Gattimela: ಮನೆ ಮಂದಿಗೆ ಸಂತಸ ತಂದ ಧ್ರುವನ ಆಗಮನ, ಸುಹಾಸಿನಿ ಮಣಿಸಲು ಪ್ಲಾನ್ ಮಾಡುತ್ತಿರುವ ಅಮ್ಮ-ಮಗ
ಗಟ್ಟಿಮೇಳ ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗುತ್ತಿದೆ. ಈಗ ಸುಹಾಸಿನಿಯನ್ನ ಎದುರಿಸಲು ಧ್ರುವ ಸಂಪೂರ್ಣ ಗುಣಮುಖನಾಗಿ ಬಂದಿದ್ದಾನೆ. ಸುಹಾಸಿನಿ ಈಗ ಅಂಡು ಸುಟ್ಟ ಬೆಕ್ಕಿನ ಪರಿಸ್ಥಿತಿಗೆ ತಲುಪಿದ್ದಾಳೆ. ಯಾಕೆಂದರೆ ಧ್ರುವನಿಗೆ ವೈದೇಹಿ ತನ್ನ ಅಮ್ಮ ಎಂಬುದು ಗೊತ್ತಿದೆ. ಇದಕ್ಕಾಗಿ ಅವನು ಏನು ಬೇಕಾದರೂ ಮಾಡುತ್ತಾನೆ ಎಂಬುದು ಸಹ ಸುಹಾಸಿನಿಗೆ ತಿಳಿದಿದೆ. ಈಗಾಗಲೇ ಧ್ರುವ ವಾರ್ನಿಂಗ್ ಮಾಡಿದ್ದು ಸುಹಾಸಿನಿ ಜಾಗವನ್ನ ಖಾಲಿ ಮಾಡಿದ್ದಾಳೆ. ಸದ್ಯಕ್ಕೆ ಧ್ರುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಅಮ್ಮನ ಜೊತೆ ಚರ್ಚೆಯನ್ನು ಮಾಡುತ್ತಾ ಇದ್ದಾನೆ.
ಪರಿಮಳ ಮನೆಯಲ್ಲಿ ಸಂಕಷ್ಟಗಳ ಸರಮಾಲೆ ತುಂಬಿದೆ. ಮಂಜುನಾಥ್‌ರವರ ಆಟೋಗೆ ಲಾರಿ ಡಿಕ್ಕಿ ಹೊಡೆದು ಆಟೋ ಗ್ಯಾರೇಜಿನಲ್ಲಿ ಇದೆ. ಮಂಜುನಾಥ್ ಎಲ್ಲರ ಬಳಿ ಹಣವನ್ನ ಕೇಳಿ ಸುಸ್ತಾಗಿದ್ದಾರೆ. ಯಾಕೆ ಸುಳ್ಳು ಹೇಳುತ್ತಿದ್ದೀರಾ ಎಂದು ಪರಿಮಳ ಮಂಜುನಾಥ್ ಅವರ ಬಳಿ ಕೇಳಿದ್ದಾರೆ. ಪರಿಮಳ ತಮ್ಮ ಗಂಡನಿಗೆ ಧೈರ್ಯವನ್ನ ಹೇಳಿದ್ದಾರೆ. ನಿಮ್ಮ ಹೆಂಡತಿ ಎಂದು ಮನೆಯಲ್ಲಿ ನಾನಿದ್ದೇನೆ ಏನೇ ಕಷ್ಟ ಬಂದರೂ ಸಹ ನನ್ನ ಬಳಿ ನೀವು ಹೇಳಬೇಕು ಸುಮ್ಮನೆ ಗಂಡ ಹೆಂಡತಿಯ ಸಂಬಂಧ ಇಲ್ಲ ಎಂದು ಮಂಜುನಾಥ್‌ಗೆ ಪರಿಮಳ ತಿಳಿಸಿದ್ದಾರೆ.

