Gattimela: ಸುಹಾಸಿನಿಗೆ ಶುರುವಾಗಿದೆ ನಡುಕ..! ಅಗ್ನಿ ಮೇಲೆ ಕೈ ಮಾಡಲು ಹೋದ ಸೂರ್ಯನಾರಾಯಣ್!

By Shruthi Harish Gowda

ವಸಿಷ್ಠ ಕುಟುಂಬದಲ್ಲಿ ಈಗ ಖುಷಿ ತುಂಬಿದೆ . ಯಾಕೆಂದರೆ ವಸಿಷ್ಠ ಕುಟುಂಬದ ಕೊನೆಯ ಕುಡಿ ಧ್ರುವ ವಸಿಷ್ಠ ಈಗ ಚೇತರಿಸಿಕೊಂಡು ಮನೆಗೆ ಬಂದಿದ್ದಾನೆ. ಇನ್ನು ತಾನು ಇಷ್ಟು ಬೇಗ ಹುಷಾರಾಗಲು ವೈದೇಹಿ ಅಮ್ಮನೇ ಕಾರಣ ಎಂದು ಮನೆಯಲ್ಲಿರುವ ಎಲ್ಲರಿಗೂ ಸಹ ಹೇಳುತ್ತಾ ಇದ್ದಾನೆ. ಇದನ್ನು ಸುಹಾಸಿನಿಯು ಸಹ ಬಾಗಿಲ ಬಳಿ ನಿಂತುಕೊಂಡು ಕೇಳಿಸಿಕೊಳ್ಳುತ್ತಿದ್ದಾಳೆ. ನನ್ನನ್ನು ಆಶ್ರಮಕ್ಕೆ ಸೇರಿಸಿದ ವೈದೇಹಿಯಮ್ಮ ಅಲ್ಲಿಯೇ ಇದ್ದು ನನ್ನ ಸೇವೆಯನ್ನ ಮಾಡಿದರು. ನಂತರ ನನಗೆ ಮಾತು ಬರುವಂತೆ ಹಾಗೂ ನಡೆದಾಡುವಂತೆ ಮಾಡಿದರು ಎಂದು ಹೇಳುತ್ತಿದ್ದಾನೆ. ಈ ಮಾತನ್ನು ಕೇಳುತ್ತಿರುವ ಮನೆಯವರೆಲ್ಲರೂ ಸಹ ಸಂತಸಪಟ್ಟಿದ್ದಾರೆ.

ಇನ್ನು ಧ್ರುವ ಬಾಗಿಲಲ್ಲೇ ನಿಂತಿರುವ ಸುಹಾಸಿನಿಯನ್ನ ನೋಡಿ ಬನ್ನಿ ಮದರ್ ಇಂಡಿಯಾ ನಾನು ರಿಕವರಿ ಆಗುವಲ್ಲಿ ನಿಮ್ಮ ಪಾತ್ರವೂ ಸಹ ಬಹಳ ದೊಡ್ಡದಿದೆ ಎಂದು ಹೇಳಿದ್ದಾನೆ. ನೀವೇ ನನಗೆ ಎನರ್ಜಿ ಬೂಸ್ಟರ್ ನಾನು ಆಶ್ರಮದಲ್ಲಿ ಚಿಕಿತ್ಸೆ ಪಡೆಯುವ ವೇಳೆ ನಿಮ್ಮನ್ನ ತುಂಬಾ ಸಲ ನೆನಪಿಸಿಕೊಂಡಿದ್ದೇನೆ. ಆಶೀರ್ವಾದ ಮಾಡಿ ಎಂದು ವ್ಯಂಗ್ಯವಾಗಿ ಕೇಳಿದ್ದಾನೆ. ಧ್ರುವನ ಮಾತುಗಳನ್ನು ಕೇಳುತ್ತಿರುವ ಸುಹಾಸಿನಿಗೆ ಭಯವೇ ಆಗುತ್ತಿದೆ ಇವನು ಏನಾದರೂ ಒಂದು ಮಾಡುತ್ತಾನೆ ಎಂದು ಕೊಂಡಿದ್ದಾಳೆ. ಈ ಕಡೆ ಎಲ್ಲರೂ ವೈದೇಹಿಗೆ ಧನ್ಯವಾದವನ್ನು ಹೇಳಿದ್ದಾರೆ.

