Gattimela Swathi: ಕಿರುತೆರೆಗೆ ಕಾಲಿಡಲು ಸ್ವಾತಿ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ?
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಹಲವರು ಇಂದು ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಚಂದನ್ ಕುಮಾರ್, ಕಾವ್ಯ ಗೌಡ, ಕೋಳಿ ರಮ್ಯಾ, ನಯನಾ ಮುಂತಾದವರ ಬಣ್ಣದ ಬದುಕಿಗೆ ಮುನ್ನುಡಿ ಬರೆದಿದ್ದೇ ರಿಯಾಲಿಟಿ ಶೋ. ಸ್ವಾತಿ ಕೂಡಾ ಇದಕ್ಕೆ ಹೊರತಾಗಿಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಅಮ್ಮ ಸುಹಾಸಿನಿ ಆಗಿ ನಟಿಸುತ್ತಿರುವ ಸ್ವಾತಿ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟವರು.
ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ ಧಾರಾವಾಹಿಯಲ್ಲಿ ಊರ್ಮಿಳಾ ಆಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿದ ಸ್ವಾತಿ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ಮಂಡೋದರಿಯಾಗಿ ಕಾಣಿಸಿಕೊಂಡ ಸ್ವಾತಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ವಿಲನ್ ಲುಕ್ ಕೊಟ್ಟಿದ್ದ ಸ್ವಾತಿ
'ಪುಟ್ಟ ಗೌರಿ' ಮದುವೆಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವ ಮಂಗಳ ಮಾಂಗಲ್ಯೇ'ಯಲ್ಲಿ ಖಳನಾಯಕಿಯಾಗಿ ಮಿಂಚಿದರು. 'ಸರ್ವ ಮಂಗಳ ಮಾಂಗಲ್ಯೇ'ಯಲ್ಲಿ ನಾಯಕ ಶಂಕರನ ಚಿಕ್ಕಮ್ಮ ಭೈರವಿಯಾಗಿ ಅಭಿನಯಿಸಿ ಮೋಡಿ ಮಾಡಿದ್ದ ಸ್ವಾತಿ ಮುಂದೆ ನಟಿಸಿದ್ದು 'ರಂಗನಾಯಕಿ'ಯಲ್ಲಿ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ಅಮ್ಮ ಆಗಿ ನಟಿಸಿರುವ ಸ್ವಾತಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಆದರೆ ಮುಂದೆ ಅನಾರೋಗ್ಯ ಸಮಸ್ಯೆ ಕಾಡಿದ್ದರಿಂದ ನಟನೆಗೆ ಬಾಯ್ ಹೇಳಿದ ಸ್ವಾತಿ ಸಣ್ಣ ಬ್ರೇಕ್‌ನ ನಂತರ ಮರಳಿದ್ದು 'ಗಟ್ಟಿಮೇಳ'ದ ಮೂಲಕ.

ಸ್ವಾತಿಗೆ 'ಗಟ್ಟಿಮೇಳ'ದಲ್ಲಿ ಅವಕಾಶ ಸಿಕ್ಕಿದ್ದೇಗೆ?
'ಗಟ್ಟಿಮೇಳ' ಧಾರಾವಾಹಿಯಲ್ಲಿ ಸುಹಾಸಿನಿ ಆಗಿ ನಟಿಸುತ್ತಿದ್ದ ಅರ್ಚನಾ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು. ಆ ಸಮಯದಲ್ಲಿ ಸ್ವಾತಿಗೆ ಸುಹಾಸಿನಿ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ಅಸ್ತು ಎಂದು ಬಿಟ್ಟರು. ಅನಾರೋಗ್ಯದ ನಿಮಿತ್ತವಾಗಿ ನಟನಾ ಕ್ಷೇತ್ರದಿಂದ ಸಣ್ಣ ಬ್ರೇಕ್ ಪಡೆದಿರುವ ಸ್ವಾತಿ ಜನಪ್ರಿಯ ಧಾರಾವಾಹಿಯ ಮೂಲಕ ಕಂ ಬ್ಯಾಕ್ ಆದರು. 'ಗಟ್ಟಿಮೇಳ' ಧಾರಾವಾಹಿಯ ಸುಹಾಸಿನಿ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು ಸ್ವಾತಿ. ಸ್ವಾತಿಗೆ ಸುಹಾಸಿನಿ ಪಾತ್ರಕ್ಕೆ ಜೀವ ತುಂಬುವ ಅವಕಾಶ ದೊರೆತಾಗ ಖುಷಿಯ ಜೊತೆಗೆ ಭಯವೂ ಆಗಿತ್ತಂತೆ. ಅದಕ್ಕೆ ಕಾರಣವೂ ಇತ್ತು. ಈಗಾಗಲೇ ಒಬ್ಬರು ನಟಿಸಿರುವಂತಹ ಪಾತ್ರಕ್ಕೆ ಜೀವ ತುಂಬುವುದು ನಿಜವಾಗಿಯೂ ತುಂಬಾ ಚಾಲೆಂಜಿಂಗ್. ಸುಹಾಸಿನಿಯಾಗಿ ಅಭಿನಯಿಸುತ್ತಿದ್ದ ಅರ್ಚನಾ ಧಾರಾವಾಹಿಯಿಂದ ಹೊರಬಂದಾಗ ಇವರಿಗೆ ಸುಹಾಸಿನಿ ಆಗಿ ನಟಿಸುವ ಅವಕಾಶ ದೊರಕಿತು.