ಕೊನೆಗೆ ತಮ್ಮ ಗಂಡನಿಗೆ ಆಟೋ ರಿಪೇರಿಗಾಗಿ ಪರಿಮಳ ಚೀಟಿ ಹಣವನ್ನ ಕೊಟ್ಟಿದ್ದಾರೆ. ಮಂಜುನಾಥ್ ಪರಿಮಳಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಪರಿಮಳ ಗಂಡ ಹೆಂಡತಿಯ ಸಂಬಂಧ ಎಂತಹದ್ದು ಎಂದು ಮಂಜುನಾಥ್‌ಗೆ ಹೇಳಿದ್ದಾರೆ. ಸಪ್ತಪದಿ ತುಳಿಯುವಾಗ ಗಂಡ ಹೆಂಡತಿ ಇಬ್ಬರೂ ಪ್ರಮಾಣ ಮಾಡಿರುತ್ತಾರೆ. ಯಾವುದೇ ಸಮಸ್ಯೆ ಬಂದರೂ ಸಹ ಇಬ್ಬರು ಸಮಪಾಲು ತೆಗೆದುಕೊಂಡು ಹೋಗುವುದಾಗಿ. ನೀವು ನೋಡಿದರೆ ನನ್ನ ಬಳಿ ಏನನ್ನು ಹೇಳಿಕೊಳ್ಳದೆ ಒದ್ದಾಡುತ್ತಾ ಇದ್ದೀರಾ ಎಂದು ಬುದ್ದಿ ಮಾತು ಹೇಳಿದ್ದಾರೆ.
ಸತ್ಯ ಹೇಳಿ ಬಿಡೋಣ ಎಂತ ಧ್ರುವ, ತಾಳ್ಮೆಯಿಂದ ಇರು ಎಂದ ವೈದೇಹಿ
ವೈದೇಹಿಯ ಬಳಿ ಬಂದ ಧ್ರುವ ಅಮ್ಮ ನಾವು ಇನ್ನು ಕಾಯೋದು ಬೇಡ ಸತ್ಯವನ್ನ ಹೇಳಿ ಬಿಡೋಣ ಎಂದು ಕೇಳುತ್ತಾ ಇದ್ದಾನೆ. ಇದಕ್ಕೆ ವೈದೇಹಿ ಬೇಡ ಅವಳು ಪ್ರತಿ ಸಲ ಏನಾದರೂ ಒಂದು ಮಾಡಿ ನಮ್ಮನ್ನೆಲ್ಲಾ ದಿಕ್ಕು ತಪ್ಪಿಸುತ್ತಿದ್ದಾಳೆ. ಈ ಬಾರಿ ನಾವಿಬ್ಬರು ಒಳ್ಳೆಯ ಪ್ಲಾನ್ ಮಾಡಿ ನಂತರ ಸತ್ಯವನ್ನ ಹೇಳೋಣ ಎಂದು ಮಗನ ಬಳಿ ಹೇಳುತ್ತಾ ಇದ್ದಾರೆ. ಮೊದಲು ಮನೆಗೆ ವೇದಾಂತ್ ಬರಲಿ ಸೂರ್ಯನಾರಾಯಣರು ಈಕೆಯ ಕಪಿಮುಷ್ಠಿಯಲ್ಲಿ ಇದ್ದಾರೆ. ಮೊದಲು ನನ್ನ ಸೂರಿ ಸಿಕ್ಕ ಬಳಿಕ ಇವಳಿಗೆ ಒಂದು ಗತಿ ಕಾಣಿಸೋಣ ಎಂದು ವೈದೇಹಿ ಹೇಳಿದ್ದಾರೆ.
ಧ್ರುವ ಕೋಪದಲ್ಲಿ ಇದ್ದಾನೆ. ನನಗೆ ಆಕ್ಸಿಡೆಂಟ್ ಮಾಡಿಸಿದ್ದು ಈಕೆಯೇ ನನ್ನ ಅಣ್ಣನಿಗೂ ಸಹ ಸಾವನ್ನ ತಂದಳು ಇವಳನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾನೆ. ವೈದೇಹಿ ವಿಕ್ಕಿ ಸತ್ತಿಲ್ಲ ಎಂದು ನನಗೆ ಅನಿಸುತ್ತಿದೆ ಅವನು ಬಂದೆ ಬರುತ್ತಾನೆ ಎಂಬ ನಂಬಿಕೆ ಇದೆ ಎಂದು ಧ್ರುವನ ಬಳಿ ಹೇಳಿದ್ದಾರೆ. ನಾವು ಯಾರು ಸಹ ಡೆಡ್ ಬಾಡಿಯನ್ನ ನೋಡಿಲ್ಲ ವೇದಾಂತ್‌ಗೂ ಸಹ ಡೆಡ್ ಬಾಡಿ ತೋರಿಸಿಲ್ಲ ನನ್ನ ಮಗ ಬದುಕಿರುವ ನಂಬಿಕೆ ನನಗೆ ಇದೇ ಎಂದು ಹೇಳಿದ್ದಾರೆ. ಧ್ರುವ ಸಹ ಅಮ್ಮನ ಮಾತಿಗೆ ಸಹಮತಿ ಕೊಟ್ಟಿದ್ದು ಅಣ್ಣ ಎಲ್ಲಿದ್ದರೂ ಸಹ ಬರಲಿ ಎಂದು ಹೇಳಿದ್ದಾನೆ.

ಧ್ರುವನಿಗೆ ಸರ್ಪ್ರೈಸ್ ಕೊಟ್ಟ ಕುಟುಂಬ, ಮನೆಯಲ್ಲಿ ಸಂತಸದ ವಾತಾವರಣ
ಧ್ರುವ ಸಂಪೂರ್ಣ ಹುಷಾರಾಗಿ ಮನೆಗೆ ಬಂದಿರುವುದಕ್ಕೆ ವಸಿಷ್ಠ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಧ್ರುವನಿಗಾಗಿ ಒಂದು ಸರ್ಪ್ರೈಸ್ ಅನ್ನು ಮನೆ ಮಂದಿ ಕೊಟ್ಟಿದ್ದಾರೆ. ಇನ್ನು ಧ್ರುವನ ಬಳಿ ಈ ರೀತಿ ಹೇಗೆ ಆದೆ ಎಂದು ಕೇಳಿದ್ದಾರೆ. ಇದಕ್ಕೆಲ್ಲ ವೈದೇಹಿ ಅಮ್ಮನೆ ಕಾರಣ ಅವರು ಒಂದು ಆಶ್ರಮಕ್ಕೆ ಸೇರಿಸಿ ನನಗೆ ಮಾತು ಬರುವಂತೆ ಹಾಗೂ ನಡೆದಾಡುವಂತೆ ಮಾಡಿದರು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಮನೆಯವರೆಲ್ಲರೂ ಸಂಭ್ರಮಿಸಿದ್ದಾರೆ.


Click it and Unblock the Notifications