Zee Kannada Gattimela serial October 19th episode update

ಆದರೆ ವೈದೇಹಿ ಎಲ್ಲರಿಗೂ ಥ್ಯಾಂಕ್ಸ್ ಅನ್ನು ಒಪ್ಪಿಕೊಳ್ಳುತ್ತಿಲ್ಲ ನನ್ನ ಶ್ರಮಕ್ಕಿಂತ ಅವಳ ಹೆಂಡತಿ ಆದಿತಿಯ ಶ್ರಮ ಬಹಳಷ್ಟು ಇದೆ ಎಂದು ಹೇಳಿದ್ದಾರೆ. ಒಬ್ಬ ತಾಯಿ ಮಕ್ಕಳಿಗೆ ಏನನ್ನು ಮಾಡಬೇಕು ಅದನ್ನ ನಾನು ಮಾಡಿದ್ದೇನೆ ಇದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಇನ್ನು ವೈದೇಹಿಯನ್ನು ಧ್ರುವ ತಬ್ಬಿಕೊಂಡು ಸಂತಸವನ್ನ ವ್ಯಕ್ತಪಡಿಸಿದ್ದಾನೆ. ನಂತರ ಪರಿಮಳಗೆ ಫೋನ್ ಮಾಡಿದ ಅಮ್ಮು ಧ್ರುವ ಸಂಪೂರ್ಣವಾಗಿ ಹುಷಾರಾಗಿದ್ದಾರೆ ಎಂಬುದನ್ನ ತಿಳಿಸಿದ್ದಾಳೆ. ಇನ್ನೂ ಪರಿಮಳ ತನ್ನ ಅಳಿಯ ಹುಷಾರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು ದೇವರಿಗೆ ಕೈ ಮುಗಿದಿದ್ದಾಳೆ.

ಅಗ್ನಿಗೆ ಫೋನ್ ಮಾಡಿದ ಸುಹಾಸಿನಿ, ಧ್ರುವನ ಬಗ್ಗೆ ಭಯ ಪಡಬೇಡ ಎಂದ ಅಗ್ನಿ

ಸುಹಾಸಿನಿಗೆ ತುಂಬಾ ಭಯ ಕಾಡುತ್ತಿದೆ. ಯಾಕೆಂದರೆ ಧ್ರುವನಿಗೆ ಎಲ್ಲಾ ಸತ್ಯವು ತಿಳಿದಿದೆ. ಆಕ್ಸಿಡೆಂಟ್ ಮಾಡಿಸಿದ್ದು ಸುಹಾಸಿನಿ ಎಂಬುವುದು ಸಹ ತಿಳಿದಿದೆ. ಆದರೆ ಯಾವುದನ್ನು ಮನೆಯಲ್ಲಿ ಹೇಳಿಲ್ಲ ಇದರಿಂದ ಸುಹಾಸಿನಿ ಸಾಕಷ್ಟು ಭಯ ಭೀತಳಾಗಿದ್ದಾಳೆ.‌ ಯಾವಾಗ ಬೇಕಾದರೂ ಧ್ರುವ ಈ ವಿಷಯವನ್ನು ಮನೆಯಲ್ಲಿ ತಿಳಿಸಬಹುದು ಎಂದು ಭಯಪಟ್ಟುಕೊಂಡು ಅಗ್ನಿಗೆ ಕಾಲ್ ಮಾಡಿದ್ದಾಳೆ.