ಸ್ವಾತಿಗೆ ಸುಹಾಸಿನಿ ಪಾತ್ರ ಭಯ ತಂದಿತ್ತು
ಪಾತ್ರ ಒಂದೇ, ಆದರೆ ವ್ಯಕ್ತಿ ಬೇರೆ. ಇದು ನಿಜವಾಗಿಯೂ ತುಂಬಾ ಸವಾಲಿನದು ಹೌದು. ಜನ ಈಗಾಗಲೇ ಸುಹಾಸಿನಿ ಆಗಿ ಅರ್ಚನಾರನ್ನು ಸ್ವೀಕರಿಸಿ ಬಿಟ್ಟಿದ್ದರು. ಇದೀಗ ಅವರ ಜಾಗಕ್ಕೆ ನಾನು ಬಂದಿದ್ದೇನೆ. ಜನ ನನ್ನನ್ನು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆದರೆ ಜನರು ನನ್ನನ್ನು ಮೆಚ್ಚಿಕೊಂಡಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿ? ಎನ್ನುತ್ತಿದ್ದರು ಸ್ವಾತಿ. ಕೆಲ ತಿಂಗಳುಗಳ ಹಿಂದೆ 'ಗಟ್ಟಿಮೇಳ' ಧಾರಾವಾಹಿಯಿಂದ ನಟಿ ಸ್ವಾತಿ ಹೊರಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತಪಡಿಸಿದ್ದರು. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸ್ವಾತಿ, ಸುಹಾಸಿನಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು.

ವಿಡಿಯೋ ರಿಲೀಸ್ ಮಾಡಿದ್ದ ನಟಿ
"ಒಂದು ಆರಂಭ ಇದ್ದಾಗ, ಕೊನೆ ಇರಲೇಬೇಕು. ನಿಜ, ನಾನು 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾನು ಇರೋದಿಲ್ಲ. ನಾನು ನಿಜಕ್ಕೂ ಈ ಧಾರಾವಾಹಿಯನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅನಿವಾರ್ಯ ಕಾರಣದಿಂದ 'ಗಟ್ಟಿಮೇಳ' ಧಾರಾವಾಹಿಯಿಂದ ಹೊರಬರಬೇಕಾಗಿ ಬಂತು. ನಾನು ಸುಹಾಸಿನಿ ಪಾತ್ರ ಮಾಡದೇ ಇರದಿದ್ದರೂ ಕೂಡ ನಾನು ಸ್ವಾತಿಯಾಗಿ 'ಗಟ್ಟಿಮೇಳ' ತಂಡದ ಜೊತೆ ಇರುವೆ. ಇಡೀ 'ಗಟ್ಟಿಮೇಳ' ತಂಡವನ್ನು ಮಿಸ್ ಮಾಡಿಕೊಳ್ತೀನಿ" ಎಂದು ನಟಿ ಸ್ವಾತಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು.


Click it and Unblock the Notifications











