಶಃ ಸತ್ಯ. ವೇದಿಕೆಯಲ್ಲಿ ಜಡ್ಜ್ ಮುಂದೆ ನಿಂತು ಡ್ರಾಮಾ ಮಾಡುವುದು ಸುಲಭದ ಮಾತಲ್ಲ. ಅದೆಷ್ಟೋ ಭಾರಿ ರಾತ್ರಿ ಹಗಲೆನ್ನದೆ ಅಭಿನಯವನ್ನು ಕಲಿತು, ಅಭ್ಯಾಸ ಮಾಡಿ ವೇದಿಕೆಯಲ್ಲಿ ಎಲ್ಲರ ಮುಂದೆ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ.
ಕರ್ನಾಟಕದಾದ್ಯಂತ 30 ಜಿಲ್ಲೆಗಳಿಂದ ಪ್ರತಿಭಾವಂತ ಮಕ್ಕಳನ್ನು ಹುಡುಕಿ, 'ಡ್ರಾಮಾ ಜ್ಯೂನಿಯರ್ಸ್' ವೇದಿಕೆಗೆ ಕರೆತರಲಾಗಿದೆ. ಮಕ್ಕಳು ತಮ್ಮ ತುಂಟ ಮಾತುಗಳಿಂದ, ತುಂಟಾಟಗಳಿಂದ ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮನರಂಜಿಸಲಿದ್ದಾರೆ. ಹಾಗಾಗಿ ಇದೊಂದು ಭಿನ್ನ ಕಾರ್ಯಕ್ರಮ ಅನಿಸಿಕೊಂಡಿದೆ.
ಈ ಬಾರಿಯ ಡ್ರಾಮ ಜೂನಿಯರ್ಸ್ ವೇದಿಕೆ ಹೇಗಿದೆ?
ಡ್ರಾಮ ಜ್ಯೂನಿಯರ್ಸ್ ಭಾಗವಹಿಸಿರುವ ಬಹುತೇಕ ಮಕ್ಕಳು ಈಗಾಗಲೇ ಕನ್ನಡ ಚಿತ್ರ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಡ್ರಾಮ ಜೂನಿಯರ್ ಸೀಸನ್ 4 ಕಾರ್ಯಕ್ರಮದಲ್ಲಿ ಎಂದಿನಂತೆ ತ್ರಿವಳಿ ತೀರ್ಪುಗಾರರಾದ ಹಿರಿಯ ನಟಿ ಲಕ್ಷ್ಮೀ, ಕ್ರೇಜಿಸ್ಟಾರ್ ರವಿಚಂದ್ರನ್, ಡಿಂಪಲ್ ಕ್ವೀನ್ ರಚಿತಾರಾಮ್ ಇರುತ್ತಾರೆ. ನಿರೂಪಕ ಮಾಸ್ಟರ್ ಆನಂದ್ ಹಾಸ್ಯ ಚಟಾಕಿ ಕೂಡ ಇನ್ನೂ ಈ ಸೀಸನ್‌ನಲ್ಲೂ ಮುಂದುವರಿದೆ.
ಡ್ರಾಮ ಜೂನಿಯರ್ಸ್ ಮೆಗಾ ಆಡಿಷನ್ ಶನಿವಾರ - ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಹಳ್ಳಿಯ ಅದ್ಭುತ ಪ್ರತಿಭೆಗಳ ಅನಾವರಣ ಆಗಲಿದೆ. ಈಗಾಗಲೇ ಜೀ ಕನ್ನಡ ಪ್ರಸಾರ ಮಾಡಿದ ಪ್ರೋಮೊಗಳು ಬೇಜಾನ್ ಮೋಡಿ ಮಾಡಿದೆ. ಇಂದಿನಿಂದ (ಮಾರ್ಚ್ 19) ಪ್ರಸಾರಾಗುತ್ತಿರುವ ಡ್ರಾಮ ಜೂನಿಯರ್ಸ್ ಮೆಗಾ ಆಡಿಷನ್ ಎಪಿಸೋಡ್‌ಗಳು ಪ್ರತಿಭಾವಂತ ಚಿಣ್ಣರನ್ನು ಪರಿಚಯ ಮಾಡಿಕೊಡಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್
ಕ್ರೇಜಿ ಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್ ಆಗಿದ್ದಾರೆ ಅಂತ ಕಳೆದ ವಾರವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ಬ್ರೇಕಿಂಗ್ ನ್ಯೂಸ್ ಆಗಿತ್ತು. ನಟ ರವಿಚಂದ್ರನ್‌ರನ್ನು ಕಿಡ್ನ್ಯಾಪ್ ಮಾಡಿರುವುದು ಬೇರೆ ಯಾರೂ ಅಲ್ಲ. ಡ್ರಾಮ ಜೂನಿಯರ್ಸ್‌ನ ಪುಟಾಣಿ ಪಂಟರ್‌ಗಳು. ರವಿಚಂದ್ರನ್ ಅಪಹರಣ ಮಾಡಿ 'ಡ್ರಾಮಾ ಜ್ಯೂನಿಯರ್ಸ್-4' ಕಾರ್ಯಕ್ರಮಕ್ಕೆ ಜಡ್ಜ್ ಆಗುವಂತೆ ಪುಟಾಣಿಗಳು ಬೇಡಿಕೆ ಇಟ್ಟಿದ್ದರು. ಅದರಂತೆ ಕನಸುಗಾರ ರವಿಚಂದ್ರನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟು, ಡ್ರಾಮ ಜೂನಿಯರ್ಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಸತ್ಯಹರಿಶ್ಚಂದ್ರನ ಸ್ಕಿಟ್ ಮಾಡಿ ಜಡ್ಜ್ಸ್ ಮನಗೆದ್ದು, ಅದ್ಭುತ ನಟಿಯಾಗುವ ಸೂಚನೆ ಕೊಟ್ಟ ಶಿರಸಿಯ ಖುಷಿ ಆನಂದ ಗೌಳಿ. ಹಾಗೆಯೇ ಹೊಡೆಯೋರ ಮುಂದೆ ತೊಡೆ ತಟ್ಟೋಕೆ ರೆಡಿಯಾದ ರಾಯಚೂರಿನ 'ಕುಳ್ಳ ಸಿಂಗಂ'. ಉತ್ತರ ಕರ್ನಾಟಕದ ಗಂಡು ದೊಡ್ಡಾಟವನ್ನು ಡ್ರಾಮಾ ವೇದಿಕೆಗೆ ತಂದ ಹುಬ್ಬಳ್ಳಿ ಹುಡ್ಗ ಸಿದ್ಧಾರ್ಥ್ ಗೌಡ ಪಾಟೀಲ್. ಹೀಗೆ ಪ್ರತಿಭಾವಂತ ಮಕ್ಕಳ ಅಭಿನಯದ ಮೂಲಕ ಈ ವಾರದಿಂದ ಗಮನ ಕಿರುತೆರೆ ವೀಕ್ಷಕರ ಗಮನ ಸೆಳೆಯಲಿದ್ದಾರೆ.


Click it and Unblock the Notifications











