Gattimela: ಧ್ರುವನ ಮನಸ್ಸನ್ನೇ ಡೈವರ್ಟ್ ಮಾಡಿದ ಸುಹಾಸಿನಿ..! ವೈದೇಹಿಯನ್ನ ಪ್ರಶ್ನೆ ಮಾಡುತ್ತಿರುವ ಅಮೂಲ್ಯ..?
ಗಟ್ಟಿಮೇಳ ಧಾರಾವಾಹಿ ದಿನಕ್ಕೊಂದು ತಿರುಗು ಪಡೆಯುತ್ತಾ ಸಾಗುತ್ತಿದೆ. ಧ್ರುವ ಸುಹಾಸಿನಿಯನ್ನ ಹುಡುಕಿಕೊಂಡು ಕಾರಣನೇ ಹಿಂಬಾಲಿಸುತ್ತಾ ಹೊರಟಿದ್ದಾನೆ. ಇನ್ನು ಸುಹಾಸಿನಿ ನಿನಗೆ ಇದೇ ಗತಿ ಬರುತ್ತೆ ಮುಂದೊಂದು ದಿನ ನಿನ್ನನ್ನ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಹೇಳುತ್ತಾ ಹೋಗುತ್ತಿದ್ದಾನೆ. ಸುಹಾಸನಿಗೆ ಟೆನ್ಶನ್ ಆಗುತ್ತಿದೆ ಆ ಸೂರ್ಯನಾರಾಯಣ ಯಾಕೆ ಹೀಗೆ ಮಾಡಿಕೊಂಡನೋ. ಅವನಿಂದಲೇ ನಾವು ಸೇಫ್ ಆಗಿ ಇದ್ದೀವಿ ಎಂದು ಅಂದುಕೊಂಡಿದ್ದಾಳೆ. ಇನ್ನೂ ಇದೆ ವೇಳೆ ಒಮ್ಮೆ ಹಿಂದೆ ತಿರುಗಿ ನೋಡಿದಾಗ ಧ್ರುವ ಕಾರನ್ನು ಹಿಂಬಾಲಿಸುತ್ತಿರುವುದು ಗೊತ್ತಾಗಿದೆ ಇದೇ ವೇಳೆ ಟೆನ್ಶನ್ ಗೆ ಒಳಗಾಗಿದ್ದಾಳೆ.
ಅಗ್ನಿ, ಇನ್ನೇನು ಆಸ್ಪತ್ರೆ ತಲುಪಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅಗ್ನಿಗೆ ಸುಹಾಸಿನಿ ಫೋನ್ ಮಾಡಿದ್ದಾಳೆ. ಇದೆ ವೇಳೆ ತನ್ನನ್ನು ಧ್ರುವ ಫಾಲೋ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಅಗ್ನಿ ನೀನು ನನಗೆ ಏನೇನೋ ಹೇಳಿ ಟೆನ್ಶನ್ ಕೊಡಬೇಡ ಮೊದಲು ಫೋನ್ ಇಡು ಎಂದು ರೇಗಿದ್ದಾನೆ. ಇದೇ ವೇಳೆ ಅಗ್ನಿ ಸೂರ್ಯನಾರಾಯಣರಿಗೆ ಬಯ್ಯುತ್ತಿದ್ದಾನೆ ಸುಮ್ಮನೆ ಇರುವುದನ್ನ ಬಿಟ್ಟು ಇದೇನು ಈ ರೀತಿ ಮಾಡಿಕೊಂಡ್ರಿ ಎಂದೆಲ್ಲ ಹೇಳುತ್ತಾ ಇದ್ದಾನೆ. ನಮ್ಮನ್ನು ಸೇಫ್ ಮಾಡಿಕೊಳ್ಳಲು ಇರುವ ಅಸ್ತ್ರ ನೀವೇ ನೀವೇನಾದರೂ ಸತ್ತು ಹೋದರೆ ನಮ್ಮ ಆಟ ಏನು ನಡೆಯೋದಿಲ್ಲ ಎಂದು ಸೂರ್ಯನಾರಾಯಣ್ ಮುಖ ನೋಡಿಕೊಂಡು ಅಗ್ನಿ ಹೇಳಿದ್ದಾನೆ.