ಕಾಲ್ ಮಾಡಿದವಳೆ ಧ್ರುವ ಈಗ ಸಂಪೂರ್ಣ ರಿಕವರಿ ಆಗಿದ್ದಾನೆ. ಅವನನ್ನ ವೈದೇಹಿ ಯಾವುದೋ ಆಶ್ರಮಕ್ಕೆ ಕರೆದುಕೊಂಡು ಹೋಗಿ ಹುಷಾರು ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಅಗ್ನಿ ಕೊಂಚ ಗಲಿಬಿಲಿಯಾಗಿದ್ದಾನೆ. ನಮ್ಮ ವಿಷಯವನ್ನೆಲ್ಲ ಆದ್ರೂ ಆ ಮನೆಯಲ್ಲಿ ತಿಳಿಸಿ ಬಿಟ್ಟನಾ ಎಂದು ಕೇಳಿದ್ದಾನೆ.

Zee Kannada Gattimela serial October 19th episode update

ತಮ್ಮ ಕೊನೆಯ ಮಗ ಧ್ರುವನ ಬಗ್ಗೆ ಕೇಳಿದ ರಾಯರು

ಅಗ್ನಿಯ ಮೇಲೆ ಕೈ ಮಾಡಿದ ಸೂರ್ಯನಾರಾಯಣ

ಸುಹಾಸಿನಿ ಹಾಗೂ ಅಗ್ನಿ ಇಬ್ಬರು ಮಾತನಾಡುತ್ತಿರುವುದನ್ನ ಸೂರ್ಯನಾರಾಯಣ್ ಕೇಳಿಸಿಕೊಳ್ಳುತ್ತಿದ್ದಾರೆ. ಫೋನ್ ಕಟ್ ಆದ ಮೇಲೆ ಧ್ರುವ ಯಾರು ನನ್ನ ಮಗನ ಎಂದು ಕೇಳಿದ್ದಾರೆ. ಇದಕ್ಕೆ ಅಗ್ನಿ ಹೌದು ನಿನ್ನ ಕೊನೆಯ ಮಗ ಧ್ರುವ ಎಂದು ಹೇಳಿದ್ದಾರೆ. ನಿನ್ನ ಮಗನಿಗೆ‌ ಆಕ್ಸಿಡೆಂಟ್ ಮಾಡಿಸಿ ವೀಲ್ ಚೇರ್ ಮೇಲೆ ಕೂರುವಂತೆ ಮಾಡಿದ್ದೆ. ಆದರೆ ನಿನ್ನ ಹೆಂಡತಿ ವೈದೇಹಿ ಅವನನ್ನು ಸಂಪೂರ್ಣವಾಗಿ ಗುಣಮುಖವಾಗಿ ಮಾಡಿದ್ದಾಳೆ ಎಂದು ಹೇಳಿದ್ದಾನೆ.‌

ನನ್ನನ್ನು ಯಾರು ಎದುರು ಹಾಕಿಕೊಂಡರೆ ಅವರಿಗೆ ಇದೇ ಪರಿಸ್ಥಿತಿ ಬರುತ್ತದೆ. ನಿನ್ನ ಕುಟುಂಬವನ್ನೆಲ್ಲಾ ಹೀಗೆ ಮಾಡಿಕೊಳ್ಳುತ್ತೇನೆ ಎಂದು ಸೂರ್ಯನಾರಾಯಣ ಬಳಿ ಅಗ್ನಿ ಹೇಳಿದ್ದಾನೆ. ಈ ಮಾತನ್ನು ಕೇಳಿದ ಕೂಡಲೇ ಸೂರ್ಯನಾರಾಯಣರಿಗೆ ಕೋಪ ಬಂದು ಅಗ್ನಿಯ ಕೊರಳ ಪಟ್ಟಿಗೆ ಕೈಹಾಕಿದ್ದಾರೆ. ಈ ವೇಳೆ ಅಲ್ಲೇ ಇದ್ದ ರೌಡಿಗಳು ಅಗ್ನಿಯ ರಕ್ಷಣೆಗೆ ಬಂದಿದ್ದು ಸೂರ್ಯನಾರಾಯಣರನ್ನ ಕೂಡಿ ಹಾಕಿದ್ದಾರೆ.

More from Filmibeat

English summary
Zee Kannada Gattimela serial 19th episode details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X