For Quick Alerts
  ALLOW NOTIFICATIONS  
  For Daily Alerts

  ಆರತಿ ಮಗುವಿಗಾಗಿ ಮಂಡಿಸೇವೆಗೆ ಮುಂದಾದ ಅಮ್ಮು: ಸುಹಾಸಿನಿ ಕುತಂತ್ರಕ್ಕೆ ಮಗು ಬಲಿಯಾಗುತ್ತಾ?

  By ಪೂರ್ವ
  |

  'ಗಟ್ಟಿಮೇಳ' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ವೇದಾಂತ್ ವಸಿಷ್ಠ ಕೋಪ, ಪ್ರೀತಿ ಹಾಗೆಯೇ ಅಮೂಲ್ಯ ತುಂಟಾಟ ಹೀಗೆ ಇದೆಲ್ಲವೂ ವೀಕ್ಷಕರಿಗೆ ಇಷ್ಟವಾಗಿದೆ. ಈಗ ಆರತಿ ಪ್ರೆಗ್ನೆಂಟ್ ಈ ವಿಚಾರ ಗೊತ್ತಾಗುತ್ತಿದ್ದಂತೆ ಅಮೂಲ್ಯಾಗೆ ಖುಷಿಯಲ್ಲಿ ಕೈ ಕಾಲೇ ಆಡುತ್ತಿಲ್ಲ. ಆದರೆ ಆರತಿಗೆ ಅತ್ತೆ ಸುಹಾಸಿನಿ ಇಲ್ಲದ್ದನ್ನೆಲ್ಲ ಹೇಳಿ ತಲೆಕೆಡಿಸಿದ್ದಾಳೆ. ಈ ವಿಚಾರ ಅಮೂಲ್ಯಾಗೆ ಗೊತ್ತಾಗಿದೆ. ಅದೆಷ್ಟೋ ಬಾರಿ ಸುಹಾಸಿನಿಗೆ ವಾರ್ನಿಂಗ್ ಕೂಡ ಮಾಡಿದ್ದಾಳೆ.

  ಇದೀಗ ಸುಹಾಸಿನಿಗೆ ಆರತಿ ಮೇಲೆಯೇ ಕಣ್ಣು, ''ಯಾರು ಈ ಮನೆಯಲ್ಲಿ ಬಸುರು ಆಗಾಂಗಿಲ್ಲ, ಯಾರನ್ನು ಆಗಕ್ಕೂ ಬಿಡಲ್ಲ, ಆರತಿಗೆ ಮಗುವಾದರೆ ಆಸ್ತಿಯೆಲ್ಲ ವೇದಾಂತ್ ವಿಕ್ಕಿ ಮಗುವಿಗೆ ಬರೆಯುವ ಸಾಧ್ಯತೆ ಕೂಡ ಇದೆ, ಸ್ವಲ್ಪ ದಿನ ಆರತಿಗೆ ಆದ್ಯಾಗೆ ಹೇಗೆ ಆಯ್ತು ಹಾಗೆ ಮಾಡುತ್ತೀನಿ'' ಎಂದು ಮನದಲ್ಲಿಯೇ ಹೇಳಿಕೊಳ್ಳುತ್ತಿರುತ್ತಾರೆ. ಆದ್ಯಾನ ಮಗುವನ್ನು ಕೂಡ ಸುಹಾಸಿನಿಯೇ ಕೊಂದಿರುವುದು ಎಂದು ಇದರಿಂದ ಸ್ಪಷ್ಟವಾಗುತ್ತಿದೆ.

  Recommended Video

  'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ ಹೊಸ ಸಿನಿಮಾ ಹೇಗಿರುತ್ತೆ? | #meghashetty