ಈ ಕಡೆ ಸುಹಾಸಿನಿ ಧ್ರುವನ ದಾರಿ ತಪ್ಪಿಸಲು ಪ್ಲಾನ್ ಮಾಡುತ್ತಿದ್ದಾಳೆ. ಏನಾದರೂ ಧ್ರುವ ನನ್ನನ್ನ ಹುಡುಕಿಕೊಂಡು ಆಸ್ಪತ್ರೆಯ ಬಳಿ ಬಂದರೆ ನನ್ನನ್ನ ಸಾಯಿಸಿ ಬಿಡುತ್ತಾನೆ. ಇದಕ್ಕೆ ಏನಾದರೂ ಒಂದು ಮಾಡಬೇಕು ಎಂದುಕೊಂಡು ಕಾರನ್ನು ಬಲಗಡೆ, ಎಡಗಡೆ ತಿರುಗಿಸುವಂತೆ ಡ್ರೈವರ್ ಗೆ ಹೇಳಿದ್ದಾಳೆ. ಇನ್ನೂ ಡ್ರೈವರ್ ಸುವಾಸಿನಿ ಹೇಳಿದಂತೆ ಮಾಡಿ ದಾರಿ ತಪ್ಪಿಸಲು ನೋಡಿದ್ದಾರೆ. ಆದರೆ ಧ್ರುವ ಸುಹಾಸಿನಿ ಹೋಗಿರುವ ದಾರಿಯನ್ನೇ ಹುಡುಕಿಕೊಂಡು ಬಂದಿದ್ದಾನೆ. ಸುಹಾಸಿನಿ ಎಲ್ಲಿ ಹೋದಳು ಎಂದು ಡ್ರೈವರ್ ಬಳಿ ಕೇಳಿದ್ದಕ್ಕೆ ಡಬಲ್ ಹಣ ನೀಡುತ್ತೇನೆ ಇಲ್ಲೇ ವೇಟ್ ಮಾಡು ಎಂದು ಹೇಳಿದರು ಎಂದಿದ್ದಾನೆ.
ಧ್ರುವನಿಗೆ ಸುಳ್ಳು ಹೇಳಿದ ಸುಹಾಸಿನಿ
ನಿನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದ ಧ್ರುವ
ಇನ್ನು ಧ್ರುವ ಸುಹಾಸಿನಿ ಎಲ್ಲಿ ಹೋದಳು ಎಂದು ಹುಡುಕುತ್ತಿರುವಾಗ ಸುಹಾಸಿನಿ ಪ್ರತ್ಯಕ್ಷವಾಗಿದ್ದಾಳೆ. ಇದೇ ವೇಳೆ ಧ್ರುವ ಸುಹಾಸಿನಿಯನ್ನು ಪ್ರಶ್ನೆ ಮಾಡಿದ್ದಾನೆ. ನೀವು ಇಲ್ಲಿಗೆ ಯಾರನ್ನ ಭೇಟಿ ಮಾಡಲು ಬಂದ್ರಿ. ಆ ಅಗ್ನಿ ಭೇಟಿ ಮಾಡಲು ಬಂದಿದ್ದೀರಾ? ನನ್ನ ತಂದೆಯ ಬಗ್ಗೆ ನಿಮಗೆ ಗೊತ್ತಿದೆ ಮೊದಲು ಅದನ್ನ ಹೇಳಿ ಎಂದು ಕೇಳಿದ್ದಾನೆ. ಇದಕ್ಕೆ ಸುಹಾಸಿನಿ ನನಗೆ ನಿನ್ನ ತಂದೆಯ ಬಗ್ಗೆ ಸ್ವಲ್ಪವೂ ಸಹ ತಿಳಿದಿಲ್ಲ. ಅವರು ಪರಿಮಳ ಮಂಜುನಾಥ್ ಮನೆಯಲ್ಲಿ ಇದ್ದರು ಎಂಬುದಷ್ಟೇ ನನಗೂ ಗೊತ್ತು. ಆಮೇಲೆ ಅವರು ಅಲ್ಲಿ ಇರಲಿಲ್ಲವಂತೆ ಎಂದು ಹೇಳಿದ್ದಾಳೆ.
