ಗಟ್ಟಿಮೇಳ ಸೀರಿಯಲ್‌ನಲ್ಲಿ ವೇದಾಂತ್ ಕಾಣದೆ ಬೇಸರಗೊಂಡ ಅಭಿಮಾನಿಗಳು, ಅಷ್ಟಕ್ಕೂ ವೇದಾಂತ್ ಎಲ್ಲಿ..?

By Poorva

ಗಟ್ಟಿಮೇಳ ಧಾರಾವಾಹಿಯ ವೇದಾಂತ್ ವಶಿಷ್ಠ ಇದೀಗ ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯ ಮಾಡಿ ಎಲ್ಲರ ಮನಗೆದ್ದಿದ್ದ ರಕ್ಷ್ ಮಾತ್ರ ಎಲ್ಲೂ ಕಾಣಿಸದಿರುವುದು ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ. ಇನ್ನು ಜೀ ಕುಟುಂಬ ಅವಾರ್ಡ್​ನಲ್ಲಿಯೂ ಅವರು ಬರದೇ ಇದ್ದುದು ಎಲ್ಲರಿಗೂ ಬೇಸರ ತರಿಸಿತು.

ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಗಟ್ಟಿಮೇಳದ ಅಮೂಲ್ಯ ಮತ್ತು ವೇದಾಂತ್​ ಜೋಡಿಗೆ ಬೆಸ್ಟ್​ ಜೋಡಿ ಅವಾರ್ಡ್​ ಸಿಕ್ಕಿದೆ. ಆದರೆ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಇಬ್ಬರ ಪರವಾಗಿ ಕೇವಲ ನಿಶಾ ರವಿಕೃಷ್ಣನ್​ ಅವರು ಪ್ರಶಸ್ತಿ ಸ್ವೀಕರಿಸಿದರು. ನನ್ನ ಪೇರ್​ ಈ ಕ್ಷಣದಲ್ಲಿ ಇಲ್ಲ, ಆದ್ದರಿಂದ ನಾನೊಬ್ಬಳೇ ಅವಾರ್ಡ್​ ಸ್ವೀಕರಿಸುತ್ತಿರುವುದಾಗಿ ಅವರು ಈ ವೇಳೆ ಹೇಳಿಕೊಂಡು ಇದ್ದರೂ.. ಇನ್ನೂ ಇದಕ್ಕೆ ಕಾರಣ ಕೂಡ ಇದೆ. ರಕ್ಷ್‌ ಅವರು ರಕ್ಷ್​ ರಾಮ್‌ ಎಂದು ಹೆಸರು ಬದಲಿಸಿಕೊಂಡು ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ

zee-kannada-gattimela-serial

ಹೌದು ಇವರು ಬರ್ಮ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಎಂಟ್ರಿ ನೀಡಿದ್ದಾರೆ. ಇದೀಗ ಇವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ಬರ್ಮ. ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡು ಇದ್ದಾರೆ.. ಕಮರ್ಷಿಯಲ್‌ ನಿರ್ದೇಶಕರಾಗಿರುವ ಚೇತನ್‌ ಕುಮಾರ್‌ ಬರ್ಮ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿನಿಮಾದಲ್ಲಿ ಬ್ಯುಸಿ ಆದ ರಕ್ಷ್

ಇದರ ಶೂಟಿಂಗ್​ ಕಾರಣದಿಂದ ಸೀರಿಯಲ್​ ಮತ್ತು ಅವಾರ್ಡ್​ ಫಂಕ್ಷನ್​ಗೆ ಬರಲಿಲ್ಲ ಎನ್ನಲಾಗುತ್ತಿದೆ. ಗಟ್ಟಿಮೇಳ ಧಾರವಾಹಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು ವೇದಾಂತ್ ಪಾತ್ರ ಇಲ್ಲದೆ ಕೊಂಚ ಬಿಕೋ ಎನ್ನುತ್ತಿದೆ . ಇದೀಗ ಅದೆಲ್ಲವನ್ನೂ, ಅಮೂಲ್ಯ, ವೈದೇಹಿ , ಸುಹಾಸಿನಿ, ದ್ರುವ ಕವರ್ ಮಾಡಿಕೊಂಡು ಹೋಗುತ್ತಿದ್ದಾರೆ. ಇವರ ಅಭಿನಯಕ್ಕೆ ಮಾರು ಹೋಗದವರೆ ಇಲ್ಲ.. ಅಗ್ನಿ ಕೂಡಾ ಬಹಳ ಅದ್ಭುತವಾಗಿ ನಟನೆ ಮಾಡಿ ಅಭಿಮಾನಿಗಳಿಗೆ ರಸದೌತಣ ಬಡಿಸಿದ್ದಾರೆ..

zee-kannada-gattimela-serial

ಸುಹಾಸಿನಿ ಭಯದಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳು

ಇನ್ನೂ ತನ್ನದೇ ಮನೆಯಲ್ಲಿ ನಾಲ್ಕು ಮಕ್ಕಳ ತಾಯಿ ವೈದೇಹಿ ಕೆಲಸದವಳ ರೀತಿ ಇದ್ದಾಳೆ. ಆಕೆಗೆ ನಿಜ ಹೇಳಿದರೆ ಎಲ್ಲಿ ತನ್ನ ಮಕ್ಕಳಿಗೆ ಸುಹಾಸಿನಿ ಏನಾದರು ಮಾಡಿ ಬಿಡುತ್ತಾಳೋ ಎನ್ನುವ ಭಯ ಆಕೆಯನ್ನು ಬಹಳ ಕಾಡುತ್ತಿದೆ. ಅದಕ್ಕಾಗಿ ಆಕೆ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನು ವೈದೇಹಿ ಕಳೆದು ಹೋದ ಆಕೆಯ ಗಂಡನ ಹುಡುಕಾಟದಲ್ಲಿ ಇದ್ದಾಳೆ.

ಎಲ್ಲಾ ಆಸ್ತಿ ಸುಹಾಸಿನಿ ಪಾಲಾಗುತ್ತಾ ?

ಅಗ್ನಿಯನ್ನು ಕೊಳೆ ಮಾಡಿದ ಸುಹಾಸಿನಿ ಇದೀಗ ವೇದಾಂತ್ ನ ಎಲ್ಲ ಆಸ್ತಿಯನ್ನು ಸುಹಾಸಿನಿ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾಳೆ. ಅಮೂಲ್ಯ ಕೂಡ ಎಲ್ಲಾ ಆಸ್ತಿಯನ್ನು ಅವರಿಗೆ ಬರೆಯುವ ವೇದಾಂತ್ ನಿರ್ಧಾರವನ್ನು ಮನೆಯಲ್ಲಿ ತಿಳಿಸಿದ್ದಾಳೆ.

More from Filmibeat

English summary
Gattimela serial actor vedanth vashishta missing!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X