  ಆಫೀಸಿಗೆ ಹೋಗುವಂತೆ ಅಮೂಲ್ಯಾಗೆ ಎಲ್ಲರೂ ಹೇಳುತ್ತಿದ್ದಾರೆ. ವೇದಾಂತ್‌ ಒಬ್ಬನಿಗೆ ಆಫೀಸ್ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಈ ಕಾರಣ ಕಾಂತನಿಗೆ ವಿಪರೀತ ಕೆಲಸ ನೀಡುತ್ತಿದ್ದ. ಇದರಿಂದ ಹತಾಶನಾದ ಕಾಂತ ವಿಕ್ಕಿಗೆ ಕಾಲ್ ಮಾಡಿ ಹೇಳುತ್ತಾನೆ. ಬಳಿಕ ಈ ಬಗ್ಗೆ ವೇದಾಂತ್ ಬಳಿ ವಿಕ್ಕಿ ಮಾತನಾಡುತ್ತಾನೆ. ಬಳಿಕ ಅಮೂಲ್ಯಾಳ ಬಳಿ ಹೇಳಿದಾಗ ಅಮೂಲ್ಯ ಇದು ಇಷ್ಟವಾಗುವುದಿಲ್ಲ. ಮನೆಯಲ್ಲಿ ಎಲ್ಲರೂ ಒತ್ತಾಯಕ್ಕೆ ಎಲ್ಲರಿಗೂ ಇಲ್ಲ ನಾನು ಹೋಗಲ್ಲ ಎಂದಿದ್ದಕ್ಕೆ ಆರತಿ ಹೇಳುತ್ತಾಳೆ ನಾನೇ ಹೋಗು ಅಂದ್ರೆ ಹೋಗುತ್ತಿಯ ಎಂದು ಹೇಳಿದಾಗ ಬೇರೆ ವಿಚಾರ ಗೊತ್ತಾಗದೇ ಏನು ಮಾಡಬೇಕೆಂದು ಅರಿಯದೇ ಸುಮ್ಮನಾಗುತ್ತಾಳೆ. ಸರಿ ಹೋಗುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಎಲ್ಲರಿಗೂ ಸ್ವಲ್ಪ ನಿರಾಳತೆಯ ಭಾವ ಮೂಡುತ್ತದೇ, ಆದರೆ ಸುಹಾಸಿನಿ ಮಾತ್ರ ಗರ್ಭದಲ್ಲಿರುವ ಮಗುವನ್ನು ಹೇಗೆ ಗರ್ಭಪಾತ ಮಾಡಿಸುವುದು ಎಂದು ಯೋಚಿಸುತ್ತಿದ್ದಾಳೆ.

  ಇತ್ತ ರಾತ್ರಿ ವೇಳೆ ಅಮೂಲ್ಯಾಳ ಅಮ್ಮನಿಗೆ ಕೆಟ್ಟ ಕನಸು ಬೀಳುತ್ತದೆ. ಆರತಿ ಮಗುವಿಗೆ ಅಪಾಯ ಆದ ಹಾಗೆ ಕೂಡಲೇ ನಿದ್ದೆಯಿಂದ ಎಚ್ಚೆತ್ತ ಅಮೂಲ್ಯ ತಾಯಿ ಆರತಿಗೆ ಫೋನ್ ಮಾಡುವಂತೆ ಮಕ್ಕಳ ಬಳಿ ಹೇಳುತ್ತಾರೆ, ಕೆಟ್ಟ ಕನಸು ಬೀಳುತ್ತಿದೆ, ಎಂದೆಲ್ಲ ಹೇಳುತ್ತಾಳೆ, ಅದಕ್ಕೆ ಅಂಜಲಿ ಹೇಳುತ್ತಾಳೆ ಅಮ್ಮ ನಾಳೆ ಫೋನ್ ಮಾಡೋಣ ಏನು ಟೆನ್ಷನ್ ಮಾಡಬೇಡ ಎಂದು ಸಮಾಧಾನ ಮಾಡಿ ಮಲಗುತ್ತಾರೆ. ಬಳಿಕ ಮರುದಿವಸ ದೇವಸ್ಥಾನಕ್ಕೆ ತೆರಳಿದ ಅಮೂಲ್ಯ ತಾಯಿ ಮಂಡಿಸೇವೆಗೆಂದು ಮುಂದಾಗುತ್ತಾರೆ ಈ ವೇಳೆ ಅಲ್ಲಿಗೆ ಅಮೂಲ್ಯ ಆಗಮಿಸಿ ನಿನ್ನಿಂದ ಇದು ಸಾಧ್ಯವಿಲ್ಲ ಎಂದು ಹೇಳಿ ಅಮೂಲ್ಯನೇ ಮಂಡಿ ಸೇವೆ ಮಾಡುತ್ತಾಳೆ.

  English summary
  Kannada serial Gattimela written updates on 31th May and serial actor Raksh is famous actor in Kannada industry. Hear is more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X