ನಾನು ನನ್ನ ಫ್ರೆಂಡ್ ರಾಜಶೇಖರ್ ಎಂಬುವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ಇದೇ ವೇಳೆ ಧ್ರುವ ಸುಹಾಸಿನಿ ಫೋನ್ ತೆಗೆದುಕೊಂಡು ಏನೋ ಚೆಕ್ ಮಾಡಿದ್ದಾನೆ. ಅಗ್ನಿ ಜೊತೆಗೆ ಮಾತಾಡಿರುವುದನ್ನು ಡಿಲೀಟ್ ಮಾಡಿರುವುದರಿಂದ ಸುಹಾಸಿನಿ ಸೇಫ್ ಆಗಿದ್ದಾಳೆ. ನನ್ನ ತಂದೆಗೆ ಏನಾದರೂ ಆದರೆ ನಾನು ಸುಮ್ಮನೆ ಬಿಡೋದಿಲ್ಲ ಎಂದು ಸುಹಾಸನಿಗೆ ಧ್ರುವ ಹೇಳಿದ್ದಾನೆ.
ವೈದೇಹಿಯನ್ನ ಪ್ರಶ್ನೆ ಮಾಡಿದ ಅಮೂಲ್ಯ
ಈ ಮನೆಗೆ ಸಂಬಂಧ ಇದೆ ಎಂದ ಧ್ರುವ
ಮನೆಯಲ್ಲಿ ವೈದೇಹಿ ಸೂರ್ಯನಾರಾಯಣರನ್ನ ನೆನಸಿಕೊಂಡು ಅಳುತ್ತಿದ್ದಾಳೆ. ಇದೇ ವೇಳೆ ಅಮೂಲ್ಯ ಅಮ್ಮ ಏನಾಯಿತು ಎಂದು ಹೇಳಿದ್ದಾಳೆ ನಾನು ನಿಮ್ಮನ್ನ ನನ್ನ ತಾಯಿಯಂತೆ ಪ್ರೀತಿ ಮಾಡುತ್ತೇನೆ. ನೀವು ಮಗಳ ಬಳಿ ಸುಳ್ಳು ಹೇಳಬಾರದು ನಾನು ಹೇಳುವ ಪ್ರಶ್ನೆಗೆ ಉತ್ತರವನ್ನು ನೀಡಬೇಕು ಎಂದು ಕೇಳಿದ್ದಾಳೆ. ವಶಿಷ್ಟ ಕುಟುಂಬಕ್ಕೂ ನಿಮಗೂ ಏನು ಸಂಬಂಧವಿದೆ ಎಂದು ನನಗೆ ಅನಿಸುತ್ತಿದೆ. ದಯವಿಟ್ಟು ಅದು ಏನು ಎಂದು ನೀವು ತಿಳಿಸಬೇಕು ಎಂದು ವೈದೇಹಿಯ ಹಿಂದೆ ಸುತ್ತಿದ್ದಾಳೆ. ಈ ವೇಳೆ ಧ್ರುವ ಈ ಮನೆಗೂ ವೈಜಯಂತಿ ಅಮ್ಮನಿಗೂ ಸಂಬಂಧವಿದೆ ಎಂದು ಹೇಳುವ ಮೂಲಕ ಒಂದು ಕುತೂಹಲವನ್ನು ಸೃಷ್ಟಿಸಿದ್ದಾನೆ.


Click it and Unblock the Notifications











